ಶಿವಮೊಗ್ಗ: ನಗರದ ಮೆಗ್ಗಾನ್ ಆಸ್ಪತ್ರೆಯ (Mcggan Hospital Shivamogga) ಹೆರಿಗೆ ವಾರ್ಡ್ ಬಳಿ ಮೃತ ನವಜಾತ ಶಿಶುವನ್ನು ನಾಯಿ ಕಚ್ಚಿಕೊಂಡು ಓಡಿ ಹೋದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಾರ್ಚ್ 31 ರಂದು ನಡೆದಿದ್ದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶಿಶುವನ್ನು (Baby Dead body) ನಾಯಿ ಎಳೆದುಕೊಂಡು ಹೋಗುತ್ತಿದ್ದಂತೆ ಎಚ್ಚೆತ್ತ ಭದ್ರತಾ ಸಿಬ್ಬಂದಿ (Security Staff) ನಾಯಿಯನ್ನು ಓಡಿಸಿದ್ದಾರೆ. ಭದ್ರತಾ ಸಿಬ್ಬಂದಿ ಬರುತ್ತಿದ್ದಂತೆ ನಾಯಿ ಶಿಶು ಮೃತದೇಹವನ್ನು ಸ್ಥಳದಲ್ಲೇ ಬಿಟ್ಟು ಹೋಗಿದೆ. ಕೂಡಲೇ ವೈದ್ಯರು ಮಗುವನ್ನು ಪರೀಕ್ಷೆ ನಡೆಸಿದ್ದಾರೆ. ವೈದ್ಯಕೀಯ ಪರೀಕ್ಷೆ (Medical Test) ನಂತರ ಶಿಶು ಮೃತಪಟ್ಟಿರುವ ಬಗ್ಗೆ ವೈದ್ಯರು ದೃಢಪಡಿಸಿದ್ದಾರೆ.
ಜನಿಸಿದ ತಕ್ಷಣ ನವಜಾತ ಶಿಶುವನ್ನು ಆಸ್ಪತ್ರೆ ಹಿಂಭಾಗದಲ್ಲಿ ಬಿಟ್ಟು ಹೋಗಿರುವ ಬಗ್ಗೆ ಶಂಕೆ ವ್ಯಕ್ತವಾಗಿವೆ. ಮಗು ಯಾರದ್ದು, ಮಗು ಬಿಟ್ಟು ಹೋದ ಪೋಷಕರು ಯಾರು ಎಂಬ ಬಗ್ಗೆ ಪತ್ತೆ ಹಚ್ಚುವಂತೆ ಆಸ್ಪತ್ರೆಯ ಸಿಬ್ಬಂದಿ ಆಗ್ರಹಿಸಿದ್ದಾರೆ. ಘಟನೆ ಬಗ್ಗೆ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
ಚಿರತೆ ಬೋನಿಗೆ ಬಿದ್ದ ಕರಡಿ!
ಮಾಗಡಿ ತಾಲೂಕಿನ ಜೋಡಗಟ್ಟೆ ಗ್ರಾಮದಲ್ಲಿ ಚಿರತೆ ಬೋನಿಗೆ ಕರಡಿ ಬಿದ್ದಿದೆ.. ಹಲವು ದಿನಗಳಿಂದ ಕಾಡಂಚಿನ ಗ್ರಾಮಸ್ಥರಿಗೆ ಕರಡಿ ಉಪಟಳ ನೀಡುತ್ತಿತ್ತು. ಸುಮಾರು 10 ವರ್ಷ ವಯಸ್ಸಿನ ಕರಡಿ ಇದಾಗಿದೆ.
ಲಕ್ಷಾಂತರ ಮೌಲ್ಯದ ಹತ್ತಿ ಭಸ್ಮ
ಟ್ರ್ಯಾಕ್ಟರ್‌ನಲ್ಲಿ ಹತ್ತಿ ಲೋಡ್ ಮಾಡುವಾಗ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿರುವ ಘಟನೆ ಕಲಬುರಗಿ ಜಿಲ್ಲೆ ಯಡ್ರಾಮಿ ತಾಲೂಕಿನ ಹಂಗರಗಾದಲ್ಲಿ ನಡೆದಿದೆ. ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಹತ್ತಿ ಸುಟ್ಟು ಭಸ್ಮವಾಗಿದೆ.
ಇದನ್ನೂ ಓದಿ: Karnataka Elections 2023: ಕಾಂಗ್ರೆಸ್ ನಾಯಕರಿಗೆ ಕಗ್ಗಂಟಾದ ಮದ್ದೂರು ವಿಧಾನಸಭಾ ಕ್ಷೇತ್ರ
ಶರಣು ಆಲೂರು ಎಂಬುವರು 10 ಎಕರೆಯಲ್ಲಿ ಹತ್ತಿ ಬೆಳೆದಿದ್ದರು. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ರೂ ಯಾವುದೇ ಪ್ರಯೋಜನವಾಗಿಲ್ಲ..ಈ ಸಂಬಂಧ ಯಾಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ