ಚಿಕ್ಕೋಡಿ(ಸೆ.15): ಶ್ವಾನಗಳು ಅಂದ್ರೆನೆ ಹಾಗೆ ಒಂದು ಬಾರಿ ಅವುಗಳು ಮನುಷ್ಯನ ಸಂಬಂಧಕ್ಕೆ ಒಗ್ಗಿಬಿಟ್ಟರೆ ಸಾಕು, ಆತ ಕುಂತರೂ, ನಿಂತರೂ, ಎಲ್ಲಿಗೆ ಹೊರಟರೂ ಸಹ ಜತೆಗೆ ಬಂದು ಬಿಡ್ತವೆ. ಇಹಲೋಕದ ಸಂತೆ ಮುಗಿಸಿ ಹೃದಯಾಘಾತದಿಂದ ಮರಣಹೊಂದಿದ ತನ್ನ ಮಾಲೀಕನ ನೆನಪಲ್ಲೆ ಈಗ ಶ್ವಾನವೊಂದು ಅವನ ದಾರಿಯಲ್ಲೆ ಊಟ ಬಿಟ್ಟು ಮರುಗಿ ಮರುಗಿ ಪ್ರಾಣ ತೆತ್ತಿದೆ. ಕಡ್ಡಿ ಮತ್ತು ಶಂಕ್ರಪ್ಪನ ಸಂಬಂಧ ಕಣ್ಣಲ್ಲಿ ನೀರು ತರಿಸುವಂತಿದೆ. ಅಷ್ಟಕ್ಕೂ ಈ ಕಡ್ಡಿ ಹಾಗೂ ಶಂಕ್ರಪ್ಪನ ಕಥೆ ಎಂತದ್ದು ಗೊತ್ತಾ ಇಲ್ಲಿದೆ ನೋಡಿ. ಮಾಲೀಕನ ಅಕಾಲಿಕ ನಿಧನದಿಂದ ಆತ ಸುತ್ತುತ್ತಿದ್ದ ಜಾಗವನ್ನೆಲ್ಲ ಸುತ್ತಿ ಅವನಿಗಾಗಿ ಹುಡುಕಾಟ ನಡೆಸಿ ಗಲ್ಲಿ ಗಲ್ಲಿ ಆತನಿಗಾಗಿ ಮೊರೆ ಇಡುತ್ತಿದ್ದ ಈ ಶ್ವಾನದ ಹೆಸರು ಕಡ್ಡಿ ಅಂತ. ಹೀಗೆ ಮಾಲೀಕನಿಗಾಗಿ ಹುಡುಕಿ ಹುಡುಕಿ ಆತನಿಲ್ಲದ ಕೊರಗಲ್ಲೆ ಊಟವನ್ನೂ ಸಹ ತ್ಯಜಿಸಿದ್ದ ಕಡ್ಡಿ ಇಂದು ಶವವಾಗಿದ್ದಾನೆ.
ಕಳೆದ 6ನೇ ತಾರೀಕಿನಂದು ಈ ಫೋಟೋದಲ್ಲಿ ಕಾಣುತ್ತಿರುವ ಶಂಕ್ರಪ್ಪ ಮಡಿವಾಳರ ಎಂಬ ಈ ವ್ಯಕ್ತಿ ಹೃದಯಾಘಾತದಿಂದ ಅಕಾಲಿಕವಾಗಿ ನಿಧನ ಹೊಂದಿದ್ರು. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಅವರಾದಿ ಗ್ರಾಮದವರು. ಇವರ ಮೂಲ ಉದ್ಯೋಗವೇ ಹಾಲು ವ್ಯಾಪಾರ. ಹಾಲು ಸಂಗ್ರಹಿಸಿ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರಕ್ಕೆ ಹಾಲು ಮಾರಾಟ ಮಾಡುತ್ತಿದ್ದರು ಈ ಶಂಕ್ರಪ್ಪ. ಹೀಗಾಗಿ ಶಂಕ್ರಪ್ಪ ಅಲ್ಲಿಗೆ ಹೋಗಿರಬಹುದು ಎಂದು ಈ ಶ್ವಾನ ಅಲ್ಲೆಲ್ಲವೂ ಸಹ ಹುಡುಕಾಟ ನಡೆಸಿತ್ತು. ಬೀದಿ ಬೀದಿಯಲ್ಲಿ ತನ್ನ ಮಾಲೀಕನಿಗಾಗಿ ಮೊರೆಯಿಟ್ಟಿತ್ತು.
Sandalwood Drug Case: ಸ್ಯಾಂಡಲ್ವುಡ್ ಡ್ರಗ್ ಕೇಸ್; ಆದಿತ್ಯ ಆಳ್ವ ಮನೆ ಮೇಲೆ ಸಿಸಿಬಿ ದಾಳಿ
ಹೌದು, ಕಳೆದ ಒಂದು ವಾರದಿಂದ ಮಾಲೀಕನ ನೆನಪಲ್ಲೆ ಊಟವನ್ನು ಸಹ ತ್ಯಜಿಸಿದ್ದ ಕಡ್ಡಿ ಆತನಿಗಾಗಿ ಊರೊಳಗೆ ಹುಡುಕದ ಜಾಗವಿಲ್ಲ. ದೂರದ ಮಹಾಲಿಂಗಪುರದ ಗಲ್ಲಿ ಗಲ್ಲಿಗೂ ಸಹ ತಿರುಗಿದ್ದ ಈ ಕಡ್ಡಿ ಆತನ ಭೇಟಿಗಾಗಿ ಆತನನ್ನು ಕಾಣಲು ಹೋಗದ ದಾರಿಗಳೆ ಉಳಿದಿರಲಿಲ್ಲ. ತೀವ್ರ ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ವ್ಯಕ್ತಿ ಶಂಕ್ರಪ್ಪ ಇನ್ನು ಮರಳಿ ಮನೆಗೆ ಬರೋದಿಲ್ಲ ಅನ್ನೋದು ಈ ಮೂಕ ಪ್ರಾಣಿಗೆ ಗೊತ್ತಾಗೋದಾದ್ರೂ ಹೇಗೆ ಹೇಳಿ. ಮಾಲೀಕನಿಲ್ಲದ ಕೊರಗಿನಲ್ಲೇ ಆತನಿಗಾಗಿ ಹುಡುಕಿ ಹುಡುಕಿ ಊಟವನ್ನೂ ಸಹ ತ್ಯಜಿಸಿ, ಆತ ಹೋದ ಬಾರದ ಲೋಕಕ್ಕೆ ಈಗ ಈ ಶ್ವಾನವು ಸಹ ಪ್ರಯಾಣ ಬೆಳೆಸಿದ್ದಾನೆ. ಶ್ವಾನ ಒಂದು ಜಾತಿ. ಮನುಷ್ಯ ಒಂದು ಜಾತಿಯಾದರೂ ಸಹ ಕಡ್ಡಿ ಮತ್ತು ಶಂಕ್ರಪ್ಪ ಆತ್ಮೀಯ ಸ್ನೇತಿರಂತಿದ್ದರು. ಅವರ ಸ್ನೇಹ ಕಂಡು ಖುಷಿ ಪಡುತ್ತಿದ್ದ ಜನ ಈ ದುರಂತ ಅಂತ್ಯದಿಂದ ಈಗ ಮರುಕ ಪಟ್ಟುಕೊಳ್ಳುವಂತಾಗಿದೆ.
ಒಟ್ಟಿನಲ್ಲಿ ನಾಟಕೀಯತೆಯಿಂದ ತುಂಬಿಕೊಂಡಿರುವ ಮನುಷ್ಯ ಸಂಬಂಧಗಳ ನಡುವೆ ಶ್ವಾನ ತಾನು ಸಾಕಿದ ಮಾಲೀಕನ ಮುಖ ನೋಡಬೇಕು. ಆತನ ಪ್ರೀತಿ ಕಾಣಬೇಕು ಅಂತ ಊಟವನ್ನೂ ಸಹ ತ್ಯಜಿಸಿ ಆತ ಜೀವಂತವಾಗಿರುವಾಗ ಓಡಾಡಿದ ಜಾಗಗಳಿಗೆಲ್ಲವೂ ಸಹ ಅಲೆದು ಅಲೆದು ಪ್ರಾಣವನ್ನೂ ಸಹ ಬಿಟ್ಟಿದ್ದು ಎಂಥವರ ಕಣ್ಣಂಚಲ್ಲೂ ಸಹ ನೀರು ತರಿಸುವಂತಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ