Doctor: ಟ್ರಾಫಿಕ್‌ನಲ್ಲಿ ಕಾರು ಸಿಲುಕಿ ಪರದಾಟ, ರೋಗಿ ಉಳಿಸಲು ಆಸ್ಪತ್ರೆಗೆ ಓಡಿಕೊಂಡೇ ಬಂದ ಡಾಕ್ಟರ್!

ಡಾ. ಗೋವಿಂದ್ ನಂದಕುಮಾರ್ ಅವರು ಕಾರನ್ನು ಇಳಿದು ಸರ್ಜಾಪುರ-ಮಾರತಹಳ್ಳಿ ಮಾರ್ಗದಲ್ಲಿ ಓಡಲು ನಿರ್ಧರಿಸಿದ್ದಾರೆ. ತಡಮಾಡದೇ ಸುಮಾರು 3 ಕಿಲೋ ಮೀಟರ್‌ನಷ್ಟು ಓಡಿಕೊಂಡೇ ಆಸ್ಪತ್ರೆ ತಲುಪಿದ್ದಾರೆ. ಕೊನೆಗೆ ರೋಗಿಯ ಆಪರೇಷನ್ ಯಶಸ್ವಿಯಾಗಿದೆ. ರೋಗಿಯನ್ನು ನಿಗದಿತ ಸಮಯಕ್ಕೆ ಡಿಸ್ಚಾರ್ಜ್ ಮಾಡಲಾಗಿದೆ ಅಂತ ಆಸ್ಪತ್ರೆ ಮೂಲಗಳು ತಿಳಿಸಿವೆ.

ಡಾ. ಗೋವಿಂದ್ ನಂದಕುಮಾರ್

ಡಾ. ಗೋವಿಂದ್ ನಂದಕುಮಾರ್

  • Share this:
ಬೆಂಗಳೂರು: ವೈದ್ಯರನ್ನು (Doctor) ನಾರಾಯಣ ಅಂತಾರೆ. ಅಂದರೆ ವೈದ್ಯರು ದೇವರಿಗೆ (God) ಸಮಾನ ಎನ್ನುವುದು ಹಿರಿಯರ ಮಾತು. ಆದರೆ ಕೆಲವು ವೈದ್ಯರು ಹಣ (Money) ಮಾಡುವ ದುರಾಸೆಗೆ ಬಿದ್ದು, ರೋಗಿಯ (patient) ಪ್ರಾಣದ ಜೊತೆ ಚೆಲ್ಲಾಟ ಆಡುತ್ತಾರೆ. ಇನ್ನು ಕೊರೋನಾ (Corona) ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದಾಗ ಪ್ರಪಂಚದಾದ್ಯಂತ ವೈದ್ಯರು, ನರ್ಸ್‌ಗಳು (Nurse), ಆಸ್ಪತ್ರೆ ಸಿಬ್ಬಂದಿ (Hospitals staff) ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕೆಲಸ ಮಾಡಿದ್ದಾರೆ. ಈ ಮೂಲಕ ವೈದ್ಯಲೋಕದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಆ ವೈದ್ಯರುಗಳಂತೆ ಇದೀಗ ಬೆಂಗಳೂರಿನ (Bengaluru) ಡಾಕ್ಟರ್ ಒಬ್ಬರು ತಮ್ಮ ಉತ್ತಮ ಕಾರ್ಯದಿಂದಾಗಿ ಸುದ್ದಿ ಮಾಡಿದ್ದಾರೆ.

ಟ್ರಾಫಿಕ್‌ನಲ್ಲಿ ಸಿಲುಕಿ ವೈದ್ಯರ ಪರದಾಟ

ಬೆಂಗಳೂರು ನಗರ ಹೇಗೆ ಜಗತ್ಪ್ರಸಿದ್ಧವೋ ಹಾಗೆಯೇ ಇಲ್ಲಿನ ಟ್ರಾಫಿಕ್ ಕೂಡ ಅಷ್ಟೇ ಕುಖ್ಯಾತಿ ಪಡೆದಿದೆ. ಜಗತ್ತಿನಲ್ಲಿ ಪ್ರತಿನಿತ್ಯ ಟ್ರಾಫಿಕ್ ಸಮಸ್ಯೆಗಳಿಂದ ತತ್ತರಿಸುವ ನಗರಗಳಲ್ಲಿ ಬೆಂಗಳೂರು ಕೂಡ ಒಂದು. ಇದೀಗ ಇಂತಹ ದಟ್ಟ ಟ್ರಾಫಿಕ್‌ ಸಮಸ್ಯೆಯಿಂದ ಬೆಂಗಳೂರಿನ ವೈದ್ಯರೊಬ್ಬರು ಪರದಾಡಿದ್ದಾರೆ.

ತುರ್ತಾಗಿ ಆಸ್ಪತ್ರೆ ತಲುಪಬೇಕಿದ್ದ ವೈದ್ಯ

ಬೆಂಗಳೂರಿನ ಖ್ಯಾತ ಗ್ಯಾಸ್ಟ್ರೋಎಂಟರಾಲಜಿ ಶಸ್ತ್ರಚಿಕಿತ್ಸಕ ಡಾ. ಗೋವಿಂದ್ ನಂದಕುಮಾರ್ ಅವರೇ ಟ್ರಾಫಿಕ್‌ನಲ್ಲಿ ಸಿಲುಕಿ ಒದ್ದಾಡಿದ ವೈದ್ಯ. ಅವರು ತುರ್ತು ಲ್ಯಾಪರೊಸ್ಕೋಪಿಕ್ ಪಿತ್ತಕೋಶದ ಶಸ್ತ್ರಚಿಕಿತ್ಸೆ ಮಾಡಲು ಸರ್ಜಾಪುರದ ಮಣಿಪಾಲ್ ಆಸ್ಪತ್ರೆಗೆ ತೆರಳುತ್ತಿದ್ದರು. ಅವರು ತಮ್ಮ ಕಾರಿನಲ್ಲಿ ತುರ್ತಾಗಿ ಆಸ್ಪತ್ರೆಗೆ ತೆರಳುತ್ತಿದ್ದರು. ಈ ವೇಳೆ ಅವರ ಕಾರು ಭಾರೀ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಕೊಂಡಿದೆ.

ಇದನ್ನೂ ಓದಿ: Brand Bengaluru: ಬೆಂಗಳೂರನ್ನು ಟ್ರೋಲ್ ಮಾಡುವವರಿಗೆ ತಪರಾಕಿ, ಕನ್ನಡಿಗರು ಹೇಳ್ತಿದ್ದಾರೆ ಬೆಂಗಳೂರು ಬಿಟ್ಟು ತೊಲಗಿ!

ರೋಗಿಯ ಆಪರೇಷನ್‌ಗಾಗಿ ಓಡಿಕೊಂಡೇ ಆಸ್ಪತ್ರೆ ತಲುಪಿದ ಡಾಕ್ಟರ್

ಡಾ. ಗೋವಿಂದ್ ನಂದಕುಮಾರ್ ಅವರು ಕಾರನ್ನು ಇಳಿದು ಸರ್ಜಾಪುರ-ಮಾರತಹಳ್ಳಿ ಮಾರ್ಗದಲ್ಲಿ ಓಡಲು ನಿರ್ಧರಿಸಿದ್ದಾರೆ. ಕೂಡಲೇ ತಡಮಾಡದೇ ಸುಮಾರು 3 ಕಿಲೋ ಮೀಟರ್‌ನಷ್ಟು ಓಡಿಕೊಂಡೇ ಆಸ್ಪತ್ರೆ ತಲುಪಿದ್ದಾರೆ. “ನನಗೆ ಚಾಲಕನಿದ್ದಾನೆ, ಆದ್ದರಿಂದ ನಾನು ಕಾರನ್ನು ಹಿಂದೆ ಬಿಡಲು ಸಾಧ್ಯವಾಯಿತು. ನಾನು ನಿಯಮಿತವಾಗಿ ಜಿಮ್ ಮಾಡಿದ್ದರಿಂದ ನನಗೆ ಓಡುವುದು ಸುಲಭವಾಯಿತು. ನಾನು ಆಸ್ಪತ್ರೆಗೆ ಮೂರು ಕಿಮೀ ಓಡಿದ್ದೇನೆ ಮತ್ತು ಶಸ್ತ್ರಚಿಕಿತ್ಸೆಯ ಸಮಯಕ್ಕೆ ಬಂದಿದ್ದೇನೆ, ”ಎಂದು ಅವರು ಹೇಳಿದ್ದಾರೆ.

ಪ್ರತಿ ದಿನ ಇದೇ ದಾರಿಯಲ್ಲಿ ಪ್ರಯಾಣ

'ಪ್ರತಿದಿನ ಬೆಂಗಳೂರಿನ ಮಧ್ಯಭಾಗದಿಂದ ಬೆಂಗಳೂರಿನ ಆಗ್ನೇಯ ಭಾಗದಲ್ಲಿರುವ ಸರ್ಜಾಪುರದ ಮಣಿಪಾಲ್ ಆಸ್ಪತ್ರೆಗೆ ಪ್ರಯಾಣಿಸುತ್ತೇನೆ. ನಾನು ಶಸ್ತ್ರಚಿಕಿತ್ಸೆಗೆ ಸಮಯಕ್ಕೆ ಮನೆಯಿಂದ ಹೊರಟೆ. ನನ್ನ ತಂಡ ಸಿದ್ಧವಾಗಿತ್ತು ಮತ್ತು ಎಲ್ಲಾ ಸಿದ್ಧತೆಗಳನ್ನು ಮಾಡಲಾಯಿತು. ಆಸ್ಪತ್ರೆಗೆ ಬಂದ ಮೇಲೆ ಶಸ್ತ್ರ ಚಿಕಿತ್ಸೆ ಮಾಡಬೇಕಿತ್ತು. ಆದರೆ, ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಆ ಟ್ರಾಫಿಕ್ ನೋಡಿ ಡ್ರೈವರ್ ಜೊತೆ ಗಾಡಿ ಬಿಡೋಣ ಅಂತ ನಿರ್ಧರಿಸಿ ಮರುಮಾತಿಲ್ಲದೆ ಆಸ್ಪತ್ರೆ ಕಡೆ ಓಡಿದೆ ಅಂತ ಅವರು ಹೇಳಿದ್ದಾರೆ.

ಟ್ರಾಫಿಕ್‌ ಬಗ್ಗೆ ಗೂಗಲ್‌ನಲ್ಲಿ ತಿಳಿದು ಓಡುವ ನಿರ್ಧಾರ

ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಕೊಂಡರೆ ಸಾಮಾನ್ಯವಾಗಿ 10 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಇಂದು ನಾನು ಹೆವಿ ಟ್ರಾಫಿಕ್‌ ಜಾಮ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದೆ, ತಡವಾಗಿ ಬಂದಿದ್ದಕ್ಕೆ ಹೆದರುತ್ತಿದ್ದೆ. ನಾನು ಗೂಗಲ್ ನಕ್ಷೆಗಳನ್ನು ಪರಿಶೀಲಿಸಿದಾಗ ಅದು ಇನ್ನೂ 45 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಎಂದು ತೋರಿಸಿದೆ. ಹೀಗಾಗಿ ನಾನು ಕಾರಿನಿಂದ ಇಳಿದು ಓಡುವ ನಿರ್ಧಾರ ಮಾಡಿದೆ ಅಂತ ಡಾ. ಗೋವಿಂದ್ ನಂದಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: Bengaluru Lakes: ಕಾಣದಂತೆ ಮಾಯವಾಯ್ತಣ್ಣ ಬೆಂಗಳೂರು ಕೆರೆಗಳು! ಜೀವಸೆಲೆಯ ನೆಲೆ ಮೇಲೆ ತಲೆ ಎತ್ತಿದ ಲೇಔಟ್‌ಗಳು!

ಡಾಕ್ಟರ್ ಮುಂದಾಲೋಚನೆಯಿಂದ ಆಪರೇಷನ್ ಯಶಸ್ವಿ

ಆಸ್ಪತ್ರೆಯಲ್ಲಿ ರೋಗಿಯು ತೀವ್ರವಾದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ರೋಗಿಗೆ ಅರಿವಳಿಕೆ ನೀಡಲು ಸಿದ್ಧತೆ ನಡೆಸುತ್ತಿರುವ ವೈದ್ಯರು ಆಪರೇಷನ್ ಥಿಯೇಟರ್ ತಲುಪಿದ ಕೂಡಲೇ ಗೋವಿಂದ್ ಅವರ ತಂಡ ಕಾರ್ಯಪ್ರವೃತ್ತವಾಯಿತು.  ಕೂಡಲೇ ಡಾ ಗೋವಿಂದ್ ನಂದಕುಮಾರ್ ಶಸ್ತ್ರಚಿಕಿತ್ಸೆ ಮಾಡಲು ಶಸ್ತ್ರಚಿಕಿತ್ಸಾ ಉಡುಪುಗಳನ್ನು ಪಡೆದರು ಮತ್ತು ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ರೋಗಿಯನ್ನು ನಿಗದಿತ ಸಮಯಕ್ಕೆ ಡಿಸ್ಚಾರ್ಜ್ ಮಾಡಲಾಗಿದೆ ಮತ್ತು ಪ್ರಸ್ತುತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಅಂತ ಆಸ್ಪತ್ರೆ ಮೂಲಗಳು ತಿಳಿಸಿವೆ.
Published by:Annappa Achari
First published: