• Home
  • »
  • News
  • »
  • state
  • »
  • Viral Letter: ಐಶ್ವರ್ಯಾ ದಪ್ಪ ಆಗ್ಲಿ, ನನಗೆ ಮದುವೆ ಫಿಕ್ಸ್ ಆಗ್ಲಿ! ದೇವರ ಮುಂದೆ ಭಕ್ತನ ವಿಚಿತ್ರ ಡಿಮ್ಯಾಂಡ್

Viral Letter: ಐಶ್ವರ್ಯಾ ದಪ್ಪ ಆಗ್ಲಿ, ನನಗೆ ಮದುವೆ ಫಿಕ್ಸ್ ಆಗ್ಲಿ! ದೇವರ ಮುಂದೆ ಭಕ್ತನ ವಿಚಿತ್ರ ಡಿಮ್ಯಾಂಡ್

ಉಕ್ಕಡ ಮಾರಮ್ಮನಿಗೆ ಭಕ್ತ ಬರೆದ ಪತ್ರ

ಉಕ್ಕಡ ಮಾರಮ್ಮನಿಗೆ ಭಕ್ತ ಬರೆದ ಪತ್ರ

ಪತ್ರದಲ್ಲಿ ಭಕ್ತ ದೇವರಿಗೆ ಚಿತ್ರ ವಿಚಿತ್ರ ಬೇಡಿಕೆ ಸಲ್ಲಿಸಿದ್ದಾನೆ. "ಅಮ್ಮಾ ತಾಯೇ, ರಮೇಶ್ ಮಂಜುಳ ಸಂಬಳವನ್ನ ರಾಜಮ್ಮನ ಕೈಗೆ ಕೊಡಲಿ ಅಂತ ಮನವಿ ಮಾಡಿದ್ದಾನೆ. ಐಶ್ವರ್ಯ ಬೇಗ ದಪ್ಪ ಆಗಿ, ಪುಷ್ಠಿಯಾಗಿ ಕಾಣುವಂತೆ ಮಾಡು. ನನ್ನ ಮದುವೆ ಯಾವುದೇ ವಿಘ್ನವಿಲ್ಲದೆ ನೆರವೇರುವಂತೆ ದಯೇ ತೋರು" ಅಂತ ಬೇಡಿಕೊಂಡಿದ್ದಾನೆ.

ಮುಂದೆ ಓದಿ ...
  • Share this:

ಚಿಕ್ಕಮಗಳೂರು: ನಮ್ಮ ಕಷ್ಟವನ್ನು ಕಳೆಯಪ್ಪಾ ಅಂತ ಭಕ್ತರು (Devotees) ದೇವರ (God) ಮುಂದೆ ಪ್ರಾರ್ಥನೆ (Prayer) ಮಾಡುತ್ತಾರೆ. ಕೆಲವರು ಹರಕೆ ಹೊತ್ತುಕೊಂಡು, ತಮ್ಮ ಕಷ್ಟದ ಭಾರವನ್ನು ದೇವರ ಮೇಲೆ ಹಾಕ್ತಾರೆ. ಇನ್ನೂ ಕೆಲವರು ಪತ್ರ (Letter) ಬರೆದು, ದೇವರ ಹುಂಡಿಗೆ ಹಾಕುತ್ತಾರೆ. ಅದೇ ರೀತಿ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಮೂಡಿಗೆರೆ (Mudigere) ತಾಲೂಕಿನ ಕಳಸ (Kalasa) ಗ್ರಾಮದ ಪ್ರಸಿದ್ಧ ಕಳಸೇಶ್ವರ ಸ್ವಾಮಿ ದೇಗುಲದ (Kalaseshwara Swamy Temple) ಕಾಣಿಕೆ ಹುಂಡಿಯಲ್ಲಿ ಭಕ್ತನೊಬ್ಬ ಬರೆದ ವಿಚಿತ್ರ ರೀತಿಯ ಪತ್ರ ಪತ್ತೆಯಾಗಿದೆ. ಆ ಭಕ್ತ ಮಂಡ್ಯ (Mandya) ಜಿಲ್ಲೆಯಲ್ಲಿರುವ ಪ್ರಸಿದ್ಧ ಉಕ್ಕಡ ಮಾರಮ್ಮ ದೇವಿ (Ukkada Maramma Devi) ಹೆಸರಲ್ಲಿ ಪತ್ರ ಬರೆದು, ಅದನ್ನು ಕಳಸೇಶ್ವರ ಸ್ವಾಮಿ ದೇವರ ಹುಂಡಿಯಲ್ಲಿ ಹಾಕಿದ್ದಾನೆ. ತನ್ನ ಮದುವೆ, ಸರ್ಕಾರಿ ಕೆಲಸ, ಆರೋಗ್ಯ, ಕೌಟುಂಬಿಕ ಸಮಸ್ಯೆ ಬಗ್ಗೆ ಬರೆದು, ಆ ಪತ್ರವನ್ನು ದೇವರ ಹುಂಡಿಯಲ್ಲಿ ಹಾಕಿದ್ದಾನೆ. ಇದೀಗ ಆ ಭಕ್ತ ಬರೆದ ವಿಚಿತ್ರ ಮನವಿಯ ಪತ್ರ ವೈರಲ್ (Viral) ಆಗಿದೆ.  


“ಐಶ್ವರ್ಯ ಬೇಗ ದಪ್ಪ ಆಗಲಿ, ರಾಜಮ್ಮನ ಕೈಗೆ ಸಂಬಳ ಕೊಡಲಿ”


ಪತ್ರದಲ್ಲಿ ಭಕ್ತ ದೇವರಿಗೆ ಚಿತ್ರ ವಿಚಿತ್ರ ಬೇಡಿಕೆ ಸಲ್ಲಿಸಿದ್ದಾನೆ. ಅಮ್ಮಾ ತಾಯೇ, ರಮೇಶ್ ಮಂಜುಳ ಸಂಬಳವನ್ನ ರಾಜಮ್ಮನ ಕೈಗೆ ಕೊಡಲಿ ಅಂತ ಮನವಿ ಮಾಡಿದ್ದಾನೆ. ಐಶ್ವರ್ಯ ಬೇಗ ದಪ್ಪ ಆಗಿ, ಪುಷ್ಠಿಯಾಗಿ ಕಾಣುವಂತೆ ಮಾಡು. ನನ್ನ ಮದುವೆ ಯಾವುದೇ ವಿಘ್ನವಿಲ್ಲದೆ ನೆರವೇರುವಂತೆ ದಯೇ ತೋರು, ಜೊತೆಗೆ ಕುಟುಂಬದ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಿದ್ದಾನೆ.


ಭಕ್ತ ಬರೆದ ವಿಚಿತ್ರ ಪತ್ರ


“ಮಂಜುಳ ಅತ್ತೆ, ಮಾವನ ಜೊತೆ ಪ್ರೀತಿಯಿಂದ ಇರುವಂತೆ ಮಾಡು”


ಮಂಜುಳ ಅತ್ತೆ ಹಾಗೂ ಮಾವನ ಜೊತೆ ಪ್ರೀತಿಯಿಂದ ಇರುವಂತೆ ಮಾಡು. ಮಂಜುಳ ಮನಸ್ಸಿನಲ್ಲಿ ರಾಜಮ್ಮ ಮತ್ತು ಬಸವರಾಜುನನ್ನ ಒಳ್ಳೆಯವರಾಗಿಸುವಂತೆ ಮಾಡು. ದೇವರಾಜುಗೆ ಕೈತುಂಬಾ ಸಂಬಳ ಸಿಗುವ ಸರ್ಕಾರಿ ಕೆಲಸ ಕೊಡಿಸು ತಾಯೇ ಅಂತ ಮನವಿ ಮಾಡಿದ್ದಾನೆ.


ಕಳಸೇಶ್ವರ ಸ್ವಾಮಿ


ಇದನ್ನೂ ಓದಿ: Viral Letter: ಹ್ಯಾಪಿ ಬರ್ತ್‌ ಡೇ ಗಣಪ, ಪೊಲೀಸ್ ಕೆಲಸ ಕೊಡಿಸಪ್ಪ! ಹಬ್ಬದಂದು ಗಣೇಶನಿಗೆ ಪತ್ರ ಬರೆದ ಯುವಕ


“ಹಣವನ್ನು ಬೇಗ ಕೊಡಿಸುವಂತೆ ಮಾಡು”


ಇನ್ನು ನಮ್ಮ ಋಣದ ಬಾಧೆ ಹಾಗೂ ಸಾಲದ ಭಾದೆಯನ್ನ ಬೇಗ ತೀರಿಸು, ರಮೇಶ ಹಾಗೂ ಮಂಜುಳ ಒಪ್ಪಿಕೊಂಡಿರುವ ಒಂದು ಲಕ್ಷ ರೂಪಾಯಿ ಹಣವನ್ನ ಬೇಗ ಕೊಡುವಂತೆ ಮಾಡು, ರಾಮಕೃಷ್ಣ ಹಾಗೂ ಅರುಣ ಇಬ್ಬರೂ ಹಣವನ್ನ ಬೇಗ ಕೊಡುವಂತೆ ಮಾಡು ಎಂದೆಲ್ಲಾ ಕೇಳಿಕೊಂಡಿದ್ದಾರೆ.


ಕಳಸೇಶ್ವರ ದೇಗುಲ


ವೈರಲ್ ಆಯ್ತು ಭಕ್ತ ಬರೆದ ವಿಚಿತ್ರ ಪತ್ರ


ದೇವಾಲಯದಲ್ಲಿ ಮೊನ್ನೆ ಶುಕ್ರವಾರ ಹುಂಡಿಯ ಹಣ ಎಣಿಕೆ ಕಾರ್ಯ ನಡೆಯಿತು. ಈ ವೇಳೆ ಹುಂಡಿಯಲ್ಲಿ ಹಣದ ಮಧ್ಯೆ ಇದೊಂದು ವಿಚಿತ್ರ ರೀತಿಯ ಪತ್ರ ಸಿಕ್ಕಿದೆ. ಭಕ್ತನ ವಿಚಿತ್ರ ಬೇಡಿಕೆಗಳ ಪಟ್ಟಿ ನೋಡಿ ದೇವಸ್ಥಾನದ ಆಡಳಿತ ಮಂಡಳಿಯವರೇ ಶಾಕ್ ಆಗಿದ್ದಾರೆ. ಇದೀಗ ಆ ಭಕ್ತ ದೇವರಿಗೆ ಬರೆದ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.


ಉಕ್ಕಡ ಮಾರಮ್ಮ


ಇದನ್ನೂ ಓದಿ: "ನನ್ನ ಮಗಳಿಗೆ ನನಗಿಂತ 100 ಪಟ್ಟು ಆಸ್ತಿ ಇರೋ ವರ ಸಿಗಲಿ, ನಾನು ಬೇಗ PSI ಆಗಲಿ"! ಯಲ್ಲಮ್ಮನಿಗೆ ಭಕ್ತರ ಬೇಡಿಕೆ


ಕಳಸೇಶ್ವರನ ಕಾಣಿಕೆ ಹುಂಡಿಯಲ್ಲಿ 18.39 ಲಕ್ಷ ರೂಪಾಯಿ ಸಂಗ್ರಹ


ಇನ್ನು ದಕ್ಷಿಣ ಕಾಶಿ ಎಂದೇ ಪ್ರಸಿದ್ಧ ವಾದ ಕಳಸೇಶ್ವರ ದೇಗುಲಕ್ಕೆ ಭಕ್ತರು ಅಪಾರ ಸಂಖ್ಯೆಯಲ್ಲಿ ಬರುತ್ತಾರೆ. ಕಳಸೇಶ್ವರ ದೇವಸ್ಥಾನ ಮತ್ತು ಪರಿವಾರ ದೇವತೆಗಳ ಹುಂಡಿಗಳಲ್ಲಿ ಕಳೆದ 6 ತಿಂಗಳಿನಲ್ಲಿ 18.39 ಲಕ್ಷ ರೂಪಾಯಿ ಹಣ ಸಂಗ್ರಹಣೆಯಾಗಿದೆ. ಕಳೆದ ಏಪ್ರಿಲ್ 1ರಿಂದ ಈವರೆಗಿನ 6 ತಿಂಗಳಲ್ಲಿ ಈ ಹಣವು ಸಂಗ್ರಹವಾಗಿದೆ. ಕಳಸೇಶ್ವರ ದೇವಸ್ಥಾನ, ಗಿರಿಜಾಂಬಾ ದೇವಸ್ಥಾನ, ಆನೆ ಗಣಪತಿ, ಸರ್ವಾಂಗ ಸುಂದರಿ ದೇಗುಲ, ಕ್ಷೇತ್ರಪಾಲ ಸೇರಿದಂತೆ ಎಲ್ಲಾ ದೇಗುಲದ ಒಟ್ಟು 19 ಹುಂಡಿಗಳನ್ನು ತೆರೆದು ಎಣಿಕೆ ಕಾರ್ಯ ಮಾಡಲಾಗಿತ್ತು.

Published by:Annappa Achari
First published: