ಡ್ರ್ಯಾಗನ್ ಹಣ್ಣು ಬೆಳೆದು ಯಶಸ್ಸು ಕಂಡ ಪದವೀಧರ; ಅಪರೂಪದ ಹಣ್ಣಿಗೆ ಭಾರಿ ಬೇಡಿಕೆ

ಈ ಡ್ರ್ಯಾಗನ್ ಹಣ್ಣನ್ನು ಮೊದಲು ಶ್ರೀಲಂಕಾ, ಥೈಲ್ಯಾಂಡ್, ವಿಯಟ್ನಾಂ ದೇಶಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿತ್ತು.  ಈಗ ಕಾಗವಾಡದ ರೈತ ಬೆಳೆದಿದ್ದು, ಗ್ರಾಮೀಣ ಭಾಗದ ಜನರಿಗೂ ಈ ಹಣ್ಣಿನ ರುಚಿ ಸವಿಯುವ ಅವಕಾಶ ಸಿಕ್ಕಿದೆ.

news18-kannada
Updated:November 21, 2020, 2:11 PM IST
ಡ್ರ್ಯಾಗನ್ ಹಣ್ಣು ಬೆಳೆದು ಯಶಸ್ಸು ಕಂಡ ಪದವೀಧರ; ಅಪರೂಪದ ಹಣ್ಣಿಗೆ ಭಾರಿ ಬೇಡಿಕೆ
ಡ್ರ್ಯಾಗನ್ ಹಣ್ಣು ಬೆಳೆದಿರುವ ರೈತ
  • Share this:
ಚಿಕ್ಕೋಡಿ(ನ.21): ಕೊರೋನಾ ಮಹಾಮಾರಿಯಿಂದ ಅದೆಷ್ಟೋ ಜನ ಬೀದಿಗೆ ಬಿದ್ದಿದ್ದನ್ನು ನೋಡಿದ್ದೇವೆ, ಕೇಳಿದ್ದೇವೆ. ಕೊರೋನಾ ಕರಿನೆರಳಿನಿಂದ ಅದೆಷ್ಟೋ ರೈತರು ತಮ್ಮ ಬೆಳೆಗಳಿಗೆ ಸರಿಯಾದ ಮಾರುಕಟ್ಟೆ ಸಿಗದೆ ಬೀದಿಗೆ ಬಿಸಾಕಿದ್ದಾರೆ. ಇನ್ನು ಹಲವು ರೈತರು ಸಾಲದ ಸುಳಿಗೆ ಸಿಲುಕಿ ನರಳುತ್ತಿದ್ದಾರೆ. ಆದರೆ ಇಲ್ಲೊಬ್ಬ ಪದವೀಧರ ರೈತ ಮಾತ್ರ ಪಟ್ಟಣದ ನೌಕರಿಗೆ ಆಸೆ ಪಡದೆ ತಮ್ಮ ಜಮೀನಿನಲ್ಲೇ ಕೃಷಿ ಮಾಡುವ ಮೂಲಕ ಸ್ವಾವಲಂಬಿಯಾಗಿದ್ದಾರೆ ಹೊರ ದೇಶದ ಹಣ್ಣನ್ನು ಬೆಳೆದು ಯಶಸ್ಸು ಕಂಡಿದ್ದಾರೆ. ಬೆಳಗಾವಿ ಜಿಲ್ಲೆಯ ಕಾಗವಾಡ ಗ್ರಾಮದ ಮಹಾದೇವ ಕೋಳೆಕರ ಎಂಬ 38 ವರ್ಷದ ಪದವೀಧರನ ಯಶೋಗಾಥೆ ಇದು. ಯಾವುದೇ ನೌಕರಿಗೆ ಆಸೆ ಪಡದೆ ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಅಪರೂಪದ ಡ್ರ್ಯಾಗನ್ ಹಣ್ಣನ್ನು ಬೆಳೆದು ಇಂದು ಯಶಸ್ಸು ಕಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಹಲವಾರು ಜನ ದೊಡ್ಡ ದೊಡ್ಡ ನಗರ ಪ್ರದೇಶಗಳಿಂದ ನೌಕರಿ ಕಳೆದುಕೊಂಡು ತಮ್ಮ ಗ್ರಾಮಗಳಿಗೆ ಆಗಮಿಸುತ್ತಿದ್ದಾರೆ. ಮನೆಯಲ್ಲಿ ಕೆಲಸವಿಲ್ಲ ಎಂದು ಖಾಲಿ ಕೂಡುವ ಎಷ್ಟೋ ಜನ ಪದವೀಧರರಿಗೆ ಈತ ಮಾದರಿಯಾಗಿದ್ದಾರೆ. ಹೌದು..! ಡ್ರಾಗನ್ ಹಣ್ಣು ಅಪರೂಪದ ಹಣ್ಣು ಅಂತಾನೆ ಹೇಳಬಹುದು ಹಲವು ಖಾಯಿಲೆಗಳಿಗೆ ಇದು ರಾಮಬಾಣ ಇದ್ದ ಹಾಗೆ.  ಸಕ್ಕರೆ ಖಾಯಿಲೆ, ಡೆಂಗ್ಯೂ, ಬಿಳಿ ರಕ್ತಕಣ ಕಡಿಮೆ ಆದವರು ಹೆಚ್ಚಾಗಿ ಈ ಹಣ್ಣನ್ನು ತಿನ್ನುತ್ತಾರೆ. ಈ ಡ್ರ್ಯಾಗನ್ ಹಣ್ಣು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ. ಕೊರಓನಾ ಸೋಂಕಿತರಿಗೆ ಇದೊಂದು ಶಕ್ತಿವರ್ಧಕ ಹಣ್ಣಾಗಿದ್ದು, ಪ್ರತಿದಿನ ಮಹಾದೇವ ಕೋಳೆಕರ ಅವರ ತೋಟಕ್ಕೆ ಬಂದು ಒಬ್ಬೊಬ್ಬರೂ ಐದರಿಂದ ಆರು ಕೆ‌‌.ಜಿ ಹಣ್ಣು ಖರೀದಿಸುತ್ತಾರೆ. ಹೀಗಾಗಿ ನಮ್ಮ ತೋಟದಲ್ಲಿಯೇ ದಿನಕ್ಕೆ 100 ರಿಂದ 120 ಕೆ.ಜಿ ಹಣ್ಣು ಮಾರಾಟವಾಗುತ್ತವೆ.

ಅನಾವಶ್ಯಕವಾಗಿ ಬಂದ್ ಮಾಡಿದ್ರೆ ನಾನು ಸಹಿಸಲ್ಲ; ಕನ್ನಡಪರ ಸಂಘಟನೆಗಳಿಗೆ ಸಿಎಂ ಯಡಿಯೂರಪ್ಪ ಎಚ್ಚರಿಕೆ

ಇದು ತಿನ್ನಲು ತುಂಬಾ ಸುಲಭವಾಗಿದ್ದು, ಹೇಗೆ ತಿನ್ನಬೇಕು ಎಂಬುದನ್ನು ಸಹ ಮಹಾದೇವ ಕೋಳೆಕರ ಅವರು ಜನರಿಗೆ ತಿಳಿಸಿಕೊಟ್ಟಿದ್ದಾರೆ. ಈ ಡ್ರ್ಯಾಗನ್ ಹಣ್ಣನ್ನು ಮೊದಲು ಶ್ರೀಲಂಕಾ, ಥೈಲ್ಯಾಂಡ್, ವಿಯಟ್ನಾಂ ದೇಶಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿತ್ತು.  ಈಗ ಕಾಗವಾಡದ ರೈತ ಬೆಳೆದಿದ್ದು, ಗ್ರಾಮೀಣ ಭಾಗದ ಜನರಿಗೂ ಈ ಹಣ್ಣಿನ ರುಚಿ ಸವಿಯುವ ಅವಕಾಶ ಸಿಕ್ಕಿದೆ. ಒಂದು ಎಕರೆ ಜಮೀನಿನಲ್ಲಿ ಈ ಡ್ರ್ಯಾಗನ್ ಹಣ್ಣು ಬೆಳೆದಿದ್ದು, ಒಂದೆ ಎಕರೆಯಲ್ಲಿ ಪ್ರತಿ ವರ್ಷವೂ ಲಕ್ಷಾಂತರ ಆದಾಯ ಗಳಿಸುತ್ತಾರೆ ಈ ಯುವ ರೈತ.

ಲಾಕ್​ಡೌನ್​ಗೂ ಮೊದಲು ಪಕ್ಕದ ಮಹಾರಾಷ್ಟ್ರದ ಸಾಂಗ್ಲಿ, ಕೊಲ್ಲಾಪುರ, ಇಂಚಲಕರಂಜಿ ಮಾರುಕಟ್ಟೆಗಳಿಗೆ ಡ್ರ್ಯಾಗನ್ ಹಣ್ಣನ್ನ ಕಳಿಸಲಾಗುತ್ತಿತ್ತು. ಆದ್ರೆ ಈಗ ಮಹಾರಾಷ್ಟ್ರದಲ್ಲಿ ಕೊರೋನಾ ಸಂಖ್ಯೆ ಹೆಚ್ಚಾಗುತ್ತಿದ್ದು, ಮಹದೇವ ಅವರು ಬೆಳಗಾವಿ ಮಾರುಕಟ್ಟೆಗೆ ಕಳಿಸಿ ಮಾರಾಟ ಮಾಡುತ್ತಿದ್ದಾರೆ.

ಒಟ್ಟಿನಲ್ಲಿ ಡ್ರ್ಯಾಗನ್ ಹಣ್ಣು ಬೆಳೆದು ಯಶಸ್ಸು ಕಂಡಿರುವ ರೈತನ ಹೊಲಕ್ಕೆ ನಿತ್ಯವೂ ಇನ್ನುಳಿದ ರೈತರು ಬಂದು ಭೇಟಿ ನೀಡಿ, ಡ್ರ್ಯಾಗನ್​​ ಹಣ್ಣು ಬೆಳೆಯುವ ಕುರಿತು ಮಹಾದೇವ ಅವರಿಂದಲೇ ಮಾಹಿತಿ ಪಡೆದು ಹಲವರು ಯಶಸ್ಸು ಕಂಡಿದ್ದಾರೆ.
Published by: Latha CG
First published: November 21, 2020, 2:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading