ತಾಯಿಯ ಶವದ ಜೊತೆ ಐದು ದಿನ ಕಳೆದ ಮಗಳು; ಶಿವಮೊಗ್ಗದಲ್ಲೊಂದು ವಿಚಿತ್ರ ಘಟನೆ

ಶವ ಕೊಳೆತು ವಾಸನೆ ಬಂದಾಗ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಮನೆಯ ಹತ್ತಿರ ಬಂದು ಬಾಗಿಲು ಮುರಿದು ಒಳಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ

news18-kannada
Updated:May 19, 2020, 3:52 PM IST
ತಾಯಿಯ ಶವದ ಜೊತೆ ಐದು ದಿನ ಕಳೆದ ಮಗಳು; ಶಿವಮೊಗ್ಗದಲ್ಲೊಂದು ವಿಚಿತ್ರ ಘಟನೆ
ಸಾಂದರ್ಭಿಕ ಚಿತ್ರ
  • Share this:
ಶಿವಮೊಗ್ಗ(ಮೇ.19): ಈ ಘಟನೆ ಒಂದು ಕಡೆ ಎದೆ ಝಲ್​​ ಏನಿಸುತ್ತೆ. ಮತ್ತೊಂದು ಕಡೆ ಕನಿಕರ, ಅನುಕಂಪ ಹುಟ್ಟಿಸುತ್ತೆ. ನಿಜವಾಗಲೂ ಹೀಗೆ ಇರುವುದು ಸಾಧ್ಯನಾ ಎನ್ನಿಸುತ್ತೆ. ತಾಯಿಯ ಶವದ ಜೊತೆ ಮಗಳೊಬ್ಬಳು ಐದು ದಿನವನ್ನು ಮನೆಯಲ್ಲೇ ಕಳೆದಿದ್ದಾಳೆ. ಬೇರೆಯವರಿಗೂ ಹೇಳಲು ಆಗದ ಸ್ಥಿತಿಯಲ್ಲಿ ಹಗಲು ರಾತ್ರಿ, ಶವದ ಜೊತೆಯೇ ಕಾಲ ಕಳೆದಿದ್ದಾಳೆ. ಶಿವಮೊಗ್ಗದ ಬಸವನಗುಡಿ ಬಡಾವಣೆಯಲ್ಲಿ 5 ನೇ ತಿರುವಿನಲ್ಲಿ ಇಂತಹ ಘಟನೆ ನಡೆದಿದೆ.

ಮೇ 13 ರಂದು ರಾಜೇಶ್ವರಿ 64 ವರ್ಷ ಎಂಬ ಮಹಿಳೆ ಮೃತಪಟ್ಟಿದ್ದಾರೆ. ಅವರ ಮಗಳು  ತಾಯಿ ಮೃತಪ್ಟಟಿರುವ ವಿಷಯವನ್ನು ಯಾರಿಗೂ ತಿಳಿಸಿಲ್ಲ. ಅಲ್ಲದೇ ಶವ ಸಂಸ್ಕಾರ ಸಹ ಮಾಡದೇ ಮನೆಯಲ್ಲೇ ಶವ ಇಟ್ಟುಕೊಂಡಿದ್ದಾಳೆ. ಶವದ ಜೊತೆ ಮನೆಯಲ್ಲೇ 5 ದಿನ ಅಕೆಯೂ ಕಾಲ ಕಳೆದಿದ್ದಾರೆ.

ರಾಜೇಶ್ವರಿ ನಿವೃತ್ತ ಶಾಲಾ ಶಿಕ್ಷಕಿಯಾಗಿದ್ದಾರೆ. ಅವರ ಪತಿ ಸಹ ಹಲವು ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾರೆ. ಬಾಡಿಗೆ ಮನೆಯಲ್ಲಿ ತಾಯಿ ಮಗಳು ವಾಸ ಮಾಡುತ್ತಿದ್ದರು. ಶವ ಕೊಳೆತು ವಾಸನೆ ಬಂದಾಗ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಮನೆಯ ಹತ್ತಿರ ಬಂದು ಬಾಗಿಲು ಮುರಿದು ಒಳಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ.

ಇನ್ನು ರಾಜೇಶ್ವರಿ ಅವರು ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದರಂತೆ. ಔಷಧದ ಡೋಸ್, ಹೆಚ್ಚಾಗಿ ಸಾವನ್ನಪ್ಪಿರುವ ಶಂಕೆ ಸಹ ವ್ಯಕ್ತವಾಗಿದೆ. ಮಗಳು ಶಾಂಭವಿ ಯಾರ ಜೊತೆಗೆ ಹೆಚ್ಚು ಮಾತನಾಡುತ್ತಿರಲಿಲ್ಲವಂತೆ. ಇವರ ಸಂಬಂಧಿಕರ ಬಗ್ಗೆಯೂ ಸ್ಥಳೀಯರಿಗೆ ಹೆಚ್ಚಾಗಿ ಗೊತ್ತಿಲ್ಲ.

ಇದನ್ನೂ ಓದಿ :  ಗ್ರಾಮ ಪಂಚಾಯತ್​ ಚುನಾವಣೆ ನಡೆಸುವಂತೆ ಚುನಾವಣಾ ಆಯುಕ್ತರಿಗೆ ಪತ್ರ ಬರೆದ ಹೆಚ್ ಕೆ ಪಾಟೀಲ

ತಾಯಿ ಮತ್ತು ಮಗಳು ಇಬ್ಬರೇ ಇದ್ದ ಕಾರಣ, ತಾಯಿ ಮೇಲಿನ ಪ್ರೀತಿಯಿಂದ ಶಾಂಭವಿ ಯಾರಿಗೂ ವಿಷಯ ಮುಟ್ಟಿಸಿಲ್ಲ ಎಂಬ ಅನುಮಾನಗಳು ಸಹ ಇವೆ. ಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ಮುಂದುವರೆಸಿದ್ದಾರೆ.
First published: May 19, 2020, 3:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading