ತುಮಕೂರು: ದೇವಾಲಯ ಪ್ರವೇಶ ಮಾಡಿದ್ದಕ್ಕೆ ದಲಿತ ಯುವಕನ (Dalit Youth) ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ತುಮಕೂರು ಜಿಲ್ಲೆಯ ತಿಪಟೂರು (Tiptur, Tumakuru) ತಾಲೂಕಿನ ಬಿದರೆಗುಡಿಯಲ್ಲಿ (Bidaregude) ನಡೆದಿದೆ. ಮುಜರಾಯಿ ಇಲಾಖೆ (Muzarai Department) ದೇವಾಲಯ ಆಗಿದ್ರೂ ದಲಿತರನ್ನು ಸವರ್ಣಿಯರು ಒಳಗೆ ಬಿಟ್ಟಿರಲಿಲ್ಲ. ಕಳೆದ ಮೂರು ದಿನಗಳಿಂದ ಬಿದಿರಾಂಭಿಕ ದೇವಾಲಯದ ಜಾತ್ರೆ ನಡೆಯುತ್ತಿದೆ. ಜಾತ್ರೆ ಹಿನ್ನೆಲೆ ಗ್ರಾಮದ ದಲಿತ ಯುವಕ ಲಿಂಗರಾಜು ದೇವಾಲಯದ ಒಳಗೆ ಪ್ರವೇಶಿಸಿದ್ದರು. ಈ ವೇಳೆ ಸವರ್ಣಿಯರಾದ ಶಿವಕುಮಾರ್ ಮತ್ತು ಆತನ ಸಹಚರರು ಲಿಂಗರಾಜು ಮೇಲೆ ದೊಣ್ಣೆ ಮತ್ತು ಕೈಗೆ ಸಿಕ್ಕ ವಸ್ತುಗಳಿಂದ ಹಲ್ಲೆ ನಡೆಸಿದ್ದಾರೆ.
ದೇವಾಲಯದಲ್ಲಿನ ಅಸ್ಪೃಶ್ಯತೆ ಬಗ್ಗೆ ಈ ಹಿಂದೆ ತಹಶೀಲ್ದಾರ್ ಗಮನಕ್ಕೆ ತರಲಾಗಿತ್ತು. ಆದ್ರೆ ತಹಶೀಲ್ದಾರ್ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.
ಮಾತನಾಡಬೇಕು ಎಂದೇಳಿ ಹಲ್ಲೆ
ನಾವು ಜಾತ್ರೆಗೆ ಹೋದಾಗ ಗೌಡರು ನಮ್ಮ ಜೊತೆ ಮಾತನಾಡಬೇಕು ಎಂದು ಕರೆದುಕೊಂಡು ಹೋದರು. ಅಲ್ಲಿಗೆ ಹೋಗುತ್ತಲೇ ಜಾತಿ ನಿಂದನೆ ಮಾಡಿ ಸುಮಾರು 20 ಜನರು ಜೊತೆಯಾಗಿ ಹಲ್ಲೆ ನಡೆಸಿದರು. ಅದು ಮುಜರಾಯಿ ಇಲಾಖೆಯಾದ್ರೂ ನಮಗೆ ಒಳ ಪ್ರವೇಶಕ್ಕೆ ಅವಕಾಶ ನೀಡಲ್ಲ ಎಂದು ಹಲ್ಲೆಗೊಗಾದ ಲಿಂಗರಾಜು ಹೇಳಿದ್ದಾರೆ.
ಇದನ್ನೂ ಓದಿ: Mysuru: ಮದ್ಯದ ನಶೆಯಲ್ಲಿ ಮರ್ಮಾಂಗ ಕತ್ತರಿಸಿಕೊಂಡ ವ್ಯಕ್ತಿ
ಗಾಯಾಳುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ
ಸದ್ಯ ಲಿಂಗರಾಜು ತಿಪಟೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಹೊನ್ನವಳ್ಳಿ ಮತ್ತು ತಿಪಟೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ