ಮೂರು ಕರುಗಳಿಗೆ ಜನ್ಮ ನೀಡಿದ ಹಸು; ಚಿಕ್ಕಮಗಳೂರಿನಲ್ಲಿ ಅಪರೂಪದ ಘಟನೆ

ಸಾಮಾನ್ಯವಾಗಿ ಹಸು ಒಂದೇ ಕರು ಹಾಕುವುದು. ತೀರಾ ಅಪರೂಪ ಎಂಬಂತೆ ಎರಡು ಕರು ಹಾಕಬಹುದು. ಆದರೆ, ಮೂರು ಕರುಗಳನ್ನ ಹಾಕುವುದು ತುಂಬಾ ವಿರಳ.

Latha CG | news18-kannada
Updated:October 18, 2019, 11:41 AM IST
ಮೂರು ಕರುಗಳಿಗೆ ಜನ್ಮ ನೀಡಿದ ಹಸು; ಚಿಕ್ಕಮಗಳೂರಿನಲ್ಲಿ ಅಪರೂಪದ ಘಟನೆ
ಮೂರು ಕರುಗಳಿಗೆ ಜನ್ಮ ನೀಡಿರುವ ದೇಸಿ ಹಸು
  • Share this:
ಚಿಕ್ಕಮಗಳೂರು(ಅ.18): ದೇಸಿ ಹಸುವೊಂದು ಮೂರು ಕರುಗಳಿಗೆ ಜನ್ಮ ನೀಡಿರುವ ಅಪರೂಪದ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ನಂದಿಪುರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರಂಗಪ್ಪ ಎಂಬುವರ ದೇಸಿ ತಳಿಯ ಹಸುವಿಗೆ ಲಕ್ಷ್ಮಿ ಎಂದು ಹೆಸರಿಟ್ಟಿದ್ದರು. ನಿನ್ನೆ ಕರು ಹಾಕಿದ ಲಕ್ಷ್ಮಿ ಎರಡು ಗಂಡು, ಒಂದು ಹೆಣ್ಣು ಕರುವಿಗೆ ಜನ್ಮ ನೀಡಿದೆ. ಆದ್ದರಿಂದ ರಂಗಪ್ಪ ಕರುಗಳಿಗೆ ರಾಮ, ಲಕ್ಷ್ಮಣ, ಸೀತೆ ಎಂದು ಹೆಸರಿಟ್ಟಿದ್ದಾರೆ.

ಸಿಂದಗಿಯ ಈ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲ; ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ; ಆರೋಗ್ಯ ಸಚಿವರ ವಿರುದ್ಧ ಗ್ರಾಮಸ್ಥರ ಆಕ್ರೋಶ

ಸಾಮಾನ್ಯವಾಗಿ ಹಸು ಒಂದೇ ಕರು ಹಾಕುವುದು. ತೀರಾ ಅಪರೂಪ ಎಂಬಂತೆ ಎರಡು ಕರು ಹಾಕಬಹುದು. ಆದರೆ, ಮೂರು ಕರುಗಳನ್ನ ಹಾಕುವುದು ತುಂಬಾ ವಿರಳ. ಆದ್ದರಿಂದ ರಂಗಪ್ಪ ಹಸು ಹಾಗೂ ಕರುಗಳಿಗೆ ಪೂಜೆ ಮಾಡಿ ಮನೆಗೆ ಲಕ್ಷ್ಮಿ ಬಂದಂತೆ ಎಂದು ಭಾವಿಸಿದ್ದಾರೆ.

ಹಸುವೊಂದು ಮೂರು ಕರು ಹಾಕಿದೆ ಎಂಬ ವಿಷಯ ಹರಡುತ್ತಿದ್ದಂತೆ ಅಕ್ಕಪಕ್ಕದ ಊರಿನವರು ಬಂದು ಕರುಗಳನ್ನ ನೋಡಿ ಹೋಗುತ್ತಿದ್ದಾರೆ.

(ವರದಿ:ವೀರೇಶ್ ಜಿ ಹೊಸೂರ್)

First published:October 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ