ಮಳವಳ್ಳಿ, ಮಂಡ್ಯ: ರಾತ್ರಿ (Night) ಮನೆಯ ಹಿತ್ತಲಲ್ಲಿ ಕಟ್ಟಿದ್ದ ಕರು (calf) ಬೆಳಗಾಗೋದ್ರಲ್ಲಿ ನಾಪತ್ತೆಯಾಗಿತ್ತು. ತನ್ನ ಕರುಳಿನ ಬಳ್ಳಿ ಕಾಣದ ಹಿನ್ನೆಲೆ ತಾಯಿ (Mother) ಹಸು (Cow) ಹಿತ್ತಲಲ್ಲಿ ಅಂಬಾ ಅಂಬಾ ಅಂತ ಕೂಗಾಡ್ತಿತ್ತು. ಇದನ್ನ ಕಂಡ ಮನೆ ಮಾಲೀಕ (House Owner) ಕರುವನ್ನ ಹುಡುಕಿ ಹುಡುಕಿ ಸುಸ್ತಾಗಿದ್ದ. ಆದ್ರೆ ಕೊನೆಗೆ ತಾಯಿ ಹಸು ಹಗ್ಗ ಕಳಚುತ್ತಿದ್ದಂತೆ ತನ್ನ ಕಂದನನ್ನ 5 ನಿಮಿಷದಲ್ಲಿ ಕಂಡು ಹಿಡಿದಿತ್ತು. ಆದ್ರೆ ಆನಂತರ ನಡೆದ ಘಟನೆ ಮಾತ್ರ ಎಂತವರಿಗೂ ಕಣ್ಣೀರು ತರಿಸುವಂತ ಘೋರ ಘಟನೆ. ಮಂಡ್ಯ (Mandya) ಜಿಲ್ಲೆಯ ಮಳವಳ್ಳಿ (Malavalli) ತಾಲೂಕಿನ ಹಲಗೂರು (Halaguru) ಬಳಿಯ ಕೊನ್ನಾಪುರ ಎಂಬ ಗ್ರಾಮದಲ್ಲಿ (Village) ಇಂತದ್ದೊಂದು ಘಟನೆ (Incident) ನಡೆದಿದೆ. ಅರೇ ಅದೇನಪ್ಪ ತಾಯಿ ಹಸು ಹಾಗೂ ಕರುವಿಗೆ ಅಂತಾದ್ದು ಏನಾಯ್ತು ಅಂತ ಯೋಚಿಸ್ತಿದ್ದೀರಾ. ಈ ಕರು ಮತ್ತು ತಾಯಿ ಹಸುವಿನ ದುರಂತ ಸ್ಟೋರಿ (Story) ಇಲ್ಲಿದೆ ಓದಿ…
ರಾತ್ರಿ ತಾಯಿ ಜೊತೆ ಮಲಗಿದ್ದ ಕರು
ಹೌದು.., ಇಂತಾದ್ದೊಂದು ಘಟನೆ ನಡೆದಿರೋದು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹಲಗೂರು ಬಳಿಯ ಕೊನ್ನಾಪುರ ಗ್ರಾಮದಲ್ಲಿ. ಗ್ರಾಮದ ರೈತ ಚಂದ್ರಶೇಖರ್ ತಮ್ಮ ಮನೆಯಲ್ಲಿ ಹಸುವೊಂದನ್ನ ಸಾಕಿದ್ದು, ಆ ಹಸು ಕೆಲ ದಿನಗಳ ಹಿಂದೆ ಕರು ಒಂದನ್ನ ಹಾಕಿತ್ತು. ಹೀಗಾಗಿ ರೈತ ಚಂದ್ರಶೇಖರ್ ಸಹಜವಾಗೆ ತಮ್ಮ ಮನೆಯ ಹಿತ್ತಲಿನಲ್ಲಿ ಹಸು ಕರು ಎರಡನ್ನ ಕಟ್ಟಿ ಹಾಕ್ತಿದ್ರು.
ರಾತ್ರಿ ಹಸು ಜೊತೆ ಇದ್ದ ಕರು ಬೆಳಗಾಗೋದ್ರಲ್ಲಿ ಮಾಯ!
ಆದ್ರೆ ಮೊನ್ನೆ ಅದೆ ರೀತಿ ಕಟ್ಟಿಹಾಕಿದ್ದ ಕರು ಇದ್ದಕ್ಕಿದ್ದಂತೆ ಬೆಳಗಾಗೋದ್ರಲ್ಲಿ ನಾಪತ್ತೆಯಾಗಿತ್ತು. ಹಿಗಾಗಿ ಚಂದ್ರಶೇಖರ್ ತಮ್ಮ ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಕರುಗಾಗಿ ಹುಡುಕಾಟ ನಡೆಸಿದ್ರಾದ್ರೂ, ಕರು ಮಾತ್ರ ಪತ್ತೆಯಾಗಲಿಲ್ಲ.
ಇದನ್ನೂ ಓದಿ: Dogs Love: ನಾಯಿಗೆ ಇದ್ದ ನಿಯತ್ತು ಮನುಷ್ಯನಿಗೆ ಇಲ್ಲವಾಯಿತೇ? ಇದು ಚಾರ್ಲಿ ಅಲ್ಲ, ಗುರೂಜಿಯ ಪ್ರಿನ್ಸ್!
ತನ್ನ ಕರುಳ ಬಳ್ಳಿ ಕಂಡು ಹಿಡಿದ ತಾಯಿ ಹಸು
ಇನ್ನು ಕರು ಹುಡುಕಿ ಹುಡುಕಿ ಸುಸ್ತಾದ ಚಂದ್ರಶೇಖರ್ ಬಳಿಕ ಚಡಪಡಿಸುತ್ತಿದ್ದ ತಾಯಿ ಹಸುವನ್ನ ಕಂಡು, ನಂತರ ಕಟ್ಟಿದ್ದ ಅದರ ಹಗ್ಗವನ್ನ ಕಳಚಿದ್ರು. ಬಳಿಕ ಹಸು ಹಗ್ಗ ಕಳಚಿದ್ದೆ ತಡ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿದ್ದ ತನ್ನ ಕರುವಿನ ಬಳಿ ಹೋಗಿ ನಿಂತಿತ್ತು. ಇದನ್ನ ಕಂಡ ಗ್ರಾಮಸ್ಥರು ಮತ್ತು ರೈತ ಚಂದ್ರಶೇಖರ್ ಒಂದು ಕ್ಷಣ ಆಶ್ಚರ್ಯ ಪಟ್ರು. ಎಷ್ಟು ಹುಡುಕಿದ್ರು ಸಿಗದ ಕರುವನ್ನ ತಾಯಿ ಹಸು ಹುಡುಕಿತು ಎಂದು ಗ್ರಾಮಸ್ಥರು ಮೂಗಿನ ಮೇಲೆ ಬೆರಳಿಟ್ಟಿದ್ದರು.
ಇದನ್ನೂ ಓದಿ: Chamundi Hill: ಚಾಮುಂಡಿ ಬೆಟ್ಟದಲ್ಲಿ ರೋಪ್ ವೇ ನಿರ್ಮಾಣವಿಲ್ಲ, ಜನರನ್ನು ಒಕ್ಕಲೆಬ್ಬಿಸೋದಿಲ್ಲ ಎಂದ ಸರ್ಕಾರ
ಚಿರತೆಗೆ ಬಲಿಯಾಗಿದ್ದ ಕರು, ಕರುಳ ಬಳಿ ಸಾವಿಗೆ ತಾಯಿಯ ಮೂಕ ರೋಧನ
ಇನ್ನು ಕರು ಸಿಕ್ತು ಅಂತ ಖುಷಿ ಪಡುವಷ್ಟರಲ್ಲಿ ಆಘಾತವೊಂದು ಎದುರಾಗಿತ್ತು. ರಾತ್ರಿ ಹಿತ್ತಲಲ್ಲಿ ಕಟ್ಟಿದ್ದ ಕರುವನ್ನ ಚಿರತೆ ಹೊತ್ತೊಯ್ದು ಗ್ರಾಮದ ಅರ್ಧ ಕಿಲೋಮೀಟರ್ ದೂರದಲ್ಲಿ ಕೊಂದು ಹಾಕಿತ್ತು. ಅರೆ ಬರೆ ತಿಂದು ಬೀಸಾಡಿದ್ದ ಕರುವಿನ ಶವದ ಮುಂದೆ ತಾಯಿ ಹಸು ಕಣ್ಣೀರು ಹಾಕಿತ್ತು. ಈ ದೃಶ್ಯ ಕಂಡ ಗ್ರಾಮಸ್ಥರು, ತಾಯಿ ಹಸುವಿನ ಸಂಕಟ ಕಂಡು ಮರುಗಿದ್ರು.
(ವರದಿ - ಸುನೀಲ್ ಗೌಡ, ಮಂಡ್ಯ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ