• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Siddaramotsava: ಸಿದ್ದರಾಮೋತ್ಸವದ ವಿರುದ್ಧ ಕಾಂಗ್ರೆಸ್ ಹೈಕಮಾಂಡ್‌ಗೆ ದೂರು! ಸಿದ್ದು ಮೇಲೆ ಸಿಡುಕು ಯಾರಿಗೆ?

Siddaramotsava: ಸಿದ್ದರಾಮೋತ್ಸವದ ವಿರುದ್ಧ ಕಾಂಗ್ರೆಸ್ ಹೈಕಮಾಂಡ್‌ಗೆ ದೂರು! ಸಿದ್ದು ಮೇಲೆ ಸಿಡುಕು ಯಾರಿಗೆ?

ಸಿದ್ದರಾಮೋತ್ಸವ

ಸಿದ್ದರಾಮೋತ್ಸವ

ಸಿದ್ದರಾಮೋತ್ಸವ ಕಾರ್ಯಕ್ರಮದ ವಿರುದ್ಧ ಕಾಂಗ್ರೆಸ್‌ನಲ್ಲೇ ಅಪಸ್ವರ ಕೇಳಿ ಬಂದಿದೆಯಾ? ಸಿದ್ದರಾಮೋತ್ಸವದ ವಿರುದ್ಧ ಕಾಂಗ್ರೆಸ್‌ ಹೈಕಮಾಂಡ್‌ಗೆ ದೂರಿ ನೀಡಲಾಗಿದ್ಯಾ? ಹೀಗೊಂದು ಚರ್ಚೆ ರಾಜಕೀಯ ವಲಯದಲ್ಲಿ ಶುರುವಾಗಿದೆ.

 • Share this:

ಬೆಂಗಳೂರು: ಇದೇ ಆಗಸ್ಟ್ 3 ಅಂದರೆ, ಬುಧವಾರ ರಾಜ್ಯದ ಹಿರಿಯ ರಾಜಕಾರಣಿ (Senior Politician), ಮಾಜಿ ಸಿಎಂ (Ex CM) ಹಾಗೂ ಹಾಲಿ ವಿಪಕ್ಷ ನಾಯಕ (Opposition Party Leader) ಸಿದ್ದರಾಮಯ್ಯ (Siddaramaiah) ಅವರ ಹುಟ್ಟುಹಬ್ಬವನ್ನು (Birthday) ಆಚರಿಸಲಾಗಿತ್ತು. ಸಿದ್ದರಾಮಯ್ಯ 75ನೇ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ‘ಸಿದ್ದರಾಮೋತ್ಸವ’ (Siddaramotsava) ಎಂಬ ಹೆಸರಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು (Fans), ಕಾಂಗ್ರೆಸ್ ನಾಯಕರು (Congress Leaders), ಕಾಂಗ್ರೆಸ್ ಕಾರ್ಯಕರ್ತರು (Workers) ಅದ್ಧೂರಿ ಕಾರ್ಯಕ್ರಮ ನಡೆಸಿದ್ದರು. ದಾವಣಗೆರೆಯಲ್ಲಿ (Davanagere) ಈ ಅದ್ಧೂರಿ ಕಾರ್ಯಕ್ರಮ ನಡೆದಿದ್ದು, ಎಐಸಿಸಿ ನಾಯಕ ರಾಹುಲ್ ಗಾಂಧಿ (Rahul Gandhi) ಅವರೇ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದರು. ಸಿದ್ದರಾಮಯ್ಯ ಜೀವನ, ಸಿಎಂ ಆಗಿ ಅವರ ಸಾಧನೆ ಕುರಿತು ಬಿಂಬಿಸುವ ಈ ಕಾರ್ಯಕ್ರಮ ನ ಭೂತೋ ನ ಭವಿಷ್ಯತಿ ಎನ್ನುವಂತೆ ನಡೆದಿದ್ದು ಸುಳ್ಳಲ್ಲ. ಇದೀಗ ಈ ಕಾರ್ಯಕ್ರಮದ ವಿರುದ್ಧ ಕಾಂಗ್ರೆಸ್‌ ಹೈಕಮಾಂಡ್‌ಗೆ (Congress High Command) ದೂರು ನೀಡಲಾಗಿದ್ಯಂತೆ.


ಸಿದ್ದರಾಮೋತ್ಸವದ ವಿರುದ್ಧ ದೂರು


ಸಿದ್ದರಾಮೋತ್ಸವ ಕಾರ್ಯಕ್ರಮದ ವಿರುದ್ಧ ಕಾಂಗ್ರೆಸ್ ನಾಯಕರೊಬ್ಬರು ದೂರು ನೀಡಿದ್ದಾರೆ ಎನ್ನಲಾಗಿದೆ. ಸಿದ್ದರಾಮೋತ್ಸವ ಸಮಿತಿ ವಿರುದ್ಧ ದೂರು ನೀಡಲಾಗಿದೆ. ಸಿದ್ದರಾಮೋತ್ಸವದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಕಾಂಗ್ರೆಸ್ ಹೈಕಮಾಂಡ್‌ಗೆ ದೂರು ನೀಡಿದ್ದಾರೆ ಅಂತ ಟಿವಿ9 ವರದಿ ಮಾಡಿದೆ.


ಕಾಂಗ್ರೆಸ್ ಪಕ್ಷದ ಚಿಹ್ನೆ ಬಳಸದ್ದಕ್ಕೆ ಆಕ್ಷೇಪ


ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಎಲ್ಲಿಯೂ ಕಾಂಗ್ರೆಸ್ ಪಕ್ಷದ ಚಿನ್ಹೆ ಬಳಸದ್ದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಸಿದ್ದರಾಮೋತ್ಸವ ಕಾರ್ಯಕ್ರಮವು ರಾಜ್ಯದ ಜನರು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದೆ. ಸಿದ್ದರಾಮಯ್ಯ ಇಂದು ರಾಜಕೀಯ ಗೆಲವು ಸಾಧಿಸಿರುವುದು ಕಾಂಗ್ರೆಸ್‌ನಿಂದ. ಅನ್ಯ ಪಕ್ಷದಿಂದ ಕಾಂಗ್ರೆಸ್ ಸೇರ್ಪಡೆಯಾದ ಕೆಲ ದಿನಗಳಲ್ಲೇ ವಿಪಕ್ಷ ನಾಯಕರಾದರು. ಬಳಿಕ ಸತತ 5 ವರ್ಷಗಳ ವರೆಗೆ ಸಿದ್ದರಾಮಯ್ಯ ಅವರನ್ನ ಕಾಂಗ್ರೆಸ್ ಪಕ್ಷವು ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಅದಾದ ಬಳಿಕ ಮೈತ್ರಿ ಸರ್ಕಾರದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದರು. ಬಳಿಕ ಮತ್ತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿರುವ ಜೊತೆಗೆ ಇದೀಗ ವಿಪಕ್ಷ ನಾಯಕರಾಗಿದ್ದಾರೆ. ಹೀಗಿರುವಾಗ ಪಕ್ಷದ ಚಿಹ್ನೆಯನ್ನು ಸಿದ್ದರಾಮೋತ್ಸವದಿಂದ ದೂರ ಇಟ್ಟಿರುವುದು ಎಷ್ಟರ ಮಟ್ಟಿಗೆ ಸರಿ? ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೇ ಇದರಲ್ಲಿದ್ದರೂ ಪಕ್ಷದ ಚಿಹ್ನೆ ಬಳಸಲು ಅವರಿಗೆ ಮುಜುಗರವಾಯಿತೆ? ಚಿಹ್ನೆ ಬಳಸದೇ ಇರುವುದು ಪಕ್ಷಕ್ಕೆ ಡ್ಯಾಮೇಜ್ ಮಾಡಲಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.


ಇದನ್ನೂ ಓದಿ: Belagavi Politics: ಸಿದ್ದರಾಮೋತ್ಸವ ಬೆನ್ನಲ್ಲೇ ಲಿಂಗಾಯತ ನಾಯಕನ ಬರ್ತ್ ಡೇಗೆ ಬಿಜೆಪಿ ಪ್ಲಾನ್; ರಾಜ್ಯಪಾಲ ಆಗ್ತಾರಾ ಆ ಮುಖಂಡ?


ರಣ್ದೀಪ್ ಸುರ್ಜೇವಾಲ, ವೇಣುಗೋಪಾಲ್‌ಗೆ ಪತ್ರ


ಈ ಕುರಿತಂತೆ ಕಾಂಗ್ರೆಸ್ ನಾಯಕರೇ ಹೈಕಮಾಂಡ್‌ಗೆ ದೂರು ನೀಡಿದ್ದಾರೆ ಎನ್ನಲಾಗುತ್ತಿದೆ. ಪಕ್ಷದ ಪ್ರಮುಖರಾದ ರಣ್ದೀಪ್ ಸುರ್ಜೇವಾಲ ಹಾಗೂ ಕೆಸಿ ವೇಣುಗೋಪಾಲ್ ಇಬ್ಬರಿಗೂ ಪತ್ರ ಬರೆದು, ದೂರು ನೀಡಲಾಗಿದೆ ಅಂತ ಹೇಳಲಾಗುತ್ತಿದೆ.


ಸಿದ್ದರಾಮೋತ್ಸವಕ್ಕೆ ವ್ಯಂಗ್ಯವಾಡಿದ್ದ ಬಿಜೆಪಿ


ಇನ್ನು ಸಿದ್ದರಾಮೋತ್ಸವಕ್ಕೆ ಬಿಜೆಪಿ ನಾಯಕರು ವ್ಯಂಗ್ಯವಾಡಿದ್ದರು. ಎಷ್ಟೇ ಸಿದ್ದರಾಮೋತ್ಸವ ಮಾಡಿದರೂ ಮುಂದಿನ ಬಾರಿ ಬಿಜೆಪಿಯೇ ಅಧಿಕಾರಕ್ಕೆ ಬರೋದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ  ಹೇಳಿದ್ದರು. ಸಿದ್ದರಾಮಯ್ಯರ 5 ವರ್ಷದ ಆಡಳಿತದಲ್ಲಿ ಜನ ಸಾಕಷ್ಟು ನೋವು ಅನುಭವಿಸಿದ್ದಾರೆ. ಜಾತಿ ಜಾತಿಗಳನ್ನ ಒಡೆಯೊ ಕೆಲಸ ಸಿದ್ದರಾಮಯ್ಯ ಮಾಡಿದ್ದಾರೆ. ಅಲ್ಪಸಂಖ್ಯಾತರನ್ನ ಬಹುಸಂಖ್ಯಾತರ ವಿರುದ್ಧ ಎತ್ತಿ ಕಟ್ಟಿದ್ದೇ ಸಿದ್ದರಾಮಯ್ಯ ಸಾಧನೆ ಎಂದು ಟೀಕಿಸಿದ್ದರು.


ಇದನ್ನೂ ಓದಿ: Amit Shah: ಪ್ರವೀಣ್ ನೆಟ್ಟಾರು ಹತ್ಯೆ, ಕಾರ್ಯಕರ್ತರ ರಾಜೀನಾಮೆ ಶಾಕ್! ಬಸವರಾಜ ಬೊಮ್ಮಾಯಿ ಮೇಲೆ ಅಮಿತ್ ಶಾ ಅಸಮಾಧಾನ


ಸಿದ್ದರಾಮೋತ್ಸವಕ್ಕೆ ಸೆಡ್ಡು ಹೊಡೆಯಲು ಬಿಜೆಪಿ ಪ್ಲಾನ್

top videos


  ಇನ್ನು ಸಿದ್ದರಾಮೋತ್ಸವಕ್ಕೆ ಯಶಸ್ಸಿನಿಂದ ಬಿಜೆಪಿ ಕಂಗೆಟ್ಟಿರುವಂತೆ ತೋರುತ್ತಿದೆ. ಹೀಗಾಗಿ ಸಿದ್ದರಾಮೋತ್ಸವಕ್ಕೆ ಸೆಡ್ಡು ಹೊಡೆಯಲು ಬಿಜೆಪಿ ಪ್ಲಾನ್ ಮಾಡಿಕೊಂಡಿದೆ. ಉತ್ತರ ಕರ್ನಾಟಕದ (North Karnataka) ಪ್ರಭಾವಿ ಲಿಂಗಾಯತ ನಾಯಕನ (Lingayat) ಹುಟ್ಟುಹಬ್ಬದ ಅದ್ದೂರಿ ಆಚರಣೆಗೆ ತೆರೆಮರೆಯಲ್ಲಿ ಪ್ಲ್ಯಾನ್ ರೂಪಿಸಲಾಗುತ್ತಿದೆ. ಎಲ್ಲಾ ಅಂದುಕೊಂಡಂತೆ ಆದ್ರೆ ಅಕ್ಟೋಬರ್ ತಿಂಗಳಲ್ಲಿ ಬೆಳಗಾವಿಯಲ್ಲಿ(Belagavi) ಬೃಹತ್ ಸಮಾವೇಶ ನಡೆಯಲಿದೆ.

  First published: