• Home
  • »
  • News
  • »
  • state
  • »
  • Crime News: ಅಣ್ಣನ ಮೇಲಿನ ದ್ವೇಷಕ್ಕೆ ತಂಗಿ ಹೆಸರಲ್ಲಿ ಫೇಕ್ ಅಕೌಂಟ್! ಅಶ್ಲೀಲ ಫೋಟೋ ಹಾಕಿದ್ದು ಮತ್ತೋರ್ವ ಯುವತಿ!

Crime News: ಅಣ್ಣನ ಮೇಲಿನ ದ್ವೇಷಕ್ಕೆ ತಂಗಿ ಹೆಸರಲ್ಲಿ ಫೇಕ್ ಅಕೌಂಟ್! ಅಶ್ಲೀಲ ಫೋಟೋ ಹಾಕಿದ್ದು ಮತ್ತೋರ್ವ ಯುವತಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದೂರು ಸ್ವೀಕರಿಸಿದ ಪೊಲೀಸರು, ಯಾರೋ ಕಿಡಿಗೇಡಿ ಯುವಕ ಮಾಡಿರಬಹುದು ಎಂದು ತಿಳಿದು ಕೊಂಡಿದ್ದರು. ಯುವತಿಯೂ ಅಷ್ಟೇ, ಯಾವುದೋ ಕಿಡಿಗೇಡಿ ಹುಡುಗ, ಈ ರೀತಿಯ ಕೆಲಸ ಮಾಡುತ್ತಿರಬಹುದು ಅಂತಾನೇ ಅಂದುಕೊಂಡಿದ್ದಳು. ಇದರ ಜಾಡು ಹಿಡಿದು ಹೊರಟ ಪೊಲೀಸರಿಗೆ ಶಾಕ್ ಕಾದಿತ್ತು!

  • News18 Kannada
  • Last Updated :
  • Bangalore [Bangalore], India
  • Share this:

ಬೆಂಗಳೂರು: ಆಕೆ ತಾನಾಯಿತು, ತನ್ನ ಕಾಲೇಜ್ (Collage) ಆಯ್ತು, ಓದು (Study) ಆಯಿತು ಅಂತ ಇದ್ದ ಹುಡುಗಿ. ಆದ್ರೆ ಹಾಗಿದ್ದ ಹುಡುಗಿಗೆ (Girl) ಈಗೀಗ ಫೋನ್‌ ಕಾಲ್‌ಗಳ (Phone Calls) ಕಾಟ ಶುರುವಾಗಿತ್ತು. ಹೀಗೆ ಕಾಲ್ ಮಾಡಿದವರು ಅಶ್ಲೀಲವಾಗಿ ಮಾತನಾಡುತ್ತಿದ್ದರು. ಆಕೆಗೆ ಇದೇನು ಅಂತ ತಲೆ ಬುಡ ಒಂದೂ ಗೊತ್ತಾಗಲಿಲ್ಲ. ಕೊನೆಗೆ ಪರಿಶೀಲನೆ ಮಾಡಿದಾಗ ಯಾರೋ ಕಿಡಿಗೇಡಿಗಳು ಮಾಡಬಾರದ ಕೆಲಸ ಮಾಡಿದ್ದರು. ಆಕೆಯ ಅಣ್ಣನ (Brother) ಮೇಲಿನ ದ್ವೇಷಕ್ಕೆ ತಂಗಿಯನ್ನೇ (Sister) ಟಾರ್ಗೆಟ್ ಮಾಡಿದ್ದರು. ಆಕೆ ಹೆಸರಲ್ಲಿ ಅಶ್ಲೀಲ ಇನ್ಸ್‌ಸ್ಟಾಗ್ರಾಮ್ (Instagram) ಖಾತೆ ರಚಿಸಿ, ಕಾಲ್ ಗರ್ಲ್ ಎನ್ನುವಂತೆ ಬಿಂಬಿಸಿ, ಎಡಿಟ್ ಮಾಡಿದ ಅಶ್ಲೀಲ ಫೋಟೋ ಹಾಕಿದ್ದರು. ಅಲ್ಲದ್ದಕ್ಕೆ ಆಕೆಯ ಫೋನ್ ನಂಬರ್ (Phone Number) ಕೂಡ ಹಾಕಿ, ವಿಕೃತಿ ಮೆರೆದಿದ್ದರು. ಇಂಥದ್ದೊಂದು ಘಟನೆ ರಾಜ್ಯ ರಾಜಧಾನಿ ಬೆಂಗಳೂರಲ್ಲಿ (Bengaluru) ಬೆಳಕಿಗೆ ಬಂದಿದೆ. ಇನ್ಸ್ಟಾ ಗ್ರಾಂ ನಲ್ಲಿ ಫೇಕ್ ಅಕೌಂಟ್ (Fake Account) ಕ್ರಿಯೆಟ್ ಮಾಡಿ, ಕಾಲ್ ಗರ್ಲ್ ಎಂದು ಫೋಟೋ ಅಪ್ಲೋಡ್ ಮಾಡಲಾಗಿದ್ದು, ಇದರ ಹಿಂದಿರೋದು ಯಾರು ಎನ್ನುವುದನ್ನು ತಿಳಿದು ಪೊಲೀಸರೇ (Police) ಬೆಚ್ಚಿ ಬಿದ್ದಿದ್ದಾರೆ.


ಕಾಲ್ ಮಾಡಿ ಪಾಪದ ಯುವತಿಗೆ ಕಿರುಕುಳ


ಹೀಗೆ ಫೇಕ್ ಇನ್ಸ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಆ ಹುಡುಗಿಯ ಫೋನ್ ನಂಬರ್ ಹಾಕಿದ್ದರು. ಅದನ್ನು ತಿಳಿದ ಕೆಲ ಕಿಡಿಗೇಡಿಗಳು, ಆ ನಂಬರ್‌ಗೆ ಕಾಲ್ ಮಾಡಲು ತೊಡಗಿದರು. ಪ್ರತಿ ನಿತ್ಯ ಆ ಯುವತಿಯ ಮೊಬೈಲ್‌ ನಂಬರ್‌ಗೆ ನೂರಾರು ಫೋನ್ ಕಾಲ್‌ಗಳು ಬರ್ತಾ ಇದ್ದವು.


ಫೋನ್ ಕಾಲ್‌ಗೆ ಬೇಸತ್ತು ದೂರು ನೀಡಿದ ಯುವತಿ


ಯುವತಿಯ ಹೆಸರಲ್ಲೆ ಅಕೌಂಟ್ ಕ್ರಿಯೆಟ್ ಮಾಡಿ ಅವಳದ್ದೆ ಪೊಟೋ ಅಫ್ಲೋಡ್ ಮಾಡಲಾಗಿತ್ತು. ಈ ಫೇಕ್ ಇನ್ಸ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಮಾರ್ಫ್ ಮಾಡಿದ, ಯುವತಿಯ ಅಶ್ಲೀಲ ಫೋಟೋಗಳನ್ನು ಹಾಕಲಾಗಿತ್ತು. ಪೊಟೋ ಮೇಲೆ ಯುವತಿ ನಂಬರ್ ಬರೆದು ವಿಕೃತಿ ಮೆರೆದಿದ್ದರು. ಇದೇ ಫೇಕ್ ಅಕೌಂಟ್ ನಿಂದ ಯುವತಿಯ ಓರಿಜಿನಲ್ ಅಕೌಂಟ್ ಗೆ ಅಸಭ್ಯ ಮೆಸೇಜ್ ಬರುತ್ತಾ ಇತ್ತು. ಇದರಿಂದ ನೊಂದ ಯುವತಿ ಬೆಂಗಳೂರಿನ ಈಶಾನ್ಯ ವಿಭಾಗ ಸೈಬರ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾಳೆ.


ತನಿಖೆ ಕೈಗೊಂಡ ಪೊಲೀಸರಿಗೆ ಕಾದಿತ್ತು ಶಾಕ್!
ಈ ದೂರು ಸ್ವೀಕರಿಸಿದ ಪೊಲೀಸರು, ಯಾರೋ ಕಿಡಿಗೇಡಿ ಯುವಕ ಮಾಡಿರಬಹುದು ಎಂದು ತಿಳಿದು ಕೊಂಡಿದ್ದರು. ಯುವತಿಯೂ ಅಷ್ಟೇ, ಯಾವುದೋ ಕಿಡಿಗೇಡಿ ಹುಡುಗ, ಈ ರೀತಿಯ ಕೆಲಸ ಮಾಡುತ್ತಿರಬಹುದು ಅಂತಾನೇ ಅಂದುಕೊಂಡಿದ್ದಳು. ಇದರ ಜಾಡು ಹಿಡಿದು ಹೊರಟ ಪೊಲೀಸರಿಗೆ ಶಾಕ್ ಕಾದಿತ್ತು!


ಫೇಕ್ ಅಕೌಂಟ್ ಹಿಂದೆ ಇದ್ದಿದ್ದು ಯಾರು?


ಅಕೌಂಟ್ ಪ್ರೈವೆಸಿ ಲಾಕ್ ಮಾಡಿದ್ರೂ  ಫೋಟೋ ಹೇಗೆ ಶೇರ್ ಅಗ್ತಿದೆ ಎಂದು ತನಿಖೆ ನಡೆಸಿದ್ದ ಪೊಲೀಸರಿಗೆ ಇದೊಂದು ಚಾಲೆಂಜಿಂಗ್ ಕೇಸ್ ಆಗಿತ್ತು. ಈ ಅಕೌಂಟ್ ನ ಫಾಲೋವರ್ಸ್ ಮತ್ತು ಫೋಲೋವಿಂಗ್  ಚೆಕ್ ಮಾಡಿದ್ದಾಗ ಪೊಲೀಸರಿಗೆ ಒಂದು ಸುಳಿವು ಸಿಕ್ತು. ಇದನ್ನ ಫಾಲೋ ಮಾಡಿ ಹೊರಟಾಗ ಗೊತ್ತಾಗಿದ್ದು ಫೇಕ್ ಇನ್ಸ್‌ಸ್ಟಾಗ್ರಾಮ್ ಅಕೌಂಟ್‌ ಕ್ರಿಯೆಟ್ ಮಾಡಿದ್ದು ಯಾರು ಅಂತ!


ಫೇಕ್ ಅಕೌಂಟ್ ಹಿಂದಿದೆ ಲವ್ ಸ್ಟೋರಿ


ಹೌದು, ಈ ಫೇಕ್ ಅಕೌಂಟ್ ಹಿಂದೆ ಹುಡುಗ ಇರಲಿಲ್ಲ. ಬದಲಾಗಿ ಹುಡುಗಿ ಇದ್ದಳು. ಬಿಕಾಂ ಓದುತ್ತಿದ್ದ ಯುವತಿಯೇ ಈ ರೀತಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿದ್ದು ಬೆಳಕಿಗೆ ಬಂತು. ಅದ್ರೆ ಯಾಕಾಗಿ ಹೀಗೆ ಮಾಡಿದ್ಲೂ ಅನ್ನೋದನ್ನ ಪೊಲೀಸರು ವಿಚಾರಿಸಿದಾಗ ಹೊರ ಬಂತು ಒಂದು ಲವ್ ಸ್ಟೋರಿ...


ಆರೋಪಿ ಯುವತಿಯ ಪ್ರೇಮಿ ಯಾರು ಗೊತ್ತಾ?


ಆರೋಪಿ ಯುವತಿಗೆ ಓರ್ವ ಹುಡುಗನ ಜೊತೆ ಲವ್ ಇತ್ತು. ಆತ ಬೇರೆ ಯಾರೂ ಅಲ್ಲ, ದೂರುದಾರೆ ಯುವತಿಯ ಅಣ್ಣನ ಫ್ರೆಂಡ್! ದೂರುದಾರಳ ಅಣ್ಣ ತನ್ನ ಫ್ರೆಂಡ್ ಗೆ ಆ ಹುಡುಗಿಯನ್ನು ಲವ್ ಮಾಡ ಬೇಡ, ಆಕೆ ಸರಿ ಇಲ್ಲ ಅಂದಿದ್ನಂತೆ. ಇದನ್ನ ಆರೋಪಿ ಯುವತಿಯ ಲವ್ವರ್ ಬಂದು ನನ್ನ ಸ್ನೇಹಿತ ನಿನ್ನ ಬಗ್ಗೆ ಹೀಗೆ ಹೇಳುತ್ತಿದ್ದ ಎಂದಿದ್ದನಂತೆ!


ಇದನ್ನೂ ಓದಿ: Dingri Nagaraj-Rani: ಡಿಂಗ್ರಿ ನಾಗರಾಜ್ ಅಶ್ಲೀಲ ವಿಡಿಯೋ ಕಳಿಸ್ತಾರೆ ಎಂದ ನಟಿ ರಾಣಿ


ಇದಕ್ಕೆ ಅತನ ತಂಗಿಯ ಹೆಸರಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ದ್ವೇಷ ತೀರಿಸಿಕೊಳ್ಳೋಕೆ ಮುಂದಾಗಿದ್ಲು. ಇದೀಗ ಆರೋಪಿಯನ್ನ ಬಂಧಿಸಿರುವ ಈಶಾನ್ಯ ವಿಭಾಗ ಸೈಬರ್ ಠಾಣೆ ಪೊಲೀಸರು, ವಿಚಾರಣೆ ಮುಂದುವರೆಸಿದ್ದಾರೆ.

Published by:Annappa Achari
First published: