ಹಾವು ಅಂದ್ರೆ ಮಾರುದ್ದ ಓಡೋರೇ ಹೆಚ್ಚು. ಹಾವು ಕಂಡಾಕ್ಷಣ ಎಲ್ಲರೂ ಕಾಲಿಗೆ ಬುದ್ಧಿ ಹೇಳ್ತಾರೆ. ಅಂತದ್ರಲ್ಲಿ ಹಾವೊಂದು (Snake) ಮಲಗಿದ್ದ ಮಹಿಳೆಯ ಮೇಲೆ ಹೆಡೆ ಎತ್ತಿ ನಿಂತ್ರೆ ಹೆಂಗಿರಬೇಡ ಯೋಚಿಸಿ. ಇಂತಹ ಅಪರೂಪದ ಘಟನೆ ಇಂದು ಕಲಬುರಗಿಯಲ್ಲಿ (Kalaburagi) ನಡೆದಿದೆ. ಹೊಲದಲ್ಲಿ ಮಲಗಿದ್ದ ಮಹಿಳೆಯೊಬ್ಬರ (Farmer Lady) ಬೆನ್ನ ಮೇಲೆ ನಾಗರ ಹಾವೊಂದು (Cobra) ಹೆಡೆ ಎತ್ತಿ ನಿಂತಿದೆ. ಹಾವು ಬೆನ್ನ ಮೇಲೆ ನಿಂತಿದ್ದು ಗೊತ್ತಾಗುತ್ತಿದ್ದಂತೆ ಮಹಿಳೆ ಕಾಪಾಡು ಶ್ರೀಶೈಲ ಮಲ್ಲಯ್ಯ (Lady Praying) ಅಂತಾ ಪ್ರಾರ್ಥಿಸಿದ್ದಾರೆ. ಮಹಿಳೆಯ ಅದೃಷ್ಟವೋ, ಯಾವ ಜನ್ಮದ ಪುಣ್ಯವೋ ಏನೋ ಕೆಲಹೊತ್ತಿನ ನಂತರ ನಾಗರಹಾವು ಸ್ಥಳದಿಂದ ಕಾಲ್ಕಿತ್ತಿದೆ. ಈ ವಿಸ್ಮಯಕಾರಿ, ಭಯಭೀತ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ (Video viral) ಆಗುತ್ತಿದೆ.
ಹಾವು ಶಿವನ ಕೊರಳು ಸುತ್ತಿಕೊಂಡಿರುವುದನ್ನೆಲ್ಲಾ ನಾವು ಪೌರಾಣಿಕ ಕಥೆಯಲ್ಲಿ ಕೇಳಿದ್ದೇವೆ. ನೋಡಿದ್ದೇವೆ. ಆದ್ರೆ ನಿಜ ಜೀವನದಲ್ಲಿ ಹಾವು ಮನುಷ್ಯನ ಮೈಮೇಲೆ ಓಡಾಡಿದ್ರೆ ಹೇಗಿರಬೇಡ ಪರಿಸ್ಥಿತಿ? ಇಂತಹದೊಂದು ಘಟನೆ ಕಲಬುರಗಿಯಲ್ಲಿ ನಡೆದಿದೆ. ನಾಗರ ಹಾವೊಂದು ಮಹಿಳೆ ಮೈಮೇಲೆ ಓಡಾಡಿದೆ.
ನೆರಳಿಗೆ ಮೈಯೊಡ್ಡಿ ಮಲಗಿದ್ದಾಗ ಬಂದಿದ್ದ ನಾಗರಹಾವು!
ಈ ಘಟನೆ ನಡೆದಿರೋದು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಲ್ಲಾಬಾದ ಗ್ರಾಮದಲ್ಲಿ. ಭಾಗಮ್ಮ ಬಡದಾಳ ಎನ್ನುವ ಮಹಿಳೆ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನದ ಹೊತ್ತಲ್ಲಿ ಸುಸ್ತಾಯ್ತು ಅಂತಾ ತನ್ನ ಹೊಲದಲ್ಲಿ ಮರದ ನೆರಳಿಗೆ ಮೈಯೊಡ್ಡಿ ಮಲಗಿದ್ದಾರೆ. ತಣ್ಣನೆಯ ಗಾಳಿಗೆ ಕೆಲವೇ ಹೊತ್ತಲ್ಲಿ ನಿದ್ರೆಗೆ ಜಾರಿದ್ದಾರೆ.
ಇದನ್ನೂ ಓದಿ: ಕಾಣದಂತೆ ಮಾಯವಾಯಿತೇ ಚಿರತೆ? ಬೆಳಗಾವಿಯಲ್ಲಿ ಆಪರೇಷನ್ ಚೀತಾ ಕಂಟಿನ್ಯೂ!
ನಿದ್ರೆಗೆ ಜಾರುತ್ತಿದ್ದಂತೆ ನಾಗರಹಾವಿನ ಆಟ!
ಗಾಢ ನಿದ್ರೆಯಲ್ಲಿದ್ದಾಗ ಭಾಗ್ಯಮ್ಮರಿಗೆ ಮೈಮೇಲೆ ಏನೋ ಓಡಾಡಿದಂತಹ ಅನುಭವವಾಗಿದೆ. ತಕ್ಷಣ ಅಲ್ಲಿದಂಲೇ ಮೆಲ್ಲನೇ ಕಣ್ಣು ಬಿಟ್ಟು ನೋಡಿದ್ದಾರೆ. ಆಗ ಭಾಗ್ಯಮ್ಮರಿಗೆ ದಿಕ್ಕೇ ತೋಚದಂತಾಗಿದೆ. ಯಾಕೆಂದರೆ ಬೆನ್ನಿನ ಮೇಲೆ ನಾಗರಹಾವೊಂದು ಹೆಡೆ ಎತ್ತಿ ನಿಂತಿತ್ತು.
ಬೆನ್ನಿನಿಂದ ಇಳಿಯೋಕೆ ಕೇಳದ ನಾಗಪ್ಪ!
ಹಾವು ಬೆನ್ನ ಮೇಲೆ ಹೆಡೆ ಎತ್ತಿ ಇರೋದನ್ನು ನೋಡಿದ ಭಾಗಮ್ಮ, ಏನು ಮಾಡಬೇಕೆಂದು ದೋಚದೇ ಸುಮ್ಮನಾಗಿದ್ದಾರೆ. ಆದರೆ ಹಾವು ಮಾತ್ರ ಜಪ್ಪಯ್ಯ ಅಂದ್ರೂ ಮಹಿಳೆಯ ಬೆನ್ನ ಮೇಲಿನಿಂದ ಇಳಿದಿಲ್ಲ. ಇತ್ತ ಭಯಗೊಂಡಿದ್ದ ಭಾಗ್ಯಮ್ಮ ಹಾವು ತನಗೆ ಕಚ್ಚಬಹುದು ಎಂದರಿತು ಕದಲದೇ ಮಲಗಿದ್ದಾರೆ.
ಕಾಪಾಡು ಶ್ರೀಶೈಲ ಮಲ್ಲಯ್ಯ ಎಂದು ಪ್ರಾರ್ಥಿಸಿದ ಭಾಗ್ಯಮ್ಮ
ಹಾವು ತುಂಬಾ ಹೊತ್ತು ತನ್ನ ಮೈಮೇಲೆ ಇದ್ದಿದ್ದರಿಂದ ಭಾಗ್ಯಮ್ಮಗೆ ಏನೂ ತೋಚದಂತಾಗಿದೆ. ಕೊನೆಗೆ ಭಾಗ್ಯಮ್ಮ ದೇವರನ್ನು ಪ್ರಾರ್ಥಿಸಿದ್ದಾರೆ. ಶ್ರೀಶೈಲ ಮಲ್ಲಯ್ಯ ಕಾಪಾಡೋ ತಂದೆ ಎಂದು ದೇವರನ್ನು ಪ್ರಾರ್ಥಿಸಿದ್ದಾರೆ. ಅದೇನು ಅಚ್ಚರಿಯೋ.. ದೇವರ ಲೀಲೆಯೋ.. ಭಗವಂತನನ್ನು ಪ್ರಾರ್ಥಿಸಿದಾಗ ಹಾವು ಬೆನ್ನಿನಿಂದ ಇಳಿದು ಹೋಗಿದೆ.
ಹಾವಿನ ಆಟವನ್ನು ವಿಡಿಯೋ ಮಾಡಿದ ಯುವಕ
ಮಹಿಳೆಯ ಬೆನ್ನ ಮೇಲೆ ಹಾವು ನಿಂತಿರೋದು ಯುವಕನ ಮೊಬೈಲ್ನಲ್ಲಿ ಸೆರೆಯಾಗಿದೆ. ಇದೇ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಹುಡುಗನೊಬ್ಬ ಈ ದೃಶ್ಯವನ್ನು ತನ್ನ ಸ್ನೇಹಿತನಿಗೆ ಕರೆದು ತೋರಿಸಿ ಮೊಬೈಲ್ನಲ್ಲಿ ರೆಕಾರ್ಡ್ ಕೂಡ ಮಾಡಿಕೊಂಡಿದ್ದಾನೆ. ಸದ್ಯ ಹೆಡೆ ಎತ್ತಿರುವ ನಿಂತಿರುವ ಹಾವಿನ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಈ ಜಲಪಾತ ಸೂಪರೋ ಸೂಪರು! ಕೈಬೀಸಿ ಕರೀತಿದೆ ಕೋಟೆ ಅಬ್ಬಿ
ದೈವಭಕ್ತಿಗೆ, ಮಹಿಳೆಯ ಧೈರ್ಯಕ್ಕೆ ಎಲ್ಲರೂ ಫಿದಾ
ನಾಗರಹಾವು ಮೈಮೇಲೆ ಇದ್ದಾಗ ಭಾಗ್ಯಮ್ಮ ಬೆವತು ಹೋಗಿದ್ದರು. ನಾಗರಹಾವು ಬೆನ್ನ ಮೇಲಿನಿಂದ ಇಳಿದು ಹೋದ ನಂತರ ಭಾಗ್ಯಮ್ಮ ಬದುಕಿದೆಯೋ ಬಡಜೀವ ಅನ್ನುತ್ತಾ ಮನೆ ಕಡೆ ಹೋಗಿದ್ದಾರೆ. ಮಹಿಳೆ ಕೊಂಚ ಆತುರ ಪಟ್ಟಿದ್ದರೂ ಅಪಾಯವಾಗುವ ಸಾಧ್ಯತೆ ಇತ್ತು. ಭಾಗ್ಯಮ್ಮರ ಧೈರ್ಯ, ತಾಳ್ಮೆಗೆ ಎಲ್ಲರೂ ಫಿದಾ ಆಗಿದ್ದಾರೆ. ದೈವ ಭಕ್ತಿಗೆ ಜನ ಕೈಮುಗಿಯುತ್ತಿದ್ದಾರೆ.
ಮಹಿಳೆ ಭಾಗ್ಯಮ್ಮರನ್ನು ನೋಡಲು ಬರುತ್ತಿರುವ ಜನ
ಈ ಮಹಿಳೆ ಮತ್ತು ಸರ್ಪದ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಜನ ಭಾಗ್ಯಮ್ಮರ ಮನೆಗೆ ಬಂದು ಭೇಟಿ ನೀಡಿ ಹೋಗುತ್ತಿದ್ದಾರೆ. ಅಪರಿಚಿತರು ಯೋಗಕ್ಷೇಮ ವಿಚಾರಿಸಿ ಹೋಗುತ್ತಿದ್ದರೆ, ಇನ್ನು ಕೆಲವರು ಮಹಿಳೆಯ ಅನುಭವ ಕೇಳಲು ಆಗಮಿಸುತ್ತಿದ್ದಾರೆ. ಇನ್ನು ಕೆಲವರು ಈ ಮಹಿಳೆಯ ಬಳಿ ದೈವಿ ಶಕ್ತಿ ಇದೆ ಎಂದು ಭಾವಿಸಿ ಆಗಮಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ