Cobra: ಶೂ ಒಳಗೆ ಅಡಗಿ ಕುಳಿತಿದ್ದ ನಾಗರಹಾವು; ಮನೆ ಮಂದಿಯೆಲ್ಲಾ ಶಾಕ್!​

ಶೂ ಒಳಗೆ ಅಡಗಿ ಕುಳಿತಿದ್ದ ನಾಗರಹಾವು ಕಂಡು ವ್ಯಕ್ತಿಯೊಬ್ಬರು ಬೆಚ್ಚಿಬಿದ್ದಿದ್ದಾರೆ. ನಗರದ ಬೊಮ್ಮನಕಟ್ಟೆ ಬಡಾವಣೆಯಲ್ಲಿ ಘಟನೆ ನಡೆದಿದೆ. ಕುಮಾರ್​ ಎಂಬುವರ ಮನೆಯ ಶೂನಲ್ಲಿ ನಾಗರಹಾವು ಅಡಗಿ ಕುಳಿತಿತ್ತು

ಶೂನಲ್ಲಿ ಅಡಗಿ ಕುಳಿತಿದ್ದ ನಾಗರಹಾವು

ಶೂನಲ್ಲಿ ಅಡಗಿ ಕುಳಿತಿದ್ದ ನಾಗರಹಾವು

  • Share this:
ಶಿವಮೊಗ್ಗ (ಜು. 02): ಇವತ್ತು ನಾಗರ ಪಂಚಮಿ (Nagara Panchami) ಎಲ್ಲರೂ ಕಲ್ಲಿನ ನಾಗನಿಗೆ ಹಾಲೆರೆದು ಪೂಜೆ ಮಾಡಿ ಕೈ ಮುಗಿದು ಬರ್ತಾರೆ. ಆದ್ರೆ ಶಿವಮೊಗ್ಗದಲ್ಲಿ (Shivamogga) ಬೆಳ್ಳಂ ಬೆಳಗ್ಗೆ ವಾಕಿಂಗ್​ಗೆ ಹೋಗೋಣ ಅಂತ ಶೂ ಹಾಕಿಕೊಳ್ಳಲು ಹೋದವನಿಗೆ ಶಾಕ್​ ಆಗಿದೆ. ಶೂ ಒಳಗೆ ಅಡಗಿ ಕುಳಿತಿದ್ದ ನಾಗರಹಾವು (Cobra) ಕಂಡು ವ್ಯಕ್ತಿಯೊಬ್ಬರು ಬೆಚ್ಚಿಬಿದ್ದಿದ್ದಾರೆ. ನಗರದ ಬೊಮ್ಮನಕಟ್ಟೆ ಬಡಾವಣೆಯಲ್ಲಿ ಘಟನೆ ನಡೆದಿದೆ. ಕುಮಾರ್ (Kumar)​ ಎಂಬುವರ ಮನೆಯ ಶೂನಲ್ಲಿ ನಾಗರಹಾವು ಅಡಗಿ ಕುಳಿತ್ತಿತ್ತು.

ಹಾವು ನೋಡಿದ್ರೆ ಸಾಕು ಮಾರುದ್ದ ಓಡುವ ಜನರಿದ್ದಾರೆ. ಹಾವು ಕಂಡರೆ ಎಂಥವರಿಗೂ ಮೈಯಲ್ಲಿ ನಡುಕ ಉಂಟಾಗುತ್ತದೆ. ಎಲ್ಲಾದರೂ ದಾರಿಯಲ್ಲಿ ಹಾವು ಕಂಡರೆ ಸಾಕು ತಿರುಗಿ ನೋಡದೆ ಓಡುತ್ತೇವೆ. ಹಾವಿನ ಬಗ್ಗೆ ಪ್ರತಿಯೊಬ್ಬರಲ್ಲಿಯೂ ಇದೇ ಭಯ ಇರುತ್ತದೆ. ಅಂತದ್ರಲ್ಲಿ ಮನೆ ಎದುರು ಹಾವು ಪ್ರತ್ಯಕ್ಷವಾದರೆ ಮಾಲೀಕರಿಗೆ ಏನಾಗಬೇಡಿ ಹೇಳಿ!



ಸ್ನೇಕ್ ಕಿರಣ್​ರಿಂದ ನಾಗರ ಹಾವಿನ ರಕ್ಷಣೆ

7 ಇಂಚಿನ ಶೂ ನಲ್ಲಿ  3 ಅಡಿಯ ನಾಗರಾಜ ಅಡಗಿ ಕುಳಿತಿದ್ದ. ಹಾವು ಕಂಡು ಭಯಭೀತರಾದ ಮನೆ ಮಂದಿ ಶಿವಮೊಗ್ಗದ ಸ್ನೇಕ್​ ಕಿರಣ್ ಅವರಿಗೆ ಕರೆ ಮಾಡಿದ್ದಾರೆ.

ಇದನ್ನೂ ಓದಿ: Rain Alert: 20 ಜಿಲ್ಲೆಗಳಿಗೆ ಹವಾಮಾನ ಇಲಾಖೆಯ ಸಂದೇಶ; ಮನೆ ಮೇಲೆ ಕುಸಿದ ಗುಡ್ಡ, ನಾಲ್ವರು ಸಾವು



ತಕ್ಷಣ ಸ್ಥಳಕ್ಕೆ ಬಂದ ಉರಗ ಪ್ರೇಮಿ ಸ್ನೇಕ್ ಕಿರಣ್  ನಾಗರ ಹಾವನ್ನು ಹಿಡಿದುಕೊಂಡು ಹೋಗಿದ್ದಾರೆ.  ಬಳಿ ಕುಮಾರ್​ ಕುಟುಂಬಸ್ಥರೆಲ್ಲಾ ನಿಟ್ಟುಸಿರು ಬಿಟ್ಟಿದ್ದಾರೆ. ಮಳೆಗಾಲದಲ್ಲಿ ಬೆಚ್ಚಗಿನ ಸ್ಥಳಗಳನ್ನು ಹುಡುಕಿಕೊಂಡು ಬರುವ ಹಾವುಗಳು ಶೂನಲ್ಲಿ ಅವಿತು ಕುಳಿತುಕೊಳ್ಳುತ್ತವೆ.

ಬೆಂಗಳೂರಿನಲ್ಲಿ ಶೂನಲ್ಲಿದ್ದ ನಾಗರಹಾವು

ಬೆಂಗಳೂರು ನಗರದಲ್ಲಿ ದಿನೇ ದಿನೇ ವಿಷ ಸರ್ಪಗಳ ಹಾವಳಿ ಹಚ್ಚಾಗ್ತಿದೆ. ಎಚ್‍ಬಿಆರ್ ಲೇಔಟ್‍ನ ಮನೆಯಲ್ಲಿ ನಾಗರ ಹಾವಿನ ಮರಿಯೊಂದು ಪತ್ತೆಯಾಗಿ ಆತಂಕ ಸೃಷ್ಟಿಸಿತ್ತು. ಶೂ ಒಳಗೆ ಅವಿತು ಕುಳಿತಿದ್ದ ಮರಿ ನಾಗರವನ್ನು ಕಂಡು ಮನೆಮಂದಿ ಶಾಕ್ ಆಗಿದ್ದಾರೆ.

ಶೂನಲ್ಲಿ ಕಾಲು ಹಾಕುವಾಗ ನೋಡಿದ ಯುವಕನಿಗೆ ಶಾಕ್​

ಶೂ ಧರಿಸಲು ಹೋದಾಗ ಬುಸುಗುಡುತ್ತಿರುವ ಮರಿ ನಾಗರ ಹಾವು ನೋಡಿದ್ದಾರೆ. ಸರ್ಪವನ್ನು ಕಂಡಕೂಡಲೇ ಶೂನಲ್ಲಿ ಹಾಕುತ್ತಿದ್ದ ಕಾಲನ್ನು ಹಿಂತೆಗೆದುಕೊಂಡ ಯುವಕನಿಗೆ ಹೋದ ಜೀವವೇ ಮರಳಿ ಬಂದಂತಾಗಿದೆ. ಶೂನಲ್ಲಿ ಅವಿತುಕೊಂಡು ಕುಳಿತಿದ್ದ ನಾಗರ ಹಾವು ಬುಸ್ ಬುಸ್ ಎಂದು ಸದ್ದು ಮಾಡುತ್ತಿತ್ತು.

ಶೂನಲ್ಲಿ ಹಾವು ಇರುವುದು ಗೊತ್ತಾದ ಕೂಡಲೇ ಯುವಕ ಜೋರಾಗಿ ಕೂಗಿ ಮನೆ ಸದಸ್ಯರನ್ನು ಕರೆದಿದ್ದಾನೆ. ಭಯಗೊಂಡಿದ್ದ ಯುವಕ ತನ್ನ ಶೂನಲ್ಲಿ ಹಾವು ಇದೆ ಅಂತಾ ಹೇಳಿದ್ದಾನೆ. ಕೂಡಲೇ ಬಿಬಿಎಂಪಿ ಅರಣ್ಯ ಸಿಬ್ಬಂದಿಗೆ ಮನೆ ಮಾಲೀಕರ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಉರಗತಜ್ಞ ಮೋಹನ್ ಮರಿ ನಾಗರವನ್ನು ಸೆರೆ ಹಿಡಿದಿದ್ದಾರೆ. ಬಳಿಕ ಅದನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟುಬಂದಿದ್ದಾರೆ.

ಇದನ್ನೂ ಓದಿ: Bhatkal: ಭಟ್ಕಳದಲ್ಲಿ ಹಿಂದೆಂದೂ ಕಾಣದ ಪ್ರವಾಹ; ಅಂಗಡಿ, ರಸ್ತಗಳು ಜಾಲವೃತ; ಗುಡ್ಡ ಕುಸಿದು ನಾಲ್ವರ ಸಾವು

ಶೂ ಧರಿಸುವ ಮುನ್ನ ಎಚ್ಚರ

ಶೂ ಧರಿಸುವ ಮುನ್ನ ಎಚ್ಚರಿಕೆಯಿಂದ ಪರಿಶೀಲಿಸುವಂತೆ ಉರಗತಜ್ಞ ಮೋಹನ್ ಜನರಿಗೆ ಸಲಹೆ ನೀಡಿದ್ದಾರೆ. ಕೆಲವು ಸಲ ಬೆಚ್ಚಗಿನ ಸ್ಥಳಗಳನ್ನು ಹುಡುಕಿಕೊಂಡು ಬರುವ ವಿಷ ಸರ್ಪಗಳು ಶೂನಲ್ಲಿ ಅವಿತು ಕುಳಿತುಕೊಳ್ಳುತ್ತವೆ. ಸ್ವಲ್ಪ ಎಚ್ಚರ ತಪ್ಪಿದ್ರೂ ಪ್ರಾಣಕ್ಕೆ ಸಂಚಕಾರವಾಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಒಂದು ಸರಿ ಶೂ ಪರಿಶೀಲಿಸಿ ಧರಿಸುವುದು ಸೂಕ್ತವೆಂದು ಅವರು ಹೇಳಿದ್ದಾರೆ.
Published by:Pavana HS
First published: