• Home
  • »
  • News
  • »
  • state
  • »
  • Fake Astrologer: ಕೊಳ್ಳೇಗಾಲದಲ್ಲಿ ಮಂತ್ರ ಕಲಿತೆ ಅಂತ ಪುಂಗಿ ಊದಿದ, ಮಹಿಳೆಯ 1 ಲಕ್ಷ ರೂಪಾಯಿ ನುಂಗಿ ನೀರು ಕುಡಿದ!

Fake Astrologer: ಕೊಳ್ಳೇಗಾಲದಲ್ಲಿ ಮಂತ್ರ ಕಲಿತೆ ಅಂತ ಪುಂಗಿ ಊದಿದ, ಮಹಿಳೆಯ 1 ಲಕ್ಷ ರೂಪಾಯಿ ನುಂಗಿ ನೀರು ಕುಡಿದ!

ನಕಲಿ ಜ್ಯೋತಿಷಿ

ನಕಲಿ ಜ್ಯೋತಿಷಿ

ಈ ಜ್ಯೋತಿಷಿ ಅಸಲಿಯೋ-ನಕಲಿಯೋ ಗೊತ್ತಿಲ್ಲ. ಆದರೆ, 25ನೇ ವಯಸ್ಸಿಗೆ ಅದ್ಯಾವ ವಿದ್ಯೆ ಕಲಿತನೋ ಗೊತ್ತಿಲ್ಲ. ಇವರ ಅಪ್ಪ ಕೂಡ ಜ್ಯೋತಿಷಿಯಂತೆ. ಕೇಳಿದರೆ ಕೊಳ್ಳೇಗಾಲಕ್ಕೆ ಹೋಗಿ ಕಲಿತೆ ಅಂತಾನಂತೆ. ಕೊಳ್ಳೆಗಾಲದಲ್ಲಿ ಕಲಿತ ವಿದ್ಯೆಯನ್ನ ಈಗ ಜೈಲಲ್ಲಿ ಕರಗತ ಮಾಡಿಕೊಳ್ಳುತ್ತಿದ್ದಾನೆ!

  • News18 Kannada
  • Last Updated :
  • Chikmagalur, India
  • Share this:

ಚಿಕ್ಕಮಗಳೂರು: ಕೌಟುಂಬಿಕ ಸಮಸ್ಯೆಗೆ (Family Problems) ಆನ್‍ಲೈನ್ ಜ್ಯೋತಿಷಿಯಿಂದ (Online Astrologer) ಪರಿಹಾರ ಹುಡುಕಲು ಹೊರಟ ನಗರದ ಮಹಿಳೆಯೊಬ್ಬರು ಎರಡೇ ತಿಂಗಳಲ್ಲಿ ಒಂದು ಲಕ್ಷದ ಹತ್ತು ಸಾವಿರ ಹಣವನ್ನ ಕಳೆದುಕೊಂಡಿರುವ ಘಟನೆ ನಡೆದಿದೆ. ಆ ಮಹಿಳೆಯ ವಿವರವನ್ನ ಗೌಪ್ಯವಾಗಿಡಲಾಗಿದೆ. ಆದರೆ, ಕೌಟುಂಬಿಕ ಕಲಹವಿದ್ದು ಮಾನಸಿಕ ನೆಮ್ಮದಿಯಿಂದ ಇಲ್ಲ ಅಂತ ಫೇಸ್ಬುಕ್‍ನಲ್ಲಿ ಬಂದಿದ್ದ ಪಂಡಿತ್ ಮೋದಿ ಬೆಟ್ಟಪ್ಪ  (Pandit Modi Bettappa) ಅಸ್ಟ್ರಾಲಜಿಯ ಜಾಹಿರಾತು ನೋಡಿ ಅದರಲ್ಲಿ ಬರುತ್ತಿದ್ದ ನಂಬರ್‌ಗೆ ಕರೆ ಮಾಡಿದ್ದಾಳೆ. ಪಂಡಿತ್ ಮೋದಿ ಬೆಟ್ಟಪ್ಪ ಅಸ್ಟ್ರಾಲಜಿಯ ಗಣೇಶ್ ಗೊಂದಾಲ್ ಎಂಬ 25ರ ಯುವಕ ಮಹಿಳೆಗೆ ನಿಮ್ಮ ಸಮಸ್ಯೆಗೆ ಪೂಜೆ ಮಾಡಬೇಕೆಂದು 3 ಸಾವಿರ ಹಣ ಕೇಳಿದ್ದಾನೆ. ಬಳಿಕ ನಡೆದದ್ದೆಲ್ಲಾ ಮೋಸಗಳೇ!


ಸಾಲ ಮಾಡಿ ಹಣ ಕೊಟ್ಟ ಮಹಿಳೆ


ಚಿಕ್ಕಮಗಳೂರಿನ ಮಹಿಳೆಯೊಬ್ರು ಕೌಟುಂಬಿಕ ಸಮಸ್ಯೆಯ ಬಗ್ಗೆ ಕಣ್ಣೀರಾಕ್ಕೊಂಡು ಇವರಿಗೆ ಕರೆ ಮಾಡಿದ್ದಾಳೆ. ಹೆದರಬೇಡಿ. ನಾನೀದ್ದೇನೆ. ನಿಮ್ಮ ಸಮಸ್ಯೆಗೆ ಮುಕ್ತಿ ಕೊಡ್ತೀನಿ ಅಂತ ಲಕ್ಷಕ್ಕೆ ಮುಂಡಾಯಿಸಿದ್ದಾನೆ. 3, 7, 13, 22, 30 ಹೀಗೆ ಅವನಿಗೆ ಬೇಕಾದಾಗೆಲ್ಲಾ ರಾಮ-ಕೃಷ್ಣನ ಪೂಜೆ ಲೆಕ್ಕದಲ್ಲಿ ಹಣ ಹಾಕಿಸಿಕೊಂಡಿದ್ದಾನೆ. ಪಾಪ... ಆ ಮಹಳೆ ಕುಟುಂಬದ ಕಷ್ಟ-ಕಾರ್ಪಣ್ಯ ಮುಗ್ದೋಗುತ್ತೆ ಅಂತ ಸಾಲ-ಸೋಲ ಮಾಡಿ ಕಳ್ಳ ಜ್ಯೋತಿಷಿಯ ಖಾತೆ ತುಂಬಿದ್ದಾಳೆ.


a chikmagaluru woman lost 1 lakh rupees in two months by trusting a fake astrologer
ಆರೋಪಿ ನಕಲಿ ಜ್ಯೋತಿಷಿ


ಮತ್ತೆ ಮತ್ತೆ ಹಣ ಕೇಳಿದ ಕಳ್ಳ ಜ್ಯೋತಿಷಿ!


ಆ ಮಹಿಳೆಗೆ ಇವ್ನ ಮೇಲೆ ಅನುಮಾನ ಬರ್ತಿತ್ತೋ-ಇಲ್ವೋ ಗೊತ್ತಿಲ್ಲ. ಆದರೆ, ಆತ ಎಲ್ಲಾ ಪೂಜೆ ಮುಗಿದಿದೆ. ನಿಮ್ಮ ಸಮಸ್ಯೆಗಾಗಿ ಕೊನೆಯ ಪೂಜೆ ಒಂದಿದೆ. ಅದನ್ನ ಮಾಡಲು ನಾನೇ ಮತ್ತೊಬ್ಬ ದೊಡ್ಡ ಜ್ಯೋತಿಷಿ ಬಳಿ ಹೋಗಬೇಕು ಅಂತ ಮತ್ತೆ ಹಣ ಕೇಳಿದ್ದಾನೆ. ಆಗ ಅನುಮಾನಗೊಂಡ ಮಹಿಳೆ ಚಿಕ್ಕಮಗಳೂರು ನಗರದ ಬಸವನಹಳ್ಳಿ ಠಾಣೆಗೆ ಹೋಗಿ ದೂರು ನೀಡಿದ್ದಾಳೆ.


ಇದನ್ನೂ ಓದಿ: Naked Man: ರಾತ್ರಿ ಬೆತ್ತಲೆಯಾಗಿ ಬರ್ತಾನೆ, ಮನೆ ಕಿಟಕಿ ಇಣುಕಿ ನೋಡ್ತಾನೆ! ಈ ಯುವಕನ ಬಗ್ಗೆ ಹುಷಾರ್ ಹುಷಾರ್


ಬೆಂಗಳೂರಿನಲ್ಲಿದ್ದ ಕಳ್ಳ ಜ್ಯೋತಿಷಿ


ಆತ ಇದ್ಯಾವುದೋ ಚಿನ್ನದ ಮೊಟ್ಟೆ ಇಡೋ ಕೋಳಿ ಅಂತ ಮತ್ತೆ ಹಣ ಕೇಳಿದಾಗ ಅನುಮಾನಗೊಂಡು ಮಹಿಳೆ ನಗರದ ಠಾಣೆಗೆ ದೂರು ನೀಡಿದ್ದಾಳೆ. ಬೆಂಗಳೂರಿನ ಕೊಟ್ಟಿಗೆಹಳ್ಳಿಯಲ್ಲಿ ಯಾರ್ದೋ ದುಡ್ಡಲ್ಲಿ ಎಲ್ಲಮ್ಮನ ಜಾತ್ರೆ ಮಾಡ್ತಿದ್ದ 25ರ ಹರೆಯದ ಯುವಕನಿಗೆ ಕಾಫಿನಾಡ ಪೆೊಲೀಸರು ನಿನ್ನ ಗ್ರಹಕ್ಕೆ ರಾಹು-ಕೇತು ಎಂಟ್ರಿ ಕೊಟ್ಟಿದ್ದಾರೆ ಬಾ ಚಿನ್ನ ಅಂತ ತಂದು ಜೈಲಲ್ಲಿ ಮೊದ್ಲು ಜ್ಯೋತಿಷಿ ಕಲಿ ಅಂತ ಬಿಟ್ಟಿದ್ದಾರೆ..


ಕೊಳ್ಳಗಾಲದಲ್ಲಿ ಕಲಿತಿದ್ದನಂತೆ ಜ್ಯೋತಿಷ್ಯ!


ಈ ಜ್ಯೋತಿಷಿ ಅಸಲಿಯೋ-ನಕಲಿಯೋ ಗೊತ್ತಿಲ್ಲ. ಆದರೆ, 25ನೇ ವಯಸ್ಸಿಗೆ ಅದ್ಯಾವ ವಿದ್ಯೆ ಕಲಿತನೋ ಗೊತ್ತಿಲ್ಲ. ಇವರ ಅಪ್ಪ ಕೂಡ ಜ್ಯೋತಿಷಿಯಂತೆ. ಕೇಳಿದರೆ ಕೊಳ್ಳೇಗಾಲಕ್ಕೆ ಹೋಗಿ ಕಲಿತೆ ಅಂತಾನಂತೆ. ಕೊಳ್ಳೆಗಾಲದಲ್ಲಿ ಕಲಿತ ವಿದ್ಯೆಯನ್ನ ಈಗ ಜೈಲಲ್ಲಿ ಕರಗತ ಮಾಡಿಕೊಳ್ಳುತ್ತಿದ್ದಾನೆ.


ಬೆಂಗಳೂರಿನ ಜನರೇ ಎಚ್ಚರ


ಆತ ಮೋಸ ಮಾಡಿರುವುದು ಚಿಕ್ಕಮಗಳೂರು ಮಹಿಳೆಗಾದ್ರು ಆತ ಮೂಲತಃ ಬೆಂಗಳೂರಿನವನು. ಹಾಗಾಗಿ, ಬೆಂಗಳೂರಿನ ಜನ ಕೂಡ ಇವನ ಬಗ್ಗೆ ಎಚ್ಚರಿಕೆಯಿಂದಿರಬೇಕು. ಹಾಗಾಗಿ, ಎಸ್ಪಿ ಕೂಡ ಆನ್‍ಲೈನ್ ಜ್ಯೋತಿಷಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಎಂದು ಹೇಳಿದ್ದಾರೆ.


ಇದನ್ನೂ ಓದಿ: Ola-Uber Auto: ಓಲಾ, ಉಬರ್‌ಗಳಿಗೆ ಸರ್ಕಾರದ ಮೂಗುದಾರ! ಜಿಎಸ್‌ಟಿ ಜೊತೆಗೆ ಫಿಕ್ಸ್ ಆಯ್ತು 30 ರೂಪಾಯಿ ಆಟೋ ದರ!


ಒಟ್ಟಾರೆ, ಕೊಟ್ಟೋನು ಕೋಡಂಗಿ ಇಸ್ಕಂಡೋನು ವೀರಭದ್ರ ಎಂಬಂತಾಗಿದೆ ಆ ಮಹಿಳೆಯ ಪಾಡು. ಕೌಟುಂಬಿಕ ಸಮಸ್ಯೆ ಬಗೆಹರಿದು ಮಾನಸಿಕ ನೆಮ್ಮದಿ ಸಿಕ್ಕರೆ ಸಾಕೆಂದು ಕೇಳಿದಾಗೆಲ್ಲಾ ಸಾಲ-ಸೋಲ ಮಾಡಿ ಹಣ ಹಾಕಿದ ಆ ಮಹಿಳೆ ಇಂದು ಕಣ್ಣೀರು ಸುರಿಸುತ್ತಿದ್ದಾರೆ.

Published by:Annappa Achari
First published: