ನೆಲಮಂಗಲ(ನವೆಂಬರ್. 06): ಪಿಜಿಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಬಾಣಸಿಗ ಹಾಗೂ ಮಾಲೀಕನಿಗೂ ಸಂಬಳದ ವಿಚಾರದಲ್ಲಿ ಜಗಳವಾಗಿ ಪಿಜಿ ಮಾಲೀಕನ ಹೆಂಡತಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾನೆ ಎಂಬ ಕಾರಣಕ್ಕೆ ಪಿಜಿ ಮಾಲೀಕ ತನ್ನ ಸ್ನೇಹಿತರ ಜೊತೆ ಸೇರಿ ಮನಬಂದಂತೆ ತಳಿಸಿದಲ್ಲದೇ ಸಿಗರೇಟ್‌ನಿಂದ ಮೈಯೆಲ್ಲಾ ಸುಟ್ಟು ಮೂತ್ರ ಕುಡಿಸಿರುವ ಅಮಾನವಿಯ ಘಟನೆ ಮಾದನಾಯಕನಹಳ್ಳಿ ಪೊಲೀಸ್‌ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬೆಂಗಳೂರು ಉತ್ತರ ತಾಲೂಕಿನ ಆಚಾರ್ಯ ಕಾಲೇಜ್ ಬಳಿಯಿರುವ ಜೆ ಕಿಚನ್ ಹೋಟೆಲ್ ಮತ್ತು ಪಿಜಿಯನ್ನು ಕೇರಳ ಮೂಲದ ಜಿಜಿ ಯುಹಾನ್ ನಡೆಸುತ್ತಿದ್ದ. ತನ್ನೂರಿನವನಾದ 46 ವರ್ಷದ ಸಜಿ ಎಂಬ ಬಾಣಸಿಗ ನ್ನು ಕಳೆದ ಎರಡು ವರ್ಷಗಳ ಹಿಂದೆ ಮೂರು ಹೊತ್ತು ಊಟ ರೂಂ ಸೇರಿ 25 ಸಾವಿರ ರೂಪಾಯಿ ಸಂಬಳ ಕೊಡುವುದಾಗಿ ಹೇಳಿ ಜಿಜಿ ಯೂಹಾನ್ ಕರೆದುಕೊಂಡು ಬಂದಿರುತ್ತಾನೆ. ಆದರೆ ಎಲ್ಲಾ ಸರಿಯಾಗಿದ್ದಾಗ ಯಾವುದೇ ಸಮಸ್ಯೆ ಉಂಟಾಗಿರಲಿಲ್ಲ. ಆದರೆ ಕೊರೋನಾ ಲಾಕ್‌ಡೌನ್ ಆದಾಗಿನಿಂದ ಮತ್ತು ಅದಕ್ಕೂ ಮೊದಲಿನಿಂದಲೂ ಸಂಬಳ ಕೊಟ್ಟಿರಲಿಲ್ಲ.
ಲಾಕ್‌ಡೌನ್ ಸಮಯದಲ್ಲಿ ಪಿಜಿ ನಡೆದಿಲ್ಲ ಎಂಬ ಕಾರಣಕ್ಕೆ ಸಜಿ ನನಗೆ ಲಾಕ್‌ಡೌನ್ ಸಮಯದ ಸಮಬಳ ಬಿಟ್ಟು ಉಳಿದ 9 ತಿಂಗಳ ಸಂಬಳ ಕೊಡುವಂತೆ ಯೂಹಾನ್ ಬಳಿ ಕೇಳಿದಾಗ ಇಬ್ಬರ ನಡುವೆ ಮಾತಿನ ಚಕಮುಕಿ ಉಂಟಾಗಿ ಯೂಹಾನ್ ಸಜಿಗೆ ಸ್ನೇಹಿತರೊಂದಿಗೆ ಸೇರಿ ತನ್ನ ಕ್ರೂರತನ ಮೆರದಿದ್ದಾನೆ. ಇತ್ತ ಸಂಬಳವೂ ಇಲ್ಲದೇ ಕೆಲಸವೂ ಇಲ್ಲದೇ ದಿಕ್ಕುತೋಚದಂತಾದಾಗ ಸಜಿ ಮಾದನಾಯಕನಹಳ್ಳಿ ಪೊಲೀಸರ ಮೊರೆ ಹೋಗಿ ದೂರು ನೀಡಿದ್ದಾನೆ.
ಇನ್ನೂ ಇಷ್ಟೆಲ್ಲ ಕೆಟ್ಟದಾಗಿ ಮಾಲೀಕ ನಡೆಸಿಕೊಳ್ಳುಲು ಕಾರಣ ಸಜಿ ಸಂಬಳದ ವಿಚಾರದ ವೇಳೆ ತನ್ನ ಮಾಲೀಕನ ಹೆಂಡತಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದನಂತೆ. ಅಲ್ಲದೆ ಜಿಜಿ ಹೆಂಡತಿಗೆ ಅಶ್ಲೀಲ ಸಂದೇಶಗಳನ್ನ ಕಳುಹಿಸಿದ್ದನಂತೆ, ಸಂಬಳಕ್ಕು ಗಲಾಟೆಗು ಸಂಬಂಧವಿಲ್ಲ, ಸಜಿ ಮಾಡಿದ ಅಶ್ಲಿಲ ಸಂದೇಶಗಳೆ ಗಲಾಟೆಗೆ ಕಾರಣ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ : ಸುಳ್ಳು ಆರೋಪ ಮಾಡುವುದರಲ್ಲಿ ಕಾಂಗ್ರೆಸ್ ನಾಯಕರದ್ದು ಎತ್ತಿದ ಕೈ : ಲಕ್ಷಣ ಸವದಿ ವ್ಯಂಗ್ಯ
ಪ್ರಕರಣ ದಾಖಲಿಸಿಕೊಂಡ ಮಾದನಾಯಕನಹಳ್ಳಿ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಇತ್ತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಾಂತೆ ಜಿಜಿ ಯೂಹಾನ್ ಮತ್ತು ಸ್ನೇಹಿತರು ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ