HOME » NEWS » State » A CAT SHOT DEAD AT BANGALORE SARJAPUR TODAY MORNING LG

ಬೆಕ್ಕಿನ ಮೇಲೆ ಅದೆಂತಾ ಸೇಡು..!.; ಮೂಕಪ್ರಾಣಿಗೆ ಗುಂಡಿಕ್ಕಿ ಕೊಂದ ಕಿಡಿಗೇಡಿಗಳು

ಸರ್ಜಾಪುರದ ವಿಲ್ಲಾವೊಂದರಲ್ಲಿ ಅಪರಿಚಿತ ವ್ಯಕ್ತಿ ಬೆಕ್ಕನ್ನೆ ಟಾರ್ಗೆಟ್ ಮಾಡಿ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ.  ಈ ಬೆಕ್ಕನ್ನ ಶೀಲಾ ಎಂಬುವರು ಸಾಕಿದ್ದರು ಎಂದು ತಿಳಿದು ಬಂದಿದೆ. ಬೆಕ್ಕಿನ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿರುವುದು ಗೊತ್ತಾದ ಬಳಿಕ ವಿಲ್ಲಾ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ.

news18-kannada
Updated:August 23, 2020, 2:36 PM IST
ಬೆಕ್ಕಿನ ಮೇಲೆ ಅದೆಂತಾ ಸೇಡು..!.; ಮೂಕಪ್ರಾಣಿಗೆ ಗುಂಡಿಕ್ಕಿ ಕೊಂದ ಕಿಡಿಗೇಡಿಗಳು
ಪ್ರಾತಿನಿಧಿಕ ಚಿತ್ರ
  • Share this:
ಬೆಂಗಳೂರು(ಆ.23): ಮೂಕ ಪ್ರಾಣಿ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿರುವ ಘಟನೆ ಬೆಂಗಳೂರಿನ ಹೊರವಲಯದಲ್ಲಿ ನಡೆದಿದೆ. ನಗರದ ಸರ್ಜಾಪುರ ಬಳಿಯ ವಿಲ್ಲಾವೊಂದರಲ್ಲಿ ದುಷ್ಕರ್ಮಿಗಳು ಬೆಕ್ಕಿನ ಮೇಲೆ ಗುಂಡು ಹಾರಿಸಿ ಹತ್ಯೆಗೈದಿದ್ದಾರೆ.

ಇಂದು ಬೆಳಗಿನ ಜಾವ ಸುಮಾರು ಐದು ಗಂಟೆ ಸಮಯದಲ್ಲಿ ಮೂಖ ಜೀವಿ ಬೆಕ್ಕಿನ ಮೇಲೆ ಗುಂಡು ಹಾರಿಸಿ ದಾರುಣವಾಗಿ ಹತ್ಯೆ ಮಾಡಲಾಗಿದೆ. ಅಮಾನುಷ ಕೃತ್ಯಕ್ಕೆ ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಸರ್ಜಾಪುರದ ವಿಲ್ಲಾವೊಂದರಲ್ಲಿ ಅಪರಿಚಿತ ವ್ಯಕ್ತಿ ಬೆಕ್ಕನ್ನೆ ಟಾರ್ಗೆಟ್ ಮಾಡಿ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ.  ಈ ಬೆಕ್ಕನ್ನ ಶೀಲಾ ಎಂಬುವರು ಸಾಕಿದ್ದರು ಎಂದು ತಿಳಿದು ಬಂದಿದೆ. ಬೆಕ್ಕಿನ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿರುವುದು ಗೊತ್ತಾದ ಬಳಿಕ ವಿಲ್ಲಾ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ.

ಭದ್ರಾವತಿಯ ಎಂಪಿಎಂ ಕಾರ್ಖಾನೆಗೆ ನೀಡಿರುವ ಭೂಮಿಯಲ್ಲಿ ನೈಸರ್ಗಿಕ ಅರಣ್ಯ ಬೆಳೆಸಿ; ಮಲೆನಾಡಿಗರ ಒತ್ತಾಯ

ಕಿರಾತಕರು ಮೂಖ ಬೆಕ್ಕಿನ ಮೇಲೆ ಘೋರವಾಗಿ ಗುಂಡು ಹಾರಿಸಿದ್ದಾರೆ. ಅದ್ರೆ ಆ ಪ್ರಾಣಿಯ ಮೇಲೆ ಯಾಕಾಗಿ ಗುಂಡು ಹಾರಿಸಿದರು, ಉದ್ದೇಶವೇನು ಎಂಬುದು ಇನ್ನೂ ನಿಗೂಢವಾಗಿದೆ.

ಬೆಕ್ಕಿನ ಮೇಲೆ ಗುಂಡು ಹಾರಿಸಿದ ವೇಳೆ ಗನ್ ಶಬ್ದ ಕೇಳಿ ಕೆಲವು ನಿವಾಸಿಗಳು ವಿಲ್ಲಾದಿಂದ ಹೊರ ಬಂದು ನೋಡಿದ್ದಾರೆ. ಈ ವೇಳೆ ಕೆಲವು ಯುವಕರು ಕೈಯಲ್ಲಿ ಗನ್ ಹಿಡಿದು ನಿಂತಿದ್ದರು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
Youtube Video
ಇನ್ನು, ಘಟನೆ ಬಗ್ಗೆ ಬೆಕ್ಕು ಸಾಕಿದ ಮಹಿಳೆ ಶೀಲಾ ಅವರು ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಗುಂಡು ಹಾರಿಸಿದ ಕಿಡಿಗೇಡಿಗಳಿಗೆ ಶೋಧ ನಡೆಸಿದ್ದಾರೆ.
Published by: Latha CG
First published: August 23, 2020, 2:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories