ಗೌರಿ ಬಿದನೂರು, ಚಿಕ್ಕಬಳ್ಳಾಪುರ: ಕಳ್ಳರು (Thieves), ಖದೀಮರು ಪೊಲೀಸ್ ಸ್ಟೇಷನ್‌ನಲ್ಲಿ (Police Station) ಇರಬೇಕು, ಬೆಕ್ಕುಗಳು (Cat) ಮನೆಯಲ್ಲಿ (Home) ಇರಬೇಕು. ಅದು ಬಿಟ್ಟು ಕಳ್ಳರು ಹೊರಗೆಲ್ಲೋ ಇದ್ದು, ಬೆಕ್ಕು ಪೊಲೀಸ್ ಸ್ಟೇಷನ್ ಒಳಗೆ ಇದ್ರೆ ಏನರ್ಥ? ಅರೇ ಇದೆಂತಾ ಪ್ರಶ್ನೆ, ಬೆಕ್ಕಿಗೂ, ಪೊಲೀಸ್ ಠಾಣೆಗೂ ಏನ್ ಸಂಬಂಧ? ಕಳ್ಳರಿಗೂ ಬೆಕ್ಕಿಗೂ ಯಾಕೆ ಹೋಲಿಕೆ ಅಂತ ಕನ್‌ಫ್ಯೂಸ್ ಆದ್ರಾ? ನೋಡಿ ವಿಷಯ ಇಷ್ಟೇ, ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಗೌರಿಬಿದನೂರಿನ (Gauribidanur) ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ (Rural Police Station) ಬೆಕ್ಕು ಸಾಕಲಾಗಿದ್ಯಂತೆ. ಪೊಲೀಸರೇ (Police) ಮುತುವರ್ಜಿ ಮಾಡಿ ಬೆಕ್ಕಿನ ಲಾಲನೆ, ಪಾಲನೆ ಮಾಡ್ತಿದ್ದಾರಂತೆ. ಅಷ್ಟಕ್ಕೂ ಪೊಲೀಸ್ ಠಾಣೆಯಲ್ಲಿ ಬೆಕ್ಕು ಸಾಕಿದ್ದೇಕೆ? ಪೊಲೀಸರಿಗ್ಯಾಕೆ ಬೆಕ್ಕಿನ ಮೇಲೆ ಪ್ರೀತಿ ಅಂದ್ರಾ? ನಿಮ್ಮ ಎಲ್ಲ ಪ್ರಶ್ನೆಗಳಿಗ ಉತ್ತರ ಇಲ್ಲಿದೆ ಓದಿ…
ಪೊಲೀಸ್ ಠಾಣೆಯಲ್ಲಿ ಬೆಕ್ಕು ಸಾಕುತ್ತಿದ್ದಾರೆ ಪೊಲೀಸರು
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಬೆಕ್ಕನ್ನು ಸಾಕುತ್ತಿದ್ದಾರೆ. ಬಹಳ ಪ್ರೀತಿಯಿಂದ ಅದಕ್ಕೆ ಹಾಲು ಹಾಕಿ, ಅದರ ಆರೈಕೆ ಮಾಡುತ್ತಿದ್ದಾರಂತೆ.
ಇಲಿಗಳ ಕಂಟ್ರೋಲ್‌ಗೆ ಬೆಕ್ಕಿನ ಕಾವಲು
ಅಷ್ಟಕ್ಕೂ ಪೊಲೀಸರು ಪೊಲೀಸ್ ಠಾಣೆಯಲ್ಲಿ ಬೆಕ್ಕು ಸಾಕುವುದಕ್ಕೂ ದೊಡ್ಡ ಕಾರಣವೇ ಇದೆ. ಅದೇ ಇಲಿಗಳ ಕಾಟ. ಹೌದು, ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಇಲಿಗಳ ಕಾಟ ಜಾಸ್ತಿಯಾಗಿದ್ಯಂತೆ.
ಇದನ್ನೂ ಓದಿ: Koppala: ಬೈದವರನ್ನು ಬಿಡದೆ ಕಾಡ್ತಿದೆ ದೇವರಿಗೆ ಬಿಟ್ಟ ಕೋಣ; ಕಂಟೆಮ್ಮ ದೇವಿ ಕೋಪಕ್ಕೆ ಸುಸ್ತಾದ್ರು ಜನ
ಮಹತ್ವದ ದಾಖಲೆ ಹಾಳು ಮಾಡುವ ಕಳ್ಳ ಮೂಷಿಕ!
ನಗರ ಹೊರವಲಯದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಇಲಿಗಳ ಕಾಟ ಜಾಸ್ತಿಯಾಗಿದೆ. ಠಾಣೆಯಲ್ಲಿ ಇಟ್ಟ ಮಹತ್ವದ ಫೈಲ್‌ಗಳು, ದಾಖಲೆ ಪತ್ರಗಳನ್ನು ಇಲಿಗಳು ಕಡಿದು ಹಾಳು ಮಾಡುತ್ತವೆಯಂತೆ. ಹೀಗಾಗಿ ಇಲಿಗಳನ್ನು ಕಂಟ್ರೋಲ್ ಮಾಡಿ, ಅವುಗಳ ಅಬ್ಬರ ತಡೆಯೋದಕ್ಕೆ ಅಂತ ಇಲ್ಲಿನ ಪೊಲೀಸರು ಬೆಕ್ಕನ್ನು ಸಾಕಿದ್ದಾರೆ.
ಬೆಕ್ಕು ರಾಕ್, ಇಲಿಗಳು ಶಾಕ್!
ಪೊಲೀಸ್ ಠಾಣೆಯಲ್ಲಿ ಪೊಲೀಸರ ಜೊತೆ ರಾಜಾರೋಷವಾಗಿ ಓಡಾಡುತ್ತಿರುವ ಬೆಕ್ಕು ಈಗಾಗಲೇ ಇಲಿಗಳ ಬೇಟೆ ಶುರು ಮಾಡಿದೆ. ಬೆಕ್ಕಿನ ಧ್ವನಿ ಕೇಳಿ ಇಲಿಗಳು ಪರಾರಿಯಾಗ್ತಿದ್ದು, ಪೊಲೀಸರ ಪ್ಲಾನ್ ಸಕ್ಸಸ್ ಆಗಿದೆ. ಪೊಲೀಸರು ಕಳೆದ 1 ತಿಂಗಳ ಹಿಂದೆ ಬೆಕ್ಕಿನ ಮರಿ ಒಂದನ್ನು ತಂದು ಸಾಕಲು ಪ್ರಾರಂಭಿಸಿದರು ಇದೀಗ ಈ ಬೆಕ್ಕಿನ ಮರಿ ದೊಡ್ಡದಾಗಿದ್ದು ಇಲಿಗಳ ಬೇಟೆ ಶುರು ಮಾಡಿದೆ. ಈ ಮೂಲಕ ಪೊಲೀಸರ ಟೆನ್ಶನ್ ಕಡಿಮೆ ಆಗಿದ್ಯಂತೆ.
ಇದನ್ನೂ ಓದಿ: Cat Video: ಸರ್ಕಸ್ ಮಾಡಿ ಈ ಬೆಕ್ಕು ಹಾಯಾಗಿ ಮಲಗಿದ್ದೆಲ್ಲಿ ಗೊತ್ತಾ? ಮಮತೆ ಉಕ್ಕಿಸೋ ವಿಡಿಯೋ ವೈರಲ್
ಬೆಕ್ಕಿನ ವಿಡಿಯೋ ಸಖತ್ ವೈರಲ್
ಇದು ಆ ಬೆಕ್ಕಲ್ಲ, ಬೇರೆ ಬೆಕ್ಕಿನ ಕಥೆ. Buitengebieden ಎಂಬ ಖಾತೆಯಿಂದ ಟ್ವಿಟರ್ ನಲ್ಲಿ ಈ ವಿಡಿಯೋ ಅನ್ನು ಹಂಚಿಕೊಳ್ಳಲಾಗಿದ್ದು ಅದರಲ್ಲಿ ಬೆಕ್ಕೊಂದು ಉದ್ಯಾನದಲ್ಲಿರುವ ಎರಡು ಪ್ರತಿಮೆಗಳ ಪೈಕಿ ಹೆಣ್ಣಿನ ಪ್ರತಿಮೆಯನ್ನು ತಾನು ಮಲಗಿ ವಿಶ್ರಾಂತಿ ಪಡೆಯಲು ಬಳಸಿಕೊಂಡಿರುವುದನ್ನು ಗಮನಿಸಬಹುದು. ಆ ಬೆಕ್ಕು ಹೇಗೆ ಮಲಗಿದೆ ಎಂದರೆ ಆ ಪ್ರತಿಮೆಯಲ್ಲಿರುವ ಹೆಣ್ಣು ಸ್ವತಃ ಆ ಬೆಕ್ಕನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡಿದ್ದಾಳೇನೋ ಅನ್ನುವಂತಿದೆ. ಅಂದರೆ ಆ ಬೆಕ್ಕು ಹೆಣ್ಣಿನ ಪ್ರತಿಮೆಯ ಎರಡು ಕೈಗಳ ಮಧ್ಯೆ ಸರ್ಕಸ್ ಮಾಡಿ ತೂರಿಕೊಂಡು ತೊಡೆಗಳು ಆಸನವಾಗುವಂತೆ ಮಾಡಿಕೊಂಡು ಹಾಯಾಗಿ ಮಲಗಿದ್ದನ್ನು ನೋಡಿದರೆ ಯಾರಿಗೆ ಆಗಲಿ ಒಂದು ಕ್ಷಣ ಅಚ್ಚರಿಯಾಗುವುದು ಸಹಜ ಎನ್ನಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ