ಹುಬ್ಬಳ್ಳಿ: ಮತದಾನದ ದಿನ (Karnataka Polls) ಹಲವು ಕಡೆ ಹತ್ತಾರು ಸ್ವಾರಸ್ಯಕರ ಘಟನೆಗಳು ನಡೆಯುತ್ತವೆ. ಒಂದಕ್ಕೊಂದು ವಿಶಿಷ್ಟ ಮತ್ತು ಅಪರೂಪದ ಸನ್ನಿವೇಶಗಳು ಮನಸ್ಸಿಗೆ ಮುದ ನೀಡಿದ್ರೆ ಮತ್ತೊಂದಷ್ಟು ಕಿರಿಕಿರಿಯನ್ನೂ ಉಂಟು ಮಾಡುತ್ತೆ. ಆದರೆ ಹುಬ್ಬಳ್ಳಿಯಲ್ಲಿ (Hubli) ಇಂದು ಬೆಳಗ್ಗೆ ನಡೆದ ಸನ್ನಿವೇಶವೊಂದು ಎಲ್ಲರ ಮೊಗದಲ್ಲೂ ಮಂದಹಾಸ ತರಿಸಿದೆ.
ಹೌದು.. ಹುಬ್ಬಳ್ಳಿಯಲ್ಲಿ ಜನರು ಮಾತ್ರ ಮತದಾನ ಮಾಡೋಕೆ ಬಂದಿಲ್ಲ. ಜನರ ಜೊತೆ ಬೆಕ್ಕು ಕೂಡ ಮತದಾನಕ್ಕೆ ಬಂದಿದೆ. ಮತ ಚಲಾಯಿಸಲೆಂದು ಸರತಿ ಸಾಲಿನಲ್ಲಿ ನಿಂತವರಿಗೆ ಕುಳಿತುಕೊಳ್ಳಲು ಚೆಯರ್ ವ್ಯವಸ್ಥೆ ಮಾಡಲಾಗಿತ್ತು. ಇದರ ಚೆಯರ್‌ನಲ್ಲಿ ಎಲ್ಲರೂ ಕುಳಿತಿದ್ದರು. ಈ ವೇಳೆ ಅಲ್ಲೇ ಇದ್ದ ಬೆಕ್ಕು ಸಾಲಿನಲ್ಲಿ ಹಾಕಿದ್ದ ಖಾಲಿ ಕುರ್ಚಿಯಲ್ಲಿ ಕುಳಿತಿದೆ. ಜನರನ್ನು ಅದನ್ನು ಎಬ್ಬಿಸಲು ಪ್ರಯತ್ನ ಮಾಡಿದರೂ ಕೂಡ ಅದು ಅಲ್ಲಿಂದ ಕದಲಲಿಲ್ಲ. ಅಲ್ಲೇ ಇದ್ದ ಪತ್ರಕರ್ತರು ಕುರ್ಚಿಯಲ್ಲಿ ಜನರ ಜೊತೆ ಕುಳಿತಿದ್ದ ಬೆಕ್ಕಿನ ದೃಶ್ಯವನ್ನು ವಿಡಿಯೋ ಮಾಡಿದ್ದಾರೆ.
ಚೆಯರ್‌ನಲ್ಲಿ ಕುಳಿತಿದ್ದ ಬೆಕ್ಕು
ಅಂದಹಾಗೆ ಈ ದೃಶ್ಯ ಕಂಡು ಬಂದಿದ್ದು ಹುಬ್ಬಳ್ಳಿಯಲ್ಲಿ. ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಶಾಲೆಯಲ್ಲಿ ಹಾಕಲಾಗಿದ್ದ ಮತಗಟ್ಟೆ ಸಂಖ್ಯೆ 188 ರ ಬಳಿ ಬಂದ ಬೆಕ್ಕು ತಾನು ಕೂಡ ಮತ ಚಲಾಯಿಸುತ್ತೇನೆ ಅನ್ನೋ ಹಾಗೆ ಚೆಯರ್‌ನಲ್ಲಿ ಕುಳಿತು ಫೋಸ್ ನೀಡಿದೆ. ಆರಂಭದಲ್ಲಿ ಆ ಬೆಕ್ಕನ್ನು ಎಬ್ಬಿಸಲು ಅಲ್ಲಿದ್ದ ಮತದಾರರು ಪ್ರಯತ್ನಪಟ್ಟರೂ ಕೂಡ ಅದು ಕದಲದಿದ್ದಕ್ಕೆ ಅದರ ಪಾಡಿಗೆ ಅದನ್ನು ಬಿಟ್ಟರು. ಆ ಬಳಿಕ ಬೆಕ್ಕು ತನ್ನಷ್ಟಕ್ಕೆ ತಾನು ಕುಳಿತು ಆಟವಾಡ್ತಾ ಇತ್ತು.
ಸಿದ್ದರಾಮಯ್ಯ ಬಾಲ್ಯದ ಗೆಳೆಯನ ಮತದಾನ
ವರುಣಾ: ಸಿದ್ದರಾಮಯ್ಯ ಅವರ ಹುಟ್ಟೂರು ಸಿದ್ದರಾಮನಹುಂಡಿ ಮತಗಟ್ಟೆಯಲ್ಲಿ ಸಿದ್ದರಾಮಯ್ಯ ಅವರ ಬಾಲ್ಯದ ಗೆಳೆಯ ಲಿಂಗಯ್ಯ ಅವರು ಮೊದಲ ಮತದಾನ ಮಾಡಿದ್ದಾರೆ. ಮತದಾನ ಮಾಡಿದ ನಂತರ ಮಾಧ್ಯಮ ಮಿತ್ರರು ಸಿದ್ದರಾಮಯ್ಯ ಅವರ ಬಾಲ್ಯದ ಗೆಳೆಯನನ್ನು ಮಾತನಾಡಿಸಿದರು. ಈ ವೇಳೆ ಲಿಂಗಯ್ಯ ಅವರು ಮಾಜಿ ಸಿಎಂ, ತನ್ನ ಬಾಲ್ಯದ ಗೆಳೆಯನ ಜೊತೆಗಿನ ಒಡನಾಟವನ್ನು ಹಂಚಿಕೊಂಡರು.
ಇದನ್ನೂ ಓದಿ: Ramanagara Elections: ಹಕ್ಕು ಚಲಾಯಿಸಲು ಸಜ್ಜಾದ ರಾಮನಗರ ಜಿಲ್ಲೆಯ ಘಟಾನುಘಟಿ ನಾಯಕರು!
78 ವರ್ಷ ವಯಸ್ಸಿನ ಲಿಂಗಯ್ಯ ಅವರು ನ್ಯೂಸ್ 18 ಕನ್ನಡದ ಜೊತೆಗೆ ಮಾತನಾಡುತ್ತಾ, ಸಿದ್ದರಾಮಯ್ಯನವರ ಜೊತೆಗಿನ ಬಾಲ್ಯದ ನೆನಪುಗಳನ್ನು ಹಂಚಿಕೊಂಡರು. ಜೊತೆಗೆ ಸಿದ್ದರಾಮಯ್ಯ ಅವರ ಒಳಿತಿಗೂ ಆಶಿಸಿದರು.
‘ಸಿದ್ದರಾಮಯ್ಯ ಮತ್ತೆ ಸಿಎಂ ಆಗ್ಬೇಕು ಅದಕ್ಕೆ ಬೆಳಗ್ಗೆ ಬೇಗನೆ ಬಂದೆ ಎಂದ ಹಿರಿಜೀವ ಲಿಂಗಯ್ಯ ಅವರು, ಸಿದ್ದರಾಮಯ್ಯನ ಜೊತೆಗೆ 5 ರಿಂದ 8ನೇ ತರಗತಿವರೆಗೆ ಓದಿದ್ದೆ. ಬಹಳ ಒಳ್ಳೆಯ ಮನುಷ್ಯ ಕಣಯ್ಯ ಅವನು ಎಂದು ಸಿದ್ದರಾಮಯ್ಯ ಬಗ್ಗೆ ಲಿಂಗಯ್ಯ ಮೆಲು ಧ್ವನಿಯಲ್ಲಿ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ