ಚಾಮರಾಜನಗರ (ಅ.23): ಮಹಿಳೆಗೆ (Women) ಕಪಾಳಮೋಕ್ಷ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ವಸತಿ ಸಚಿವ ಸೋಮಣ್ಣ (V Somanna), ನಾನು ಮಹಿಳೆ ಮೇಲೆ ಹಲ್ಲೆ ಮಾಡಿಲ್ಲ ಎನ್ನುತ್ತಿದ್ದರು. ಆದ್ರೆ ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಮೆಯಾಚಿಸಿದ್ದಾರೆ. 45 ವರ್ಷ ಹಲವು ಏಳುಬೀಳು ಕಂಡಿದ್ದೇನೆ. ನಿನ್ನೆಯ ಕಾರ್ಯಕ್ರಮದಲ್ಲಿ (Program) ಸಣ್ಣ ಅಪಚಾರವನ್ನು ಮಾಡಿಲ್ಲ. ಪ್ರಾಯಶಃ ಯಾರಿಗಾದರು ಮನಸ್ಸಿಗೆ ನೋವಾಗಿದ್ದಾರೆ ಕ್ಷಮೆ (Sorry) ಯಾಚಿಸುತ್ತೇನೆ ವಿಷಾದ ವ್ಯಕ್ತಪಡಿಸ್ತೇನೆ ಎಂದು ಸೋಮಣ್ಣ ಹೇಳಿದ್ದಾರೆ.
ನಾನು ಮಹಿಳೆ ಮೇಲೆ ಹಲ್ಲೆ ಮಾಡಿಲ್ಲ
ನಿನ್ನೆ ನಡೆದ ಘಟನೆ ಘಟನೆಯೇ ಅಲ್ಲ. ಆ ಹೆಣ್ಣು ಮಗಳು ಪದೇ ಪದೇ ವೇದಿಕೆ ಮೇಲೆ ಬರ್ತಾ ಇದ್ದಳು, ತಾಯಿ ಎಷ್ಟು ಸಾರಿ ಬರ್ತೀಯಾ ಅಂತ ವಿಚಾರಿಸಿದೆ. ನಿನ್ನ ಸಮಸ್ಯೆ ಬಗೆಹರಿಸ್ತೇನೆ ಎಂದು ಕೈಯಲ್ಲಿ ಪಕ್ಕಕ್ಕೆ ಸರಿಸಿದ್ದೇನೆ. ಅಷ್ಟೇ ವಿನಃ ನನಗೆ ಆಕೆಯನ್ನು ಹೊಡೆಯಬೇಕು ಎನ್ನುವ ಉದ್ದೇಶ ಇರಲಿಲ್ಲ ಎಂದು ಸಚಿವ ಸೋಮಣ್ಣ ಹೇಳಿದ್ದಾರೆ.
ಹೆಣ್ಣು ಮಕ್ಕಳ ಬಗ್ಗೆ ಅಪಾರವಾದ ಗೌರವಿದೆ
ಹೆಣ್ಣು ಮಕ್ಕಳ ಬಗ್ಗೆ ಅಪಾರವಾದ ಗೌರವ, ಮಮಕಾರ ಇದೆ. ನಾನು ಕೂಡ ಬಡತನದಿಂದಲೇ ಬಂದವನು. ಆ ಹೆಣ್ಣು ಮಗಳಿಗೆ ಸಹ ಹಕ್ಕು ಪತ್ರ ಕೊಡಿಸಿದ್ದೇನೆ. ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಸಚಿವ ಸೋಮಣ್ಣ ಹೇಳಿದ್ದಾರೆ.
ಇಳಿ ವಯಸ್ಸಿನಲ್ಲಿ ನೀಚ ಕೆಲಸ ಮಾಡಿಲ್ಲ
72ನೇ ಇಳಿ ವಯಸ್ಸಿನಲ್ಲಿ ಹೆಣ್ಣು ಮಕ್ಕಳಿಗೆ ಹೊಡೆಯುವ ಅವಮಾನಿಸುವ ನೀಚ ಕೆಲಸ ಮಾಡಿಲ್ಲ ಎಂದು ಕೊಳ್ಳೇಗಾಲದಲ್ಲಿ ವಸತಿ ಸಚಿವ ವಿ ಸೋಮಣ್ಣ ಹೇಳಿಕೆ ನೀಡಿದ್ದಾರೆ. ಕೆಲವರು ನನ್ನ ವಿರುದ್ದ ವಿವೇಚನಾರಹಿತವಾಗಿ ಮಾತಾಡ್ತಾ ಇದ್ದಾರೆ. ಈ ವಿಚಾರದಲ್ಲಿ ನಾನು ಕ್ಷಮೆ ಕೇಳ್ತಾ ಇದ್ದೇನೆ ಎಂದು ಹೇಳಿದ್ರು.
ಇದನ್ನೂ ಓದಿ: Siddaramaiah: ಸಚಿವರಾಗೋಕೆ ಸೋಮಣ್ಣ ಅನ್ಫಿಟ್; ಹೆಣ್ಣು ಮಗಳ ಮೇಲೆ ಕೈ ಮಾಡೋಕಾ ಅಧಿಕಾರ ಕೊಟ್ಟಿದ್ದು?-ಸಿದ್ದರಾಮಯ್ಯ
ಸೋಮಣ್ಣ ಸೋಮಣ್ಣ ಆಗಿಯೇ ಇದ್ದೇನೆ
ಮಹಿಳೆಗೆ ಒತ್ತಡ ಹೇರಿ ಹೇಳಿಕೆ ಕೊಡಿಸಿದ್ದಾರೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸೋಮಣ್ಣ, ಅದರ ಅವಶ್ಯಕತೆ ನನಗೆ ಇಲ್ಲ. ಆ ರೀತಿ ಜೀವನ ಮಾಡಿಲ್ಲ. ಈ ಸೋಮಣ್ಣ ಯಾವತ್ತು ಕ್ಷುಲ್ಲಕ ಕೆಲಸ ಮಾಡಿಲ್ಲ. ಸೋಮಣ್ಣ ಸೋಮಣ್ಣ ಆಗಿಯೇ ಇದ್ದೇನೆ ಎಂದರು.
ನನಗೆ ಹೆಣ್ಣು ಮಕ್ಕಳು ತಾಯಿಂದಿರ ಸಮಾನ
ಸಂಸ್ಕಾರಯುತವಾಗಿ ಜೀವನ ಮಾಡಿದ್ದೇನೆ. ನನಗೆ ಹೆಣ್ಣು ಮಕ್ಕಳು ತಾಯಿಂದಿರ ಸಮಾನ. ಇಷ್ಟೊಂದು ಜನ ನನ್ನ ಕಾರ್ಯ ವೈಖರಿಯನ್ನು ವಿರೋಧಿಸ್ತಾರೆ ಅಂತ ದೇವರಾಣೆಗೂ ಗೊತ್ತಿರಲಿಲ್ಲ. ನನ್ನ ಪತ್ನಿ ಬಿಟ್ಟರೆ ಉಳಿದ ಹೆಣ್ಣು ಮಕ್ಕಳೆಲ್ಲಾ ಸಹೋದರಿಯರು, ತಾಯಿಂದಿರ ಸಮಾನ. ನನ್ನಿಂದ ಯಾರಿಗಾದರು ನೋವಾಗಿದ್ದರೆ ವಿಷಾದ ವ್ಯಕ್ತಪಡಿಸ್ತೀನಿ ಎಂದು ಎರಡೆರಡು ಬಾರಿ ಸಚಿವರು ಕ್ಷಮೆ ಕೇಳಿದ್ದಾರೆ.
ನನಗಿರೋದು ಒಂದೇ ಮುಖ
ಮಹಿಳೆಗೆ ಕಪಾಳಮೋಕ್ಷ ಕೇಸ್ಗೆ ಸಂಬಂಧಿಸಿದಂತೆ ಸೋಮಣ್ಣಗೆ ಎರಡು ಮುಖ ಇದೆ ಎಂದ ಮಾಜಿ ಸಿಎಂ ಕುಮಾರಸ್ವಾಮಿ ಟೀಕೆಗೆ ಪ್ರತಿಕ್ರಿಯಿಸಿದ ಸೋಮಣ್ಣ, ನಾನು ಕುಮಾರಸ್ವಾಮಿ ಅವರ ಮಾತನ್ನು ಕೇಳಿದ್ದೇನೆ. ಅವರು ದೊಡ್ಡವರು , ನಾನು ಮತ್ತು ಅವರು ಒಟ್ಟಿಗೆ ಕೆಲಸ ಮಾಡಿದವರು. ನನಗೆ ಎರಡು ಮುಖ ಇಲ್ಲ, ನನಗಿರೋದು ಒಂದೇ ಮುಖ ಎಂದು ಸಚಿವ ವಿ .ಸೋಮಣ್ಣ ಹೇಳಿದ್ದಾರೆ.
ಇದನ್ನೂ ಓದಿ: V Somanna: ಮಹಿಳೆ ಮೇಲೆ ಒತ್ತಡ ಹಾಕಿ ಹೇಳಿಕೆ ಕೊಡಿಸಿದ್ರಾ ವಿ ಸೋಮಣ್ಣ?
ನನ್ನ ಜೀವನದಲ್ಲಿ ಬಡವರ ಬಗ್ಗೆ ಮಹಿಳೆಯರ ಬಗ್ಗೆ ಕೆಟ್ಟದಾಗಿ ನಡೆದು ಕೊಂಡಿರುವ ಸಣ್ಣ ಉದಾಹರಣೆಯೂ ಇಲ್ಲ. ಆ ರೀತಿ ನಡೆದು ಕೊಂಡವನು ನಾನಲ್ಲ. ಪಕ್ಷದ ತೀರ್ಮಾನಕ್ಕೆ ನಾನು ಬದ್ದನಾಗಿರುತ್ತೇನೆ. ಸಣ್ಣ ಅಪಚಾರವನ್ನು ಮಾಡಿಲ್ಲ. ಹೆಣ್ಣು ಮಕ್ಕಳ ಬಗ್ಗೆ ಅಪಾರ ಗೌರವವಿದೆ ಎಂದು ಸಚಿವ ಸೋಮಣ್ಣ ಹೇಳಿಕೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ