• Home
  • »
  • News
  • »
  • state
  • »
  • Heart Attack in Children: ಮಕ್ಕಳನ್ನೂ ಬಿಡುತ್ತಿಲ್ಲ ಹೃದಯಾಘಾತ, ರಾಜ್ಯೋತ್ಸವಕ್ಕೆ ಹಾಡಲು ಹೋದ ಬಾಲಕ ತಂದೆ ಎದುರೇ ಸಾವು!

Heart Attack in Children: ಮಕ್ಕಳನ್ನೂ ಬಿಡುತ್ತಿಲ್ಲ ಹೃದಯಾಘಾತ, ರಾಜ್ಯೋತ್ಸವಕ್ಕೆ ಹಾಡಲು ಹೋದ ಬಾಲಕ ತಂದೆ ಎದುರೇ ಸಾವು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇತ್ತೀಚಿನ ದಿನಗಳಲ್ಲಿ ಪುಟ್ಟ ಮಕ್ಕಳನ್ನೂ ಹೃದಯಾಘಾತ ಕಾಡುತ್ತಿದೆ. ಯಾವ ದುಶ್ಚಟವೂ ಇಲ್ಲದ ಪುಟ್ಟ ಮಕ್ಕಳಲ್ಲೂ ಈ ಸಮಸ್ಯೆ ಕಾಡುತ್ತಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ.

  • News18 Kannada
  • Last Updated :
  • Puttur, India
  • Share this:

ಸುಳ್ಯ, ದಕ್ಷಿಣ ಕನ್ನಡ: ಹೃದಯಾಘಾತ (Heart Attack) ಸಮಸ್ಯೆ ಎನ್ನುವುದು ವಯಸ್ಕರಲ್ಲೇ ಹೆಚ್ಚಾಗಿ ಕಂಡು ಬರುತ್ತದೆ ಎನ್ನುವ ದಿನಗಳು ಇದೀಗ ಕಳೆದು ಹೋಗಿದೆ. ಇತ್ತೀಚಿನ ದಿನಗಳಲ್ಲಿ ಪುಟ್ಟ ಮಕ್ಕಳನ್ನೂ (Small Children) ಈ ಸಮಸ್ಯೆ ಕಾಡುತ್ತಿದ್ದೆ. ಯಾವ ದುಶ್ಚಟವೂ ಇಲ್ಲದ ಪುಟ್ಟ ಮಕ್ಕಳಲ್ಲೂ ಈ ಸಮಸ್ಯೆ ಕಾಡುತ್ತಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ. ಇದಕ್ಕೆ ದಕ್ಷಿಣ ಕನ್ನಡ (Dakhsina Kannada) ಜಿಲ್ಲೆಯ ಸುಳ್ಯ (Sullia) ತಾಲೂಕಿನಲ್ಲೊಂದು ನಿದರ್ಶನ ಸಿಕ್ಕಿದೆ. ಸುಳ್ಯ ತಾಲೂಕಿನ ಅಮರ ಮುಡ್ನೂರು ಗ್ರಾಮದ ಕುಕ್ಕುಜಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 2 ನೇ ತರಗತಿ ವಿದ್ಯಾರ್ಥಿ (Student), ಕುಂಟಿಕಾನ ನಿವಾಸಿ ಮೋಕ್ಷಿತ್ ಕೆ ಸಿ ಎಂಬ ಬಾಲಕ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.


ಜ್ವರದಿಂದ ಬಳಲಿದ್ದ ಬಾಲಕ


ಅಕ್ಟೋಬರ್‌ 30 ಬಾಲಕ ಮೋಹಿತ್ ನಲ್ಲಿ ಜ್ವರದ ಲಕ್ಷಣಗಳು ಕಂಡು ಬಂದಿತ್ತು. ಈ ಹಿನ್ನಲೆಯಲ್ಲಿ ಆತನ ಪೋಷಕರು ಮನೆ ಪಕ್ಕದಲ್ಲೇ ಇದ್ದ ವೈದ್ಯರ ಕ್ಲೀನಿಕ್ ನಿಂದ ಜ್ವರದ ಮಾತ್ರೆಯನ್ನು ಪಡೆದು ಮನೆಗೆ ತೆರಳಿದ್ದರು. ಮಾತ್ರೆ ಕುಡಿದ ಬಳಿಕ ಜ್ವರದ ಲಕ್ಷಣಗಳು ಕಡಿಮೆಯಾಗಿದ್ದು, ನವೆಂಬರ್ 1 ರಂದು ಮೋಹಿತ್ ಗೆ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವದ ಹಾಡು ಹಾಡಲು ಇದ್ದ ಕಾರಣ ಮನೆ ಮಂದಿಯೊಂದಿಗೆ ಹೇಳಿ ಶಾಲೆಗೆ ಹೋಗಿದ್ದ.


ಮೃತ ಬಾಲಕ


ತಂದೆ ಎದುರೇ ಕುಸಿದು ಬಿದ್ದ ಬಾಲಕ


ರಾಜ್ಯೋತ್ಸವದ ಎಲ್ಲಾ ಕಾರ್ಯಕ್ರಮಗಳು ಮುಗಿದ ಬಳಿಕ ಮತ್ತೆ ಮನೆಗೆ ಹೋಗುವ ಸಮಯದಲ್ಲಿ ಮೋಹಿತ್ ಆರೋಗ್ಯದಲ್ಲಿ ಕೊಂಚ ಏರುಪೇರಾಗಿತ್ತು. ಕೂಡಲೇ ಶಾಲೆಯ ಶಿಕ್ಷಕರು ದೂರವಾಣಿ ಮೂಲಕ ಮೋಹಿತ್ ಪೋಷಕರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಮೋಹಿತ್ ತಂದೆ ಚಂದ್ರಶೇಖರ ಆಚಾರ್ಯ ಶಾಲೆಗೆ ಬಂದಿರುವ ಸಂದರ್ಭದಲ್ಲೇ ಬಾಲಕ ನಿಂತಲ್ಲಿಯೇ ಕುಸಿದು ಬಿದ್ದಿದ್ದಾನೆ.


ಇದನ್ನೂ ಓದಿ: Boy Death: ಗಲ್ಲಿಗೇರುವ ಸೀನ್‌ ಅಭ್ಯಾಸದ ವೇಳೆ ನಡೆಯಿತು ದುರಂತ, ಭಗತ್ ಸಿಂಗ್ ಪಾತ್ರ ಮಾಡಿದ್ದ ವಿದ್ಯಾರ್ಥಿ ಸಾವು!


ಹೃದಯಾಘಾತದಿಂದ ಸಾವನ್ನಪ್ಪಿದ್ದಾಗಿ ತಿಳಿಸಿದ ವೈದ್ಯರು


ತಕ್ಷಣವೇ ಬಾಲಕನನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿ, ತುರ್ತು ಚಿಕಿತ್ಸಾ ಘಟಕದಲ್ಲಿರಿಸಿ ಜೀವ ಉಳಿಸಲು ಸತತವಾಗಿ ಪ್ರಯತ್ನಿಸಿದ್ದಾರೆ. ಆದರೆ ಪ್ರಯೋಜನವಾಗಲಿಲ್ಲ. ಬಾಲಕ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.


ತಾಲೂಕು ವೈದ್ಯಾಧಿಕಾರಿಗಳು ಹೇಳುವುದೇನು?


ಬಾಲಕನ ಸಾವಿನ ಕುರಿತು ಮಾಹಿತಿ ನೀಡಿದ ಸುಳ್ಯ ತಾಲೂಕು ವೈದ್ಯಾಧಿಕಾರಿ ಡಾ. ನಂದಕುಮಾರ್, "ಈಗಾಗಲೇ ಬಾಲಕನನ್ನು ಪರಿಶೀಲನೆ ನಡೆಸಿದ ಆಸ್ಪತ್ರೆಯಿಂದ ವರದಿ ಕೇಳಿದ್ದೇವೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಹಿಂದೆ ಆತನಿಗೆ ಯಾವುದೇ ಇತರ ಕಾಯಿಲೆಗಳಿಲ್ಲ ಎನ್ನಲಾಗಿದೆ. ಕಲಿಕೆ ಸೇರಿದಂತೆ ಇತರ ಶಾಲಾ ಚಟುವಟಿಕೆಗಳಲ್ಲೂ ಚುರುಕಾಗಿದ್ದ ಎಂದು ತಿಳಿದುಬಂದಿದೆ. ಚಿಕ್ಕ ಮಕ್ಕಳಿಗೂ ಹೃದಯಾಘಾತ, ಕಿಡ್ನಿ ಸ್ಟೋನ್‌ಗಳಂತಹ ಕಾಯಿಲೆಗಳು ಬರುವ ಸಾಧ್ಯತೆಗಳು ಇವೆ. ಈ ಮಗುವಿಗೂ ಹೃದಯಾಘಾತವಾಗಿರುವ ಬಗ್ಗೆ ಪರಿಶೀಲನೆ ನಡೆಸಿದ ತಜ್ಞ ವ್ಯೆದ್ಯರು ಮಾಹಿತಿ ನೀಡಿದ್ದಾರೆ" ಎಂದಿದ್ದಾರೆ.


ಇದನ್ನೂ ಓದಿ: Heart Attack: ನಿರ್ಲಕ್ಷ್ಯ ಮಾಡಬೇಡಿ, ಇದು ‘ಹೃದಯ’ಗಳಾ ವಿಷಯ! ನಿಮ್ಮ ಹಾರ್ಟ್ ಮೇಲೂ ಇರಲಿ ಪ್ರೀತಿ


ಮಕ್ಕಳಲ್ಲಿ ಹೃದಯಾಘಾತದ ಆತಂಕ


ಶಾಲೆಯಿಂದ ನೇರವಾಗಿ ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ ಸಮಯದಲ್ಲಿ ಮಕ್ಕಳ ತಜ್ಞರು ಸೇರಿದಂತೆ ಎಲ್ಲಾ ವೈದ್ಯರು ಬಾಲಕನನ್ನು ಪರೀಕ್ಷಿಸಿದ್ದಾರೆ. ಬಾಲಕದ ದೇಹದಲ್ಲಿ ಯಾವುದೇ ರೀತಿಯ ಗಾಯಗಳಾಗಲೀ, ಇನ್ನಿತರ ಯಾವುದೇ ಗಾಯ ಹೊಂದಿದ ಚಿಹ್ನೆಗಳು ಪತ್ತೆಯಾಗಿಲ್ಲ. ಆದರೆ ಬಾಲಕನ ತುಟಿಗಳು ಕಪ್ಪಾಗಿರುವುದು ವೈದ್ಯರ ಗಮನಕ್ಕೆ ಬಂದಿದೆ‌. ಈ ರೀತಿ ತುಟಿಗಳು ಕಪ್ಪಾಗುವುದು ಹೃದಯಾಘಾತದ ಲಕ್ಷಣವಾಗಿದ್ದು, ಮಕ್ಕಳಲ್ಲಿ ಇಂಥ ಸಮಸ್ಯೆ ಕಾಡುತ್ತಿರುವುದು ಅಘಾತಕಾರಿ ಬೆಳವಣಿಗೆ ಎಂದು ಆರೋಗ್ಯಾಧಿಕಾರಿ ನಂದಕುಮಾರ್ ಮಾಹಿತಿ ನೀಡಿದ್ದಾರೆ.

Published by:Annappa Achari
First published: