ಪ್ಯಾರಾಲಿಂಪಿಕ್ಸ್​ನಲ್ಲಿ ಪಾಲ್ಗೊಳ್ಳಲು ಚೀನಾಗೆ ಹೋಗಲು ಹಣವಿಲ್ಲದೆ ಪರಿತಪಿಸುತ್ತಿರುವ ರಾಯಚೂರಿನ ಹುಡುಗ

ಈತನ ಪ್ರತಿಭೆಯನ್ನು ಗುರುತಿಸಿ ವಿಕಲಚೇತನ ರಣಜಿ ಕ್ರಿಕೆಟಿಗ ಮಹೇಶ್ ಎಂಬುವವರು ಗುರುತಿಸಿ ಕ್ರಿಕೆಟ್ ಆಟವನ್ನು ಕಲಿಸಿದ್ದು ಕ್ರಿಕೆಟ್ ನಲ್ಲಿ ಹಲವಾರು ಸಾಧನೆ ಮಾಡಿದ್ದಾನೆ

ಸಣ್ಣ ಮಾರೇಶ್

ಸಣ್ಣ ಮಾರೇಶ್

  • Share this:
ರಾಯಚೂರು(ಫೆ. 07): 8 ವರ್ಷದ ಬಾಲಕನಾಗಿದ್ದಾಗ ಹಿಟ್ಟಿನ ಗಿರಣಿಯಲ್ಲಿ ಕೈ ಸಿಕ್ಕು ಎಡಗೈ ಕಳೆದುಕೊಂಡ ಈಗಿನ ಯುವಕ ಸಣ್ಣ ಮಾರೇಶ್ ಇದೇ ಎಪ್ರಿಲ್ 17 ರಿಂದ ಚೀನಾದಲ್ಲಿ ಆರಂಭವಾಗುವ ಪ್ಯಾರಾ ಓಲಂಪಿಕ್ಸ್​ ಪಂದ್ಯಾವಳಿಯಲ್ಲಿ ವಾಲಿಬಾಲ್ ಆಟಗಾರನಾಗಿ ಭಾರತವನ್ನು ಪ್ರತಿನಿಧಿಸಲಿದ್ದಾನೆ.

ಸಣ್ಣ ಮಾರೇಶ ಮೂಲತಃ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಅರಳಹಳ್ಳಿ ಗ್ರಾಮದ ದುರ್ಗಪ್ಪ ಹಾಗೂ ಮಾರಮ್ಮನ ಎರಡನೆಯ ಮಗ, ಆತ 8ನೇ ವಯಸ್ಸಿನಲ್ಲಿರುವಾಗ ಅಚಾನಕ್ಕಾಗಿ ಹಿಟ್ಟಿನ‌ ಗಿರಣಿಯಲ್ಲಿ ಕೈಸಿಕ್ಕು ಎಡಗೈ ಕಳೆದು ಕೊಂಡಿದ್ದಾನೆ.

ವಿಕಲಚೇತನ ಆಗಿದ್ದರೂ ಏನಾದರೂ ಸಾಧಿಸಬೇಕೆನ್ನುವ ಛಲವಿರುವ ಸಣ್ಣ ಮಾರೇಶ ಮೊದಲು ಓಟಗಾರನಾಗಿ 100, 400 ಮೀಟರ್ ಓಟದಲ್ಲಿ ಗುಲಬುರ್ಗಾ ವಿಶ್ವವಿದ್ಯಾಲಯದ ಪ್ರತಿನಿಧಿಯಾಗಿ ಬೇರೆ ಬೇರೆ ಕಡೆ ಅಥ್ಲೆಟಿಕ್ಸ್​ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ. 2008ರಲ್ಲಿ ಮೈಸೂರಿನಲ್ಲಿ ನಡೆದ ವಿಕಲಚೇತನರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿ 100 ಮತ್ತು 400 ರನ್ನಿಂಗ್ ರೇಸ್​ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ.

ಮತ್ತೆ ಕ್ರಿಕೆಟ್ ಆಟವನ್ನು ಆಡಲು ಶುರು ಮಾಡಿದ. ಈತನ ಪ್ರತಿಭೆಯನ್ನು ಗುರುತಿಸಿ ವಿಕಲಚೇತನ ರಣಜಿ ಕ್ರಿಕೆಟಿಗ ಮಹೇಶ್ ಎಂಬುವವರು ಗುರುತಿಸಿ ಕ್ರಿಕೆಟ್ ಆಟವನ್ನು ಕಲಿಸಿದ್ದು ಕ್ರಿಕೆಟ್ ನಲ್ಲಿ ಹಲವಾರು ಸಾಧನೆ ಮಾಡಿದ್ದಾನೆ. 2010 ರಲ್ಲಿ ಮೈಸೂರಿನಲ್ಲಿ ನಡೆದ ಕರ್ನಾಟಕದ ರಣಜಿ ತಂಡವನ್ನು ಆಯ್ಜೆಯಾಗಿದ್ದಾನೆ. 2011 ಮಾರ್ಚ್ ನಲ್ಲಿ ಆಂಧ್ರಪ್ರದೇಶದ ಅನಂತಪುರದಲ್ಲಿ ನಡೆದ 7 ರಾಜ್ಯಗಳ ಕ್ರೀಡಾಕೂಟದಲ್ಲಿ ಭಾಗವಹಿಸಿ ಅದರಲ್ಲಿ ಕರ್ನಾಟಕ ರನ್ನರ್ ಆಪ್ ಆಗಿತ್ತು, 2011 ರ ಡಿಸೆಂಬರ್ ಮಹಾರಾಷ್ಟ್ರದ ಮಿರಾಜ್ 6 ರಾಜ್ಯಗಳ ಮಧ್ಯೆ ನಡೆದ ಪಂದ್ಯದಲ್ಲಿ ಸಹ ಕರ್ನಾಟಕ ಜಯಗಳಿಸಿತ್ತು, ಈ ಸಂದರ್ಭದಲ್ಲಿ ಸಣ್ಣ ಮಾರೇಶ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

ಇದನ್ನೂ ಓದಿ : ಹಾವೇರಿಗೆ ಕೊನೆಗೂ ದಕ್ಕಿದ ಸಮ್ಮೇಳನ ಆತಿಥ್ಯ - ಕಾರ್ಯಕಾರಣಿ ಸಭೆಯಲ್ಲಿ ಸರ್ವಾನುಮತದ ನಿರ್ಣಯ

ಕ್ರಿಕೆಟ್ ಆಟಗಾರನಾಗಿದ್ದರೂ ಉತ್ತಮ ವಾಲಿಬಾಲ್ ಆಟಗಾರ ಸಹ ಆಗಿದ್ದಾನೆ. ಈಗ ಚೀನಾದಲ್ಲಿ ನಡೆಯುವ ಪ್ಯಾರಾ ಒಲಿಂಪಿಕ್ಸ್​  ಕ್ರೀಡಾಕೂಟದಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾನೆ. ಅಲ್ಲಿಗೆ ಹೋಗಿ ಬರಲು ಆತನಿಗೆ ಸುಮಾರು 2.30 ಲಕ್ಷ ರೂಪಾಯಿ ಬೇಕಾಗಿದೆ. ಅದಕ್ಕಾಗಿ ಕೆಲಸ‌ ಮಾಡುವ ಎಂಆರ್ ಪಿಎಲ್ ಸಂಸ್ಥೆ ಕೈಜೋಡಿಸಲು ಮುಂದಾಗಿದೆ. ಅದರೊಂದಿಗೆ ಇನ್ನಷ್ಟು ಸಹಾಯ ಬೇಕಾಗಿದೆ. ಈ ಹಿನ್ನೆಲೆಯಲ್ಲಿ ಆತನ ಸ್ನೇಹಿತರು ಆತನಿಗೆ ಹಣ ಸಂಗ್ರಹಿಸಲು ವಾಟ್ಸಪ್ ಮುಖಾಂತರ ಅಭಿಯಾನ ಆರಂಭಿಸಿದ್ದಾರೆ.

 
First published: