English ಕಲಿಯೋದು ಕಷ್ಟ ಅಂತ ವಿಷ ಕುಡಿದ ವಿದ್ಯಾರ್ಥಿ! ಈಗ ಬಾಲಕನ ಪರಿಸ್ಥಿತಿ ಹೇಗಿದೆ?
ತುಮಕೂರಿನ ಊರ್ಡಿಗೆರೆ ಎಂಬ ಗ್ರಾಮದ 7ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ದುಡುಕಿನ ನಿರ್ಧಾರ ಕೈಗೊಂಡು ಬಿಟ್ಟಿದ್ದಾನೆ. ನನಗೆ ಇಂಗ್ಲಿಷ್ ಭಾಷೆ ಬರುವುದಿಲ್ಲ ಅಂತ ಚಿಂತಿಸಿದ್ದಾನೆ. ಇದೇ ಚಿಂತೆಯಲ್ಲಿ ಇಂದು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದಾನೆ.
ತುಮಕೂರು: ವಿದ್ಯಾರ್ಥಿಗಳು (Students) ಅಥವಾ ಚಿಕ್ಕಮಕ್ಕಳೆಂದರೆ (Children) ಹುಮ್ಮಸ್ಸಿನ ಬುಗ್ಗೆಯಂತೆ ಇರುತ್ತಾರೆ. ಚಿಕ್ಕ ವಯಸ್ಸಲ್ಲಿ (Small Age) ಮಕ್ಕಳಿಗೆ ಏನು ಹೇಳಿ ಕೊಟ್ಟರೂ ಬೇಗನೆ ಕಲಿಯುತ್ತಾರೆ. ಆದರೆ ಈ ಹುಡುಗನಿಗೆ (Boy) ಇಂಗ್ಲಿಷ್ (English) ಅಂದರೆ ಎಲ್ಲಿಲ್ಲದ ಭಯವಾಗ್ತಿತ್ತು. ಇಂಗ್ಲಿಷ್ ಭಾಷೆ (English Language) ಎನ್ನುವುದು ಬಹುತೇಕರಿಗೆ ಈಗಲೂ ಕಬ್ಬಿಣದ ಕಡಲೆಯೇ. ಇದರಿಂದ ಈ ಹುಡುಗ ಏನೂ ಹೊರತಾಗಿರಲಿಲ್ಲ. ನನಗೆ ಸರಿಯಾಗಿ ಇಂಗ್ಲಿಷ್ ಓದುವುದಕ್ಕೆ (Reading), ಬರೆಯುವುದಕ್ಕೆ (Writing) ಬರುವುದಿಲ್ಲ ಅಂತ ಚಿಂತೆಗೆ ಒಳಗಾಗಿದ್ದ. ಇಂಗ್ಲಿಷ್ ಕಲಿಯುವುದು (Learning) ಹೇಗೆ ಅಂತ ತಿಳಿಯದೇ ಒದ್ದಾಡಿದ. ಇದೇ ಚಿಂತೆ ಹಾಗೂ ಒದ್ದಾಟದಲ್ಲಿ ಸಿಲುಕಿ, ಇಂದು ದುಡುಕಿನ ನಿರ್ಧಾರವೊಂದನ್ನು ತೆಗೆದುಕೊಂಡು ಬಿಟ್ಟಿದ್ದಾನೆ. ಹಾಗಿದ್ರೆ ಏನಿದು ಪ್ರಕರಣ? ದುಡುಕಿ ನಿರ್ಧಾರ ಕೈಗೊಂಡ ವಿದ್ಯಾರ್ಥಿ ಯಾರು? ಈಗ ಆತ ಹೇಗಿದ್ದಾನೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ…
ಇಂಗ್ಲಿಷ್ ಬರುವುದಿಲ್ಲ ಅಂತ ವಿಷ ಕುಡಿದ ವಿದ್ಯಾರ್ಥಿ
ತುಮಕೂರಿನ ಊರ್ಡಿಗೆರೆ ಎಂಬ ಗ್ರಾಮದ 7ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ದುಡುಕಿನ ನಿರ್ಧಾರ ಕೈಗೊಂಡು ಬಿಟ್ಟಿದ್ದಾನೆ. ನನಗೆ ಇಂಗ್ಲಿಷ್ ಭಾಷೆ, ಶಾಲೆಯಲ್ಲಿ ಶಿಕ್ಷಕರು ಮಾಡುವ ಇಂಗ್ಲಿಷ್ ಪಾಠ ಅರ್ಥವಾಗುವುದಿಲ್ಲ, ನನಗೆ ಇಂಗ್ಲಿಷ್ ಓದುವುದಕ್ಕೆ, ಬರೆಯುವುದಕ್ಕೆ ಬರುವುದಿಲ್ಲ ಅಂತ ಚಿಂತಿಸಿದ್ದಾನೆ. ಇದೇ ಚಿಂತೆಯಲ್ಲಿ ಇಂದು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದಾನೆ.
ಬೇರೆ ಶಾಲೆಯಿಂದ ಈ ಶಾಲೆಗೆ ಬಂದಿದ್ದ ವಿದ್ಯಾರ್ಥಿ
ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುವ ಸೋಮಶೇಖರ್ ಹಾಗೂ ಜಯಮ್ಮ ದಂಪತಿಯ ಪುತ್ರನೇ ವಿಷ ಕುಡಿದ 7ನೇ ತರಗತಿ ವಿದ್ಯಾರ್ಥಿ. ಈತ ಊರ್ಡಿಗೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ಕೋತಿ ತೋಪು ಗ್ರಾಮದಲ್ಲಿದ್ದ ಈ ದಂಪತಿ ಕೆಲವು ದಿನಗಳ ಹಿಂದೆಯಷ್ಟೇ ಊರ್ಡಿಗೆರೆ ಗ್ರಾಮಕ್ಕೆ ಶಿಫ್ಟ್ ಆಗಿದ್ದರು. ಹೀಗಾಗಿ ಆರನೇ ತರಗತಿವರೆಗೆ ಕೋತಿ ತೋಪುವಿನಲ್ಲಿ ಓದುತ್ತಿದ್ದ ಬಾಲಕ, ಈ ಶೈಕ್ಷಣಿಕ ವರ್ಷದಿಂದ ಊರ್ಡಿಗೆರೆ ಸರ್ಕಾರಿ ಶಾಲೆಗೆ ದಾಖಲಾಗಿದ್ದ ಎನ್ನಲಾಗಿದೆ.
ನನಗೆ ಇಂಗ್ಲೀಷ್ ಅರ್ಥವಾಗ್ತಿಲ್ಲ. ಹೀಗಾಗಿ ನಾನು ಶಾಲೆಗೆ ಹೋಗುವುದಿಲ್ಲ ಎಂದು ಬಾಲಕ ಪೋಷಕರ ಬಳಿ ಹೇಳಿಕೊಂಡಿದ್ದ. ಆದರೆ ಬುದ್ಧಿವಾದ ಹೇಳಿದ ಪೋಷಕರು ಆತನಿಗೆ ನೀನು ಶಾಲೆಗೆ ಹೋಗಬೇಕೆಂದು ತಾಕೀತು ಮಾಡಿದ್ದರು. ಇಷ್ಟಕ್ಕೇ ಬೇಸರ ಮಾಡಿಕೊಂಡ ಬಾಲಕ ಮನೆಯಲ್ಲಿ ಯಾರೂ ಇಲ್ಲದೇ ಇರುವಾಗ ಕ್ರಿಮಿ ನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಅದೃಷ್ಟವಶಾತ್ ಪ್ರಾಣಾಪಾಯದಿಂದ ಬಾಲಕ ಪಾರು
ಮಗ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ವಿಚಾರ ತಂದೆ, ತಾಯಿಗೆ ಗೊತ್ತಾಗಿದೆ. ಇದರಿಂದ ಇಬ್ಬರೂ ಕಂಗಾಲಾಗಿದ್ದಾರೆ. ಕೊನೆಗೆ ಸ್ಥಳೀಯರ ಸಹಕಾರದಿಂದ ಕೂಡಲೇ ಪೋಷಕರು ಬಾಲಕನನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ. ಕೂಡಲೇ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಹೀಗಾಗಿ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆಯೇ ಕ್ಷೇತ್ರ ಶಿಕ್ಷಣಾಧಿಕಾರಿ ಹನುಮ ನಾಯಕ್ ಆಸ್ಪತ್ರೆಗೆ ಭೇಟಿ ನೀಡಿ ಬಾಲಕನ ಆರೋಗ್ಯ ವಿಚಾರಿಸಿದ್ದಾರೆ.
SSLC Results: ಮಗನ ಜೊತೆ ಅಭ್ಯಾಸ ಮಾಡಿ ಎಸ್ಎಸ್ಎಲ್ ಸಿ ಪರೀಕ್ಷೆ ಉತ್ತೀರ್ಣನಾದ ತಂದೆ
ಈ ವರ್ಷ ಮಗನ (Son) ಜತೆ ಅಭ್ಯಾಸ ಮಾಡಿದ ತಂದೆ (Father) 10ನೇ ತರಗತಿ ಪರೀಕ್ಷೆ ಬರೆದು 333 ಅಂಕ ಗಳಿಸಿದ್ದಾರೆ. ಮೈಸೂರಿನ ನಜರಾಬಾದ್ (Nazarabad, Mysuru) ನಲ್ಲಿ ವಾಸವಾಗಿರುವ ರಹಮತುಲ್ಲಾ (42) ಮತ್ತು ಮೊಹಮ್ಮದ್ ಫರಾನ್ (16) ತಂದೆ-ಮಗ ಇಬ್ಬರೂ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಮೊಹಮ್ಮದ್ ಫರಾನ್ 625ಕ್ಕೆ 613 ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾನೆ. ಮೊಹಮ್ಮದ್ ಫರಾನ್ 613 ಅಂಕ ಪಡೆದ್ರೆ, 1994ರಲ್ಲಿಯೇ ಶಿಕ್ಷಣ ಮೊಟಕುಗೊಳಿಸಿದ್ದ ರಹಮತುಲ್ಲಾ 333 ಅಂಕ ಪಡೆದುಕೊಂಡಿದ್ದಾರೆ. ಇನ್ನೂ ತಮ್ಮ ಸಾಧನೆಗೆ ಮಗನ ಪ್ರೋತ್ಸಾಹ ಕಾರಣ ಎಂದು ರಹಮತುಲ್ಲಾ ಹೇಳುತ್ತಾರೆ.
Published by:Annappa Achari
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ