HOME » NEWS » State » A BLIND ELEPHANT AT DUABRE IS FEARING A SMALL ANIMALS BECAUSE OF THIS BLINDNESS RSK LG

ಅಜಾನುಬಾಹು ದೇಹವಿದ್ದರೂ ಮರಿಯಾನೆಗೂ ಅಂಜುವ ರಾಮ; ದುಬಾರೆಯಲ್ಲಿ ಕುರುಡು ಆನೆಯ ಪರದಾಟ

ಆದರೆ ಒಂದೇ ಕಣ್ಣಿನಿಂದಲೇ ಗಜ ಗಾಂಭೀರ್ಯವಾಗಿ ಓಡಾಡಿಕೊಂಡು ಶಿಬಿರದ ಉಳಿದ ಆನೆಗಳಿಗೆ ನಡುಕ ಹುಟ್ಟಿಸಿದ್ದ ಈ ರಾಮ. ಆದರೆ ಹತ್ತು ವರ್ಷ ಎನ್ನುವಷ್ಟರಲ್ಲಿ ಕಡ್ಡಿಯೊಂದು ಕಣ್ಣಿಗೆ ತಗುಲಿ ಮತ್ತೊಂದು ಕಣ್ಣು ಕಾಣದಂತಾಗಿ ಶಾಶ್ವತ ಕುರುಡನಾಗಿಬಿಟ್ಟ. ಅಂದಿನಿಂದ ಈ ಅಜಾನುಬಾಹು ರಾಮ ಅಕ್ಷರಶಃ ಮಗುವಿನಂತಾದ ಎನ್ನುತ್ತಾರೆ ದುಬಾರೆ ಸಾಕಾನೆ ಶಿಬಿರದ ಉಪ ವಲಯ ಅರಣ್ಯಾಧಿಕಾರಿ ಕೆ.ಪಿ. ರಂಜನ್.

news18-kannada
Updated:January 11, 2021, 9:19 AM IST
ಅಜಾನುಬಾಹು ದೇಹವಿದ್ದರೂ ಮರಿಯಾನೆಗೂ ಅಂಜುವ ರಾಮ; ದುಬಾರೆಯಲ್ಲಿ ಕುರುಡು ಆನೆಯ ಪರದಾಟ
ಎರಡೂ ಕಣ್ಣಿಲ್ಲದ ಆನೆ ರಾಮ
  • Share this:
ಕೊಡಗು(ಜ.11): ಆನೆ ನಡೆದದ್ದೇ ದಾರಿ ಅನ್ನೋ ಗಾದೆ ಮಾತಿದೆ. ಅದರಲ್ಲೂ ಅಜಾನುಬಾಹುವಿನಂತ ದೇಹ, ನೋಡಿದರೆ ಎದೆನಡುಗಂತಹ ಉದ್ದ ಕೋರೆಯ ಇಂತಹ ಆನೆಗಳು ನಡೆದರೆ, ನಡೆದದ್ದೇ ದಾರಿಯಾಗದೇ ಇರದು. ನೀವು ನೋಡುತ್ತಿರುವ ಈ ಮದಗಜ ಸಾಕ್ಷ್ಯಾತ್ ನಿಮ್ಮ ಮುಂದೆ ಬಂದರೆ..!. ಕಲ್ಪನೆ ಮಾಡಿಕೊಳ್ಳಿ. ಎದೆ ಒಮ್ಮೆಯೇ ಧಸಕ್ಕೆಂದು ಬಿಡುತ್ತದೆ ಅಲ್ವಾ.? ಆದರೆ ನೀವು ಅಂದುಕೊಳ್ಳುವುದಕ್ಕೆ ತದ್ವಿರುದ್ಧವಾದ ನಡತೆಯ ಆನೆ ಇದು. ಹೌದು ನಡೆಯಬೇಕಾದರೆ ತನ್ನ ಮುಂದಿರುವುದೇನು ಎನ್ನೋದು ಗೊತ್ತಾದರೆ ಮಾತ್ರವಲ್ಲವೇ ನಡೆಯಲು ಸಾಧ್ಯ. ಮುಂದೆ ನಡೆಯಬೇಕೆಂದರೆ ಎಷ್ಟು ದೊಡ್ಡ ದೇಹವೇ ಇದ್ದರೂ ಕಣ್ಣು ಕಂಡರಲ್ಲವೇ ದಾರಿ ಸಾಗೋದು. ಹೌದು ಇಷ್ಟು ದೊಡ್ಡ ಗಾತ್ರದ ದೇಹ, ಊಹೆಗೂ ಮೀರಿದ ಕೋರೆ ಹೊಂದಿರುವ ಈ ಆನೆಯ ಹೆಸರು ರಾಮ. ನೋಡಲು ಭಯಾನಕ ಎನಿಸದರೂ ರಾಮನಂತೆ ಸೌಮ್ಯ ಸ್ವಭಾವದವನು 65 ರ ಹರೆಯದ ಈ ಆನೆ. ಇದು ಇರೋದು ಕೊಡಗು ಜಿಲ್ಲೆಯ ವಿಶ್ವ ಪ್ರಸಿದ್ಧ ದುಬಾರೆ ಸಾಕಾನೆ ಶಿಬಿರದಲ್ಲಿ.

ತನ್ನ ಅಜಾನುಬಾಹು ದೇಹದಿಂದಲೇ ನಿತ್ಯ ಬರುವ ಸಾವಿರಾರು ಪ್ರವಾಸಿಗರ ಕಣ್ಮನ ಕೋರೈಸಿ ಮುದ ನೀಡುವ ಈ ಆನೆಗೆ ಎರಡು ಕಣ್ಣು ಕಾಣೋದೇ ಇಲ್ಲ ಎಂದರೆ ನಿಮಗೆ ಅಚ್ಚರಿ ಎನಿಸಿದರೂ ಅದು ಸತ್ಯ. ಕಾಡುಬಿಟ್ಟು ಊರುಗಳಿಗೆ ಲಗ್ಗೆ ಇಡುತ್ತಾ ಜನರನ್ನು ಭಯ ಭೀತಗೊಳಿಸುತ್ತಿದ್ದ ಈ ಆನೆಯನ್ನು 2002 ರಲ್ಲಿ ಸೆರೆ ಹಿಡಿದು ದುಬಾರೆ ಸಾಕಾನೆ ಶಿಬಿರದಲ್ಲಿ ಪಳಗಿಸಿ ರಾಮ ಎಂದು ಹೆಸರಿಡಲಾಗಿತ್ತು. ಅದನ್ನು ಸೆರೆ ಹಿಡಿದು ಪಳಗಿಸಿದ ಮೇಲೆಯೇ ಇದರ ಒಂದು ಕಣ್ಣು ಕಾಣುವುದಿಲ್ಲ ಎನ್ನೋದು ಗೊತ್ತಾಗಿದ್ದು.

ಹೆಬ್ಬಾರ್ ನಂತರ ಕಾಂಗ್ರೆಸ್​​ಗೆ ಸಾರಥಿ ಆಗ್ತಾರಾ ದೇಶಪಾಂಡೆ ಪುತ್ರ? ಯಲ್ಲಾಪುರದಲ್ಲಿ ಪಕ್ಷ ಸಂಘಟ‌ನೆಗೆ ಭಾರೀ ಸಿದ್ಧತೆ

ಆದರೆ ಒಂದೇ ಕಣ್ಣಿನಿಂದಲೇ ಗಜ ಗಾಂಭೀರ್ಯವಾಗಿ ಓಡಾಡಿಕೊಂಡು ಶಿಬಿರದ ಉಳಿದ ಆನೆಗಳಿಗೆ ನಡುಕ ಹುಟ್ಟಿಸಿದ್ದ ಈ ರಾಮ. ಆದರೆ ಹತ್ತು ವರ್ಷ ಎನ್ನುವಷ್ಟರಲ್ಲಿ ಕಡ್ಡಿಯೊಂದು ಕಣ್ಣಿಗೆ ತಗುಲಿ ಮತ್ತೊಂದು ಕಣ್ಣು ಕಾಣದಂತಾಗಿ ಶಾಶ್ವತ ಕುರುಡನಾಗಿಬಿಟ್ಟ. ಅಂದಿನಿಂದ ಈ ಅಜಾನುಬಾಹು ರಾಮ ಅಕ್ಷರಶಃ ಮಗುವಿನಂತಾದ ಎನ್ನುತ್ತಾರೆ ದುಬಾರೆ ಸಾಕಾನೆ ಶಿಬಿರದ ಉಪ ವಲಯ ಅರಣ್ಯಾಧಿಕಾರಿ ಕೆ.ಪಿ. ರಂಜನ್.

ಈಗ ಮುಂದೆ ಸಾಗಬೇಕೆಂದರೆ ಸೊಂಡಿಲನ್ನು ನೆಲಕ್ಕೆ ಮುಟ್ಟಿ, ಮುಟ್ಟಿ ತಡವುತ್ತಲೇ ಹಳ್ಳವಿದೆಯೋ, ದಿಬ್ಬವಿದೆಯೋ ಎನ್ನೋದನ್ನು ಖಾತರಿಪಡಿಸಿಕೊಂಡು ಸೊಂಡಿಲ ಸಹಾಯದಿಂದಲೇ ನಿಧಾನವಾಗಿ ಮುಂದಡಿ ಇಡುತ್ತದೆ. ಅದರಲ್ಲೂ ಸಾಕಾನೆ ಶಿಬಿರವನ್ನು ಬಿಟ್ಟು ಹೊರಗೆ ಹೋಯಿತ್ತೆಂದರೆ ಒಂದಡಿ ಮುಂದಿಡೋದಕ್ಕೂ ಮೂರ್ನಾಲ್ಕು ನಿಮಿಷವೇ ಬೇಕಾಗುತ್ತದೆ.

ದುಬಾರೆ ಸಾಕಾನೆ ಶಿಬಿರದಲ್ಲಿರುವ ಸಾಕಾನೆಗಳೇ ಆಗಲಿ, ಚಿಕ್ಕ ಮರಿಯಾನೆ ಆಗಲಿ ತನ್ನ ಬಳಿಗೆ ಬಂದರೂ ಹೆದರಿ ಬಾಲ ಮುದುಡಿ ಬಾರೀ ಘಾತ್ರದ ದೇಹವನ್ನು ಕುಗ್ಗಿಸಿ ಅಂಜುತ್ತಲೇ ನಿಂದುಬಿಡುತ್ತಾನೆ ಈ ರಾಮ. ಹೀಗಾಗಿಯೇ ಅದನ್ನು ಎಲ್ಲಿಯೂ ಹೊರಗೆ ಕರೆದೊಯ್ಯದೆ, ಬೇರೆ ಆನೆಗಳು ಹೊಡೆಯದಂತೆ ಶಿಬಿರದಲ್ಲಿ ಜೋಪಾನವಾಗಿ ನೋಡಿಕೊಳ್ಳಲಾಗುತ್ತಿದೆ.
ಒಂದೇ ಒಂದು ಕ್ಷಣ ಕಾಣದಂತೆ ಮರೆಯಾದರೂ ಯಾವ ಆನೆ ಹೊಡೆದು ಬಿಟ್ಟಿತೋ ಎನ್ನೋ ಭಯದಿಂದ ಹುಡುಕಾಡುತ್ತೇನೆ ಎನ್ನುತ್ತಾರೆ ಇದನ್ನು ಮಗುವಿನಂತೆ ನೋಡಿಕೊಳ್ಳುತ್ತಿರುವ ಮಾವುತ ಮಂಜುನಾಥ್. ನೀವೇನಾದ್ರು ದುಬಾರೆಗೆ ಹೋಗಿ ಆನೆಗಳ ವೀಕ್ಷಣೆಗೆಂದು ಹೋದಲ್ಲಿ ಇಷ್ಟು ದೊಡ್ಡ ದೇಹವಿದ್ದರೂ ಕಣ್ಣು ಕಾಣದೆ ಚಿಕ್ಕ ಮಗುವಿನಂತೆ ಮಾವುತನ ಅಕ್ಕಪಕ್ಕದಲ್ಲೇ ಸುಳಿದಾಡುವ ಈ ಅಜಾನುಬಾಹು ರಾಮನಿಗೆ ಏನಾದರೂ ಕೊಟ್ಟು ಮುದ್ದು ಮಾಡಿ ಬರುವುದನ್ನು ಮರೆಯದಿರಿ.
Published by: Latha CG
First published: January 11, 2021, 9:19 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories