ಬಳ್ಳಾರಿ(ಏ.16): ತಾಯಿ ಪ್ರೀತಿ ಈ ಜಗತ್ತಿನಲ್ಲಿ ಅತೀ ಶ್ರೇಷ್ಠ ಅಂತಾ ನಾವು ನೀವು ಕೇಳಿದ್ದೆವೆ, ಹಾಗೆ ಕಣ್ಣಾರೆ ಕಂಡಿದ್ದೇವೆ ಕೂಡ. ಅದರಲ್ಲೂ ತನ್ನ ಕಣ್ಣ ಮುಂದೆ ತನ್ನ ಮಗುವನ್ನ ಕಳೆದುಕೊಳ್ಳುವಾಗ ಆ ತಾಯಿ ಮಗುವನ್ನ ಕಾಪಾಡಿಕೊಳ್ಳಲು ಎಷ್ಟು ಹೋರಾಟ ಮಾಡುತ್ತಾಳೆ ಅಲ್ವಾ. ಅದಕ್ಕೆ ಸಾಕ್ಷಿ ಎಂಬಂತೆ ಹಂಪಿಯಲ್ಲೊಂದು ಹೃದಯ ವಿದ್ರಾಹಕ ಘಟನೆ ನಡೆದಿದೆ.
ಹೌದು, ಕೆರೆ ಹಾವೊಂದು ಆಹಾರ ಅರಸುತ್ತಾ, ತೆಂಗಿನ ಮರವನ್ನ ಏರಿದೆ. ಆ ಮರದಲ್ಲಿ ಮರಕುಟಗ ಪಕ್ಷಿ ಒಂದು ಗೂಡ ಕಟ್ಟಿಕೊಂಡು ತನ್ನ ಪುಟ್ಟ ಕಂದಮ್ಮನಿಗೆ ಜನ್ಮ ನೀಡಿದೆ, ಆ ಕಂದಮ್ಮನಿಗೆ ತಾಯಿ ಪ್ರೀತಿ ಧಾರೆ ಎರೆದು, ಲಾಲಿಸಿ ಪೋಷಿಸಿ ಬೆಳೆಸುತ್ತಿದೆ. ಹಾಗೆ ಅದಕ್ಕೆ ಹಾರುವುದನ್ನ, ಆಹಾರ ಅರಸುವನ್ನ ಹೇಳಿಕೊಡುತ್ತಾ.. ಅತ್ಯಂತ ಸಂಭ್ರಮ ದಿಂದ ಆ ಪಕ್ಷಿ ತನ್ನ ಜೀವನ ಸಾಗಿಸುತ್ತಿತ್ತು. ಆದರೆ ಜವರಾಯ ಎಂಬಂತೆ ಆ ಗೂಡಿಗೆ ಕೆರೆ ಹಾವೊಂದು ಲಗ್ಗೆ ಇಟ್ಟಿದೆ. ಲಗ್ಗೆ ಇಟ್ಟು ಗೂಡಿನಲ್ಲಿದ್ದ ಮರಿ ಪಕ್ಷಿಯನ್ನ ಹೊತ್ತೊಯ್ದಿದೆ.
ಮರಕುಟಗದ ಗೂಡಿಗೆ ಹಾವು ಲಗ್ಗೆ ಇಟ್ಟಿದ್ದನ್ನ ನೋಡಿದ ಪಕ್ಷಿ ತನ್ನ ಮಗುವನ್ನ ಕಾಪಾಡಿಕೊಳ್ಳಲು ಹರಸಾಹಸ ಪಟ್ಟಿದೆ. ಹಾವಿನ ದೇಹದ ಭಾಗಕ್ಕೆ ಕುಕ್ಕಿ ಕುಕ್ಕಿ ನನ್ನ ಕಂದನನ್ನ ಬಿಡು ಎಂದು ಗೋಗರೆದಿದೆ. ಆದರೆ ಆ ಹಾವು ಮಾತು ಕೇಳದೆ ಮರಿ ಪಕ್ಷಿಯನ್ನು ಹೊತ್ತೊಯ್ದು ತನ್ನ ಹೊಟ್ಟೆ ತುಂಬಿಸಿಕೊಂಡಿದೆ.
3ಡಿ ಸ್ಕ್ಯಾನ್ ಮೂಲಕ ಜೇಡರ ಬಲೆಯನ್ನೇ ಮ್ಯೂಸಿಕಲ್ ನೋಟ್ ಮಾಡಿಕೊಂಡು ವರ್ಚುವಲ್ ಸಂಗೀತ ಸೃಷ್ಟಿಸಿದ ಬ್ಯೂಹ್ಲರ್!
ತನ್ನ ಮಗುವನ್ನ ಕಳೆದುಕೊಂಡ ಪಕ್ಷಿ ಈಗ ಅನಾಥವಾಗಿ ಗೂಡಿನಲ್ಲಿದೆ. ತನ್ನ ಮಗುವೊಂದಿಗೆ ಕಳೆದ ಕ್ಷಣಗಳನ್ನ ನೆನಪಿಸಿಕೊಳ್ಳುತ್ತಾ ಕಣ್ಣೀರು ಹಾಕುತ್ತಾ ಅದರ ನೆನಪಿನಲ್ಲಿ ಕೊರಗುತ್ತಿದೆ.. ಎಷ್ಟೋ ಸಲ ತಾನು ಜನ್ಮ ಕೊಟ್ಟ ಮಗುವನ್ನ ತಮ್ಮ ಕಣ್ಣಮುಂದೆ ಕಳೆದುಕೊಳ್ಳುವಾಗ ಅಸಹಾಯಕವಾಗಿ ನಿಲ್ಲುವ ಸಂದರ್ಭ ಜಗತ್ತಿನಲ್ಲಿ ಯಾವ ತಾಯಿಗು ಬರಬಾರದು. ಬಂದರೆ ಆ ತಾಯಿ ಅನುಭವಿಸುವ ನೋವು ದೇವರಿಗೆ ಗೊತ್ತು.
ಹಾವು ಮರಿಯನ್ನ ಒಯ್ಯುವಾಗ ಮರಿ ಜೋರಾಗಿ ಕಿರಿಚಿಕೊಳ್ಳುತ್ತೆ. ತನ್ನ ಮಗುವಿನ ದ್ವನಿ ಕೇಳಿದ ತಾಯಿ ಹಾರುತ್ತಾ, ಹಾರುತ್ತಾ ಗೂಡಿನ ಹತ್ತಿರ ಬಂದ್ರೆ.. ಅಲ್ಲಿ ಜವರಾಯ ತನ್ನ ವಂಶದ ಕುಡಿಗೆ ಕಣ್ಣು ಹಾಕಿದೆ. ಇದನ್ನ ನೋಡಿ ತಾಯಿ ಮಗುವನ್ನ ಉಳಿಸಿಕೊಳ್ಳಲು ಎಲ್ಲಿಲ್ಲದ ಸಾಹಸ ಮಾಡುತ್ತೆ, ಆದರೂ ಕ್ರೂರಿ ಹಾವು ಬಿಡುವುದಿಲ್ಲ.
ತಾಯಿಗೆ ಮಗು, ನನ್ನನ್ನ ಉಳಿಸಿಕೊ ಅಮ್ಮ ಎನ್ನುವ ಕೂಗು.. ತಾಯಿ ಪಕ್ಷಿಯ ಹೃದಯ ಹಿಂಡುವಂತೆ ಮಾಡಿತು.. ಆದರೆ ಮಗವನ್ನ ಉಳಿಸಿಕೊಳ್ಳಲಾಗಲಿಲ್ಲ ಎಂಬ ಹತಾಸೆ ಬಾವದಿಂದ ತಾಯಿ ಪಕ್ಷಿ ಮರಗುವಂತೆ ಆಗಿದೆ.. ಎಷ್ಟಾದರೂ ತಾಯಿ ಕರಳು ಅಲ್ಲವೆ.. ಈ ದೃಶ್ಯ ನೋಡಿದ್ರೆ ಯಾರಿಗಾದರೂ ಕಣ್ಣಂಚಲ್ಲಿ ನೀರು ಬಾರದೆ ಇರದು.
ಒಟ್ಟಾರೆ ತನ್ನ ಮಗುವೊಂದಿಗೆ ನೋವು ಮರೆಯುತ್ತಾ ಅತ್ಯಂತ ಸಂತೋಷ ಜೀವನ ಸಾಗಿಸುತ್ತಿದ್ದ ಮರಕುಟಗ ಪಕ್ಷಿಗೆ ಮಗು ಕಳೆದುಕೊಂಡು ಬರ ಸಿಡಿಲು ಬಡೆದಂತಾಗಿದೆ..
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ