• Home
 • »
 • News
 • »
 • state
 • »
 • Shocking Video: ಚಲಿಸುತ್ತಿರುವ ಬೈಕ್‌ನಲ್ಲೇ ವೃದ್ಧನನ್ನು ಎಳೆದೊಯ್ದ ಸವಾರ! ನೀವು ಬೆಚ್ಚಿ ಬೀಳುವ ವಿಡಿಯೋ ಇಲ್ಲಿದೆ

Shocking Video: ಚಲಿಸುತ್ತಿರುವ ಬೈಕ್‌ನಲ್ಲೇ ವೃದ್ಧನನ್ನು ಎಳೆದೊಯ್ದ ಸವಾರ! ನೀವು ಬೆಚ್ಚಿ ಬೀಳುವ ವಿಡಿಯೋ ಇಲ್ಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೈಕ್ ಸವಾರನೊಬ್ಬ (biker) ಮಾನವೀಯತೆ ಮರೆತಂತೆ ವರ್ತಿಸಿದ್ದಾನೆ. ತನ್ನ ಬೈಕ್ (Bike) ಹಿಡಿದ ವೃದ್ಧನನ್ನು ಸುಮಾರು ಒಂದೆರಡು ಕಿಲೋ ಮೀಟರ್ವರೆಗೂ ಎಳೆದುಕೊಂಡು ಹೋಗಿದ್ದಾನೆ. ರಸ್ತೆ ಮಧ್ಯೆಯೇ ವೃದ್ಧನನ್ನು ಎಳೆದುಕೊಂಡು ಹೋಗಿದ್ದಾನೆ. ಕೊನೆಗೆ ಜನ ಎಲ್ಲಾ ಸೇರಿದ ತಕ್ಷಣ ತನ್ನ ಬೈಕ್ ನಿಲ್ಲಿಸಿದ್ದಾನೆ. ಈ ಘನಘೋರ ದೃಶ್ಯಗಳೀಗ ಫುಲ್ ವೈರಲ್ (Viral Video) ಆಗಿದೆ. ದೃಶ್ಯ ನೋಡಿದ ಜನರೆಲ್ಲ ಬೆಚ್ಚಿ ಬಿದ್ದಿದ್ದಾರೆ.

ಮುಂದೆ ಓದಿ ...
 • News18 Kannada
 • 5-MIN READ
 • Last Updated :
 • Bangalore [Bangalore], India
 • Share this:

ಬೆಂಗಳೂರು: ನಿಜಕ್ಕೂ ಈ ವಿಡಿಯೋದಲ್ಲಿರುವ ದೃಶ್ಯವನ್ನು ನೋಡಿದ್ರೆ ನೀವು ಒಮ್ಮೆ ಬೆಚ್ಚಿ ಬೀಳುತ್ತೀರಿ. ಈ ಪಾಪಿ ಯಾರು, ಅವನದ್ದು ಎಂತಾ ಕಲ್ಲು ಹೃದಯ ಅಂತ ಶಾಪ ಹಾಕ್ತೀರಿ. ಯಾಕೆಂದ್ರೆ ಇಲ್ಲಿ ಬೈಕ್ ಸವಾರನೊಬ್ಬ (biker) ಮಾನವೀಯತೆ ಮರೆತಂತೆ ವರ್ತಿಸಿದ್ದಾನೆ. ತನ್ನ ಬೈಕ್ (Bike) ಹಿಡಿದ ವೃದ್ಧನನ್ನು ಸುಮಾರು ಒಂದೆರಡು ಕಿಲೋ ಮೀಟರ್‌ವರೆಗೂ ಎಳೆದುಕೊಂಡು ಹೋಗಿದ್ದಾನೆ. ರಸ್ತೆ ಮಧ್ಯೆಯೇ ವೃದ್ಧನನ್ನು (Old Man) ಎಳೆದುಕೊಂಡು ಹೋಗಿದ್ದಾನೆ. ಕೊನೆಗೆ ಜನ ಎಲ್ಲಾ ಸೇರಿದ ತಕ್ಷಣ ತನ್ನ ಬೈಕ್ ನಿಲ್ಲಿಸಿದ್ದಾನೆ. ಈ ಘನಘೋರ ದೃಶ್ಯಗಳೀಗ ಫುಲ್ ವೈರಲ್ (Viral Video) ಆಗಿದೆ. ದೃಶ್ಯ ನೋಡಿದ ಜನರೆಲ್ಲ ಬೆಚ್ಚಿ ಬಿದ್ದಿದ್ದಾರೆ.


ಮಾಗಡಿ ರಸ್ತೆಯ ಟೋಲ್ ಗೇಟ್ ಬಳಿ ಅಪಘಾತ


ಬೆಂಗಳೂರಿನ ಮಾಗಡಿ ರಸ್ತೆಯ ಟೋಲ್ ಗೇಟ್ ಬಳಿ ಘಟನೆ ನಡೆದಿದೆ. ಬೈಕ್ ಸವಾರನೊಬ್ಬ ಟಾಟಾ ಸುಮೋಗೆ ಡಿಕ್ಕಿ ಹೊಡೆದಿದ್ದಾನೆ. ಒನ್ ವೇ ನಲ್ಲಿ ಎಂಟ್ರಿ ಕೊಟ್ಟ ಬೈಕ್ ಸವಾರ, ಟಾಟಾ ಸುಮೋಗೆ ಗುದ್ದಿ ಎಸ್ಕೇಪ್ ಆಗೋದಕ್ಕೆ ಪ್ರಯತ್ನಿಸಿದ್ದಾನೆ.ಬೈಕ್ ತಡೆದ ವೃದ್ಧನ ಸಮೇತ ಬೈಕ್ ರೈಡ್


ಟಾಟಾ ಸುಮೋ‌‌ ಡ್ರೈವರ್ ಪ್ರಶ್ನಿಸುತ್ತಿದ್ದಂತೆ ಬೈಕ್ ಹತ್ತಿ ಎಸ್ಕೇಪ್ ಆಗಲು ಬೈಕ್ ಸವಾರ ಮುಂದಾಗಿದ್ದಾನೆ. ಈ ವೇಳೆ ಟಾಟಾ ಸುಮೋ ಚಾಲಕ ಬೈಕ್ ಸವಾರನನ್ನ ಹಿಡಿಯಲು ಮುಂದಾಗಿದ್ದಾನೆ. ಆದರೆ ಬೈಕ್ ನಿಲ್ಲಿಸದ ಬೈಕ್ ಸವಾರ ಮುಂದಕ್ಕೆ ಸಾಗಿದ್ದಾನೆ. ಇತ್ತ ಪಟ್ಟು ಬಿಡದ ಟಾಟಾ ಸುಮೋ ಚಾಲಕ ಬೈಕ್‌ ಅನ್ನು ಹಿಡಿದುಕೊಂಡಿದ್ದಾನೆ. ಆಗ ವೃದ್ಧ ಎನ್ನುವುದನ್ನೂ ನೋಡದೇ ಟಾಟಾ ಸುಮೋದ ವೃದ್ಧ ಚಾಲಕನನ್ನ ಬೈಕ್ ನಲ್ಲೆ ಎಳೆದೊಯ್ದಿದ್ದಾನೆ.


ಇದನ್ನೂ ಓದಿ: Bengaluru: ಶೀಲ ಶಂಕಿಸಿ ಗರ್ಭಿಣಿ ಪತ್ನಿಯ ಕೊಲೆಗೈದು ಪತಿ ಪರಾರಿ!


ವಯಸ್ಸಾದ ಚಾಲಕನನ್ನು ಎಳೆದೊಯ್ದ ಬೈಕ್ ಸವಾರ


ಅಂದಹಾಗೆ ಆರೋಪಿ ಬೈಕ್ ಸವಾರನನ್ನು ಸಾಹೀಲ್ ಎಂದು ಗುರುತಿಸಲಾಗಿದ್ದು, ಗಾಯಗೊಂಡ ವೃದ್ಧನನ್ನು ಮುತ್ತಪ್ಪ ಅಂತ ಗುರುತಿಸಲಾಗಿದೆ. ಬೈಕ್ ಸವಾರ ಸಾಹೀಲ್ ಮುತ್ತಪ್ಪ ಅವರನ್ನು ಮಾಗಡಿ ರಸ್ತೆ ಟೋಲ್ ಗೇಟ್ ಬಳಿಯಿಂದ ಹೊಸಳ್ಳಿ ಮೆಟ್ರೋ ನಿಲ್ದಾಣದವರೆಗೆ ರಸ್ತೆ ಮಧ್ಯೆಯೇ ದರದರನೆ ಎಳೆದೊಯ್ದಿದ್ದಾನೆ.
ಬೈಕ್ ಸವಾರನನ್ನು ಬೆನ್ನಟ್ಟಿ ಹಿಡಿದ ಸಾರ್ವಜನಿಕರು


ವಯಸ್ಸಾದ ಚಾಲಕನನ್ನ ಬೈಕ್ ನಲ್ಲಿ ಎಳೆದೊಯ್ತುತ್ತಿರುವ ವಿಡಿಯೋ ಮಾಡಿದ ಸಾರ್ವಜನಿಕರು, ಬಳಿಕ ವೃದ್ಧನ ಸಹಾಯಕ್ಕೆ ಬಂದಿದ್ದಾರೆ. ಬೈಕ್‌ ಬೆನ್ನಟ್ಟಿ ಬೈಕ್ ಸವಾರನನ್ನು ಹಿಡಿದಿದ್ದಾರೆ. ಬಳಿಕ ಸಾರ್ವಜನಿಕರೆಲ್ಲ ಸೇರಿ ಬೈಕ್ ಸವಾರನಿಗೆ ಹಿಗ್ಗಾ ಮುಗ್ಗ ಥಳಿಸಿದ್ದಾರೆ.


ಬೈಕ್ ಸವಾರ, ವೃದ್ಧ ಚಾಲಕ ಆಸ್ಪತ್ರೆಗೆ ದಾಖಲು


ಇನ್ನು ಬೈಕಿನ ಹಿಂದೆ ನೇತುಬಿದ್ದು ಒಂದುವರೆ ಕಿಮೀ ಎಳೆದೊಯ್ತಲ್ಪಟ್ಟ ಟಾಟಾ ಸುಮೋ ಚಾಲಕ ಮುತ್ತಪ್ಪ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅತ್ತ ವಾಹನ ಸವಾರರಿಂದ ಧರ್ಮದೇಟು ತಿಂದ ಬೈಕ್ ಸವಾರ ಸಾಹೀಲ್ ಕೂಡ ಆಸ್ಪತ್ರೆಗೆ ದಾಖಲಾಗಿದ್ದಾನೆ. ಗೋವಿಂದರಾಜನಗರ ಪೋಲಿಸು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Published by:Annappa Achari
First published: