ಚಿತ್ರದುರ್ಗ(ಡಿ. 05): ಸೋಮವಾರ ಬೆಳಗ್ಗೆ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾದ ಜಿಲ್ಲಾ ಕುಷ್ಠ ರೋಗ ನಿವಾರಣಾಧಿಕಾರಿ ಡಾ.ರೂಪಾ ಪ್ರಕರಣ (Dr Roopa Death Case) ಮಹತ್ವದ ತಿರುವು ಪಡೆದುಕೊಂಡಿದೆ. ಹೌದು ವಿ.ಪಿ. ಎಕ್ಸ್ಟೆನ್ಷನ್ ಬಡಾವಣೆ ನಿವಾಸದಲ್ಲಿ ಕಾಲು ಜಾರಿ ಬಿದ್ದಾಗ ತಲೆಗೆ ಬಲವಾಗಿ ಪೆಟ್ಟು ಬಿದ್ದು, ರಸ್ತಸ್ರಾವವಾಗಿ ಕೊನೆಯುಸಿರೆಳೆದಿದ್ದಾರೆ ಎಂದು ಹೇಳಲಾಗಿತ್ತು. ಆದರೀಗ ಅವರು ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಪೋಸ್ಟ್ ಮಾರ್ಟಂ ವೇಳೆ ಶೂಟ್ ಔಟ್ ವಿಚಾರ ಪತ್ತೆಯಾಗಿದೆ.
ನಡೆದಿದ್ದೇನು?
ಸೋಮವಾರದಂದು ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಕುಷ್ಠ ರೋಗ ನಿಯಂತ್ರಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ರೂಪ ಅವರು ಕಾಲು ಜಾರಿ ಬಿದ್ದು ಮೃಪಟ್ಟಿದ್ದಾರೆನ್ನಲಾಗಿತ್ತು. ಕಾಲು ಜಾರಿ ಬಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದರು.
ಇದನ್ನೂ ಓದಿ: Murugha Mutt: ಮುರುಘಾ ಮಠದಲ್ಲಿ 4 ವರ್ಷದ ಹೆಣ್ಣು ಮಗು ಪತ್ತೆ, ಮೂರನೇ ಆರೋಪಿಗೆ ಜಾಮೀನು
ಈ ನಡುವೆ ಇದು ಸಹಜ ಸಾವು ಹೌದೋ ಅಲ್ಲವೋ ಎಂಬ ಅನುಮಾನಗಳು ಹುಟ್ಟಿಕೊಂಡಿದ್ದವು. ಅವರು ಮನೆಯಲ್ಲಿ ಬಿದ್ದು ತಲೆಗೆ ಏಟಾಗಿ ಮೃತಪಟ್ಟಿರಬಹುದು ಎಂದು ಅವರ ಪತಿ ಡಾ.ರವಿ ಪೊಲೀಸರಿಗೆ ತಿಳಿಸಿದ್ದರು. ಹೀಗಿದ್ದರೂ ಪೊಲೀಸರು ಮಾತ್ರ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನೂ ನೀಡಿರಲಿಲ್ಲ.
ಎಂಟು ತಿಂಗಳ ಹಿಂದಷ್ಟೇ ಡಾ.ರೂಪ ಅವರು ಜಿಲ್ಲಾ ಆಸ್ಪತ್ರೆಗೆ ಬಡ್ತಿ ಪಡೆದು ಬಂದಿದ್ದರು. ಇದಕ್ಕೂ ಮೊದಲು ಕ್ಯಾಸಾಪುರ ಸೇರಿದಂತೆ ಇನ್ನಿತರ ಕಡೆಕರ್ತವ್ಯ ನಿರ್ವಹಿಸಿದ್ದರು. ರೂಪ ಅವರು ಉತ್ತಮ ಸೇವೆಯನ್ನು ಸಲ್ಲಿಸುತ್ತಿದ್ದರು ಎಂಬುವುದು ಇಲ್ಲಿನ ಸಾರ್ವಜನಿಕರ ಮಾತಾಗಿದೆ,
ಇದನ್ನೂ ಓದಿ: Murugha Swamy: ಹೆಣ್ಮಕ್ಕಳು ಸ್ವಾಮಿಗಳ ಬಳಿ ಹೋಗದ ಪರಿಸ್ಥಿತಿ ನಿರ್ಮಾಣ: ಶಾಸಕ ಶಾಮನೂರು ಶಿವಶಂಕರಪ್ಪ
ಪೊಲೀಸರು ಹೇಳಿದ್ದೇನು?
ಡಾ.ರೂಪಾ ಅವರ ಸಾವಿನ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಜಿಲ್ಲಾ ವರಿಷ್ಠಾಧಿಕಾರಿ ಪರುಶುರಾಮ್ ಡಾ. ರೂಪಾ ಅವರ ತಲೆಯ ಮೇಲೆ ಗುಂಡೇಟಿನ ಗಾಯದಿಂದಾಗಿ ಸಾವನ್ನಪ್ಪಿದ್ದಾರೆ. ನಂತರ ಬೆಡ್ ರೂಮ್ ಟೇಬಲ್ ನಲ್ಲಿ ಡೆತ್ ನೋಟ್ ಪತ್ತೆಯಾಗಿದೆ. ನಾವು FSL ಬೆಂಗಳೂರಿನಿಂದ ಬ್ಯಾಲಿಸ್ಟಿಕ್ ತಂಡ ಬರಲಿದೆ. ದೇಹವನ್ನು ಎಫ್ಎಸ್ಎಲ್ ತಂಡ ಪರೀಕ್ಷಿಸಿದ ನಂತರ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಮೃತಳ ಸೋದರ ದೂರು ದಾಖಲಿಸುವ ಸಾಧ್ಯತೆ ಇದೆ. ಪತ್ತೆಯಾಗಿರುವ ಡೆತ್ ನೋಟ್ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ