ಜಾರಕಿಹೊಳಿಗೆ ಡಿಸಿಎಂ, ಉಳಿದ ಕೈ ಶಾಸಕರಿಗೆ 10 ಕೋಟಿ ಆಫರ್ ನೀಡಿದೆಯಾ ಬಿಜೆಪಿ?

Precilla Olivia Dias
Updated:September 6, 2018, 2:57 PM IST
ಜಾರಕಿಹೊಳಿಗೆ ಡಿಸಿಎಂ, ಉಳಿದ ಕೈ ಶಾಸಕರಿಗೆ 10 ಕೋಟಿ ಆಫರ್ ನೀಡಿದೆಯಾ ಬಿಜೆಪಿ?
Precilla Olivia Dias
Updated: September 6, 2018, 2:57 PM IST
ಶ್ರೀನಿವಾಸ್​ ಹಳಕಟ್ಟಿ, ನ್ಯೂಸ್​ 18 ಕನ್ನಡ

ಬೆಂಗಳೂರು(ಸೆ.06): ರಾಜ್ಯ ಕಾಂಗ್ರೆಸ್​ನಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬ ವಿಚಾರ ಕಳೆದೆರಡು ದಿನಗಳಿಂದ ಬಹಿರಂಗವಾಗಿದೆ. ಕಾಂಗ್ರೆಸ್​ ಸಭೆಯಲ್ಲಿ ರಮೆಶ್​ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವೇಳೆ ಜಾರಕಿಹೊಳಿ ಹಾಗೂ ಹೆಬ್ಬಾಳ್ಕರ್​ ನಡುವಿನ ಜಗಳನ್ನು ಇತ್ಯರ್ಥಗೊಳಿಸಲು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್​ ಉಸ್ತುವಾರಿ ಕೆ. ಸಿ ವೇಣುಗೋಪಾಲ್​ ಹರಸಾಹಸ ಪಟ್ಟಿದ್ದಾರೆ.

ಇನ್ನು ಇವರಿಬ್ಬರ ನಡುವಿನ ಜಗಳ ಇನ್ನೇನು ಶಾಂತವಾಗುತ್ತದೆ ಎನ್ನುವಷ್ಟರಲ್ಲಿ, ನಾಳೆ ನಡೆಯಲಿರುವ ಪಿಎಲ್​ಡಿ ಬ್ಯಾಂಕ್​ ಚುನಾವಣೆಗೆ ಸಂಬಂಧಿಸಿದಂತೆ ಭಿನ್ನಮತ ಸ್ಫೋಟಗೊಂಡಿದೆ. ಒಂದೆಡೆ ಲಕ್ಷ್ಮೀ ಹೆಬ್ಬಾಳ್ಕರ್​ ಬೆನ್ನಿಗೆ ಡಿ. ಕೆ ಶಿವಕುಮಾರ್​ ನಿಂತಿದ್ದಾರೆ ಎಂಬ ಮಾತುಗಳು ಕೇಳಿ ಬಂದರೆ ಇತ್ತ ಜಾರಕಿಹೊಳಿ ಬ್ರದರ್ಸ್​ಗೆ ಸಂಬಂಧಿಸಿದಂತೆ ಶಾಕಿಂಗ್​ ಮಾಹಿತಿ ಕೆಳಿ ಬರಲಾರಂಭಿಸಿದೆ.

ಹೌದು ಲಕ್ಷ್ಮೀ ಹೆಬ್ಬಾಳ್ಕರ್ ಗೆ ಬ್ರೇಕ್ ಇಲ್ಲವಾದಲ್ಲಿ ಉಗ್ರ ನಿರ್ಣಯ ತೆಗೆದುಕೊಳ್ಳುತ್ತೇನೆಂದಿದ್ದಾರೆ. ಈ ಮೂಲಕ ಪಕ್ಷ ತೊರೆಯುತ್ತೇನೆಂದು ಪರೋಕ್ಷವಾಗಿ ಬೆದರಿಕೆಯೊಡ್ಡಿದ್ದಾರೆ. ಆದರೀಗ ಅವರ ಈ ಉಗ್ರ ನಿರ್ಧಾರದ ಬೆದರಿಕೆಯ ಹಿಂದೆ ಬಿಜೆಪಿಯ ಬಿಗ್ ಆಫರ್ ಇದೆ ಎನ್ನಲಾಗಿದೆ. ಜಾರಕಿಹೊಳಿಗೆ ಬಿಜೆಪಿ ಡಿಸಿಎಂ ಆಗುವ ಆಫರ್​ ನೀಡುವುದರೊಂದಿಗೆ, ಇವರೊಂದಿಗೆ ಕಮಲ ಪಾಳಯ ಸೇರುವ ಎಲ್ಲಾ ಕೈ ಶಾಸಕರಿಗೆ ತಲಾ ೧೦ ಕೋಟಿ ಆಫರ್ ನೀಡಿದ್ದಾರೆನ್ನಲಾಗಿದೆ.

ಇನ್ನು ರಮೇಶ್​ ಜಾರಕಿಹೊಳಿಗೆ ಬೆಳಗಾವಿಯ ಆರು ಕೈ ಶಾಸಕರು ಬೆಂಬಲ ಸೂಚಿಸಿದ್ದು, ಉಳಿದ ಕ್ಷೇತ್ರಗಳ ಕೈ ಶಾಸಕರೂ ಸೇರಿ ಒಟ್ಟು 13ಕ್ಕೂ ಹೆಚ್ಚು ಶಾಸಕರು ಅವರ ಪರವಾಗಿದ್ದಾರೆನ್ನಲಾಗಿದೆ. ಸದ್ಯ ಜಾರಕಿಹೊಳಿಗೆ ಬಿಜೆಪಿ ಕೊಟ್ಟ ಈ ಆಫರ್ ಕೇಳಿ ಕೈ ಪಡೆ ದಂಗಾಗಿದೆ ಎನ್ನಬಹುದು.
First published:September 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626