Social Service: ಹಸಿದವರ ಪಾಲಿಗೆ ಇವರೇ ಅನ್ನದಾತೆ! ಬೀದರ್‌ನ ವೈದ್ಯೆಯಿಂದ ಹೀಗೊಂದು ಸಮಾಜಸೇವೆ

ಪ್ರತಿದಿನ ಕೆಸರಿ ಬಾತ್‌, ಉಪ್ಪಿಟ್ಟು, ಶಿರಾ, ರೊಟ್ಟಿ, ಅನ್ನ, ಆಲೂಬಾತ್‌, ಜೀರಾ ರೈಸ್‌, ಶೇಂಗಾ ಚಟ್ನಿ ಹೀಗೆ ಪ್ರತಿನಿತ್ಯವೂ ಒಂದೊಂದು ಬಗೆಯ ಪೋಷಕಾಂಶಭರಿತ ಊಟ ತಯಾರಿಸಿ ಬಸ್‌, ರೈಲ್ವೆ ನಿಲ್ದಾಣ, ಸರ್ಕಾರಿ ಆಸ್ಪತ್ರೆ ಬಳಿ ಹಾಗೂ ರಸ್ತೆಗಳಲ್ಲಿರುವ ಬಡ ಹಾಗೂ ನಿರ್ಗತಿಕರ ಹಸಿದ ಹೊಟ್ಟೆಗಳಿಗೆ ನೀಡುತ್ತಾರೆ.

ನಿರ್ಗತಿಕರಿಗೆ ಆಹಾರ ನೀಡುತ್ತಿರುವ ವೈದ್ಯೆ

ನಿರ್ಗತಿಕರಿಗೆ ಆಹಾರ ನೀಡುತ್ತಿರುವ ವೈದ್ಯೆ

 • Share this:
  ಬೀದರ್‌: ವೃತ್ತಿಯಿಂದ ವೈದ್ಯರಾಗಿರುವ (Doctor) ಅವರು, ವೃತ್ತಿ ಜವಾಬ್ದಾರಿಯೊಂದಿಗೆ ಹಸಿದವರ (Hungry) ಹೊಟ್ಟೆ ತುಂಬಿಸುವ ಕಾಯಕವನ್ನ ಸಹ ಮಾಡುತ್ತಾರೆ. ನಿತ್ಯ ನೂರಾರು ಹಸಿದ ಹೊಟ್ಟೆಗಳನ್ನ ತುಂಬಿಸುವುದಕ್ಕಾಗಿ ತಮ್ಮ ಆದಾಯದ (Income) ಅರ್ಧ ಭಾಗವನ್ನೇ ಅವರು ಮೀಸಲಿಟ್ಟಿದ್ದಾರೆ. ವಿವಿಧ ಬಗೆಯ ಊಟ (Meals) ತಯಾರಿಸಿ ವಾಹನದ ಮೂಲಕ ಹಸಿದವರಿಗೆ ಅನ್ನ ನೀಡುವ ಅನ್ನಪೂರ್ಣೆಯಾಗಿದ್ದಾರೆ. ಹೀಗಾಗಿ ಅವರನ್ನ ಆ ಭಾಗದ ಜನರು ಸಾಕ್ಷಾತ್ ದೇವರೆಂದು (God) ಪರಿಭಾವಿಸುತ್ತಾರೆ. ನಿತ್ಯ ಹತ್ತಾರು ರೋಗಿಗಳಿಗೆ (Patients) ಬದುಕಿನ ಭರವಸೆ ಮೂಡಿಸುವುದರೊಂದಿಗೆ, ಹಸಿದ ಹೊಟ್ಟೆ ತುಂಬಿಸುತ್ತಿರುವ ಅವರು ಯಾರೂ ಅನ್ನೋ ಕುತೂಹಲ ಕೂಡಾ ನಿಮ್ಮಲ್ಲೂ ಮೂಡಿದೆಯಾ? ಹಾಗಾದರೆ ಈ ಸ್ಟೋರಿ ಓದಿ…

  ಹಸಿದ ಬಡ ನಿರ್ಗತಿಕರ ಹೊಟ್ಟೆ ತುಂಬಿಸುವ ವೈದ್ಯೆ

  ಆದಾಯದ ತನ್ನ ಅರ್ದ ಬಾಗವನ್ನು ಹಸಿದವರಿಗೆ ಮೀಸಲಿಟ್ಟು ಊಟದ ವ್ಯವಸ್ಥೆ ಮಾಡುವ ವೈದ್ಯೆ. ಕೇಸರಿ ಬಾತ್, ಉಪ್ಪಿಟ್ಟು, ಸಿರಾ, ರೊಟ್ಟಿ, ಅನ್ನ, ಆಲೂಬಾತ್, ಜಿರಾ ರೈಸ್‌, ಶೆಂಗಾ ಚಟ್ನಿ.. ಹೀಗೆ ತರಹೇವಾರಿ ಅಡುಗೆ ಮಾಡಿ, ಹಸಿದ ಬಡವರಿಗೆ, ನಿರ್ಗತಿಕರಿಗೆ ಉಣ ಬಡಿಸುವ ವೈದ್ಯೆ. ಅನ್ನ ದಾಸೋಹ ಎಂಬ ಕೋಣೆಯಲ್ಲಿ ನಿರ್ಗತಿಕರಿಗೆ ನಿರಂತವಾಗಿ ನಡೆಯುವ ಅಡುಗೆ ದಾಸೋಹದ ಕಾರ್ಯ.

  ನಿರ್ಗತಿಕರಿಗೆ ವೈದ್ಯೆಯಿಂದ ಆಹಾರ


  ವೈದ್ಯೆಯ ಆಗಮನಕ್ಕೆ ಕಾಯುತ್ತಿರುವ ನಿರ್ಗತಿಕರು

  ಹೌದು, ಆ ಬಡಪಾಯಿಗಳು ಆ ವೈದ್ಯೆ ಬರುವುದನ್ನೆ ನೋಡುತ್ತಾರೆ. ಅವರು ಯಾಕೆಂದ್ರೆ ಅವರ ಹಸಿವನ್ನು ನೀಗಿಸುವ ಮಹಾನ್ ತಾಯಿಯಾಗಿದ್ದಾರೆ. ಹಲವಾರು ನಿರಾಶ್ರಿತರು ಅನ್ನ ಇಲ್ಲದೆ ಪರಿತಪ್ಪಿಸುತ್ತಿರುತ್ತಾರೆ ಹೀಗಾಗಿ ಇಲ್ಲೊಬ್ಬ ಮಹಿಳಾ ವೈದ್ಯೆಯೊಬ್ಬರು ಬಡಪಾಯಿಗಳು ಕೂಡಾ ತಮ್ಮ ಹಾಗೆ  ಗುಣಮಟ್ಟದ ಆಹಾರವನ್ನು ಸೇವಿಸಬೇಕೆಂದು ಅನ್ನ ದಾಸೋಹದ ಕಾರ್ಯಕ್ಕೆ ಮುಂದಾಗಿದ್ದಾರೆ.

  ಇದನ್ನೂ ಓದಿ: Hindu-Muslim: ಮುಸ್ಲಿಂ ದಂಪತಿಯಿಂದ ಹಿಂದೂ ಸ್ವಾಮೀಜಿ ಪಾದಪೂಜೆ! ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಯ್ತು ಗದಗ

  80ರಿಂದ 90 ಮಂದಿಗೆ ಊಟ ವಿತರಣೆ

  ನಿರಾಶ್ರಿತರು, ನಿರ್ಗತಿಕರು, ಬಡ ಜನರು ತುತ್ತು ಅನ್ನ, ಗುಟುಕು ನೀರು ಸಿಗದೆ ಪರಿತಪಿಸುತ್ತಿರುವ ಜನ್ರಿಗೆ ಅನ್ನ ದಾನೇಶ್ವರಿ ಯಾಗಿದ್ದಾರೆ ಈ ವೈದ್ಯೆ ಬೀದರ್‌ ನಗರದ ಚಿಕ್ಕಪೇಟ್‌ ಕಾಲೋನಿಯಲ್ಲಿರುವ  ಡಾ. ಸ್ವಾತಿ ಯೋಗೇಶ ಕಾಮಶೆಟ್ಟಿ ಕುಟುಂಬ. ಪ್ರತಿದಿನ 70 ರಿಂದ 80 ಜನರಿಗೆ ಬೆಳಗ್ಗೆ ಊಟೋಪಚಾರ ನೀಡಿ ಸಾಮಾಜಿಕ ಕಳಕಳಿ ಮೆರೆಯುತ್ತಿದ್ದಾರೆ. ವೃತ್ತಿಯಲ್ಲಿ ವೈದ್ಯೆಯಾಗಿರುವ ಇವರು ಕಳೆದ ನಾಲ್ಕು ತಿಂಗಳುಗಳಿಂದ ಪ್ರತಿದಿನ ಅತ್ಯಂತ ಗುಣಮಟ್ಟದ ಆಹಾರವನ್ನು ನಿರ್ಗತಿಕರಿಗೆ ನೀಡಿ ಸೇವೆಯನ್ನು ಮಾಡುತ್ತಿದ್ದಾರೆ.

  ಪೋಷಕಾಂಶವುಳ್ಳು ಊಟ ವಿತರಣೆ


  ಪೋಷಕಾಂಶವುಳ್ಳ ಆಹಾರ ವಿತರಣೆ

  ಪ್ರತಿದಿನ ಕೆಸರಿ ಬಾತ್‌, ಉಪ್ಪಿಟ್ಟು, ಶಿರಾ, ರೊಟ್ಟಿ, ಅನ್ನ, ಆಲೂಬಾತ್‌, ಜೀರಾ ರೈಸ್‌, ಶೇಂಗಾ ಚಟ್ನಿ ಹೀಗೆ ಪ್ರತಿನಿತ್ಯವೂ ಒಂದೊಂದು ಬಗೆಯ ಪೋಷಕಾಂಶಭರಿತ ಊಟ ತಯಾರಿಸಿ ಬಸ್‌, ರೈಲ್ವೆ ನಿಲ್ದಾಣ, ಸರ್ಕಾರಿ ಆಸ್ಪತ್ರೆ ಬಳಿ ಹಾಗೂ ರಸ್ತೆಗಳಲ್ಲಿರುವ ಬಡ ಹಾಗೂ ನಿರ್ಗತಿಕರ ಹಸಿದ ಹೊಟ್ಟೆಗಳಿಗೆ ನೀಡುತ್ತಾರೆ. ಇವರ ಪಾಲಿಗೆ ನವಜೀವನ ಆಸ್ಪತ್ರೆಯ ವೈದ್ಯೆ ಸ್ವಾತಿ ಕಾಮಶೆಟ್ಟಿ ಅನ್ನಪೂರ್ಣೆಯಾಗಿದ್ದಾರೆ. ಸುತ್ತಲಿನ ಪ್ರದೇಶದ ವಲಸೆ ಬಂದ  ಬಡಪಾಯಿಗಳು ನಿರ್ಗತಿಕರು ಹಾಗೂ, ವೃದ್ಧರು ಇವರಿಂದ ಅನುಕೂಲ ಪಡೆದಿದ್ದಾರೆ.

  ಪ್ರತಿ ದಿನ ಊಟ ವಿತರಣೆ


  ತಿಂಗಳಿಗೆ 70 ಸಾವಿರದಷ್ಟು ವೆಚ್ಚ

  ಇನ್ನು ಒಂದು ತಿಂಗಳಿಗೆ 70 ಸಾವಿರ ರೂಪಾಯಿ ಹಣ ಖರ್ಚು ಮಾಡಿ ಅನ್ನ ದಾಸೋಹದ ಕಾರ್ಯ ಮಾಡುತ್ತಿದ್ದಾರೆ. ಈ ಸಮಾಜಸೇವೆ ಬಸವ ಜಯಂತಿಯಿಂದ ಆರಂಭಗೊಂಡಿದೆ.  ಈ ಪವಿತ್ರ ಕಾರ್ಯಕ್ಕಾಗಿಯೇ ಚಿಕ್ಕಪೇಟ್‌ನ ಶಕುಂತಲಾ, ಸಂಗೀತಾ ಹಾಗೂ ಉಮಾಶ್ರೀ ಹಾಗೂ ಓರ್ವ ಯುವಕ ಅನ್ನದಾಸೋಹ ಕೈಂಕರ್ಯಕ್ಕೆ ಸಾಥ್‌ ನೀಡುತ್ತಿದ್ದು, ಯಶಸ್ವಿ ದಾಸೋಹ ಎಂಬ ಕೋಣೆಯಲ್ಲಿ ಪ್ರತಿದಿನ 70 ರಿಂದ 80 ಜನರಿಗೆ ಊಟವನ್ನು ತಯಾರಿಸಿ  ಒಂದೊತ್ತಿನ ಅನ್ನ ಪೂರೈಸಲಾಗುತ್ತಿದೆ.

  ವೈದ್ಯೆಯಿಂದ ಸಮಾಜಸೇವೆ


  4 ತಿಂಗಳಿನಿಂದ ಅನ್ನ ದಾಸೋಹ

  ಅಡುಗೆಯನ್ನು ತಯಾರಿಸಲು ಡಿಸೆಬಲ್‌ ವೇಸ್ಟ್‌ ಹಾಗೂ ಇನ್ನಿತರ ಉಳಿದ ವಸ್ತುಗಳಿಂದ ಬಯೋಗ್ಯಾಸ್‌ ತಯಾರಿಸಿ ಅದರಿಂದಲೇ ಅಡುಗೆಯನ್ನು ಮಾಡಲಾಗುತ್ತದೆ.  ಇವರ ವಾಹನ ಚಾಲಕರೇ ಹೋಗಿ ಊಟವನ್ನು ನೀಡಿ ಬರುತ್ತಾರೆ. ಹೀಗೆ  ಕಳೆದ ನಾಲ್ಕು ತಿಂಗಳುಗಳಿಂದ ನಿರ್ಗತಿಕರಿಗೆ ಅನ್ನ ದಾಸೋ ನಡೆಯುತ್ತಿದೆ.

  ನಮ್ಮ ವೈದ್ಯೆರು ಅನ್ನದಾಸೋಹ ಮಾಡುತ್ತಿದ್ದಾರೆ. ಅದನ್ನು ನಾವು ವಿತರಣೆಯನ್ನು ಮಾಡುತ್ತವೆ ಅದರಿಂದ ನಮಗೂ ಮನಸ್ಸಿಗೆ ಸಂತೋಷವಾಗುತ್ತದೆ. ಅದೇಷ್ಟೊ ಜನ್ರು ಹಸಿವುನಿಂದ ಬಳಲುತ್ತಿರುತ್ತಾರೆ ಅಂತಹವರಿಗೆ ನಾವು ಅನ್ನವನ್ನು ನೀಡಿ ಬರುತ್ತವೆ ಇದರಿಂದ ನಮಗೂ ಬಹಳಷ್ಟು ಸಂತೋಷವಾಗುತ್ತದೆ ಎನ್ನುತ್ತಾರೆ ಪ್ರವೀಣ್.

  ಇದನ್ನೂ ಓದಿ: Ganesh Chaturthi 2022: ಧರ್ಮ ಸಂಘರ್ಷದ ನಡುವೆ ಭಾವೈಕ್ಯತೆ ಸಂದೇಶ; ಮುಸ್ಲಿಂ ಕುಟುಂಬದಿಂದ ಗಣೇಶ ಚತುರ್ಥಿ ಆಚರಣೆ!

  ಅದೆಷ್ಟೋ ಜನ್ರು ಒಂದು ಹೋತ್ತಿನ ಊಟಕ್ಕಾಗಿ ಅಲೆದಾಡುತ್ತಿರುತ್ತಾರೆ. ನಮ್ಮಂತೆಯೇ ಅವರು, ಹೀಗಾಗಿ ಅವರಿಗೆ ನಾವು ಸೇವಿಸುವ ಗುಣಮಟ್ಟದ ಆಹಾರದ ಹಾಗೆ ಅವರು ಕೂಡಾ ಸೇವಿಸಬೇಕು. ಅಂತಹವರಿಗೆ ಒಂದು ಹೊತ್ತಿನ ಊಟವನ್ನು ಹಾಕಿದ್ರೆ ಅವರು ನೆಮ್ಮದಿಯಾಗಿರುತ್ತಾರೆ. ಹೀಗಾಗಿ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಆ ಮಹಾನ್‌ ತಾಯಿ ನಮಗೆ ಊಟ ಕೊಟ್ಟು ನಮ್ಮ ಹಸಿವನ್ನು ನೀಗಿಸುತ್ತಿದ್ದಾರೆ. ನಿಜಕ್ಕೂ ಆ ಮಹಾನ್ ತಾಯಿ ನಮ್ಮ ಪಾಲಿಗೆ  ದೇವರು ಅಂತಾರೆ ಈ ಬಡಪಾಯಿಗಳು.

  (ವರದಿ: ಚಮನ್‌ ಹೊಸಮನಿ, ನ್ಯೂಸ್‌ 18 ಕನ್ನಡ, ಬೀದರ್)
  Published by:Annappa Achari
  First published: