• Home
  • »
  • News
  • »
  • state
  • »
  • Pulwama Attack: ಪುಲ್ವಾಮ ದಾಳಿಯಲ್ಲಿ ಭಾರತೀಯ ಸೈನಿಕರ ಸಾವಿಗೆ ಸಂಭ್ರಮ, ಬೆಂಗಳೂರು ವಿದ್ಯಾರ್ಥಿಗೆ 5 ವರ್ಷ ಜೈಲು!

Pulwama Attack: ಪುಲ್ವಾಮ ದಾಳಿಯಲ್ಲಿ ಭಾರತೀಯ ಸೈನಿಕರ ಸಾವಿಗೆ ಸಂಭ್ರಮ, ಬೆಂಗಳೂರು ವಿದ್ಯಾರ್ಥಿಗೆ 5 ವರ್ಷ ಜೈಲು!

2019ರ ಪುಲ್ವಾಮಾ ದಾಳಿ

2019ರ ಪುಲ್ವಾಮಾ ದಾಳಿ

ಪುಲ್ವಾಮ ದಾಳಿ ಬಗ್ಗೆ ತಿಳಿದು ಭಾರತವಷ್ಟೇ ಅಲ್ಲ, ಜಗತ್ತಿನ ಎಲ್ಲಾ ದೇಶಗಳು ಬೆಚ್ಚಿ ಬಿದ್ದಿದ್ದವು. ಹುತಾತ್ಮ ಸೈನಿಕರ ಸಾವಿಗೆ ಮರುಗಿದ್ದವು. ಆದರೆ ಬೆಂಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಮಾತ್ರ ಸೈನಿಕರ ಸಾವಿಗೆ ಸಂಭ್ರಮಿಸಿದ್ದ!

  • News18 Kannada
  • Last Updated :
  • Bangalore [Bangalore], India
  • Share this:

ಬೆಂಗಳೂರು: ಫೆಬ್ರವರಿ 14, 2019 ರಂದು, ಜಮ್ಮು - ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ (Jammu Srinagara Highway), ಭದ್ರತಾ ಸಿಬ್ಬಂದಿಯನ್ನು ಸಾಗಿಸುವ ವಾಹನಕ್ಕೆ, ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ (Pulwama in Jammu Kashmir) ಜಿಲ್ಲೆಯ ಲೆಥ್ಪೊರದಲ್ಲಿ (ಅವಾಂತಿಪೋರಾ ಬಳಿ) ಆತ್ಮಹತ್ಯಾ ಬಾಂಬರ್ (suicide bomber) ವಾಹನದಿಂದ ದಾಳಿ ಮಾಡಲಾಯಿತು. ಈ ದಾಳಿಯಿಂದಾಗಿ ಕೇಂದ್ರ ಮೀಸಲು ಪೊಲೀಸ್ ಪಡೆಯ 40 ಮಂದಿ ಯೋಧರು ಹುತಾತ್ಮರಾಗಿದ್ದರು. ದಾಳಿಯ ಜವಾಬ್ದಾರಿಯನ್ನು ಪಾಕಿಸ್ತಾನ (Pakistan) ಮೂಲದ ಇಸ್ಲಾಮ್ ಉಗ್ರಗಾಮಿ ಗುಂಪು ಜೈಷ್–ಎ–ಮೊಹಮದ್ (Jaish-e-Mohammed) ಹೊತ್ತುಕೊಂಡಿತ್ತು. ಬರೀ ಭಾರತವಷ್ಟೇ ಅಲ್ಲ, ಜಗತ್ತಿನ ಎಲ್ಲಾ ದೇಶಗಳು ಈ ದಾಳಿ ಬಗ್ಗೆ ತಿಳಿದು ಬೆಚ್ಚಿ ಬಿದ್ದಿದ್ದವು. ಹುತಾತ್ಮ ಸೈನಿಕರ ಸಾವಿಗೆ ಮರುಗಿದ್ದವು. ಆದರೆ ಬೆಂಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ (Bengaluru Engineering Student) ಮಾತ್ರ ಸೈನಿಕರ ಸಾವಿಗೆ ಸಂಭ್ರಮಿಸಿದ್ದ. ಇದೀಗ ಬೆಂಗಳೂರು ನ್ಯಾಯಾಲಯವು ಆತನಿಗೆ ಐದು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.


ಸೈನಿಕರ ಸಾವಿನ ಬಗ್ಗೆ ಅವಹೇಳನಕಾರಿ ಬರಹ


2019ರಲ್ಲಿ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ನಡೆದಿದ್ದ ಭಾರತೀಯ ಸೈನಿಕರ ಸಾವಿನ ಬಗ್ಗೆ ಅವಹೇಳನಕಾರಿ ಫೇಸ್‌ಬುಕ್ ಪೋಸ್ಟ್‌ ಹಾಕಿದ್ದ ಬೆಂಗಳೂರಿನ 22 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗೆ ಬೆಂಗಳೂರಿನ ವಿಶೇಷ ನ್ಯಾಯಾಲಯವು ಐದು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ 25 ಸಾವಿರ ರೂಪಾಯಿ ದಂಡ ಕೂಡಾ ವಿಧಿಸಲಾಗಿದೆ.


ಸೈನಿಕರ ಸಾವಿಗೆ ಸಂಭ್ರಮಿಸಿದ್ದ ವಿದ್ಯಾರ್ಥಿ ಯಾರು?


ಮೂರನೇ ಸೆಮಿಸ್ಟರ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಫೈಜ್ ರಶೀದ್ ಎಂಬಾತನೇ ಶಿಕ್ಷೆಗೆ ಒಳಗಾದವ. ಜೈಲು ಶಿಕ್ಷೆಗೆ ಗುರಿಯಾದ ಅಪರಾಧಿ ಹೆಸರು ಫೈಜ್ ರಶೀದ್. ಫೆಬ್ರವರಿ 14, 2019 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ದಾಳಿಯಲ್ಲಿ 40 ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್‌ಪಿಎಫ್) ಯೋಧರು ಸಾವನ್ನಪ್ಪಿದ್ದ ಬಗ್ಗೆ ಫೇಸ್‌ಬುಕ್ ಪೋಸ್ಟ್‌ ಹಾಕಿ. ಅವಹೇಳನ ಮಾಡಿದ್ದ ಎಂಬ ಆರೋಪದ ಮೇಲೆ ಬಂಧಿಸಲಾಗಿತ್ತು.


ಇದನ್ನೂ ಓದಿ: Morbi Bridge: ಮೊರ್ಬಿ ದುರಂತ ಕಲಿಸಿದ ಪಾಠ: ಅಟಲ್ ಸೇತುವೆ ಪ್ರವೇಶಕ್ಕೆ ಮಿತಿ ಹೇರಿದ ಆಡಳಿತ


ವಿದ್ಯಾರ್ಥಿ ಮೇಲಿನ ಆರೋಪ ಸಾಬೀತು


ಪುಲ್ವಾಮಾ ದಾಳಿ ನಡೆದ ಬಳಿಕ ಅಪರಾಧಿ ರಶೀದ್ ಒಟ್ಟು 23 ಕಾಮೆಂಟ್‌ಗಳನ್ನು ಮಾಡಿದ್ದ. ಭಾರತೀಯ ಸೇನೆಯ ಅವಹೇಳನ ಮಾಡುವ ಜೊತೆಯಲ್ಲೇ ಉಗ್ರ ದಾಳಿಯನ್ನು ಸಂಭ್ರಮಿಸಿದ್ದ. ಫೇಸ್‌ಬುಕ್‌ನಲ್ಲಿ ಆತ ಮಾಡಿದ್ದ ಅವಹೇಳನಕಾರಿ ಕಾಮೆಂಟ್‌ಗಳು ದೃಢಪಟ್ಟಿದ್ದವು. ಆತನ ಫೇಸ್‌ಬುಕ್ ಖಾತೆಯಲ್ಲಿ ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಮೇಲೆ ನಡೆದ ಉಗ್ರರ ಆತ್ಮಾಹುತಿ ದಾಳಿಯನ್ನು ಬೆಂಬಲಿಸುವಂತ ಪೋಸ್ಟ್‌ಗಳು ಇರೋದು ದೃಢಪಟ್ಟಿತ್ತು. ಕೋಮು ದ್ವೇಷ ಭಾವನೆ ಹರಡುವುದರ ಜೊತೆಯಲ್ಲೇ ಸಾರ್ವಜನಿಕ ಶಾಂತಿ ಕದಡುವ ಆರೋಪ ಕೂಡಾ ದೃಢಪಟ್ಟಿತ್ತು.


ಯಾವ ಯಾವ ಸೆಕ್ಷನ್‌ಗಳ ಅಡಿ ಶಿಕ್ಷೆ?


ಐಪಿಸಿ ಸೆಕ್ಷನ್ 153ರ ಅಡಿ ಧಾರ್ಮಿಕ ಭಾವನೆ ಕೆರಳಿಸಿ ದ್ವೇಷ ಹರಡುವ ಆರೋಪವನ್ನು ವಿದ್ಯಾರ್ಥಿ ಮೇಲೆ ಹೊರಿಸಲಾಗಿದೆ. ಅಷ್ಟೇ ಅಲ್ಲ, ಸೆಕ್ಷನ್ 201ರ ಅಡಿ ಸಾಕ್ಷ್ಯನಾಶ ಆರೋಪವನ್ನೂ ಹೊರಿಸಲಾಗಿದೆ. ಇದೇ ವೇಳೆ, ಸೆಕ್ಷನ್ 124ಎ ಪ್ರಕಾರ ದೇಶದ್ರೋಹ ಆರೋಪವನ್ನು ಹೊರಿಸಲಾಗಿತ್ತಾದರೂ ಈ ಸೆಕ್ಷನ್‌ ಅನ್ನು ವಿಚಾರಣೆ ವೇಳೆ ಪರಿಗಣಿಸಿಲ್ಲ. ಸುಪ್ರೀಂ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಈ ಸೆಕ್ಷನ್ ಹೇರಿಕೆಯನ್ನು ತಡೆ ಹಿಡಿಯಲಾಗಿದೆ.


ಇದನ್ನೂ ಓದಿ: Crime News: ಅಮ್ಮ ಮತ್ತು ಆಕೆಯ ಪ್ರಿಯಕರ ಸೇರಿ ಅಪ್ಪನನ್ನು ಕೊಂದರು, 10 ವರ್ಷದ ಮಗನಿಂದ ಬಯಲಾಯ್ತು ಕೊಲೆ ರಹಸ್ಯ!


ಪುಲ್ವಾಮ ದಾಳಿಯಲ್ಲಿ ಹುತಾತ್ಮರಾಗಿದ್ದ 40 ಯೋಧರು


ಪುಲ್ವಾಮಾ ದಾಳಿ ನಡೆದ ವೇಳೆ 2019ರಲ್ಲಿ 40 ಸಿಆರ್‌ಪಿಎಫ್‌ ಯೋಧರು ಹುತಾತ್ಮರಾಗಿದ್ದರು. ಪಾಕಿಸ್ತಾನ ಮೂಲಕ ಜೈಶ್ ಇ ಮೊಹಮ್ಮದ್ ಸಂಘಟನೆ ಈ ಕೃತ್ಯದ ಹೊಣೆ ಹೊತ್ತಿತ್ತು.

Published by:Annappa Achari
First published: