• Home
  • »
  • News
  • »
  • state
  • »
  • PSI Recruitment Scam: ವಿಧಾನಸೌಧ ವ್ಯಾಪಾರ ಸೌಧವಾಗಿದೆ; ಸರ್ಕಾರಕ್ಕೆ ಪ್ರಿಯಾಂಕ್ ಖರ್ಗೆ ಪ್ರಶ್ನೆಗಳ ಸುರಿಮಳೆ

PSI Recruitment Scam: ವಿಧಾನಸೌಧ ವ್ಯಾಪಾರ ಸೌಧವಾಗಿದೆ; ಸರ್ಕಾರಕ್ಕೆ ಪ್ರಿಯಾಂಕ್ ಖರ್ಗೆ ಪ್ರಶ್ನೆಗಳ ಸುರಿಮಳೆ

ಶಾಸಕ ಪ್ರಿಯಾಂಕ್ ಖರ್ಗೆ

ಶಾಸಕ ಪ್ರಿಯಾಂಕ್ ಖರ್ಗೆ

ಕಲಬುರಗಿಯಲ್ಲಿ 11 ಸೆಂಟರ್ ಗಳಿವೆ ರಾಜ್ಯದಲ್ಲಿ ಎಷ್ಟು ಸೆಂಟರ್ ಗಳಿವೆ. ಆದ್ರೆ ಈ ತನಿಖೆಯನ್ನು ಕೇವಲ ಕಲಬುರಗಿಗೆ ಮುಗಿಸಲು ಹೊರಟಿದ್ದಾರೆ. ಬೆಂಗಳೂರಿನ ತನಕ ಇವರು ಬಂದೇ ಇಲ್ಲ. ಇಲ್ಲಿ ವಿಧಾನಸೌಧ ವ್ಯಾಪಾರ ಸೌಧವಾಗಿದೆ ಎಂದು ಪ್ರಿಯಾಂಕ್​ ಖರ್ಗೆ ಕಿಡಿಕಾರಿದ್ರು.

  • Share this:

ಬೆಂಗಳೂರು (ಜು.13): PSI ನೇಮಕಾತಿ ಹಗರಣಕ್ಕೆ (PSI Recruitment Scam)  ಸಂಬಂಧಿಸಿದಂತೆ ಬಗೆದಷ್ಟು ಹೊಸ ಹೊಸ ಸ್ಫೋಟಕ ಮಾಹಿತಿಗಳು ಹೊರ ಬರ್ತಾನೆ ಇದೆ. ಘಟಾನುಗಟಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗ್ತಿದೆ. ಇತ್ತ ವಿಚಾರಣೆ ಕುರಿತು ಕಾಂಗ್ರೆಸ್​ ನಾಯಕರು (Congress Leaders) ಪ್ರತಿಕ್ರಿಯಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ (MLA Priyank Kharge) ಸುದ್ದಿಗೊಷ್ಠಿ ನಡೆಸಿ ಮಾತಾಡಿದ್ರು. PSI ಹಗರಣದ ಬಗ್ಗೆ ಹೊಸ ಮಾಹಿತಿ ನೀಡೋದಾಗಿ ಹೊಸ ಬಾಂಬ್​ ಸಿಡಿಸಿದ್ದಾರೆ. ಜುಲೈ 1  ರಂದು ಸಿಐಡಿನವರು ಚಾರ್ಟ್ ಶೀಟ್‌ ಫೈಲ್ ಮಾಡಿದ್ದಾರೆ. ಕಲಬುರಗಿಯಲ್ಲಿ ಚಾರ್ಜ್ ಶೀಟ್ ಫೈಲ್ ಮಾಡಿದ್ದಾರೆ. OMR ಶೀಟ್ ಮತ್ತು ಪರೀಕ್ಷೆಯಲ್ಲಿ ಬ್ಲೂಟೂತ್  ಬಳಿಸಿದ್ದಾರಾ? ಅನ್ನೋ ಬಗ್ಗೆ ಚಾರ್ಜ್ ಶೀಟ್ ನಲ್ಲಿ ಪೈಲ್ ಮಾಡಿದ್ದಾರೆ  ಎಂದು ಪ್ರಿಯಾಂಕ್​ ಖರ್ಗೆ ಹೇಳಿದ್ದಾರೆ.


2000 ಪುಟದ ಚಾರ್ಜ್ ಶೀಟ್ ಫೈಲ್​


ಸುಮಾರು 2000 ಪುಟದ ಚಾರ್ಜ್ ಶೀಟ್ ಫೈಲ್ ಮಾಡಿದ್ದಾರೆ. ಪರೀಕ್ಷೆ ನಡೆಯಬೇಕಾದ್ರೆ ಪ್ರಿನ್ಸಿಪಲ್ ಮತ್ತು ಇನ್ವಿಜಿಲೇಟರ್ ಇರಬೇಕು ಆದ್ರೆ ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಬೇರೆ ಬೇರೆಯವರಲ್ಲೇ ಬಂದಿದ್ದಾರೆ. ಪರೀಕ್ಷೆ ನಡೆಯುವ ಸಂದರ್ಭದಲ್ಲಿ ದಿವ್ಯಾ ಹಾದರಗಿ ಸಹ ಇರ್ತಾರೆ. ಪ್ರಿನ್ಸಿಪಲ್ ಅಂತ ಹೇಳಿಕೊಂಡು ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಹಾಜರಿದ್ದಾರೆ. ಬ್ರೋಕರ್​ಗೆ ಕೋ ಆರ್ಡಿನೇಷನ್ ಮಾಡಲು ದಿವ್ಯಾ ಹಾದರಿಗಿ ಅಲ್ಲಿ ಇರ್ತಾರೆ.


ಒಬ್ಬರಿಗೆ 30 ಲಕ್ಷ ಫಿಕ್ಸ್


ಪ್ರಿನ್ಸಿಪಲ್ ಕಾಶಿನಾಥ್ ಹೇಳ್ತಾರೆ ಒಬ್ಬರಿಗೆ 30 ಲಕ್ಷ ಫಿಕ್ಸ್ ಮಾಡಿದ್ದರಂತೆ. ಪರೀಕ್ಷೆಗೆ ಗೈರಾಗಿರುವ ಅಭ್ಯರ್ಥಿಯ  ಪ್ರಶ್ನೆ ಪತ್ರಿಕೆ ತಗೆದುಕೊಂಡು ಅದನ್ನ ವಾಟ್ಸ್ ಅಪ್ ಮೂಲಕ ತಂಡವೊಂದಕ್ಕೆ ಕಳುಹಿಸಿದ್ದಾರೆ. ಬಳಿಕ ಕ್ವಷನ್ ಪೇಪರ್ ನೋಡಿ ಆ ತಂಡ ಉತ್ತರವನ್ನ ದಿವ್ಯ ಹಾದರಿಗೆ ಕಳುಹಿಸಿದ್ದಾರೆ. ದಿವ್ಯಾ ಹಾದರಿಗಿ ಆ ಉತ್ತರವನ್ನ ಇನ್ವಿಜಿಲೇಟರ್​ಗೆ ವಾಟ್ಸ್ ಅಪ್  ಕಳುಹಿಸುತ್ತಾರೆ. ಬಳಿಕ ಇನ್ವಿಜಿಲೇಟರ್ ಮೌಖಿಕವಾಗಿ ಅಭ್ಯರ್ಥಿಗಳಿಗೆ ಉತ್ತರಗಳನ್ನ ಹೇಳಿದ್ದಾರೆ.


ಇದನ್ನೂ ಓದಿ: Chitradurga News: ಪ್ರೀತಿಸಿದ ಯುವತಿಯನ್ನು ಮದುವೆ ಆಗಲು ಅಡ್ಡಿ ಬಂದ ಚಿಕ್ಕಪ್ಪನ ಹೆಣ ಕೆಡವಿದ ಚಿತ್ರಲಿಂಗ


ವಿಧಾನಸೌಧದ ವ್ಯಾಪಾರ ಸೌಧವಾಗಿದೆ


ಬಳಿಕ ಸಿಮ್ ಕಾರ್ಡ್ ಎಲ್ಲಾ ಜಜ್ಜಿ ಹಾಕಿದ್ದಾರೆ ಎಂದು  ಚಾರ್ಜ್​ಶೀಟ್ ನಲ್ಲಿ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ, ಜೊತೆಗೆ ಅಕ್ರಮ ನಡೆದಿದೆ ಅಂತ ಬರೆದಿದ್ದಾರೆ. ಗೃಹ ಸಚಿವರು ಈಗ ಏನ್ ಹೇಳ್ತಾರೆ..? ಅಕ್ರಮವೇ ನಡೆದಿಲ್ಲ ಅಂತ ಹೇಳ್ತಾರೆ. ಕೇವಲ ಒಂದು ಸೆಂಟರ್ ನಲ್ಲಿ ಮೂರುವರೆ ಕೋಟಿ ಹಗರಣ ನಡೆದಿದೆ


ಕಲಬುರಗಿಯಲ್ಲಿ 11 ಸೆಂಟರ್ ಗಳಿವೆ ರಾಜ್ಯದಲ್ಲಿ ಎಷ್ಟು ಸೆಂಟರ್ ಗಳಿವೆ. ಆದ್ರೆ ಈ ತನಿಖೆಯನ್ನು ಕೇವಲ ಕಲಬುರಗಿಗೆ ಮುಗಿಸಲು ಹೊರಟಿದ್ದಾರೆ. ಬೆಂಗಳೂರಿನ ತನಕ ಇವರು ಬಂದೇ ಇಲ್ಲ. ಇಲ್ಲಿ ವಿಧಾನಸೌಧ ವ್ಯಾಪಾರ ಸೌಧವಾಗಿದೆ ಎಂದು ಪ್ರಿಯಾಂಕ್​ ಖರ್ಗೆ ಕಿಡಿಕಾರಿದ್ರು.


ಸರ್ಕಾರಕ್ಕೆ‌ ಕಾಂಗ್ರೆಸ್ ಇಟ್ಟ ಬೇಡಿಕೆ


*ಈ ತನಿಖೆ ನಡೆಯುತ್ತಿರುವುದು ಒಂದೇ ಸೆಂಟರ್ನಲ್ಲಿ ಉಳಿದ ಸೆಂಟರ್ ಗಳ ತನಿಖೆ ಯಾವಾಗ ಮಾಡ್ತೀರಾ..?


*ಕ್ರೈಂ ಸಂಖ್ಯೆಗಳು ಹೊರ ಬಿಡುತ್ತಿಲ್ಲ. ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಕೆಲ ಪೊಲೀಸ್ ಠಾಣೆಯಲ್ಲಿ‌ ಕೇಸ್ ದಾಖಲಾಗಿದೆ. ಅವುಗಳ ಸಂಖ್ಯೆ ಹೇಳ್ತಿಲ್ಲ


*ಸರ್ಕಾರಕ್ಕೆ ಜ್ಯೂಡಿಷನ್ ತನಿಖೆಗೆ ಯಾಕೆ ಹೆದರಿಕೆ..?


* ಅಮೃತ್​ ಪೌಲ್  ಯಾಕೆ‌ ಹೆದರುತ್ತಿದ್ದೀರಾ..?


*ಚಾರ್ಜ್ ಸೀಟ್ ನಲ್ಲಿ ಉಲ್ಲೇಖ ಆಗಿರುವ ಪರೀಕ್ಷೆಗಳಾದ FDA, SDA, PWD, PC, ಅಸಿಸ್ಟೆಂಟ್ ಇಂಜಿನಿಯರ್  ಹಾಗೂ ಜ್ಯೂನಿಯರ್ ಇಂಜಿನಿಯರ್ ಪರೀಕ್ಷೆಯಲ್ಲಿ ಅಕ್ರಮ ಆಗಿದೆ. ಅದರ ತನಿಖೆ ಯಾವಾಗ?


ಇದನ್ನೂ ಓದಿ:  Timber Smugglers: ಸ್ಲೀಪರ್ ಬಸ್ ನಲ್ಲಿ ತೇಗದ ಮರ ಕಳ್ಳಸಾಗಾಣಿಕೆ; ಅಸಲಿ ಜೀವನದ ‘ಪುಷ್ಪಾ’ ಬಗ್ಗೆ ಅಧಿಕಾರಿಯ ಫನ್ನಿ ಟ್ವೀಟ್


*ಈ ಸರ್ಕಾರದ ಅಡಿಯಲ್ಲಿ ತನಿಖೆ ಆಗಬೇಕು


*ಚಾರ್ಜ್ ಸೀಟ್ ಸಲ್ಲಿಕೆ ಮಾಡಿದ್ದು ಬಿಜೆಪಿ ಸರ್ಕಾರ..


* ಯತ್ನಾಳ್ ಓಪನ್ ಚಾಲೆಂಜ್ ಮಾಡಿದ್ದಾರೆ. ಅವರ ಬಳಿ ಮಾಹಿತಿ ಇದೆ ಅಂತೆ. ಹಾಗಾದ್ರೆ ಯತ್ನಾಳ್ ಅವರಿಗೆ ತನಿಖೆಗೆ‌ ಕರೆಸ್ತೀರಾ..?


*ಯಾರೋ  ಮಾಜಿ ಸಿಎಂ ಮಗ ಇದರಲ್ಲಿ ಭಾಗಿಯಾಗಿದ್ದಾರಂತೆ ಅವರನ್ನು ತನಿಖೆಗೆ ಕರೆಸಿ

Published by:Pavana HS
First published: