ಹಮಾಲಿಯಾದರೂ ರಾಷ್ಟ್ರಮಟ್ಟದ ಬಾಡಿಬಿಲ್ಡರ್ ಆಗಿ ಹೆಮ್ಮೆ ಮೂಡಿಸಿದ ಬಳ್ಳಾರಿಯ ಯುವಕ

news18
Updated:August 6, 2018, 3:29 PM IST
ಹಮಾಲಿಯಾದರೂ ರಾಷ್ಟ್ರಮಟ್ಟದ ಬಾಡಿಬಿಲ್ಡರ್ ಆಗಿ ಹೆಮ್ಮೆ ಮೂಡಿಸಿದ ಬಳ್ಳಾರಿಯ ಯುವಕ
news18
Updated: August 6, 2018, 3:29 PM IST
- ಶರಣು ಹಂಪಿ, ನ್ಯೂಸ್ 18 ಕನ್ನಡ

ಬಳ್ಳಾರಿ (ಆ.04) :  ಆ ಮನೆಯಲ್ಲಿ ಕಿತ್ತು ತಿನ್ನೋ ಬಡತನ. ಹೊತ್ತೊತ್ತಿಗೆ ಊಟದ ವ್ಯವಸ್ಥೆ ಇಲ್ಲದಿದ್ದರೂ ಆತ ಹಮಾಲಿ ಕೆಲಸ ಮಾಡೋದು ತಪ್ಪಿಲ್ಲ. ಪವರ್ ಲಿಪ್ಟಿಂಗ್​ನಲ್ಲಿ ಬರೋಬ್ಬರಿ 135 ಕೆಜಿ ತೂಕದ ಭಾರ ಎತ್ತುವ ಮೂಲಕ ದೇಶವೇ ಹೆಮ್ಮೆಪಡುವಂತಹ ಸಾಧನೆ ಮಾಡಿದ್ದಾರೆ. ಪಕ್ಕಾ ದುನಿಯಾ ವಿಜ ಅಭಿಮಾನಿ ಬೇರೆ. ಆದರೇನು ಮಾಡೋದು ದುಬೈನಲ್ಲಿ ನಡೆಯುವ ಏಷಿಯನ್ ಬೆಂಚ್ಪ್ರೇಸ್ ಚಾಂಪಿಯನ್​ಶಿಪ್​ನಲ್ಲಿ ಭಾಗಿಯಾಗಲು ದುಡ್ಡಿಲ್ಲದ ಪರದಾಡುತ್ತಿದ್ದಾರೆ.

ಟಾಟಾ ಎಸಿ ವಾಹನದಲ್ಲಿ ಡ್ರೈವರ್ ಆಗಿ ಕೆಲಸ ಮಾಡುವ ಇವರ ಹೆಸರು ವಲಿಭಾಷಾ, ಡ್ರೈವರ ವೃತ್ತಿಯೊಂದಿಗೆ, ಹಮಾಲಿ ಕೆಲಸ ಮಾಡುವ ಇವರು ವಿದ್ಯಾಭ್ಯಾಸ ಮಾಡಿಲ್ಲ. ಮನೆಯಲ್ಲಿ ಕಡುಬಡತನವಿದ್ದ ಕಾರಣ ಶಾಲೆಯ ಮೆಟ್ಟಿಲನ್ನೆ ಏರದೆ ಹೊಸಪೇಟೆ ತಾಲೂಕಿನ ಹೊಸಮಲಪನಗುಡಿಯ 34ರ ಹರೆಯದ ವಲಿಭಾಷಾ ಸಾಧನೆಗೈದಿದ್ದಾರೆ.

ಮದುವೆಯಾಗಿ ಮನೆಯ ಸಂಪೂರ್ಣ ಜವಾಬ್ದಾರಿ ಹೊತ್ತಿರುವ ವಲಿಭಾಷಾ ಅವರಿಗೆ ನಾಲ್ಕು ಮಕ್ಕಳಿದ್ದರೂ ಏನಾದರೂ ಸಾಧಿಸಿ ತೋರಿಸಬೇಕು ಎಂಬ ಛಲ, ಛಲವಿದ್ದರೆ ಸಾಕು ಏನಾದರೂ ಸಾಧನೆ ಮಾಡಬಹುದು ಅನ್ನೋದಕ್ಕೆ ವಲಿಭಾಷಾ ಮಾಡಿತೋರಿಸಿದ್ದಾನೆ. ಹತ್ತಲ್ಲ, ಐವತ್ತಲ್ಲ ಬರೋಬ್ಬರಿ 135 ಕೆಜಿ ತೂಕ ಎತ್ತುವ ವಲಿಭಾಷಾ ಇದೀಗ ಪವರ್ ಲಿಪ್ಟ್ ವಿಭಾಗದಲ್ಲಿ ದೇಶದ ಪರವಾಗಿ ದುಬೈನಲ್ಲಿ ನಡೆರುವ ಏಷಿಯನ್ ಬೆಂಚ್ಪ್ರೆಸ್ ಚಾಂಪಿಯನ್​ಶಿಪ್​ಗೆ  ಆಯ್ಕೆಯಾಗುವ ಮೂಲಕ ದೇಶದ ಹೆಮ್ಮ ಎತ್ತಿ ಹಿಡಿಯಲು ತಯಾರಾಗಿದ್ದಾರೆ.

ನಿತ್ಯ ಹಮಾಲಿ, ಡ್ರೈವರ್ ಕೆಲಸ ಮಾಡುತ್ತಾ 7 ಕಿಲೋ ಮೀಟರ್ ದೂರದ ಹೊಸಪೇಟೆಗೆ ಆಗಮಿಸಿ ಜಿಮ್ ಮಾಡುತ್ತಾ ಪವರ್ ಲಿಪ್ಟಿಂಗ್​ನಲ್ಲಿ ವಿಶೇಷ ಸಾಧನೆಗೈದಿದ್ದಾನೆ. ಇದುವರೆಗೂ ಏಳು ಬಾರಿ ರಾಷ್ಟ್ರಮಟ್ಟದ ಕ್ರೀಡಾಕೂಟ, 9 ಭಾರಿ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಪವರ್ ಲಿಪ್ಟಿಂಗ್​ನಲ್ಲಿ ಹಲವಾರು ಬಹುಮಾನ ಗೆದ್ದಿರುವ ವಲಿಭಾಷಾ ಸಪ್ಟಂಬರ್ 18 ರಿಂದ 25ರವರೆಗೆ ದುಬೈನಲ್ಲಿ ನಡೆಯುವ ಏಷಿಯನ್ ಬೆಂಚ್ಪ್ರೇಸ್ ಚಾಂಪಿಯನ್​ಶಿಪ್ನಲ್ಲಿ 66 ಕೆಜಿ ತೂಕದಲ್ಲಿ ಪವರ್ ಲಿಪ್ಟ್ ಸ್ಪರ್ದೆ ಭಾಗಿಯಾಗಬೇಕಿದೆ.

ಪದಕಗಳೊಂದಿಗೆ ವಲಿಭಾಷಾ


ಆದರೆ ಪವರ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲು ವಲಿಭಾಷಾ 98 ಸಾವಿರ ರೂಪಾಯಿ ಹಣವನ್ನು ಪವರ್ಲಿಪ್ಟಿಂಗ್ ಪೆಂಡರೇಷನ್​ಗೆ ಕಟ್ಟಬೇಕಾಗಿದೆ. ಆದರೆ ಅಷ್ಟು ದುಡ್ಡಿಲ್ಲದೆ ಅಸಹಾಯಕರಾಗಿದ್ದಾರೆ. ಇವರಿಗೆ ರಾಜ್ಯ ಗುಪ್ತಚರ ಇಲಾಖೆ ಎಎಸ್ ಐ ವಿಜಯಕುಮಾರ ಒಂದಷ್ಟು ಆರ್ಥಿಕವಾಗಿ ಸಹಾಯ ಮಾಡಿದ್ದಾರೆ. ಇನ್ನಷ್ಟು ಪ್ರೋತ್ಸಾಹಕರ ಸಹಾಯ ಮಾಡಿದರೆ ಒಳಿತಾಗುತ್ತದೆ ಎಂದು ಅಭಿಪ್ರಾಯಪಡುತ್ತಾರೆ.
Loading...

ವಲಿಭಾಷಾರ ಕ್ರೀಡಾ ಕನಸಿಗೆ ಇದುವರೆಗೂ ಹೊಸಪೇಟೆಯ ಗುಡ್ ಲಕ್ ಜಿಮ್ ನಲ್ಲಿ ಉಚಿತವಾಗಿ ತರಬೇತಿ ನೀಡುತ್ತ, ವೈದ್ಯ ಮಲ್ಲಿಕಾರ್ಜುನರು ತಮ್ಮ ಕೋಳಿ ಫಾರ್ಮ್ ನಲ್ಲಿ ಕೆಲಸ ನೀಡುವ ಮೂಲಕ ಸಹಾಯ ಮಾಡುತ್ತಾ ಬಂದಿದ್ದಾರೆ.

ದುನಿಯಾ ವಿಜಿಯ ಕಟ್ಟಾ ಅಭಿಮಾನಿಯಾಗಿರುವ ವಲಿಭಾಷಾಗೆ ಇದೀಗ ಪವರ್ ಲಿಪ್ಟಿಂಗ್ ಚಾಂಪಿಯನ್​ಶಿಫ್​ನಲ್ಲಿ ಭಾಗವಹಿಸಲು ಕ್ರೀಡಾಭಿಮಾನಿಗಳು ಸಹಾಯ ಮಾಡಿದರೆ ದೇಶಕ್ಕೆ ಮತ್ತೊಂದು ಚಿನ್ನದ ಪದಕದ ನಿರೀಕ್ಷೆಯಲ್ಲಿರಬಹುದು.
First published:August 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...