ಬೆಂಗಳೂರಿನಲ್ಲಿ 9 ದಿನದ ಮಗುವನ್ನು ಉಸಿರುಗಟ್ಟಿಸಿ ಮನೆಯವರಿಂದಲೇ ಕೊಲೆ

ಮಗುವಿನ ಕತ್ತಿನ ಬಳಿ ಗಾಯದ ಗುರುತು ಪತ್ತೆಯಾಗಿದೆ. ಮಗುವನ್ನು ಉಸಿರುಗಟ್ಟಿಸಿ ಕೊಲೆ ಮಾಡಿರೋ ಶಂಕೆ ಇದೆ. ಈ ಬಗ್ಗೆ ಸೋಲದೇವನಹಳ್ಳಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

news18-kannada
Updated:November 30, 2019, 2:24 PM IST
ಬೆಂಗಳೂರಿನಲ್ಲಿ 9 ದಿನದ ಮಗುವನ್ನು ಉಸಿರುಗಟ್ಟಿಸಿ ಮನೆಯವರಿಂದಲೇ ಕೊಲೆ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ನ.30): ಮಗು ಹುಟ್ಟಿತು ಎಂದರೆ ಮನೆಯಲ್ಲೊಂದು ಸಂಭ್ರಮದ ವಾತಾವರಣ ಇರುತ್ತದೆ. ಆದರೆ, ಬೆಂಗಳೂರಿನಲ್ಲಿ ಹುಟ್ಟಿದ ಮಗು ಹುಟ್ಟಿದ ಒಂಭತ್ತೇ ದಿನಕ್ಕೆ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.

ತಮಿಳ್ ಸೆಲ್ವಿ ಮಗುವನ್ನು ಕಳೆದುಕೊಂಡ ನತದೃಷ್ಟೆ. ಮಗುವಿನ ಅಜ್ಜಿ ಪರಮೇಶ್ವರಿ ಮೇಲೆ ಸೆಲ್ವಿ ಕೊಲೆಯ ಆರೋಪ ಹೊರಿಸಿದ್ದಾರೆ. ಈ ಬಗ್ಗೆ ಅವರು ಪೊಲೀಸ್​ ಠಾಣೆಗೂ ದೂರು ನೀಡಿದ್ದಾರೆ.

“ನಿನ್ನೆ ರಾತ್ರಿ ಮಗುವಿಗೆ ಹಾಲುಣಿಸಿ ಆಟವಾಡಿಸುತ್ತಿದ್ದೆ. ಬಳಿಕ ಮಗುವನ್ನು ಅತ್ತೆ ಕೈಗೆ ಕೊಟ್ಟು ಅಡುಗೆ ಮನೆಗೆ ಹೋಗಿದ್ದೆ. ಬಂದು ನೋಡುವಷ್ಟರಲ್ಲಿ ಅತ್ತೆ ಕೈಯಲ್ಲಿ ಮಗು ಇರಲಿಲ್ಲ. ಮಗುವನ್ನ ಯಾರೋ ತೆಗೆದುಕೊಂಡು ಹೋಗಿದ್ದಾರೆ ಎಂದು ಅತ್ತೆ ಹೇಳಿದ್ದಳು. ಅಕ್ಕಪಕ್ಕದ ಮನೆ ಹಾಗೂ ಮನೆಯ ಸುತ್ತ ಹುಡುಕಾಟ ನಡೆಸಿದೆವು. ಈ ವೇಳೆ ಮನೆ ಹಿಂಭಾಗದಲ್ಲಿ ಮಗು ಬಿದ್ದಿತ್ತು,” ಎಂದು ಸೆಲ್ವಿ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಮನೆ ಮಾರೋ ಸ್ಥಿತಿಗೆ ಬಂದ್ರು ನಟಿ ರಾಕುಲ್ ಪ್ರೀತ್ ಸಿಂಗ್!

ಮಗುವಿನ ಕತ್ತಿನ ಬಳಿ ಗಾಯದ ಗುರುತು ಪತ್ತೆಯಾಗಿದೆ. ಮಗುವನ್ನು ಉಸಿರುಗಟ್ಟಿಸಿ ಕೊಲೆ ಮಾಡಿರೋ ಶಂಕೆ ಇದೆ. ಈ ಬಗ್ಗೆ ಸೋಲದೇವನಹಳ್ಳಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಣ್ಣು ಮಗು ಜನಿಸಿದೆ ಎನ್ನುವ ಕಾರಣಕ್ಕೆ ಅಜ್ಜಿ ಮಗುವನ್ನ ಉಸಿರುಗಟ್ಟಿಸಿ ಸಾಯಿಸಿರುವ ಅನುಮಾನ ಇದೆ. ಸದ್ಯ, ಮಗು ಶವವನ್ನು ಸಪ್ತಗಿರಿ ಆಸ್ಪತ್ರೆಗೆ ಪೊಲೀಸರು ರವಾನಿಸಿದ್ದಾರೆ.

(ವರದಿ: ಮುನಿರಾಜು)
First published: November 30, 2019, 2:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading