ಬೆಂಗಳೂರಿನಲ್ಲಿ ‘ಬಾಹುಬಲಿ‘ ಮಗು ಜನನ; ಪುಟ್ಟ ಕಂದಮ್ಮನ ತೂಕವೆಷ್ಟು ಗೊತ್ತಾ?

ಸರಸ್ವತಿ ಅವರು ಗರ್ಭಾವತಿಯಾಗಿದ್ದಾಗ ವೈದ್ಯರ ಬಳಿ ಹೋಗಿ ಸ್ಕ್ಯಾನಿಂಗ್​ ಮಾಡಿಸಿದ್ದರು. ಈ ವೇಳೆ ಡಾಕ್ಟರ್​​ ಮಗು ನಾರ್ಮಲ್​ ಬೆಳವಣೆಗೆ ಎಂದು ಹೇಳಿದ್ದರು. ನಂತರ ಪ್ರಸೂತಿ ನೋವು ಕಾಣಿಸಿಕೊಂಡಾಗ ಮಗು ಬೆಳವಣಿಗೆ ಜಾಸ್ತಿ‌ ಇರುವುದು ಖಚಿತವಾಗಿದೆ.

news18-kannada
Updated:January 21, 2020, 6:23 PM IST
ಬೆಂಗಳೂರಿನಲ್ಲಿ ‘ಬಾಹುಬಲಿ‘ ಮಗು ಜನನ; ಪುಟ್ಟ ಕಂದಮ್ಮನ ತೂಕವೆಷ್ಟು ಗೊತ್ತಾ?
ಬಾಹುಬಲಿ ಮಗು
  • Share this:
ಬೆಂಗಳೂರು: ಸಾಮಾನ್ಯವಾಗಿ ತಾಯಿ ಹೊಟ್ಟೆಯಲ್ಲಿ ಜನಿಸುವ ಆರೋಗ್ಯವಂತ ಮಗು 2 ರಿಂದ 3 ಕೆ.ಜಿ ಇರುತ್ತವೆ. ಆದರೆ ರಾಜ್ಯ ರಾಜಧಾನಿಯಲ್ಲಿ ಜನಿಸಿರುವ ಮಗುವೊಂದರ ತೂಕ ಎಲ್ಲರನ್ನು ಅಚ್ಚರಿ ಪಡುವಂತೆ ಮಾಡಿದೆ. ಹಾಗಿದ್ದರೆ ಮಗುವಿನ ತೂಕವೆಷ್ಟು ಗೊತ್ತಾ? ಬರೋಬ್ಬರಿ 5 ಕೆ.ಜಿ!

ಹೌದು. ಬೆಂಗಳೂರಿನ ವಾಣಿ ವಿಲಾಸ್​ ಆಸ್ಪತ್ರೆಯಲ್ಲಿ ಹುಟ್ಟಿದ ಮಗುವೊಂದು ಬರೋಬ್ಬರಿ 5 ಕೆ.ಜಿ ತೂಕವನ್ನು ಹೊಂದಿದ್ದು, ಆರೋಗ್ಯವಂತವಾಗಿದೆ. ಜನವರಿ 18 ರಂದು ಈ ಮಗು ಜನಿಸಿದೆ. ತಾಯಿಯ ಹೊಟ್ಟೆಯಿಂದ ಹೊರ ತೆಗೆದಾಗ ಈ ಮಗು ಬರೋಬ್ಬರಿ 5.78 ಕೆ.ಜಿ ಹೊಂದಿತ್ತು.

ಸರಸ್ವತಿ ಮತ್ತು ಯೋಗಿಶ್


ವೆಸ್ಟ್​ ಬಂಗಾಳ ಮೂಲದ ಸರಸ್ವತಿ ಮತ್ತು ಯೋಗಿಶ್​ ದಂಪತಿಗೆ ಈ ಮಗು ಜನಿಸಿದೆ. ಸಿಸೇರಿಯನ್​ ಮೂಲಕ  ಮಗುವನ್ನು ಹೊರತೆಗೆಯಲಾಗಿದೆ.

ಸರಸ್ವತಿ ಅವರು ಗರ್ಭಾವತಿಯಾಗಿದ್ದಾಗ ವೈದ್ಯರ ಬಳಿ ಹೋಗಿ ಸ್ಕ್ಯಾನಿಂಗ್​ ಮಾಡಿಸಿದ್ದರು. ಈ ವೇಳೆ ಡಾಕ್ಟರ್​​ ಮಗು ನಾರ್ಮಲ್​ ಬೆಳವಣೆಗೆ ಹೊಂದಿದೆ ಎಂದು ಹೇಳಿದ್ದರು. ನಂತರ ಪ್ರಸೂತಿ ನೋವು ಕಾಣಿಸಿಕೊಂಡಾಗ ಮಗು ಬೆಳವಣಿಗೆ ಜಾಸ್ತಿ‌ ಇರುವುದು ಖಚಿತವಾಗಿದೆ. ಹೀಗಾಗಿ ಆತಂಕಗೊಂಡಿದ್ದ ದಂಪತಿಗಳು ಡೆಲಿವರಿಗಾಗಿ ಹಲವು ಆಸ್ಪತ್ರೆಗಳು ಸುತ್ತಾಡಿ ಕಡೆಗೆ ವಾಣಿ ವಿಲಾಸ್ ಆಸ್ಪತ್ರೆಗೆ ಬಂದರು. ವೈದ್ಯರ ಸವಾಲಿನೊಂದಿಗೆ ಈ ಮಗುವನ್ನು ಹೊರ ತೆಗೆಯಲಾಗಿದೆ.

ಮಗು


ಇನ್ನು ವಿಶ್ವದಲ್ಲಿ ಈ ಹಿಂದೆ 10.7 ಕೆಜಿ ಅತಿ ತೂಕದ ಮಗು ಜನನವಾಗಿದೆ.  2016ರಲ್ಲಿ 6.8 ಕೆ.ಜಿಯ ಮಗು ಜನನವಾಗಿತ್ತು. ಉತ್ತರ  ಪ್ರದೇಶದಲ್ಲಿ 6.7 ಕೆ.ಜಿ ತೂಕದ ಮಗು ಜನಿಸಿತ್ತು. ಇದೀಗ ವರ್ಷಗಳ ನಂತರ 5.900 ಗ್ರಾಂ ತೂಕದ ಮಗು ಜನನವಾಗಿದೆ.ಇದನ್ನೂ ಓದಿ: ‘ಕಾಂಗ್ರೆಸ್ ಹಿತದೃಷ್ಟಿಯಿಂದ ಸಾಧ್ಯವಾದಷ್ಟು ಬೇಗ ಕೆಪಿಸಿಸಿ ಅಧ್ಯಕ್ಷರ ನೇಮಕವಾಗಲಿ‘: ಮಾಜಿ ಸಂಸದ ಕೆ.ಎಚ್​​ ಮುನಿಯಪ್ಪ

ಇದನ್ನೂ ಓದಿ:  ಸಿಎಎ ಹೆಸರಲ್ಲಿ ಪ್ರಧಾನಿ ಮೋದಿ ಜನರ ದಾರಿ ತಪ್ಪಿಸುತ್ತಿದ್ದಾರೆ: ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ
First published:January 21, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ