ಮದುವೆಯಾಗಲು ಹುಡುಗಿ ಹುಡುಕಿಕೊಡಿ ಎಂದು ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ 63ರ ವೃದ್ಧ!

63 ವರ್ಷದ ಅವಿವಾಹಿತ ವಯೋವೃದ್ಧರೊಬ್ಬರಿಗೆ ಈಗ ಮದುವೆಯಾಗುವ ಆಸೆ ಬಂದಿದ್ದು, ಅದಕ್ಕಾಗಿ ಹುಡುಗಿ ಹುಡುಕಿಕೊಡಿ ಎಂದು ಗ್ರಾಮ ಪಂಚಾಯಿತಿಗೆ ಮನವಿ ಮಾಡಿ ಅರ್ಜಿ ಸಲ್ಲಿಸಿರುವ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ನರೇಗಲ್ ಗ್ರಾಮದಲ್ಲಿ ನಡೆದಿದೆ.

news18-kannada
Updated:February 1, 2020, 6:58 AM IST
ಮದುವೆಯಾಗಲು ಹುಡುಗಿ ಹುಡುಕಿಕೊಡಿ ಎಂದು ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ 63ರ ವೃದ್ಧ!
ಗ್ರಾಮ ಮಂಚಾಯ್ತಿಗೆ ಅರ್ಜಿ ಸಲ್ಲಿಸಿದ ವೃದ್ಧ
  • Share this:
ಹಾವೇರಿ(ಜ.01): ನನಗೆ ಮನೆ ಕೊಡಿಸಿ, ಸರ್ಕಾರದ ಯೋಜನೆ ಅನುಕೂಲ ಮಾಡಿಕೊಡಿ ಎಂದು ಗ್ರಾಮ ಪಂಚಾಯಿತಿಯಲ್ಲಿ ಜನರು ಮನವಿ ಮಾಡುವುದು ಸಾಮಾನ್ಯ. ಆದರೆ, ಇಲ್ಲೊಬ್ಬರು ಮದುವೆಯಾಗಲು ಹುಡುಗಿ ಹುಡುಕಿಕೊಡಿ ಎಂದು ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದಾರೆ. ಅಷ್ಟಕ್ಕು ಹೀಗೆ ಅರ್ಜಿ ಸಲ್ಲಿಸಿದ ವ್ಯಕ್ತಿಗೆ ಈಗ ಕೇವಲ 63 ವರ್ಷ!

ಅಚ್ಚರಿ ಎನಿಸಿದರು ಇದು ಸತ್ಯ. 63 ವರ್ಷದ ಅವಿವಾಹಿತ ವಯೋವೃದ್ಧರೊಬ್ಬರಿಗೆ ಈಗ ಮದುವೆಯಾಗುವ ಆಸೆ ಬಂದಿದ್ದು, ಅದಕ್ಕಾಗಿ ಹುಡುಗಿ ಹುಡುಕಿಕೊಡಿ ಎಂದು ಗ್ರಾಮ ಪಂಚಾಯಿತಿಗೆ ಮನವಿ ಮಾಡಿ ಅರ್ಜಿ ಸಲ್ಲಿಸಿರುವ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ನರೇಗಲ್ ಗ್ರಾಮದಲ್ಲಿ ನಡೆದಿದೆ.

ದ್ಯಾಮಣ್ಣ ಕಮ್ಮಾರ


ಇದನ್ನೂ ಓದಿ: ಸಾಮಾಜಿಕ ತಾಣದಲ್ಲಿ #coronavirus ಟ್ರೆಂಡಿಂಗ್; ಮುಖಕ್ಕೆ ಮಾಸ್ಕ್ ಧರಿಸಿ ಚುಂಬಿಸುತ್ತಿರುವ ಪ್ರೇಮಿಗಳು!

ಮನವಿ ಪತ್ರ


63 ವರ್ಷದ  ದ್ಯಾಮಣ್ಣ ಕಮ್ಮಾರ ವಯೋವೃದ್ಧರೊಬ್ಬರು ತಮ್ಮ ಜಾತಿಯ ಕನ್ಯೆಯನ್ನು ಹುಡುಕಿ ಕೊಡುವಂತೆ  ಗ್ರಾಮ ಪಂಚಾಯತಿ ಅಧ್ಯಕ್ಷ ಹಾಗೂ ಪಿಡಿಒಗೆ ಮನವಿ ಮಾಡಿದ್ದಾರೆ. ಮನವಿಯಲ್ಲಿ "ನಾನು ದ್ಯಾಮವ್ವ ಗುಡಿಯ ಪೂಜಾರಿಯಾಗಿದ್ದೇನೆ. ನನಗೆ ಮದುವೆಯಾಗಿಲ್ಲ, ಎಷ್ಟು ಹುಡುಕಿದರೂ ಕನ್ಯೆ ಸಿಗುತ್ತಿಲ್ಲ. ಈಗ ಮದುವೆಯಾಗುತ್ತಿರುವ ಕಾರಣ ನನಗೆ ಅಡುಗೆ ಮಾಡಲು ಯಾರು ಇಲ್ಲ. ಆದ್ದರಿಂದ ನನಗೆ ಮದುವೆಯಾಗಲು ಆಸೆಯಾಗಿದೆ. ನೀವು ನನಗೆ ಹುಡುಗಿಯನ್ನು ಹುಡುಕಿ ಮದುವೆ ಮಾಡಿಕೊಡಬೇಕು," ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಇನ್ನು ದ್ಯಾಮಣ್ಣ ಕಮ್ಮಾರ ಅವರ ಮನವಿಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಪಿಡಿಒ ಸ್ವೀಕರಿಸಿದ್ದಾರೆ. ಮನವಿ ಪಡೆದು, ಸ್ವೀಕೃತಿ ಪತ್ರವನ್ನು ನೀಡಿದ್ದಾರೆ. ಗ್ರಾಮ ಪಂಚಾಯತ್​ ಸದ್ಯಸ್ಯರು ಕೂಡ ದ್ಯಾಮಣ್ಣ ಕಮ್ಮಾರ ಅವರು ನೀಡಿದ ಮನವಿಗೆ ಸಹಿ ಮಾಡಿದ್ದಾರೆ.ಇದನ್ನೂ ಓದಿ:  ಟಿಕ್ ಟಾಕ್​ಗೆ ಪೈಪೋಟಿ ನೀಡಲು ಗೂಗಲ್ ‘ಟ್ಯಾಂಗಿ‘ ಅಪ್ಲಿಕೇಶನ್ ಬಿಡುಗಡೆ; ಹೇಗಿದೆ ಗೊತ್ತಾ?

 
First published:February 1, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ