Crime: ಹಲ್ಲಿನ ಸೆಟ್​ ಒಡೆದು ಹಾಕಿದ ಒಂದೇ ಕಾರಣಕ್ಕೆ 6 ವರ್ಷದ ಬಾಲಕಿ ಪ್ರಾಣ ತೆಗೆದ

ಮಗು ಆಟ ಆಡುವ ವೇಳೆ ಹಲ್ಲು ಸೆಟ್ ಮುರಿದ ಕಾರಣ ಮಗುವನ್ನೇ ಕೊಲೆ ಮಾಡಿದ ಯುವಕ ಘಟನೆ ವಿಜಯಪುರ ಜಿಲ್ಲೆ‌ ಇಂಡಿ ತಾಲೂಕಿನ  ಬೋಳೆಗಾಂವ ಗ್ರಾಮದಲ್ಲಿ ನಡೆದಿದೆ.

ಆರೋಪಿ ಬಂಧಿಸಿದ ಪೊಲೀಸರು

ಆರೋಪಿ ಬಂಧಿಸಿದ ಪೊಲೀಸರು

 • Share this:
  ವಿಜಯಪುರ (ಆ. 16): ಸಣ್ಣ ಮಕ್ಕಳು ಆಟ ಆಡುತ್ತಾ ಮನೆಯಲ್ಲಿನ ವಸ್ತುಗಳನ್ನು  ಒಡೆದು ಹಾಕುವುದು.  ಬೇರೆಯವರ ಮನೆಯಲ್ಲಿನ ವಸ್ತುಗಳು ತರುವುದು ಸಾಮಾನ್ಯ. ಹೀಗೆ, 6 ವರ್ಷದ ಪುಟ್ಟ ಬಾಲಕಿ ಮಾಡಿದ ತುಂಟತನದ ತಪ್ಪಿಗೆ ಆಕೆಯನ್ನು ಉಸಿರುಗಟ್ಟಿಸಿ ಕೊಂದು ಹಾಕಿದ ಅಮಾನವೀಯ ಘಟನೆ ಬಸನವಾಡಿನಲ್ಲಿ ನಡೆದಿದೆ. ಜಿಲ್ಲೆಯ ಇಂಡಿ ತಾಲೂಕಿನ ಬೊಳೇಗಾಂವ ಗ್ರಾಮದಲ್ಲಿ 6 ವರ್ಷದ ಬಾಲಕಿಯನ್ನು ಅದೇ ಊರಿನ ಸಂಗನಗೌಡ ಬಿರಾದಾರಾ (24) ಎಂಬಾತ ಉಸಿರುಗಟ್ಟಿಸಿ ಕೊಂದು ಹಾಕಿದ್ದಾನೆ. ಇದಕ್ಕೆ ಕಾರಣ ಸಂಗನಗೌಡರ ತಾಯಿಯ ಹಲ್ಲಿನ ಸೆಟ್​ ಮುರಿದು ಹಾಕಿದಳು ಎಂಬುದು

  ಏನಿದು ಘಟನೆ?

  ಕಳೆದ ಎರಡು ತಿಂಗಳ ಹಿಂದೆ 6 ವರ್ಷದ ಬಾಲಕಿ ಆಟವಾಡುತ್ತಿದ್ದಳು. ಈ ವೇಳೆ  ಆರೋಪಿತ ಸಂಗನಗೌಡ ಬಿರಾದಾರ (24) ಎಂಬಾತನ ತಾಯಿ ಹಲ್ಲಿನ ಸೆಟ್ ಅನ್ನು ಮನೆಯೆ ಮುಂದೆ ಇಟ್ಟಿದ್ದರು. ಈ ವೇಳೆ ಬಾಲಕಿ ಅರಿಯದೇ ಹಲ್ಲಿನ ಸೆಟ್ ಅನ್ನು ತಂದು ಅದಕ್ಕೆ ಕಲ್ಲಿನಿಂದ ಜಜ್ಜಿ ಹಾಳು ಮಾಡಿದ್ದಳು. ಆಗ ಎರಡು ಕುಟುಂಬದವರ ಮಧ್ಯೆ ಗಲಾಟೆ ಕೂಡಾ ನಡೆದಿತ್ತು. ಇದೇ ಸಿಟ್ಟನ್ನು ಇಟ್ಟುಕೊಂಡಿದ್ದ ಆ ಆರೋಪಿ ಸಂಗನಗೌಡ ಬಿರಾದಾರ ಹೇಗಾದರೂ ಮಾಡಿ ಆ ಬಾಲಕಿಯನ್ನು ಮುಗಿಸಲೇ ಬೇಕು ಎಂದು ಹೊಂಚು ಹಾಕಿ ಸಿಕ್ಕ ಅವಕಾಶ ಬಳಸಿಕೊಂಡು ಬಾಲಕಿಗೆ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

  ಕಳೆದ ಆಗಸ್ಟ್ 09‌ ರಂದು ಬಾಲಕಿ ಬೋಳೆಗಾಂವ ಗ್ರಾಮದ ಬೀರಪ್ಪ ದೇವರ ದೇವಸ್ಥಾನದ ಬಳಿ ಆಟ ಆಡುತ್ತಿದ್ದಾಗ, 6 ವರ್ಷದ ಬಾಲಕಿಯನ್ನು  ಸಂಗನಗೌಡ ಬಿರಾದಾರ್ ಫುಸಲಾಯಿಸಿ ತನ್ನ ಹೊಲಕ್ಕೆ ಕರೆದುಕೊಂಡು ಹೋಗಿದ್ದಾನೆ. ಬಳಿಕ  ಆ ಬಾಲಕಿಯ ಮೂಗು, ಬಾಯಿ ಬಿಗಿಯಾಗಿ ಹಿಡಿದು ಅವಳು ಪ್ರಜ್ಞೆ ಹೀನ ಸ್ಥಿತಿಗೆ ತಲುಪಿದಾಗ, ಆಕೆಯ ಕಾಲುಗಳಿಗೆ ಹಗ್ಗದಿಂದ ಕಟ್ಟಿ ಅದೇ ಹಗ್ಗದಿಂದ ಕುತ್ತಿಗೆಗೆ ಕಟ್ಟಿ, ಒಂದು ಪ್ಲಾಸ್ಟಿಕ್ ಗೊಬ್ಬರದ ಚೀಲದಲ್ಲಿ ಹಾಕಿಕೊಂಡು ಹೋಗಿ, ತನ್ನ ಹೊಲಕ್ಕೆ ಹೊಂದಿಕೊಂಡಿರುವ ಹಳ್ಳದಲ್ಲಿ ಬಿದಿರು ಕಟ್ಟಿಗೆಯಿಂದ ಜೋರಾಗಿ ಹೊಡೆದು ಕೊಲೆ ಮಾಡಿದ್ದಾನೆ.

  ಇದನ್ನು ಓದಿ: ಕೋವಿಡ್ ಸೋಂಕು ದೃಢಪಡುತ್ತಿದ್ದಂತೆ ಮನೆಯಿಂದ ಪರಾರಿಯಾದ ವ್ಯಕ್ತಿ

  ಶವವನ್ನು ಹಗಲು ಹೊತ್ತಿನಲ್ಲಿ ಅಲ್ಲೇ ಬಿಟ್ಟು ಬಂದ ಖದೀಮ‌ ರಾತ್ರೀ ಮತ್ತೆ ಅಲ್ಲಿಗೆ ಹೋಗಿ ಆ ಚೀಲವನ್ನು ತಂದು ತಮ್ಮ ಪಕ್ಕದ ಜಮೀನಿನ‌ ಬಾಂದಾರಿನ ಮುಳ್ಳು ಕಂಟಿಯಲ್ಲಿ ಶವ ಬೀಸಾಕಿ ಹೋಗಿದ್ದ. ಬಾಲಕಿ ಕಣೆಯಾದ ದಿನವೇ ಅವರ ಪೋಷಕರು ಹೊರ್ತಿ ಪೋಲಿಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಆದರೆ, ಎರಡು ದಿನದ ಬಳಿಕ ಶವ ಪತ್ತೆಯಾಗುತ್ತಲೇ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.‌ ಪ್ರಕರಣದ ಗಂಭೀರತೆಯನ್ನು ಅರೆತ ಪೋಲಿಸರು ಕೇವಲ ಮೂರ್ನಾಲ್ಕು ದಿನದಲ್ಲಿ ಆರೋಪಿ ಸಂಗನಗೌಡ ಬಿರಾದಾರ್ ನನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.

  ಪುಟ್ಟ ಮಕ್ಕಳು ಹೀಗೆ ಸಣ್ಣ ಪುಟ್ಟ ತಂಟೆ ತಕರಾರು, ವಸ್ತುಗಳನ್ನು ಒಡೆಯುವದು ಸಾಮಾನ್ಯ. ಆದರೆ ಇಷ್ಟೋಂದು ಸಣ್ಣ ವಿಷಯಕ್ಕೆ ಕೊಲೆ ಮಾಡುವ ಹಂತಕ್ಕೆ ತಲುಪಿದ್ದು ಮಾತ್ರ ವಿಪರ್ಯಾಸ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:Seema R
  First published: