Udupi Rain: ಶಾಲೆಯಿಂದ ಬರುವಾಗ ಕೊಚ್ಚಿಹೋದ 2ನೇ ತರಗತಿಯ ಬಾಲಕಿ

ಉಡುಪಿಯ ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಬಿಜಮಕ್ಕಿ ಎಂಬಲ್ಲಿ ಬಾಲಕಿ ಕಾಲುಸಂಕಕ್ಕೆ ಕೊಚ್ಚಿಹೋಗಿದ್ದಾಳೆ. ಸನ್ನಿಧಿ (7) ನೀರುಪಾಲಾದ ಬಾಲಕಿ. ಸನ್ನಿಧಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಪ್ಪರಿಕೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿದ್ದಳು.

ಕಾಲುಸಂಕದಿಂದ ಬಿದ್ದ ಬಾಲಕಿ ಸನ್ನಿಧಿ

ಕಾಲುಸಂಕದಿಂದ ಬಿದ್ದ ಬಾಲಕಿ ಸನ್ನಿಧಿ

  • Share this:
ರಾಜ್ಯದಲ್ಲಿ ಮಳೆಯಬ್ಬರ ತಗ್ಗುತ್ತಿಲ್ಲ. ಕಳೆದ ಏಳೆಂಟು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ (Heavy Rain) ಇಡೀ ಕರ್ನಾಟಕದಲ್ಲಿ (Karnataka) ಅವಾಂತರಗಳ ಸರಮಾಲೆ ನಡೆಯುತ್ತಿದೆ. ಬೆಂಗಳೂರಿನಲ್ಲೂ (Bangalore) ಕಳೆದ ಒಂದು ವಾರದಿಂದ ನಿರಂತರ ಮಳೆಯಾಗುತ್ತಿದೆ. ಉತ್ತರ ಕರ್ನಾಟಕ (North Karnataka), ಕರಾವಳಿ ಜಿಲ್ಲೆಯಲ್ಲೂ ಮಳೆಯ ಆರ್ಭಟ ನಿಲ್ಲುತ್ತಿಲ್ಲ. ವರುಣಾರ್ಭಟಕ್ಕೆ ಕರಾವಳಿ ಜಿಲ್ಲೆಗಳಲ್ಲಿ (Costal) ಅವಾಂತರಗಳ ಮೇಲೆ ಅವಾಂತರಗಳು ಘಟಿಸುತ್ತಿದೆ. ಉಡುಪಿಯಲ್ಲಿ 2ನೇ ತರಗತಿ ಬಾಲಕಿಯೊಬ್ಬಳು (Girl) ಕೊಚ್ಚಿಹೋಗಿದ್ದಾಳೆ. ಇದರ ನಡುವೆ ರಾತ್ರಿಯಿಡೀ ರಾಜ್ಯದೆಲ್ಲೆಡೆ ಮಳೆಯಾಗಲಿದೆ ಅಂತಾ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕದಾದ್ಯಂತ ಇನ್ನೂ ಮೂರು ದಿನ ಮಳೆಯಾಗಲಿದೆ.

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯಾರ್ಭಟ ತಗ್ಗುತ್ತಿಲ್ಲ. ಕೊಡಗಿನಲ್ಲೂ ನಿರಂತರ ಮಳೆಯಾಗ್ತಾನೇ ಇದೆ. ದಕ್ಷಿಣ ಕನ್ನಡ, ಉಡುಪಿಯಲ್ಲಿ ಮಳೆಗೆ ಅನಾಹುತ ಸಂಭವಿಸಿದೆ.

ಕಾಲುಸಂಕದಲ್ಲಿ ಕೊಚ್ಚಿಹೋದ ಬಾಲಕಿ

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಬಿಜಮಕ್ಕಿ ಎಂಬಲ್ಲಿ ಬಾಲಕಿ ಕಾಲುಸಂಕಕ್ಕೆ ಕೊಚ್ಚಿಹೋಗಿದ್ದಾಳೆ. ಸನ್ನಿಧಿ (7) ನೀರುಪಾಲಾದ ಬಾಲಕಿ. ಸನ್ನಿಧಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಪ್ಪರಿಕೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿದ್ದಳು. ಸನ್ನಿಧಿ ಬೊಳಂಬಳ್ಳಿಯ ಮಕ್ಕಿಮನೆ ಪ್ರದೀಪ್ ಪೂಜಾರಿ ಹಾಗೂ ಸುಮಿತ್ರಾ ಅವರ ಪುತ್ರಿ.

A 2nd standard girl who passed away after coming home from school in Udupi
ಬಾಲಕಿ ಕೊಚ್ಚಿಹೋದ ಕಾಲುಸಂಕ


ಇದನ್ನೂ ಓದಿ: ಹೆಸರಿಗೆ ಮಾತ್ರ ಹಾಲಿನ ವ್ಯಾಪಾರ, ಆದ್ರೆ ಮಾಡೋದು ಬೇರೆನೇ ಕೆಲಸ

ಶಾಲೆಯಿಂದ ಮನೆಗೆ ತೆರಳುತ್ತಿದ್ದಾಗ ಘಟನೆ

ಸನ್ನಿಧಿ ಎಂದಿನಂತೆ ಶಾಲೆ ಬಿಟ್ಟ ಬಳಿಕ ಮನೆ ಕಡೆ ಹೊರಟಿದ್ದಳು. ಒಂದ್ಕಡೆ ನಿರಂತರ ಮಳೆ ಸುರಿಯುತ್ತಿತ್ತು. ಅದರ ನಡುವೆಯೇ ಶಾಲೆಯಿಂದ ಮನೆಗೆ ಬರುವಾಗ ತಾತ್ಕಾಲಿಕವಾಗಿ ನಿರ್ಮಾಣವಾಗಿರೋ ಕಾಲುಸಂಕ ದಾಟಬೇಕಿತ್ತು. ಕಾಲುಸಂಕ ದಾಟುವಾಗ ಸನ್ನಿಧಿ ಕಾಲು ಜಾರಿ ನೀರಿಗೆ ಬಿದ್ದಿದ್ದಾಳೆ.

ಬಾಲಕಿ ಸನ್ನಿಧಿಗಾಗಿ ಹುಡುಕಾಟ

ನಿರಂತರ ಮಳೆಯಿಂದಾಗಿ ಹೊಳೆಯಲ್ಲಿ ನೀರು ತುಂಬಿ ಹರಿಯುತ್ತಿತ್ತು. ಈ ವೇಳೆ ಸನ್ನಿಧಿ ಕಾಲುಸಂಕ ದಾಟಿದ್ದು ಆಗ ಮಳೆಯಿಂದ ನೆನೆದಿದ್ದ ಅಡಿಕೆ ಕಂಬಕ್ಕೆ ಕಾಲಿಟ್ಟಿದ್ದಾಳೆ. ಮೊದಲೇ ಮಳೆ ಬರುತ್ತಿದ್ದರಿಂದ ಆಯತಪ್ಪಿ ನದಿಗೆ ಬಿದ್ದಿದ್ದು ಬಾಲಕಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ. ಬಾಲಕಿಗಾಗಿ ಊರವರು ಹುಡುಕಾಟ ನಡೆಸಿದ್ದಾರೆ.

A 2nd standard girl who passed away after coming home from school in Udupi
ಕಾಲುಸಂಕದಿಂದ ಬಿದ್ದ ಬಾಲಕಿ ಸನ್ನಿಧಿ


ಇದನ್ನೂ ಓದಿ: ವಿಮಾನದಲ್ಲಿ ಹುಸಿ ಬಾಂಬ್​ ಬೆದರಿಕೆ ಪತ್ರ ಪತ್ತೆ; ಫ್ಲೈಟ್​​ ಸ್ಥಳಾಂತರ ಮಾಡಿ ತಪಾಸಣೆ

ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ರಾಜು ಪೂಜಾರಿ, ತಹಶೀಲ್ದಾರ್ ಕಿರಣ್ ಗೋರಯ್ಯ ಸೇರಿದಂತೆ ಅಧಿಕಾರಿಗಳು ಸನ್ನಿಧಿಗಾಗಿ ಹುಡುಕಾಟ ನಡೆಸ್ತಿದ್ದಾರೆ. ಸ್ಥಳೀಯರು ಕೂಡ ಶೋಧಕಾರ್ಯ ನಡೆಸುತ್ತಿದ್ದಾರೆ.

ಶಾಸಕ‌ ಸುಕುಮಾರ್ ಶೆಟ್ಟಿ ಭೇಟಿ

ಬಾಲಕಿ ನೀರುಪಾಲಾದ ಘಟನೆಗೆ ಶಾಸಕ ಸುಕುಮಾರ್ ಶೆಟ್ಟಿ ವಿಷಾದ ವ್ಯಕ್ತಪಡಿಸಿದ್ದಾರೆ. ನೀರುಪಾಲಾದ ವಿದ್ಯಾರ್ಥಿನಿ ಸನ್ನಿಧಿ ಮನೆಗೆ ಶಾಸಕ‌ ಸುಕುಮಾರ್ ಶೆಟ್ಟಿ ಭೇಟಿ ನೀಡಿದ್ರು. ಬಾಲಕಿ ಸನ್ನಿಧಿ ಪೋಷಕರಿಗೆ ಶಾಸಕ ಸುಕುಮಾರ್ ಶೆಟ್ಟಿ ಸಾಂತ್ವನ‌ ಹೇಳಿದರು.

ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಸುಕುಮಾರ್ ಶೆಟ್ಟಿ ಮಾತನಾಡಿ, ಶಾಲೆಯಿಂದ ಮನೆಗೆ ಬರುವ ವೇಳೆ ಈ ಅವಘಡ ನಡೆದಿದೆ. ಪ್ರತಿನಿತ್ಯ ಬಾಲಕಿ ಸನ್ನಧಿಯನ್ನು ತಾಯಿ ಕರೆದುಕೊಂಡು ಬರುತ್ತಿದ್ದರು. ಆದರೆ ಇಂದು ಶಾಲೆ ಮಧ್ಯಾಹ್ನ ಬಿಟ್ಟ ಕಾರಣ ಆಯಾ ಕರೆದುಕೊಂಡು ಬಂದಿದ್ದಾರೆ ಅಂದ್ರು.

ಆಯಾ 5 ಮಕ್ಕಳನ್ನ ಕಾಲು ಸೇತುವೆ ದಾಟಿಸುವ ವೇಳೆ ಈ ಮಗು ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದಿದೆ. ಬಾಲಕಿ ಮನೆಗೆ ಭೇಟಿ ಕೊಟ್ಟು ಸಂತಾಪ ಸೂಚಿಸುವುದರೊಂದಿಗೆ ಧೈರ್ಯ ತುಂಬಿದ್ದೇನೆ. ಘಟನೆ ನಡೆದ ಕಾಲ್ತೋಡು ಕಾಲುಸೇತುವೆ ಸ್ಥಳದಲ್ಲಿ ಕಿರು ಸೇತುವೆ ಮಾಡಲು ಸೂಚನೆ ನೀಡಲಾಗಿದೆ. 10 ಲಕ್ಷ ಅನುಮೋದನೆ ಸಿಕ್ಕಿದ್ದು ಕೂಡಲೇ ಕಿರು ಸೇತುವೆ ನಡೆಸಲು ಸೂಚನೆ ನೀಡಿದ್ದೇನೆ ಅಂದರು.
Published by:Thara Kemmara
First published: