Student Death: ಮೈಸೂರಿನ ಹೋಟೆಲ್​​ನಲ್ಲಿ 21 ವಯಸ್ಸಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು! ಕೊಲೆಗೈದಿರುವ ಶಂಕೆ

ಮೈಸೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಅಪೂರ್ವ ಶೆಟ್ಟಿ ಎಂಬುವವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. 21 ವರ್ಷ ಅಪೂರ್ವ ಶೆಟ್ಟಿ ಹೋಟೆಲ್ ಒಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಜೊತೆಗಿದ್ದ ಯುವಕನೇ ಕೊಲೆಗೈದಿರೋ ಶಂಕೆ ವ್ಯಕ್ತವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
21 ವರ್ಷದ ಯುವತಿಯ (Lady) ಅನುಮಾನಾಸ್ಪದ ಸಾವಿಗೆ ಮೈಸೂರು (Mysuru) ಬೆಚ್ಚಿಬಿದ್ದಿದೆ. ಮೈಸೂರಿನ ಪ್ರತಿಷ್ಠಿತ ಖಾಸಗಿ ಹೋಟೆಲ್​ನಲ್ಲಿ (Hotel) ವಾಸ್ತವ್ಯ ಹೂಡಿದ್ದ 21 ವರ್ಷ ಯುವತಿ ಅನುಮಾನಾಸ್ಪದವಾಗಿ (Suspect Death) ಸಾವನ್ನಪ್ಪಿದ್ದಾರೆ. ಅಪೂರ್ವ ಶೆಟ್ಟಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಯುವತಿ. ಇನ್ನು ಯುವತಿ ಜೊತೆಯಲ್ಲಿದ್ದ ವ್ಯಕ್ತಿ ಪರಾರಿಯಾಗಿದ್ದಾನೆ. ಈತನೇ ಕೊಲೆಗೈದಿರುವ ಶಂಕೆ (Boy escape) ವ್ಯಕ್ತವಾಗಿದೆ. ಮೈಸೂರಿನ ವಿಜಯನಗರದ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನಲ್ಲಿ (Engineering Student)ಅಪೂರ್ವ ಶೆಟ್ಟಿ ವ್ಯಾಸಂಗ ಮಾಡುತ್ತಿದ್ದರು. ಮೈಸೂರು-ಹುಣಸೂರು ರಸ್ತೆಯಲ್ಲಿರುವ ಹೋಟೆಲ್ ಘಟನೆ ನಡೆದಿದೆ. ಈ ಹೋಟೆಲ್ ಮೈಸೂರು ಜಿಲ್ಲಾಧಿಕಾರಿ ಕಚೇರಿ ಸನಿಹದಲ್ಲೇ ಇದೆ. ಇತ್ತೀಚೆಗೆ ಖ್ಯಾತ ತೆಲುಗು ನಟ ನರೇಶ್ ಮತ್ತು ಬಹುಭಾಷಾ ನಟಿ ಪವಿತ್ರಾ ಲೋಕೇಶ್ ಇದೇ ಹೋಟೆಲ್​ನಲ್ಲಿ ವಾಸ್ತವ್ಯ ಹೂಡಿದ್ದರು.

ಮೈಸೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಅಪೂರ್ವ ಶೆಟ್ಟಿ ಎಂಬುವವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. 21 ವರ್ಷ ಅಪೂರ್ವ ಶೆಟ್ಟಿ ಹೋಟೆಲ್ ಒಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಘಟನಾ ಸ್ಥಳಕ್ಕೆ ಮೈಸೂರು ನಗರ ಅಪರಾಧ ವಿಭಾಗದ ಡಿಸಿಪಿ ಪ್ರದೀಪ್ ಗುಂಟಿ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.

ಇಂಜಿನಿಯರಿಂಗ್ ಓದುತ್ತಿದ್ದ ಅಪೂರ್ವ ಶೆಟ್ಟಿ
ಪಿರಿಯಾಪಟ್ಟಣ ತಾಲ್ಲೂಕು ಹರಳಹಳ್ಳಿ ಗ್ರಾಮದ ನಿವಾಸಿ ರವಿ ಎಂಬುವರ ಪುತ್ರಿ ಅಪೂರ್ವ ಶೆಟ್ಟಿ ಸಾವನ್ನಪ್ಪಿರುವ ಯುವತಿ. ಅಪೂರ್ವ ಶೆಟ್ಟಿ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದರು. ಇನ್ನು ಸಾವನ್ನಪ್ಪಿರುವ ಸ್ಥಳಕ್ಕೆ ಬೆರಳಚ್ಚು ತಜ್ಞರು ದೌಡಾಯಿಸಿದ್ದಾರೆ. ಘಟನೆ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿ ಭೀಕರ ಆ್ಯಕ್ಸಿಡೆಂಟ್; ಜನಪ್ರಿಯ ಗಾಯಕ ನಿಧನ

ಇಂದು ಕಾಲೇಜಿನ ವಾರ್ಷಿಕೋತ್ಸವ ಇತ್ತು
ಇಂದು ಮೈಸೂರಿನ ವಿಜಯನಗರದ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಾರ್ಷಿಕೋತ್ಸವ ಸಮಾರಂಭವಿತ್ತು. ಆಗಸ್ಟ್ 30ರಂದು ಯುವಕನ ಜೊತೆ ಹೋಟೆಲ್ ಗೆ ಬಂದಿದ್ದ ಅಪೂರ್ವ ಕೊಠಡಿ ಬಾಡಿಗೆಗೆ ಪಡೆದು ವಾಸ್ತವ್ಯ ಹೂಡಿದ್ದರು. ಇದರ ನಡುವೆ ಯುವತಿ ಹೆಣವಾಗಿ ಪತ್ತೆಯಾಗಿದ್ದಾರೆ.

ಯುವತಿ ಜೊತೆಗಿದ್ದ ಯುವಕ ಎಸ್ಕೇಪ್
ಜೊತೆಯಲ್ಲಿದ್ದ ಯುವಕ ಹಿನಕಲ್ ನಲ್ಲಿ ವಾಸಿಸುತ್ತಿದ್ದ ಬಗ್ಗೆ ಮಾಹಿತಿ ದೊರೆತಿದೆ. ಪೊಲೀಸರು ಈಗ ಯುವಕನ ಮೂಲ ಕೆದಕುತ್ತಿದ್ದಾರೆ. ಈಗಾಗಲೇ ಹೋಟೆಲ್​ಗೆ ಅಪೂರ್ವ ಶೆಟ್ಟಿ ಪೋಷಕರು ಆಗಮಿಸಿದ್ದಾರೆ.

ಸ್ಥಳದಲ್ಲಿ ಪೊಲೀಸರಿಂದ ಪರಿಶೀಲನೆ
ಹೋಟೆಲ್ ನ ಆಡಳಿತ ಮಂಡಳಿಯವರು ಕರೆ ಮಾಡಿ ತಿಳಿಸಿದ್ರು. ಬಳಿಕ ಪರಿಶೀಲನೆ ನಡೆಸಿದ್ದೇವೆ. ಯುವತಿಯ ಗುರುತು ಪತ್ತೆಯಾಗಿದೆ. 21 ವರ್ಷದ ಯುವತಿ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಬೆರಳಚ್ಚು ತಜ್ಞರನ್ನು ಕರೆಸಿದ್ದೇವೆ ಅಂತಾ ಮೈಸೂರು ನಗರ ಅಪರಾಧ ವಿಭಾಗದ ಡಿಸಿಪಿ ಪ್ರದೀಪ್ ಗುಂಟಿ ಹೇಳಿದ್ದಾರೆ.

ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನೆ
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗುವುದು. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ ಅಂತಾ ಮೈಸೂರು ನಗರ ಡಿಸಿಪಿ ಪ್ರದೀಪ್ ಗುಂಟಿ ತಿಳಿಸಿದ್ದಾರೆ.

ಇದನ್ನೂ ಓದಿ: ಮುರುಘಾ ಮಠದ ಆಡಳಿತಾಧಿಕಾರಿ ಎಸ್.ಕೆ. ಬಸವರಾಜನ್, ಸೌಭಾಗ್ಯಗೆ ಜಾಮೀನು

ಕಿಲ್ಲರ್ ಬಿಎಂಟಿಸಿಗೆ ಶಿಕ್ಷಕಿ ಬಲಿ
ಕಿಲ್ಲರ್ ಬಿಎಂಟಿಸಿ ಗೆ ಮತ್ತೊಂದು ಜೀವ ಬಲಿಯಾಗಿದೆ. ಸಂತೋಷಿ ಎಂಬುವವರು ಸಾವನ್ನಪ್ಪಿದ ಮಹಿಳೆ. ಸಂಜೆ ನಾಗರಬಾವಿಯ ನಮ್ಮೂರ ತಿಂಡಿ ಅಂಡರ್ ಪಾಸ್ ಬಳಿ ಸಂತೋಷಿ ಮನೆ ಕಡೆ ಹೊರಟಿದ್ರು. ಈ ವೇಳೆ ಅಜಾಕರೂಕವಾಗಿ ಬಂದ ಬಿಎಂ ಟಿಸಿ ಮಹಿಳೆಗೆ ಡಿಕ್ಕಿ ಹೊಡೆದಿದೆ. ಸಂತೋಷಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಹೊಸಕೆರೆಹಳ್ಳಿ ಶಾಲೆಯಲ್ಲಿ ಟೀಚರ್ ಆಗಿದ್ದ ಸಂತೋಷಿ
ಸಂತೋಷಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸ್ತಿದ್ರು. ಹೊಸಕೆರೆಹಳ್ಳಿ ಸರ್ಕಾರಿ ಶಾಲೆಯಲ್ಲಿ ಟೀಚರ್ ಆಗಿ ಕೆಲಸ ಮಾಡ್ತಿದ್ರು. ಚಾಲಕನ ಅಜಾಗರೂಕತೆಯಿಂದ ಈ ಘಟನೆ ನಡೆದಿದೆ. ಅವ್ರಿಗೆ ಇಬ್ಬರು ಮಕ್ಕಳಿದ್ದಾರೆ. ದಿನನಿತ್ಯ ಓಡಾಡ್ತಿದ್ದ ರಸ್ತೆಯಲ್ಲೇ ಹೀಗಾಗಿದೆ ಅಂತಾ ಮೃತ ಸಂತೋಷಿ ಸಂಬಂಧಿ ಹೇಳಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
Published by:Thara Kemmara
First published: