Accident: ತಂದೆಯ ಎದುರೇ ಪ್ರಾಣಬಿಟ್ಟ ಪುಟ್ಟ ಮಗ! ನೋಡ ನೋಡುತ್ತಿದ್ದಂತೆ ನಡೆಯಿತು ಆ್ಯಕ್ಸಿಡೆಂಟ್

ಹೆಡ್‌ ಕಾನ್ಸ್‌ಟೇಬಲ್ ಒಬ್ಬರು ತಮ್ಮ ಮಗನನ್ನು ಕರೆದುಕೊಂಡು ಬೈಕ್‌ನಲ್ಲಿ ಹೋಗುತ್ತಿದ್ದಾಗ ಆಯಾತಪ್ಪಿ ಬಾಲಕ ರೋಡ್‌ ಮೇಲೆ ಬಿದ್ದಿದ್ದಾನೆ. ಅಷ್ಟರಲ್ಲಿ ಹಿಂದೆ ಬರುತ್ತಿದ್ದ ಸೇನೆಗೆ ಸೇರಿದ ವಾಹನ ಬಾಲಕನ ಮೇಲೆ ಹರಿದಿದೆ. ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಬೆಂಗಳೂರು: ತಂದೆ (Father) ಎದುರೇ 10 ವರ್ಷದ ಪುಟ್ಟ ಮಗ (Son) ಅಫಘಾತದಲ್ಲಿ (Accident) ಮೃತಪಟ್ಟಿರುವ (Died) ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ನಿನ್ನೆ ರಾತ್ರಿ ನಡೆದಿದೆ. ಕೆಆರ್‌ ಪುರ (KR Puram), ಹೊಸಕೋಟೆ ರಸ್ತೆಯಲ್ಲಿ (Hoskote Road) ನಿನ್ನೆ ರಾತ್ರಿ 10.30ರ ಸುಮಾರಿಗೆ ನಡೆದಿದೆ. ಹೆಡ್‌ ಕಾನ್ಸ್‌ಟೇಬಲ್ (Head Constable) ಒಬ್ಬರು ತಮ್ಮ ಮಗನನ್ನು ಕರೆದುಕೊಂಡು ಬೈಕ್‌ನಲ್ಲಿ (Bike) ಹೋಗುತ್ತಿದ್ದಾಗ ಆಯಾತಪ್ಪಿ ಬಾಲಕ ರೋಡ್‌ ಮೇಲೆ ಬಿದ್ದಿದ್ದಾನೆ. ಅಷ್ಟರಲ್ಲಿ ಹಿಂದೆ ಬರುತ್ತಿದ್ದ ಸೇನೆಗೆ (Army) ಸೇರಿದ ವಾಹನ (Vehicle) ಬಾಲಕನ ಮೇಲೆ ಹರಿದಿದೆ. ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ತಂದೆ ಜೊತೆ ಬೈಕ್‌ನಲ್ಲಿ ಹೋಗುತ್ತಿದ್ದ ಬಾಲಕ

ತಂದೆ ಸಂತೋಷ್‌ ಅವರ ಜೊತೆ ಬೈಕ್‌ನಲ್ಲಿ ಹೋಗುತ್ತಿದ್ದ ಬಾಲಕ ಜೀವನ್‌ (10) ಮೃತ ದುರ್ದೈವಿ. ಮೃತ ಬಾಲಕನ ತಂದೆ ಸಂತೋಷ್‌ ಪೊಲೀಸ್‌ ಹೆಡ್‌ ಕಾನ್‌ಸ್ಟೇಬಲ್‌ ಆಗಿದ್ದು, ಈ ಹಿಂದೆ ಕೆ.ಆರ್‌. ಪುರ ಠಾಣೆಯಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದರು. ವಾರದ ಹಿಂದಷ್ಟೇ ಅವರಿಗೆ ಬೇರೆ ಠಾಣೆಗೆ ವರ್ಗ ಆಗಿತ್ತು. ಸಂತೋಷ್‌ ಅವರು ನಿನ್ನೆ ಸಂಜೆ ಮಗನ ಜೊತೆ ಬೈಕ್‌ನಲ್ಲಿ ಕೆ.ಆರ್‌.ಪುರದ ಮಾರ್ಕೆಟ್‌ಗೆ ಹೋಗುತ್ತಿದ್ದರು. ಈ ವೇಳೆ ಈ ಭೀಕರ ಅಪಘಾತ ನಡೆದಿದೆ.

ಬೈಕ್ ಸ್ಕಿಡ್ ಆಗಿ ರಸ್ತೆ ಮೇಲೆ ಬಿದ್ದ ಬಾಲಕ

ಹೊಸಕೋಟೆ ಕೆಆರ್‌ಪುರ ರಸ್ತೆಯಲ್ಲಿ ತಂದೆ ಮಗ ಹೋಗುತ್ತಿದ್ದರು. ಸಂತೋಷ್‌ ಅವರಿಗೆ ಕೆ.ಆರ್‌.ಪುರದ ತೂಗು ಸೇತುವೆಯನ್ನು ಇಳಿದ ತಕ್ಷಣ ರಸ್ತೆ ಗುಂಡಿ ಎದುರಾಗಿದೆ. ಈ ವೇಳೆ ಅವರು ಬೈಕನ್ನು ಬದಿಗೆ ಸರಿಸಿದ್ದಾರೆ. ಈ ವೇಳೆ ಪುಡಿ ಜಲ್ಲಿಯಿಂದಾಗಿ ಬೈಕ್‌ ಜಾರಿದೆ. ಆಗ ಹಿಂಬದಿ ಕುಳಿತ್ತಿದ್ದ ಬಾಲಕ ಜೀವನ್‌ ಆಯಾ ತಪ್ಪಿ ರಸ್ತೆಗೆ ಬಿದ್ದಿದ್ದಾನೆ.

ಇದನ್ನೂ ಓದಿ: Arundhati Movie: ಅರುಂಧತಿ ಸಿನಿಮಾ ನೋಡಿ ಬೆಂಕಿ ಹಚ್ಚಿಕೊಂಡ! ಈ ಯುವಕ ಹೇಳಿದ್ದು ಕೇಳಿದ್ರೆ ಎದೆ ನಡುಗುತ್ತೆ

ಬಾಲಕನ ಮೇಲೆ ಹರಿದ ಸೇನಾ ವಾಹನ

ಬಾಲಕ ರಸ್ತೆ ಮೇಲೆ ಬೀಳುತ್ತಿದ್ದಂತೆ ಹಿಂದೆ  ಬರುತ್ತಿದ್ದ ಸೇನಾ ವಾಹನ ಬಾಲಕನ ಮೈಮೇಲೆಯೇ ಹರಿದಿದೆ. ಭಾರತೀಯ ಸೇನೆಗೆ ಸೇರಿದ ವಾಹನದ ಹಿಂಬದಿ ಚಕ್ರವು ಬಾಲಕನ ಮೇಲೆ ಹರಿದಿದೆ. ಇದರಿಂದಾಗಿ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ನೋಡ ನೋಡುತ್ತಿದ್ದಂತೆಯೇ ತಂದೆ ಎದುರೇ ಬಾಲಕ ಪ್ರಾಣ ಬಿಟ್ಟಿದ್ದಾನೆ.

ರಸ್ತೆ ಅವ್ಯವಸ್ಥೆಯಿಂದ ಪ್ರಾಣ ತೆತ್ತ ಬಾಲಕ

ಇನ್ನು ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ-44 ಹದಗೆಟ್ಟಿದ್ದು, ರಸ್ತೆಯಲ್ಲಿ ಗುಂಡಿ ಸೃಷ್ಟಿಯಾಗಿತ್ತು. ಆದರೂ ರಸ್ತೆ ದುರಸ್ತಿ ಆಗಿರಲಿಲ್ಲ. ಇನ್ನು ರಸ್ತೆಯಲ್ಲಿ ಪುಡಿ ಜಲ್ಲಿ ನಿಂತಿತ್ತು. ಹೀಗಾಗಿ ಬೈಕ್ ಸ್ಕಿಡ್ ಆಗಿ ಬಾಲಕ ರಸ್ತೆ ಮೇಲೆ ಬಿದ್ದಿದ್ದಾನೆ. ಇದರಿಂದಾಗಿಯೇ ಭೀಕರ ಅಪಘಾತ ಸಂಭವಿಸಿದ್ದು, ಬಾಲಕ ಪ್ರಾಣ ತೆರುವಂತಾಯಿತು. ಇನ್ನು ಈ ಬಗ್ಗೆ ಕೆ.ಆರ್‌.ಪುರ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ನು ಪೊಲೀಸರು ಸೇನೆಯ ವಾಹನವನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಈ ಅಪಘಾತಕ್ಕೆ ಹದಗೆಟ್ಟರಸ್ತೆಯೇ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Belagavi: ಜಿಲ್ಲೆಯಲ್ಲಿ ಚಿರತೆಗಳ ಚೆಲ್ಲಾಟ, ಜನರಿಗೆ ಪ್ರಾಣ ಸಂಕಟ; ಫಲ ನೀಡದ 7 ದಿನಗಳ ಕಾರ್ಯಾಚರಣೆ

ಅಪಘಾತದಲ್ಲಿ ಕಾರಿನಲ್ಲಿದ್ದ ವ್ಯಕ್ತಿ ಸಾವು

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ರಾ.ಹೆದ್ದಾರಿ 63 ಅರಬೈಲ್ ಸಮೀಪದ ಮೊಗದ್ದೆ ಬಳಿ ಗುರುವಾರ ಸಂಜೆ ಟ್ಯಾಂಕರ್ ಮತ್ತು ಕಾರು ನಡುವೆ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ ಧಾರುಣ ಘಟನೆ ನಡೆದಿದೆ. ಚಂಪೆಪಾಲ್ ಕೊಡ್ಲಗದ್ದೆ ನಿವಾಸಿ ಕೃಷ್ಣ ಸುಬ್ರಾಯ ಹೆಗಡೆ (70) ಎಂಬುವರು ಮೃತಪಟ್ಟಿದ್ದಾರೆ.
Published by:Annappa Achari
First published: