Karnataka Legislative Assembly: ಸೆಪ್ಟೆಂಬರ್​ 13ರಿಂದ 24ರವರೆಗೆ ವಿಧಾನ ಮಂಡಲ ಅಧಿವೇಶನ

ಆರೋಗ್ಯ ಪೂರೈಕೆ ಹುದ್ದೆಗಳ ಭರ್ತಿಗೆ ಅವಕಾಶ ಕಲ್ಪಿಸಲಾಗಿದೆ. ಬಿಎಸ್ಸಿ ನರ್ಸಿಂಗ್ ಮಾಡಿದವರಿಗೂ ಹುದ್ದೆಗಳ ‌ಭರ್ತಿಯಲ್ಲಿ ಅವಕಾಶ ನೀಡಲಾಗುತ್ತದೆ.  ಆಳಂದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ 12.48 ಕೋಟಿ ಅನುದಾನ ನೀಡಲಾಗಿದೆ ಎಂದು ಮಾಧುಸ್ವಾಮಿ ಹೇಳಿದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು(ಆ.19): ಇಂದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಹತ್ತು ದಿನಗಳ ಕಾಲ ವಿಧಾನಮಂಡಲದ ಅಧಿವೇಶನ ನಡೆಸಲು ತೀರ್ಮಾನ ಮಾಡಲಾಯಿತು. ಅದರಂತೆ ಸೆಪ್ಟೆಂಬರ್ 13ರಿಂದ 24ನೇ ತಾರೀಖಿನವರೆಗೆ 10 ದಿನಗಳ ಕಾಲ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಯೇ ವಿಧಾನ ಮಂಡಲ  ಅಧಿವೇಶನ ನಡೆಯಲಿದೆ.

  ಸಿಎಂ ನೇತೃತ್ವದ ಸಂಪುಟ ಸಭೆ ಮುಕ್ತಾಯವಾದ ಬಳಿಕ  ಕಾನೂನು ಸಚಿವ ಮಾಧುಸ್ವಾಮಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಇಂದು ಹಲವು ನಿರ್ಣಯಗಳನ್ನು ತೆಗೆದುಕೊಂಡಿದ್ದೇವೆ. ಸೆಪ್ಟೆಂಬರ್ 13 ರಿಂದ 24 ವರೆಗೆ 10 ದಿನಗಳ ಕಾಲ ವಿಧಾನ ಮಂಡಲ ಅಧಿವೇಶನ ನಡೆಯಲಿದೆ. ಬೆಂಗಳೂರಿನಲ್ಲೇ ಸದನ ನಡೆಸಲು ಒಪ್ಪಿಗೆ ಕೊಡಲಾಗಿದೆ ಎಂದರು.

  ಸಂಪುಟ ಉಪಸಮಿತಿ‌ ರಚನೆಗೆ ಒಪ್ಪಿಗೆ ನೀಡಲಾಗಿದೆ. ಆರೋಗ್ಯ ಅಧಿನಿಯಮಗಳ ವಿಧೇಯಕಕ್ಕೆ ಅನುಮತಿ ಕೊಡಲಾಗಿದೆ. ಇದರಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ ಎಂದು ಹೇಳಿದರು.

  ಸ್ಟೇಟ್ ಮೆಂಟಲ್ ಕೇರ್ ಅಥಾರಿಟಿ ತರುತ್ತಿದ್ದೇವೆ. ಹೆಣ್ಣು ಮಕ್ಕಳ‌ ಶುಚಿ ಯೋಜನೆ ಪ್ಯಾಡ್ ಖರೀದಿಗೆ ಒಪ್ಪಿಗೆ ನೀಡಲಾಗಿದೆ. ಶಿಕ್ಷಣ ಇಲಾಖೆಗೆ ಇದರ ಜವಾಬ್ದಾರಿ ನೀಡಲಾಗಿದೆ. ಆಸ್ಪತ್ರೆಗಳನ್ನು ಮೇಲ್ದರ್ಜೇಗೇರಿಸಲು ಅನುಮತಿ ಕೊಡಲಾಗಿದೆ. 478 ಕೋಟಿ ವೆಚ್ಚಕ್ಕೆ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು ಎಂದರು.

  ಇದನ್ನೂ ಓದಿ:Fact Check: ತಾಲಿಬಾನ್ ಅಪ್ರಾಪ್ತ ಹುಡುಗಿಯ ಬಲವಂತ ಮದುವೆ ಮಾಡಿದ್ದು ನಿಜವೇ? ವೈರಲ್‌ ವಿಡಿಯೋ ಹಿಂದಿನ ಸತ್ಯಾಸತ್ಯತೆ ಇಲ್ಲಿದೆ

  ಆರೋಗ್ಯ ಪೂರೈಕೆ ಹುದ್ದೆಗಳ ಭರ್ತಿಗೆ ಅವಕಾಶ ಕಲ್ಪಿಸಲಾಗಿದೆ. ಬಿಎಸ್ಸಿ ನರ್ಸಿಂಗ್ ಮಾಡಿದವರಿಗೂ ಹುದ್ದೆಗಳ ‌ಭರ್ತಿಯಲ್ಲಿ ಅವಕಾಶ ನೀಡಲಾಗುತ್ತದೆ.  ಆಳಂದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ 12.48 ಕೋಟಿ ಅನುದಾನ ನೀಡಲಾಗಿದೆ.  ಇದಕ್ಕೆ ಹೆಚ್ಚುವರಿ 2.2 ಕೋಟಿ ಹಣ ನೀಡಲಾಗುತ್ತದೆ.  ಮಂಗಳೂರು ತ್ಯಾಜ್ಯ ವಿಲೇವಾರಿ ಬಗ್ಗೆ ಗಮನ  ಹರಿಸಲಾಗಿದೆ. ಪಚ್ಚನಾಡಿಯಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಲು ಚಿಂತಿಸಲಾಗಿದೆ. ಇದಕ್ಕೆ 73.75 ಕೋಟಿ ಅನುದಾನ ನೀಡಲಾಗುತ್ತದೆ ಎಂದು ತಿಳಿಸಿದರು.

  ಇನ್ನು, ಅಮೃತ ನಿರ್ಮಲ ನಗರ ಯೋಜನೆ ಅನುಷ್ಠಾನ ಮಾಡುತ್ತೇವೆ. 73 ನಗರ-ಪಟ್ಟಣಗಳ ಸ್ವಚ್ಛತೆಗೆ ಒತ್ತು ನೀಡಿದ್ದೇವೆ.  71 ಕೋಟಿ‌ ವೆಚ್ಚವನ್ನು ಇದಕ್ಕೆ ಇಡಲಾಗಿದೆ. ಅಮೃತ್ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಮಾರಾಟಕ್ಕೆ ಮೂರು ವರ್ಷಕ್ಕೆ ಗ್ರಾಂಟ್ ನೀಡಲಾಗುತ್ತೆ.  ನೇಕಾರ, ಮೀನುಗಾರರು ಸೇರಿದಂತೆ ಕೆಲವರಿಗೆ ನೀಡ್ತೇವೆ. 750 ಶಾಲೆಗಳಲ್ಲಿ ಡಿಜಿಟಲ್ ಲೈಬ್ರರಿ ವ್ಯವಸ್ಥೆ ಮಾಡಲಾಗುತ್ತದೆ. ಇದಕ್ಕೆ 75 ಕೋಟಿ ಅನುದಾನ ಮೀಸಲಿಡಲಾಗಿದೆ. ಬೀದಿ ದೀಪ, ಸೋಲಾರ್ ವ್ಯವಸ್ಥೆಗೆ ಅವಕಾಶ ನೀಡಲಾಗಿದೆ. ಪ್ರತಿ ಗ್ರಾ.ಪಂಗೆ 25 ಲಕ್ಷ ಅನುದಾನಕ್ಕೆ ಒಪ್ಪಿಗೆ ನೀಡಲಾಗಿದೆ.

  ಪಶ್ಚಿಮ ವಾಹಿನಿ ಯೋಜನೆ ವಿಚಾರ ಕುರಿತು, ನದಿಗಳಿಗೆ ಮೇಂಟೇನ್ ಡ್ಯಾಂಗಳ ನಿರ್ಮಾಣ ಮಾಡಲಾಗುತ್ತದೆ. ಕಾರವಾರದಲ್ಲಿ ಕಾರ್ ಲ್ಯಾಂಡ್ ನಿರ್ಮಾಣ ಮಾಡುವ ಬಗ್ಗೆ ನಿರ್ಧಾರ ಮಾಡಲಾಗಿದೆ. ಬೆಂಗಳೂರು ವೃಷಭಾವತಿ ನದಿ ನೀರು ಶುದ್ಧೀಕರಣ ಮಾಡಲು ಚಿಂತಿಸಲಾಗಿದೆ. ಈ ನೀರನ್ನ ನೆಲಮಂಗಲ, ತುಮಕೂರಿಗೆ ತರುವ ಯೋಚನೆ ಮಾಡಲಾಗಿದೆ. ಇದರ ಬಗ್ಗೆ ಡಿಪಿಎಆರ್ ಪ್ರಾರಂಭವಾಗಲಿದೆ ಎಂದು ಹೇಳಿದರು.

  ಇದನ್ನೂ ಓದಿ:ವಾಲ್ಮೀಕಿ ಜಯಂತಿಯೊಳಗೆ ಶೇ. 7.5 ಮೀಸಲಾತಿ ಘೋಷಣೆ ಮಾಡ್ತೀವಿ; ಸಿಎಂ ಬೊಮ್ಮಾಯಿ ಭರವಸೆ

  ಇಂದಿರಾ ಕ್ಯಾಂಟೀನ್ ಹೆಸರು‌ ಬದಲಾವಣೆ ವಿಚಾರವಾಗಿ,  ಇದರ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದರು. ಇನ್ನು, ಭಗವಂತ ಖೂಬಾ ಸ್ವಾಗತಕ್ಕೆ ಬಂದೂಕು ಬಳಕೆ ವಿಚಾರ ಕುರಿತು ಮಾಧುಸ್ವಾಮಿ  ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಅದರ ಬಗ್ಗೆ ನಾನು ಇಲ್ಲಿ‌ಮಾತನಾಡಲ್ಲ ಎಂದರು.

  ನಾಳೆ ದೇವರಾಜ ಅರಸು ಪ್ರಶಸ್ತಿ ಪ್ರದಾನ

  ಇದೇ ವೇಳೆ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ದೇವರಾಜ ಅರಸು ಪ್ರಶಸ್ತಿ ಘೋಷಣೆ ಮಾಡಲಾಗಿದೆ. 19/20 ರ ಅರಸು ಪ್ರಶಸ್ತಿಯನ್ನು ಬಸವಪ್ರಭು ಅವರಿಗೆ ನೀಡಲಾಗ್ತಿದೆ. 19/20 ಸುಶೀಲಮ್ಮ‌ ಸುಮಂಗಲ ಸೇವಾಶ್ರಮ ಇವರಿಗೆ  ಅರಸು ಪ್ರಶಸ್ತಿ ನೀಡಲಾಗುತ್ತದೆ. 20/21 ಭಾಸ್ಕರ್ ದಾಸ್ ಅವರಿಗೆ ಅರಸು ಪ್ರಶಸ್ತಿ ನೀಡಲಾಗುತ್ತದೆ. ನಾಳೆ ಬ್ಯಾಂಕ್ವೆಟ್ ಹಾಲ್ ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಹೇಳಿದರು.

  ಸಮಾಜಕಲ್ಯಾಣ ಇಲಾಖೆಯಲ್ಲಿ ಅವ್ಯವಹಾರ ಆರೋಪ ಕುರಿತು,  ಈ ವಿಷಯ ನನ್ನ ‌ಗಮಕ್ಕೆ ಬಂದಿಲ್ಲ. ಇದರ ಬಗ್ಗೆ ಗಂಭೀರವಾಗಿ ಗಮನಹರಿಸುತ್ತೇನೆ. ಪಾರದರ್ಶಕವಾಗಿ ನಡೆಯಬೇಕೆಂಬು ನಮ್ಮ ಉದ್ದೇಶ. ಆ ನಿಟ್ಟಿನಲ್ಲಿ ಪಾರದರ್ಶಕ ಕೆಲಸ‌ ಮಾಡ್ತೇನೆ ಎಂದು ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.
  Published by:Latha CG
  First published: