ಐತಿಹಾಸಿಕ ಬಾದಾಮಿ ಅಗಸ್ತ್ಯ ತೀರ್ಥ ಹೊಂಡದ ಬಳಿಯ 96 ಮನೆಗಳಿಗೆ ಶೀಘ್ರ ಸ್ಥಳಾಂತರ ಭಾಗ್ಯ?
ಬಾದಾಮಿ ಶಾಸಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಐತಿಹಾಸಿಕ ಬಾದಾಮಿ, ಪಟ್ಟದಕಲ್ಲು, ಐಹೊಳೆ ತಾಣ ಅಭಿವೃದ್ಧಿಗೊಸ್ಕರ ಬಜೆಟ್ ನಲ್ಲಿ 100ಕೋಟಿ ಅನುದಾನ ಮೀಸಲಿರಿಸಿ, ಚಾಲುಕ್ಯ ಅಭಿವೃದ್ಧಿ ಪ್ರಾಧಿಕಾರ ಘೋಷಿಸಿದ್ದರು. ಆದರೆ ಅದು ಈವರೆಗೂ ಅಸ್ತಿತ್ವಕ್ಕೆ ಬಂದಿಲ್ಲ.
news18-kannada Updated:September 20, 2020, 9:18 AM IST

ಸಭೆ
- News18 Kannada
- Last Updated: September 20, 2020, 9:18 AM IST
ಬಾಗಲಕೋಟೆ (ಸೆಪ್ಟೆಂಬರ್ 19): ಐತಿಹಾಸಿಕ ಬಾದಾಮಿ ಗುಹಾಂತರ ದೇಗುಲ, ಅಗಸ್ತ್ಯ ತೀರ್ಥ ಹೊಂಡಕ್ಕೆ ಹೊಂದಿಕೊಂಡಂತೆ 96 ಮನೆಗಳ ಸ್ಥಳಾಂತರ ಕಾರ್ಯ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಮಾಜಿ ಮುಖ್ಯಮಂತ್ರಿ ಬಾದಾಮಿ ಶಾಸಕ ಸಿದ್ದರಾಮಯ್ಯ ಇಚ್ಛಾಶಕ್ತಿಯಿಂದಾಗಿ ಮನೆಗಳ ಸ್ಥಳಾಂತರಕ್ಕೆ ಬಹುತೇಕ ಕಾಲ ಕೂಡಿ ಬಂದಂತಾಗಿದೆ. ಬಾಗಲಕೋಟೆ ಜಿಲ್ಲೆ ಐತಿಹಾಸಿಕ ಬಾದಾಮಿಯ ಅಗಸ್ತ್ಯ ತೀರ್ಥ ಹೊಂಡದ ಬಳಿಯ ಮನೆಗಳ ಸ್ಥಳಾಂತರ ಕುರಿತು ಪಟ್ಟಣದ ವೀರಪುಲಿಕೇಶಿ ವಿದ್ಯಾ ಸಂಸ್ಥೆಯ ಬಸವ ಮಂಟಪದಲ್ಲಿ ಶನಿವಾರ ನಿವಾಸಿಗಳೊಂದಿಗೆ ಅಧಿಕಾರಿಗಳು ಸಭೆ ನಡೆಸಿದರು. 96 ಮನೆಗಳ ಸ್ಥಳಾಂತರ ಕುರಿತು ಸಾರ್ವಜನಿಕರ ಮತ್ತು ಅಧಿಕಾರಿಗಳ ಸಭೆಯಲ್ಲಿ ಐಹೊಳೆ, ಬಾದಾಮಿ, ಪಟ್ಟದಕಲ್ಲು ಸ್ಥಳಾಂತರದ ವಿಶೇಷ ಅಧಿಕಾರಿ ಹಾಗೂ ಪ್ರೊಬೇಷನರಿ ಐಎಎಸ್ ಅಧಿಕಾರಿ ಯಶವಂತ ಅಧ್ಯಕ್ಷತೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಆ ಮೂಲಕ ಅಂತಿಮವಾಗಿ ಫಲಾನುಭವಿಗಳಲ್ಲಿ ಪ್ರತಿಶತ ಅರ್ಧದಷ್ಟು ಜನರು ಮಾತ್ರ ಒಪ್ಪಿಗೆ ನೀಡಿದರಾದರೂ, ಇನ್ನುಳಿದ ಫಲಾನುಭವಿಗಳು ನಿವೇಶನ ಮೊದಲು ಒದಗಿಸಿ ನಂತರ ನಾವು ಒಪ್ಪುವುದಾಗಿ ಸಭೆಯಲ್ಲಿ ತಿಳಿಸಿ ಹೊರನಡೆದರು.
ಕೊನೆಗೆ ಮನೆಗಳ ಸ್ಥಳಾಂತರ ಕಾರ್ಯಕ್ಕೆ ಭೂಸ್ವಾಧೀನಾಧಿಕಾರಿಗಳ ಸಮ್ಮುಖದಲ್ಲಿ ಫಲಾನುಭವಿಗಳ ಅಪೇಕ್ಷೆ ಈಡೇರದ ನಡುವೆಯೂ ಒಪ್ಪಿಗೆ ದೊರೆಯಿತು. ಸಭೆಯಲ್ಲಿ ಸರಕಾರದ ಕಾನೂನಾತ್ಮಕ ಕ್ರಮಗಳ ಕುರಿತು ಅಧಿಕಾರಿಗಳು ಫಲಾನುಭವಿಗಳಿಗೆ ತಿಳಿಸಿದಾಗ ಗೊಂದಲಮಯ ವಾತಾವರಣ ಸೃಷ್ಟಿಯಾಯಿತು. ಹಿಂದಿನ ಅಧಿಕಾರಿಗಳ ನಡಾವಳಿಯ ಕುರಿತು ಕೆಲವರು ಪ್ರಸ್ತಾಪಿಸಿದರೆ, ಅದು ಬೇಡದ ವಿಷಯ, ಸದ್ಯ ನಿಮ್ಮ ಮನೆ ಮತ್ತು ಜಾಗ ಎರಡನ್ನೂ ಮೌಲ್ಯಮಾಪನಗೊಳಿಸಿ ಸರಕಾರದ ಮಾರ್ಗಸೂಚಿಯಂತೆ ನನ್ನ ಕಾರ್ಯವ್ಯಾಪ್ತಿಯಲ್ಲಿ ಏನು ಬರುತ್ತೊ ಆ ದರ ನಿಗದಿ ಮಾಡಲಾಗುವುದು. ಅದರಂತೆ ಜಾಗಕ್ಕೆ ಮೂರು ಪಟ್ಟು, ಕಟ್ಟಡಕ್ಕೆ ಎರಡು ಪಟ್ಟು ಹೆಚ್ಚಿಸಿ ಪರಿಹಾರ ಒದಗಿಸುವುದರ ಜೊತೆಗೆ ಆಸರೆ ಮನೆಗಳನ್ನು ಒದಗಿಸಲಾಗುವುದು ಎಂದರು. ಎಲ್ಲರೂ ಸ್ಥಳಾಂತರಕ್ಕೆ ಒಪ್ಪಿಗೆ ಪತ್ರ ನೀಡಿದ 15 ದಿನಗಳಲ್ಲಿ ಹಣ ನೀಡಲಾಗುವುದು ಎಂದರು. ಎ.ಎಸ್.ಐ (ಆರ್ಕ್ಯಾಲಜಿ ಸರ್ವೇ ಆಪ್ ಇಂಡಿಯಾ) ಏನಾದರೂ ನ್ಯಾಯಾಲಯದ ಮೊರೆ ಹೋದರೆ ಆಗ ನಿಮಗೆ ಒಂದು ಪೈಸೆ ಸಿಗಲ್ಲ. ನಾವು ಆಗ ಏನೂ ಮಾಡಲು ಆಗುವದಿಲ್ಲ. ಯಾಕೆಂದರೆ ಸ್ಮಾರಕಗಳ ರಕ್ಷಣೆ ಸರ್ಕಾರದ ಜೊತೆಗೆ ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ. ಇಲ್ಲಿಗೆ ದೇಶ ವಿದೇಶದಿಂದ ಪ್ರವಾಶಿಗರು ಆಗಮಿಸುವ ದೃಷ್ಟಿಯಿಂದ ಮತ್ತು ಐತಿಹಾಸಿ ಪಾರಂಪರಿಕ ನಗರವಾಗಿರುವದರಿಂದ ನೀವು ಹೊಂಡದ ದಂಡೆ ಮೇಲಿರುವ ಮನೆಗಳನ್ನು ತೆರವುಗೊಳಿಸಲೇಬೇಕು ಎಂದು ಮನವಿ ಮಾಡಿದರು.
ಮುಖ್ಯಾಧಿಕಾರಿ ಜ್ಯೋತಿ ಗಿರೀಶ ಮಾತನಾಡಿ, ಖಾಲಿ ನಿವೇಶನಕ್ಕೆ ಮೂರು ಪಟ್ಟು ಕಟ್ಟಡಕ್ಕೆ 2 ಪಟ್ಟು ಪರಿಹಾರ ನೀಡಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಸ್ಥಳಾಂತರದಲ್ಲಿ ಬರುವ ಪ್ರಸನ್ನ ವೆಂಕಟದಾಸರ ಕಟ್ಟೆಯನ್ನು ಯಥಾವತ್ತಾಗಿ ಉಳಿಸಬೇಕು ಎಂದು ಮನವಿ ಮಾಡಲಾಯಿತು. ಫಲಾನುಭವಿಗಳಾದ ಫಾರೂಕ್ ದೊಡಮನಿ, ಜಮಾದಾರ, ಶೌಕತ್ಅಲಿ ಸೌದಾಗರ, ಡಾ. ವಿ.ವೈ.ಭಾಗವತ, ಕೆ.ವಿ.ಕೆರೂರ ಸೇರಿದಂತೆ ನೂರಕ್ಕೂ ಅಧಿಕ ಫಲಾನುಭವಿಗಳು, ಉಪವಿಭಾಗಾಧಿಕಾರಿ ಎಂ.ಗಂಗಪ್ಪ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಂಜುನಾಥ ಡೊಂಬರ, ತಹಸೀಲ್ದಾರ್ ಎಸ್.ಎಸ್.ಇಂಗಳೆ, ಮುಖ್ಯಾಧಿಕಾರಿ ಜ್ಯೋತಿ ಗಿರೀಶ ಇದ್ದರು.
Karnataka Rain Updates: ಭಾರೀ ಮಳೆಗೆ ಅಕ್ಷರಶಃ ತತ್ತರಿಸಿದ ಉಡುಪಿ; ಮುಳುಗಿದ ಮನೆಗಳು
ಸ್ಥಳಾಂತರ ಆಶಾದಾಯಕ ಬೆಳವಣಿಗೆ-ತಹಶೀಲ್ದಾರ
ಬಾದಾಮಿಯ ಅಗಸ್ತ್ಯ ತೀರ್ಥ ಹೊಂಡದ ಬಳಿಯ ಪ್ರವಾಸಿ ತಾಣ ಅಭಿವೃದ್ಧಿ ದೃಷ್ಟಿಯಿಂದ 96ಮನೆಗಳ ಸ್ಥಳಾಂತರ ಬಹುದಿನದ ಬೇಡಿಕೆ. ಇವತ್ತಿನ ಸಭೆಯಲ್ಲಿ ಮನೆಗಳ ಸ್ಥಳಾಂತರಕ್ಕೆ ಆಶಾದಾಯಕ ಬೆಳವಣಿಗೆಯಾಗಿದೆ. ಕೆಲವರು ನಿವೇಶನ ಒದಗಿಸಿ ಎಂದಿದ್ದರೆ, ಇನ್ನೂ ಕೆಲವರು ಪರಿಹಾರ ಕೊಡಿ ಎಂದಿದ್ದಾರೆ. ಇನ್ನೊಂದು ಸಭೆ ಮಾಡಿ ಅಂತಿಮ ನಿರ್ಧಾರಕ್ಕೆ ಬರಲಿದ್ದೇವೆ.ಈಗಾಗಲೇ ನಿವೇಶನಕ್ಕೆ ಜಾಗ ಕೂಡಾ ಪರಿಶೀಲನೆಯಲ್ಲಿದೆ. ಶೀಘ್ರವೇ ಮನೆಗಳನ್ನು ಸ್ಥಳಾಂತರಿಸಿ, ಪ್ರವಾಸೋದ್ಯಮ ತಾಣ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಬಾದಾಮಿ ತಹಶೀಲ್ದಾರ್ ಎಸ್ ಎಸ್ ಇಂಗಳೆ ನ್ಯೂಸ್ 18 ಗೆ ತಿಳಿಸಿದರು.ಅಸ್ತಿತ್ವಕ್ಕೆ ಬಾರದ ಚಾಲುಕ್ಯ ಅಭಿವೃದ್ಧಿ ಪ್ರಾಧಿಕಾರ
ಬಾದಾಮಿ ಶಾಸಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಐತಿಹಾಸಿಕ ಬಾದಾಮಿ, ಪಟ್ಟದಕಲ್ಲು, ಐಹೊಳೆ ತಾಣ ಅಭಿವೃದ್ಧಿಗೊಸ್ಕರ ಬಜೆಟ್ ನಲ್ಲಿ 100ಕೋಟಿ ಅನುದಾನ ಮೀಸಲಿರಿಸಿ, ಚಾಲುಕ್ಯ ಅಭಿವೃದ್ಧಿ ಪ್ರಾಧಿಕಾರ ಘೋಷಿಸಿದ್ದರು. ಆದರೆ ಅದು ಈವರೆಗೂ ಅಸ್ತಿತ್ವಕ್ಕೆ ಬಂದಿಲ್ಲ. ಐತಿಹಾಸಿಕ, ಗತಕಾಲದ ವೈಭವವನ್ನು ಸಾರುವ ಬಾದಾಮಿ ಚಾಲುಕ್ಯರ ಕಾಲದ ಸ್ಮಾರಕಗಳ ಸಂರಕ್ಷಣೆ, ಪ್ರವಾಸಿ ತಾಣ ಅಭಿವೃದ್ಧಿಗೆ ಸರ್ಕಾರ ವಿಶೇಷ ಗಮನ ಕೊಡುವ ಅಗತ್ಯವಿದೆ.
ಇನ್ನು 2018ರ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ ವೇಳೆ ಬಾದಾಮಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಪರ ಬಿ ಎಸ್ ಯಡಿಯೂರಪ್ಪ ಪ್ರಚಾರಕ್ಕೆ ಬಂದಿದ್ದ ವೇಳೆ ಐತಿಹಾಸಿಕ ಬಾದಾಮಿ , ಪಟ್ಟದಕಲ್ಲು, ಐಹೊಳೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು. ಆದರೆ ಇದೀಗ ಮುಖ್ಯಮಂತ್ರಿ ಯಡಿಯೂರಪ್ಪನವರ ಕಳೆದ ಬಜೆಟ್ ನಲ್ಲಿ ಐತಿಹಾಸಿಕ ತಾಣಗಳ ಅಭಿವೃದ್ಧಿ ಅನುದಾನ ನೀಡಲಿಲ್ಲ. ಹೀಗಾಗಿ ಈ ಭಾಗದ ಪ್ರವಾಸಿ ತಾಣ ಅಭಿವೃದ್ಧಿಯಾಗದಿರುವುದಕ್ಕೆ ಪ್ರವಾಸಿಗರಲ್ಲಿ ಅಸಮಾಧಾನವಿದೆ.
ಒಟ್ಟಿನಲ್ಲಿ ಐತಿಹಾಸಿಕ ಬಾದಾಮಿ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ 96ಮನೆಗಳ ಸ್ಥಳಾಂತರ ಅಗತ್ಯವಾಗಿದ್ದು, ಮನೆ ಸ್ಥಳಾಂತರವಾದರೆ ಗುಹಾಂತರ ದೇಗುಲ, ಜೊತೆಗೆ ಮ್ಯೂಸಿಯಂ, ಹೊಂಡದ ಬಳಿಯ ಸ್ಮಾರಕಗಳನ್ನು ಒಂದೇ ಸೂರಿನಲ್ಲಿ ಅಭಿವೃದ್ಧಿಪಡಿಸಲು ಸಾಧ್ಯವಾಗಲಿದೆ. ಸರ್ಕಾರ ಬಾದಾಮಿ ಚಾಲುಕ್ಯರ ತಾಣಗಳ ಅಭಿವೃದ್ಧಿಗೆ ಒತ್ತು ಕೊಡಬೇಕಿದೆ.
ಕೊನೆಗೆ ಮನೆಗಳ ಸ್ಥಳಾಂತರ ಕಾರ್ಯಕ್ಕೆ ಭೂಸ್ವಾಧೀನಾಧಿಕಾರಿಗಳ ಸಮ್ಮುಖದಲ್ಲಿ ಫಲಾನುಭವಿಗಳ ಅಪೇಕ್ಷೆ ಈಡೇರದ ನಡುವೆಯೂ ಒಪ್ಪಿಗೆ ದೊರೆಯಿತು. ಸಭೆಯಲ್ಲಿ ಸರಕಾರದ ಕಾನೂನಾತ್ಮಕ ಕ್ರಮಗಳ ಕುರಿತು ಅಧಿಕಾರಿಗಳು ಫಲಾನುಭವಿಗಳಿಗೆ ತಿಳಿಸಿದಾಗ ಗೊಂದಲಮಯ ವಾತಾವರಣ ಸೃಷ್ಟಿಯಾಯಿತು. ಹಿಂದಿನ ಅಧಿಕಾರಿಗಳ ನಡಾವಳಿಯ ಕುರಿತು ಕೆಲವರು ಪ್ರಸ್ತಾಪಿಸಿದರೆ, ಅದು ಬೇಡದ ವಿಷಯ, ಸದ್ಯ ನಿಮ್ಮ ಮನೆ ಮತ್ತು ಜಾಗ ಎರಡನ್ನೂ ಮೌಲ್ಯಮಾಪನಗೊಳಿಸಿ ಸರಕಾರದ ಮಾರ್ಗಸೂಚಿಯಂತೆ ನನ್ನ ಕಾರ್ಯವ್ಯಾಪ್ತಿಯಲ್ಲಿ ಏನು ಬರುತ್ತೊ ಆ ದರ ನಿಗದಿ ಮಾಡಲಾಗುವುದು. ಅದರಂತೆ ಜಾಗಕ್ಕೆ ಮೂರು ಪಟ್ಟು, ಕಟ್ಟಡಕ್ಕೆ ಎರಡು ಪಟ್ಟು ಹೆಚ್ಚಿಸಿ ಪರಿಹಾರ ಒದಗಿಸುವುದರ ಜೊತೆಗೆ ಆಸರೆ ಮನೆಗಳನ್ನು ಒದಗಿಸಲಾಗುವುದು ಎಂದರು.