ಮೊಳಕಾಲ್ಮೂರಿನಲ್ಲೊಂದು ವಿಸ್ಮಯಕಾರಿ ಮುಡಿ : 20 ಅಡಿ ಮುಡಿಯನ್ನ ದೇವರಿಗೆ ಅರ್ಪಿಸಿದ 90ರ ಅಜ್ಜ

news18
Updated:September 24, 2018, 1:48 PM IST
ಮೊಳಕಾಲ್ಮೂರಿನಲ್ಲೊಂದು ವಿಸ್ಮಯಕಾರಿ ಮುಡಿ : 20 ಅಡಿ ಮುಡಿಯನ್ನ ದೇವರಿಗೆ ಅರ್ಪಿಸಿದ 90ರ ಅಜ್ಜ
  • Advertorial
  • Last Updated: September 24, 2018, 1:48 PM IST
  • Share this:
- ವಿನಾಯಕ ತೊಡರನಾಳ್,  ನ್ಯೂಸ್ 18 ಕನ್ನಡ 

ಚಿತ್ರದುರ್ಗ ( ಸೆ.24) :  ಆ ವೃದ್ದ ದೇವರ ಕಾಯಕಕ್ಕೆ ಈಡೀ ಜೀವನವನ್ನೇ ಮುಡಿಪಿಟ್ಟು 90 ವರ್ಷಗಳನ್ನೇ ಕಳೆದಿದ್ದಾನೆ. ಹುಟ್ಟಿದಾಗಿನಿಂದ ತಲೆಕೂದಲನ್ನ ದೇವರಿಗೆ ಮುಡಿಬಿಟ್ಟು ತನ್ನ ಪಶುಪಾಲನೆ ಕಾಯಕದಲ್ಲಿ ನಿರತರಾಗಿದ್ದು, 20 ಅಡಿಗೂ ಹೆಚ್ಚು ಉದ್ದನೆಯ ಜಡೆ ಬಿಟ್ಟು ಮನೆ ದೇವರ ಆಜ್ಞೆಯ ಕಾಯಕದಲ್ಲಿ ತೊಡಗಿದ್ದಾನೆ. ಈ ಕುರಿತು ವಿಶೇಷ ವರದಿ ಇಲ್ಲಿದೆ ಓದಿ....

ದೇವರು ಅಂದ್ರೆ ಜನರಲ್ಲಿ ಭಯ, ಭಕ್ತಿ, ಭಾವ ಎಲ್ಲವೂ ತುಂಭಿರುತ್ತೆ. ಇನ್ನೂ ಮನೆ ದೇವರು ಕಾಯಕ ಮಾಡೋದು ಅಂದ್ರೆ ಭಕ್ತರಿಗೆ ಜೀವನವನ್ನೇ ಮುಡಿಪಿಟ್ಟಂತ ದೈವ ಭಕ್ತಿ. ಹೌದು ಇಲ್ಲೋಬ್ಬ ವೃದ್ದ ಇಂಥದ್ದೇ ಕಾಯಕವನ್ನ ಮುಂದುವರೆಸಿ 90 ವರ್ಷಗಳೆ ಸವೆದಿದೆ. ಕೋಟೆನಾಡು ಚಿತ್ರದುರ್ಗದ ಮೊಳಕಾಲ್ಮೂರು ತಾಲ್ಲೂಕಿನ ಮುತ್ತಿಗಾರನ ಹಳ್ಳಿಯ ವೃದ್ದ ದೊಡ್ಡ ಪಾಲಯ್ಯ ಇದಕ್ಕೆ ನಿರ್ಧಶನವಾಗಿದ್ದಾನೆ. ಈ ದೊಡ್ಡ ಪಾಲಯ್ಯ 90 ವರ್ಷಗಳಿಂದ ದೇವರ ಸೇವೆಗೆ ತನ್ನ ಜೀವನವನ್ನೇ ಮುಡಿಪಿಟ್ಟು ಭಕ್ತಗಣದ ಬಾವಕ್ಕೆ ಸಾಕ್ಷಿಯಾಗಿದ್ದಾನೆ.

ಅಲ್ಲದೆ ಹೀಗೆ ಹಸು, ಹೋರಿಗಳನ್ನ ಸಾಕಿ ಸಲುಹುವ ಈ ವೃದ್ದ, ತನ್ನ ಮನೆ ದೇವರು ಶ್ರೀಶೈಲ ಮಲ್ಲಿಕಾರ್ಜುನ ‌ಸ್ವಾಮಿಯ ಹರಕೆಯ ಎತ್ತುಗಳಗೆ ಪಾಲಕನಾಗಿದ್ದು, ದೇವರ ಹರಕೆಯಂತೆ 20 ಅಡಿಯ ಜಡೆಯನ್ನು ಮುಡಿಬಿಟ್ಟಿದ್ದಾನೆ. ಈ ಬಗ್ಗೆ ಪಾಲಯ್ಯ ಅವ್ರನ್ನ ಕೇಳಿದ್ರೆ ಮಲ್ಲಿಕಾರ್ಜುನ ಸ್ವಾಮಿಯ ಆಗ್ನೆಯಂತೆ ಬಿಟ್ಟಿದ್ದೇನೆ, ಹರಕೆ ಮೀರಿದ್ರೆ ಜೀವ ಇರಲ್ಲ ಅನ್ನುತ್ತಾರೆ

ಇನ್ನೂ ದೊಡ್ಡ ಪಾಲಯ್ಯನ ತಾತಾ, ಮುತ್ತಾತನ ಕಾಲದಿಂದಲೂ ಈ ಸೇವೆ ಮುಂದುವೃದಿದ್ದು, ವಂಶ ಪಾರಂಪರ್ಯದಂತೆ , ತಾನು ಸೇವೆಗೆ ತೊಡಗಿಸಿಕೊಂಡ ದಿನದಿಂದಲೂ ತಲೆಯ ಕೂದಲನ್ನ ಎಂದೂ ಕೂಡ ಕತ್ತರಿಸಿಲ್ಲ, ಸಧ್ಯ ಪಾಲಯ್ಯನಿಗೆ 90 ವರ್ಷ ವಯಸ್ಸಾಗಿದ್ದು, ಸುಮಾರು 20 ಅಡಿಗೂ ಹೆಚ್ಚು ಮುಡಿಜಡೆ ಬೆಳೆದಿದೆ.

ಅಲ್ಲದೆ ಈ ಜಡೆಯನ್ನ ನಿರ್ವಹಿಸಲು ತಲೆಯ ಮೇಲೆ ಪೇಟದಾಕರದಲ್ಲಿ ಸುತ್ತಿ ಬಿಳಿ ವಸ್ತ್ರದಿಂದ ಕಟ್ಟಿ ಕಾಪಾಡುತ್ತಾ ಬಂದಿದ್ದಾರೆ. ಆದರೆ ಎಷ್ಠೆ ಬಾರವಿದ್ದರು ಕೂಡ ಎಂದು ತೆಗೆಯಬೇಕೆಂದೆನಿಸಿಲ್ಲ. ಅಲ್ಲದೆ ಶ್ರೀ ಶೈಲ ಮಲ್ಲಿಕಾರ್ಜುನ ಈ ದೇವರ ಎತ್ತುಗಳಿಗೆ ಸುತ್ತಮುತ್ತಲ 77 ಹಳ್ಳಿಗಳ ಭಕ್ತರು ವರ್ಷಕ್ಕೊಮ್ಮೆ ವಿಶೇಷ ಪೂಜೆ ಸಲ್ಲಿಸುತ್ತಾ ಬಂದಿದ್ದು ವಿಶೇಷವಾಗಿದೆ ಅಂತಾರೆ ಭಕ್ತರು.

ಒಟ್ಟಾರೆ ದೇವರಿಗೆ ಹರಕೆ ಹೊತ್ತ ಜನರು ವರ್ಷಕ್ಕೊಮ್ಮೆ ಮುಡಿಕೊಟ್ಟು ಹರಕೆ ತೀರಿಸೋದನ್ನ ನೋಡಿದ್ದೇವೆ,ಆದರೆ ಚಿತ್ರದುರ್ಗದ ಬುಡಕಟ್ಟು ಸಂಸ್ಕೃತಿಗೆ ಸಾಕ್ಷಿಯಾಗಿರುವ ಈ ವೃದ್ದ ಈಡೀ ಜೀವನದ ಸಮಯವನ್ನ ತನ್ನ ಮನೆಯ ದೇವರ ಕಾಯಕ ನಿರ್ವಹಿಸಲು ಜಡೆ ಬಿಟ್ಟು ಮುಡಿಪಿಟ್ಟಿದ್ದಾರೆ.
Loading...

 
First published:September 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...