• Home
  • »
  • News
  • »
  • state
  • »
  • Girl Death: ಟೀಚರ್ ಕೊಟ್ಟ ಏಟಿಗೆ ಕುಸಿದು ಬಿದ್ಲಾ ವಿದ್ಯಾರ್ಥಿನಿ; ಬಾಲಕಿ ಸಾವಿನ ಸುತ್ತ ಅನುಮಾನದ ಹುತ್ತ!

Girl Death: ಟೀಚರ್ ಕೊಟ್ಟ ಏಟಿಗೆ ಕುಸಿದು ಬಿದ್ಲಾ ವಿದ್ಯಾರ್ಥಿನಿ; ಬಾಲಕಿ ಸಾವಿನ ಸುತ್ತ ಅನುಮಾನದ ಹುತ್ತ!

ಬಾಲಕಿ ಅನುಮಾನಾಸ್ಪದ ಸಾವು

ಬಾಲಕಿ ಅನುಮಾನಾಸ್ಪದ ಸಾವು

ನಿಶಿತಾ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಇಂದು 1.30ರ ಸುಮಾರಿಗೆ ಏಕಾಏಕಿ ತರಗತಿಯಲ್ಲೇ ಕುಸಿದು ಬಿದ್ದಿದ್ದಳು. ಕೂಡಲೇ  ಶಾಲೆಯ ಶಿಕ್ಷಕರು ನಿಶಿತಾಳನ್ನು ಆಸ್ಪತ್ರೆಗೆ ಕರೆದೊಯ್ದರು.

  • News18 Kannada
  • Last Updated :
  • Karnataka, India
  • Share this:

ಬೆಂಗಳೂರು (ನ. 05): ವಿದ್ಯಾರ್ಥಿನಿಯೊಬ್ಬಳು (Student) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ರಾಮಚಂದ್ರಾಪುರದ ಖಾಸಗಿ ಶಾಲೆಯಲ್ಲಿ (Private school) ನಡೆದಿದೆ. ಗಂಗಮ್ಮನಗುಡಿ (Gangammanagudi) ಠಾಣೆ ವ್ಯಾಪ್ತಿಯಲ್ಲಿರುವ ಆರ್ ಡಿ ಇಂಟರ್ ನ್ಯಾಷನಲ್ ಶಾಲೆಯ ವಿದ್ಯಾರ್ಥಿನಿ 9 ವರ್ಷದ ನಿಶಿತಾ (Nishitha) ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಶಿಕ್ಷಕರು (Teachers) ಹೊಡೆಯುವ ವೇಳೆ ಕುಸಿದು ಬಿದ್ದಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. 


ನಿಶಿತಾ ಸಾವಿನ ಬಗ್ಗೆ ಅನುಮಾನ


ನಿಶಿತಾ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಇಂದು 1.30ರ ಸುಮಾರಿಗೆ ಏಕಾಏಕಿ ತರಗತಿಯಲ್ಲೇ ಕುಸಿದು ಬಿದ್ದಿದ್ದಳು. ಕೂಡಲೇ  ಶಾಲೆಯ ಶಿಕ್ಷಕರು ನಿಶಿತಾಳನ್ನು ಆಸ್ಪತ್ರೆಗೆ ಕರೆದೊಯ್ದರು. ನಿಶಿತಾಳನ್ನು ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದರು. ನಿಶಿತಾ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪೋಷಕರಾದ ನಾಗೇಂದ್ರ-ಸರಸ್ವತಿ ದಂಪತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


9 year old girl dies suspiciously at school Do you know what happened at school pvn
ಬಾಲಕಿ ಅನುಮಾನಾಸ್ಪದ ಸಾವು


ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿ ತನಿಖೆ


ಶಾಲೆಯ ಆಡಳಿತ ಮಂಡಳಿಯು ಬಾಲಕಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಆಕೆ ಮೃತಪಟ್ಟಿದ್ದಾಳೆ ಎಂದು ಘೋಷಿಸಿದರು. ಆಕೆಯ ದೇಹದ ಮೇಲೆ ಯಾವುದೇ ಬಾಹ್ಯ ಗಾಯಗಳು ಕಂಡುಬಂದಿಲ್ಲ. ಸಾವಿಗೆ ನಿಖರ ಕಾರಣ ತಿಳಿಯಲು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದರು. ಪೊಲೀಸರು ಶನಿವಾರ ಶಾಲೆಗೆ ಭೇಟಿ ನೀಡಿ, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ವಿಚಾರಣೆ ನಡೆಸಲಿದ್ದಾರೆ.




ಬಾಲಕಿಯ ಮರಣೋತ್ತರ ಪರೀಕ್ಷೆ

ಬಾಲಕಿಯ ಮರಣೋತ್ತರ ಪರೀಕ್ಷೆ ಸಹ ನಡೆಸಲಾಗಿದ್ದು, ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ. ಈ ಕುರಿತು ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದೆ.




ಆತ್ಮಹತ್ಯೆಗೆ ಶರಣಾದ ಬಾಲಕ


ಶಾಲೆಗೆ ಚಕ್ಕರ್ ಹಾಕಿದ್ದಕ್ಕೆ ತಾಯಿ ಬೈದು, ಒಂದೆರಡು ಏಟು ಕೊಟ್ಟಿದ್ದಕ್ಕೆ 14 ವರ್ಷದ ಬಾಲಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಪೃಥ್ವಿರಾಜ್ ನೇಣಿಗೆ ಕೊರಳೊಡ್ಡಿದ ಬಾಲಕ. ಬೆಂಗಳೂರು ಉತ್ತರ ತಾಲೂಕಿನ ಕಡಬಗೆರೆ ಗ್ರಾಮದಲ್ಲಿ ಘಟನೆ ನಡೆದಿತ್ತು. ಮೃತ ಪೃಥ್ವಿರಾಜ್ ಶಾಲೆಗೆ ಗೈರಾಗುತ್ತಿದ್ದನು. ಕಡಬಗೆರೆ ನಿವಾಸಿ ವಿಜಯ್ ಕುಮಾರ್ ಮತ್ತು ಸವಿತಾ ದಂಪತಿಯ ಮಗ. ಈ ಹಿನ್ನೆಲೆ ತಾಯಿ ಸವಿತಾ ಬೈದು, ಒಂದೆರಡು ಏಟು ನೀಡಿ ತಿಳಿ ಹೇಳಿದ್ದರು. ಪೃಥ್ವಿರಾಜ್ ಕಡಬಗೆರೆ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದನು.


ಸೀರೆಯಿಂದ ನೇಣು ಬಿಗಿದುಕೊಂಡಿದ್ದ ಬಾಲಕ


ಮನೆಯಲ್ಲಿ ಯಾರು ಇಲ್ಲದ ವೇಳೆ ಸೀರೆಯಿಂದ ನೇಣು ಬಿಗಿದುಕೊಂಡು‌ ಪೃಥ್ವಿರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮರಣೋತ್ತರ ಶವ ಪರೀಕ್ಷೆಗಾಗಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದರು. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.




ವಿದ್ಯಾರ್ಥಿನಿ ಆತ್ಮಹತ್ಯೆ



ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿರುವ ಗೀತಂ ಯೂನಿವರ್ಸಿಟಿ ಮತ್ತೆ ಸುದ್ದಿಯಲ್ಲಿದೆ. ಕೆಲ ದಿನಗಳ ಹಿಂದಷ್ಟೇ ಇಲ್ಲಿ ಆಂಧ್ರ ಹಾಗೂ ಕರ್ನಾಟಕದ ವಿದ್ಯಾರ್ಥಿಗಳು ಕಿತ್ತಾಡಿಕೊಂಡಿದ್ದರು. ಕ್ಷುಲ್ಲಕ ಕಾರಣಕ್ಕೆ ಕೈ-ಕೈ ಮಿಲಾಯಿಸಿ, ದಾಂಧಲೆ ಮಾಡಿದ್ದರು. ಇದೀಗ ಮತ್ತೊಮ್ಮೆ ಅದೇ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ದಾಂಧಲೆ ಮಾಡಿದ್ದಾರೆ.


ಅದಕ್ಕೆ ಕಾರಣ ವಿದ್ಯಾರ್ಥಿನಿ ಆತ್ಮಹತ್ಯೆ ಹೌದು, ಅದೇ ಯೂನಿವರ್ಸಿಟಿಯಲ್ಲಿ ಓದುತ್ತಿದ್ದ ಉಗಾಂಡಾ  ಮೂಲದ ವಿದ್ಯಾರ್ಥಿನಿಯೊಬ್ಬಳು ಯೂನಿವರ್ಸಿಟಿ ಕಟ್ಟಡದಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದೀಗ ಕಾಲೇಜ್‌ನಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ.

Published by:ಪಾವನ ಎಚ್ ಎಸ್
First published: