• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • SSLC ಮೌಲ್ಯಮಾಪನಕ್ಕೆ 9 ಸಾವಿರ ಶಿಕ್ಷಕರು ಗೈರು; ಫಲಿತಾಂಶ ಮೇ. 15ಕ್ಕೆ ಪ್ರಕಟ ಸಾಧ್ಯತೆ

SSLC ಮೌಲ್ಯಮಾಪನಕ್ಕೆ 9 ಸಾವಿರ ಶಿಕ್ಷಕರು ಗೈರು; ಫಲಿತಾಂಶ ಮೇ. 15ಕ್ಕೆ ಪ್ರಕಟ ಸಾಧ್ಯತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಗೈರುಹಾಜರಾಗಿರುವ ಮೌಲ್ಯಮಾಪಕರ ಪಟ್ಟಿ ಸಿದ್ದಪಡಿಸುವಂತೆ ಸೂಚಿಸಿದ್ದಾರೆ. ಈಗಲೂ ಕೂಡ ಕೆಲ ಮೌಲ್ಯಮಾಪಕರು ಸೂಕ್ತ ಕಾರಣವನ್ನು ಉಪ ನಿರ್ದೇಶಕರಿಗೆ ನೀಡಿದ್ದಲ್ಲಿ, ಅವರಿಗೆ ವಿನಾಯ್ತು ಲಭಿಸುವ ಸಂಭವವಿದೆ

  • Share this:

ಬೆಂಗಳೂರು (ಮೇ. 4):  ವಸ್ತ್ರ ಸಂಹಿತೆ ಮತ್ತು ಹಿಜಾಬ್ ಗೊಂದಲದ ನಡುವೆ ಎಸ್ ಎಸ್ ಎಲ್ ಸಿ ಪರೀಕ್ಷೆ (SSLC Exam Result) ಮುಗಿದಿದೆ. ಆದರೆ, ಮೌಲ್ಯಮಾಪನಕ್ಕೆ ಮಾತ್ರ ಗ್ರಹಣ ಹಿಡಿದಿದೆ. ಯಾಕೆಂದರೆ ಒಬ್ಬರಲ್ಲ‌ ಇಬ್ಬರಲ್ಲ  ಬರೋಬ್ಬರಿ ಒಂಬತ್ತು ಸಾವಿರ ಶಿಕ್ಷಕರು ಮೌಲ್ಯಮಾಪನಕ್ಕೆ ಗೈರಾಗಿದ್ದಾರೆ. ಇದರಿಂದ ಫಲಿತಾಂಶದ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಹೆಚ್ಚಿದೆ. ಇದೆ ತಿಂಗಳ ಮೇ. 12ರಂದು ಫಲಿತಾಂಶ (Result ನಿರೀಕ್ಷೆಯಿತ್ತು. ಆದರೆ ಮೌಲ್ಯಮಾಪನ ತಡವಾಗುತ್ತಿರುವುದು ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ.


ಮೌಲ್ಯಮಾಪನಕ್ಕೆ ಗೈರಾದ ಶಿಕ್ಷಕರು


ರಾಜ್ಯಾದ್ಯಂತ ಎಸ್ಎಸ್ಎಲ್‌ಸಿ ಪರೀಕ್ಷೆ ತೀವ್ರ ಕುತೂಹಲ ಮೂಡಿಸಿತ್ತು. ಯಾಕಂದ್ರೆ, ಹಿಜಾಬ್ ಹಾಗು ಕೇಸರಿ ಶಾಲಿನ ಗೊಂದಲ ತಾರಕ್ಕೇರಿ ಕ್ರಮೇಣವಾಗಿ ಕೊಂಚ ತಣ್ಣಗಾಗಿತ್ತು. ಅದರ ನೆರಳು ಪರೀಕ್ಷಾ ಕೇಂದ್ರಗಳ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ಅನ್ನೋ ಆತಂಕ ಕಾಡುತ್ತಿತ್ತು. ಆದ್ರೆ ಎಲ್ಲಿಯೂ ಯಾವುದೇ ರೀತಿಯ ಗೊಂದಲ ಉಂಟಾಗದೇ ಪರೀಕ್ಷೆಯೇನೋ ಸಲೀಸಾಗಿ ನಡೆಸಲಾಯ್ತು. ಇನ್ನೂ ಏಪ್ರಿಲ್‌ 21ರಿಂದ ಆರಂಭವಾಗಿದ್ದ ಮೌಲ್ಯಮಾಪನ ಇಂದಿಗೆ ಮುಗಿದಿದೆ. ಆದ್ರೆ ಮೌಲ್ಯಮಾಪನಕ್ಕೆ ಹಾಜರಾಗಬೇಕಿದ್ದ ಸಾವಿರಾರು ಶಿಕ್ಷಕರು ತಮ್ಮ ಡ್ಯೂಟಿಯಿಂದ ಜಾರಿಕೊಂಡಿದ್ದಾರೆ. ಇದರಿಂದಾಗಿ ಉಳಿದ ಮೌಲ್ಯಮಾಪಕರ ಮೇಲಿನ ಹೊರೆ ಹೆಚ್ಚಾಗಿತ್ತು. ಈ ಹಿನ್ನೆಲೆ ಕರ್ತವ್ಯಕ್ಕೆ ಗೈರು ಹಾಜರಾಗಿದ್ದ ಮೌಲ್ಯಮಾಪಕರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಕ್ಷಣ ಇಲಾಖೆ ಸೂಚಿಸಿದೆ. ಎಸ್ಎಸ್ಎಲ್‌ಸಿ ಬೋರ್ಡ್ ನಿರ್ದೇಶಕರಾದ ಹೆಚ್ ಎನ್ ಗೋಪಾಲಕೃಷ್ಣ, ಯಾರು ಸಕಾರಣ ಇಲ್ಲದೇ ಗೈರಾದ ಶಿಕ್ಷಕರ ವಿರುದ್ಧ ಶಿಕ್ಷಣ ‌ಕಾಯಿದೆ ಪ್ರಕಾರ ಮೇಲೆ ಕ್ರಮ ಕೈಗೊಳ್ಳಿ ಎಂದು ಎಲ್ಲಾ ಡಿಡಿಪಿಗಳಿಗೆ ಆದೇಶ ಮಾಡಿದ್ದೇವೆ ಎಂದು ತಿಳಿಸುತ್ತಾರೆ.


ಶಿಸ್ತು ಕ್ರಮಕ್ಕೆ ಮುಂದಾದ  ಶಿಕ್ಷಣ ಇಲಾಖೆ


ರಾಜ್ಯಾದ್ಯಂತ ಮಾರ್ಚ್ 28ರಿಂದ ಏಪ್ರಿಲ್ 11ರವರೆಗೂ ಎಸ್ಎಸ್ಎಲ್‌ಸಿ ಪರೀಕ್ಷೆಗಳನ್ನು ನಡೆಸಲಾಗಿತ್ತು. ಹಿಜಾಬ್ ಗೊಂದಲದ ನಡುವೆಯೇ ಎದುರಿಸಿದ್ದ ಮೊದಲನೇ ಪರೀಕ್ಷೆ ಕೂಡ ಇದಾಗಿತ್ತು. ಮೇ 2ನೇ ವಾರದಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆಯ ಫಲಿತಾಂಶ ಬರಲಿದೆ. ಆದ್ರೆ ಇದರ ನಡುವೆಯೇ ಈಗ ಮೌಲ್ಯಮಾಪನ ಡ್ಯೂಟಿಗೆ ಹಜಾರಾಗ ಶಿಕ್ಷಕರಿಗೆ ಶಿಸ್ತು ಕ್ರಮಕ್ಕೆ ಸೂಚನೆ ನೀಡಿದೆ. ಒಟ್ಟು ರಾಜ್ಯಾದ್ಯಂತ ಮೌಲ್ಯಮಾಪನಕ್ಕೆ 73 ಸಾವಿರ ಶಿಕ್ಷಕರ‌್ನ ಶಿಕ್ಷಣ ಇಲಾಖೆ ನೇಮಕ ಮಾಡಿತ್ತು. ಆದ್ರೆ ಇದರಲ್ಲಿ 64 ಸಾವಿರ ಶಿಕ್ಷಕರು ಹಾಜರಾಗಿದ್ರೆ, 9 ಸಾವಿರ  ಮೌಲ್ಯಮಾಪಕರು ಗೈರಾಗಿದ್ದಾರೆ. ಈ ಕುರಿತು ನಿಯಮದ ಪ್ರಕಾರ ಶಿಕ್ಷಣ ಇಲಾಖೆ ಕ್ರಮಕೈಗೊಳ್ಳಲಿದೆ.


ಇದನ್ನು ಓದಿ: ರಾಜಕಾರಣ ಯಾರಪ್ಪನ ಆಸ್ತಿಯಲ್ಲ; ಸಂಸದ ಪ್ರತಾಪ್​ ಸಿಂಹ


ಮೂರನೇ ವಾರದಲ್ಲಿ ಫಲಿತಾಂಶ


ಮೇ ಎರಡನೇ ವಾರದಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶ ನೀಡುವ ಯೋಚನೆಯಿತ್ತು. ಇದೀಗ ಮೇ ಮೂರನೆ ವಾರದಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶ ನೀಡಲಾಗುವುದು. ಇಷ್ಟರಲ್ಲಿಯೇ ಫಲಿತಾಂಶ ಘೋಷಣೆಯ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಶಿಕ್ಷಣ ಇಲಾಖೆ ಸಚಿವ ಬಿ ಸಿ ನಾಗೇಶ್ ಪ್ರತಿಕ್ರಿಯೆ ನೀಡಿದ್ದಾರೆ.


ಇದನ್ನು ಓದಿ: ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಗಳಿಗೆ ಕೊಲೆ ಬೆದರಿಕೆ


ಈಗಾಗಲೇ, ಡಿಡಿಪಿಐ ಹಾಗು ಬಿಇಒಗಳಿಗೆ ಸೂಚನೆ ನೀಡಿದ ಪ್ರೌಢಶಿಕ್ಷಣ ಮಂಡಳಿ ನಿರ್ದೇಶಕರು, ಗೈರುಹಾಜರಾಗಿರುವ ಮೌಲ್ಯಮಾಪಕರ ಪಟ್ಟಿ ಸಿದ್ದಪಡಿಸುವಂತೆ ಸೂಚಿಸಿದ್ದಾರೆ. ಈಗಲೂ ಕೂಡ ಕೆಲ ಮೌಲ್ಯಮಾಪಕರು ಸೂಕ್ತ ಕಾರಣವನ್ನು ಉಪ ನಿರ್ದೇಶಕರಿಗೆ ನೀಡಿದ್ದಲ್ಲಿ, ಅವರಿಗೆ ವಿನಾಯ್ತು ಲಭಿಸುವ ಸಂಭವವಿದೆ.


ಕೀ ಉತ್ತರ ಬಿಡುಗಡೆ


ಇನ್ನು ಪರೀಕ್ಷೆಯ ಕೀ ಉತ್ತರವನ್ನು ಈಗಾಗಲೇ ಮಂಡಳಿ ಪ್ರಕಟಿಸಿದೆ. ಏ. 12ರಂದು ಈಗಾಗಲೇ ಕೀ ಉತ್ತರ ಪ್ರಕಟವಾಗಿದ್ದು, ಅಂತಿಮ ಫಲಿತಾಂಶಕ್ಕೆ ವಿದ್ಯಾರ್ಥಿಗಳು ಕಾಯುತ್ತಿದ್ದಾರೆ

top videos
    First published: