ವಿಜಯಪುರದಲ್ಲಿ ಭೀಕರ ರಸ್ತೆ ಅಪಘಾತ; ಸ್ಥಳದಲ್ಲೇ 9 ಮಂದಿ ಸಾವು

ಘಟನೆಯಲ್ಲಿ ನಾಲ್ಕು ಜನ ಗಾಯಾಳುಗಳಲ್ಲಿಓರ್ವನ ಸ್ಥಿತಿ ಗಂಭೀರವಾಗಿದ್ದು, ಉಳಿದ ಮೂವರಿಗೆ ಗಂಭಿರ ಗಾಯಗಳಾಗಿವೆ. ಸಿಂಧಗಿ ವೈದ್ಯರ ಸೂಚನೆ ಮೇರೆಗೆ ವಿಜಯಪುರ ಜಿಲ್ಲಾಸ್ಪತ್ರೆಗೆ ಗಾಯಳುಗಳನ್ನು ರವಾನಿಸಲಾಗಿದೆ

G Hareeshkumar | news18
Updated:March 22, 2019, 8:13 AM IST
ವಿಜಯಪುರದಲ್ಲಿ ಭೀಕರ ರಸ್ತೆ ಅಪಘಾತ; ಸ್ಥಳದಲ್ಲೇ 9 ಮಂದಿ ಸಾವು
ಸಾಂದರ್ಭಿಕ ಚಿತ್ರ
G Hareeshkumar | news18
Updated: March 22, 2019, 8:13 AM IST
ವಿಜಯಪುರ (ಮಾ.22) :  ಕ್ರೂಸರ್-ಕ್ಯಾಂಟರ್ ಮುಖಾಮುಖಿ ಡಿಕ್ಕಿ ಸಂಭವಿಸಿ ಸ್ಥಳದಲ್ಲಿ 9 ಮಂದಿ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಚಿಕ್ಕಸಿಂದಗಿಯಲ್ಲಿ ನಡೆದಿದೆ.

ಸಾವಿಗಿಡಾದವರನ್ನು ಕಲಬುರ್ಗಿ ಜಿಲ್ಲೆಯ ಚಿತ್ತಾಪುರದ ಸಾಗರ(25), ಚಾಂದಬಾಶಾ(26), ಅಜೀಮ್(25), ಅಂಬರೀಶ್​(37), ಶಕೀರ(28), ಗುರು(32), ಕ್ರೂಸರ ಚಾಲಕ ಶ್ರೀನಾಥ(30), ಯುನೂಸ್(27), ಮಾಂಗಸಾಬ(27) ಎಂದು ಗುರುತಿಸಲಾಗಿದೆ. ಕ್ಯಾಂಟರ್ ಸಿಂದಗಿ ಮೂಲಕ ವಿಜಯಪುರಕ್ಕೆ ಬರುತ್ತಿತ್ತು. ಇತ್ತ ಕ್ರೂಸರ್ ನಲ್ಲಿದ್ದ ಪ್ರಯಾಣಿಕರು ಗೋವಾದಲ್ಲಿ ಪಾರ್ಟಿ ಮುಗಿಸಿ ಹಿಂತಿರುಗುವಾಗ ಈ ಘಟನೆ ನಡೆದಿದೆ.

ಘಟನೆಯಲ್ಲಿ ಐದು ಜನ ಗಾಯಾಳುಗಳಲ್ಲಿಓರ್ವನ ಸ್ಥಿತಿ ಗಂಭೀರವಾಗಿದ್ದು, ಉಳಿದ ಮೂವರಿಗೆ ಗಂಭಿರ ಗಾಯಗಳಾಗಿವೆ. ಸಿಂಧಗಿ ವೈದ್ಯರ ಸೂಚನೆ ಮೇರೆಗೆ ವಿಜಯಪುರ ಜಿಲ್ಲಾಸ್ಪತ್ರೆಗೆ ಗಾಯಳುಗಳನ್ನು ರವಾನಿಸಲಾಗಿದೆ .ಅಪಘಾತದಿಂದಾಗಿ ವಾಹನ ಸಂಪೂರ್ಣ ನಜ್ಜುಗುಜ್ಜು ಆಗಿದೆ.

ಇದನ್ನೂ ಓದಿ :  ಭೀಕರ ರಸ್ತೆ ಅಪಘಾತ; ಸ್ಥಳದಲ್ಲೇ ಆರು ಮಂದಿ ಸಾವು

ಇನ್ನೂ ಘಟನೆ ಬಗ್ಗೆ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಪಘಾತ ಸ್ಥಳಕ್ಕೆ ವಿಜಯಪುರ ಎಸ್ಪಿ ಪ್ರಕಾಶ ಅಮೃತ ನಿಕಮ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.


Loading...

 
First published:March 22, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...