• Home
  • »
  • News
  • »
  • state
  • »
  • Belagavi Session: ಸದ್ದು ಮಾಡಲಿಲ್ಲ ಬೆಳಗಾವಿ ಅಧಿವೇಶನ; ನಡೆಯಲಿಲ್ಲ ಅರ್ಥಪೂರ್ಣ ಚರ್ಚೆ!

Belagavi Session: ಸದ್ದು ಮಾಡಲಿಲ್ಲ ಬೆಳಗಾವಿ ಅಧಿವೇಶನ; ನಡೆಯಲಿಲ್ಲ ಅರ್ಥಪೂರ್ಣ ಚರ್ಚೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಡಿಸೆಂಬರ್ 30ಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಒಂದು ದಿನ ಮೊದಲೇ ಅಧಿವೇಶನ ಮೊಟಕುಗೊಂಡಿದೆ. 225 ಸದಸ್ಯರ ಪೈಕಿ 30 ಮಂದಿ ಸದಸ್ಯರು ಕೂಡ ಚರ್ಚೆಯಲ್ಲಿ ಹಾಜರಾಗಿಲ್ಲ.

  • Share this:

ಬೆಳಗಾವಿ (ಡಿ.30): ಬೆಳಗಾವಿ ಚಳಿಗಾಲದ ಅಧಿವೇಶನ (Belagavi Winter Session) ಈ ಭಾರೀ ಸದ್ದು ಮಾಡಲೇ ಇಲ್ಲ. ರಾಜ್ಯಕ್ಕೆ ಕೇಂದ್ರ ಗೃಹ ಅಮಿತ್ ಶಾ (Amit Sha) ಆಗಮನದ ಹಿನ್ನೆಲೆ  10 ದಿನಗಳ ಕಾಲ ನಡೆಯಬೇಕಿದ್ದ ಚಳಿಗಾಲದ ಅಧಿವೇಶನವನ್ನು 1 ದಿನದ ಮೊದಲೇ ಮೊಟಕುಗೊಳಿಸಲಾಗಿದೆ. ಬೆಳಗಾವಿ ಅಧಿವೇಶನದಲ್ಲಿ  ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ಆಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ರೈತರ, ಉತ್ತರ ಕರ್ನಾಟಕ (Uttara Karnataka) ಭಾಗದ ಸಮಸ್ಯೆಗಳಿಗೆ ಕೊನೆಯ ದಿನವೂ ಸೂಕ್ತ ಉತ್ತರ ಸಿಗಲಿಲ್ಲ.


ಉತ್ತರ ಕರ್ನಾಟಕ ಸಮಸ್ಯೆಗಳ ಕುರಿತು ನಡೆಯಲಿಲ್ಲ ಚರ್ಚೆ


ಬೆಳಗಾವಿ ಅಧಿವೇಶನದ ಹಿನ್ನೆಲೆ ಇಡೀ ಸರ್ಕಾರವೇ ಕುಂದಾನಗರಿಗೆ ಶಿಫ್ಟ್ ಆಗಿತ್ತು. ಆದ್ರೆ ಬೆಳಗಾವಿಯಲ್ಲಿಯೇ ಅಧಿವೇಶನ ನಡೆಸಿದರೂ, ಈ ಬಾರಿಯ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಸಮಸ್ಯೆಗಳ ಕುರಿತು ಅರ್ಥಪೂರ್ಣ ಚರ್ಚೆಗಳು ನಡೆದಿಲ್ಲ ಎಂಬುದು ನಿಜಕ್ಕೂ ವಿಪರ್ಯಾಸವಾಗಿದೆ.




ಅಧಿವೇಶನದಲ್ಲಿ ಭಾಗಿಯಾಗಲಿಲ್ಲ ಸದಸ್ಯರು


ಡಿಸೆಂಬರ್ 30ಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಒಂದು ದಿನ ಮೊದಲೇ ಅಧಿವೇಶನ ಮೊಟಕುಗೊಂಡಿದೆ. 225 ಸದಸ್ಯರ ಪೈಕಿ 30 ಮಂದಿ ಸದಸ್ಯರು ಕೂಡ ಚರ್ಚೆಯಲ್ಲಿ ಹಾಜರಾಗದ ಕಾರಣ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಕುರಿತು ಅರ್ಥಪೂರ್ಣ ಚರ್ಚೆಗಳು ನಡೆಯಲಿಲ್ಲ. ಇನ್ನು ಉತ್ತರ ಕರ್ನಾಟಕದ ಬಹುತೇಕ ಶಾಸಕರೇ ಅಧಿವೇಶನಕ್ಕೆ ಗೈರಾಗಿದ್ದು, ಜನರ ನಿರೀಕ್ಷೆಗಳನ್ನೆಲ್ಲಾ ಸುಳ್ಳಾಗಿಸಿದೆ.


ಅಧಿವೇಶನದಲ್ಲಿ ಗಡಿ ವಿವಾದದ ಚರ್ಚೆ


ಈ ಬಾರಿಯ ಅಧಿವೇಶನದ ವಿಧಾನಸಭೆ ಮತ್ತು ಪರಿಷತ್ತಿನಲ್ಲಿ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಕುರಿತಂತೆಯೇ ಹೆಚ್ಚು ಚರ್ಚೆಯಾಯಿತು. ಪಕ್ಷಾತೀತವಾಗಿ ಮೇಲ್ಮನೆ ಸದಸ್ಯರು ಮಹಾರಾಷ್ಟ್ರ ಸರ್ಕಾರದ ನಿಲುವನ್ನು ಖಂಡಿಸಿದರು. ಸರ್ಕಾರಕ್ಕೆ ಬೆಳಗಾವಿ ಗಡಿ ವಿವಾದ ಬಿಸಿ ತುಪ್ಪವಾಗಿದ್ದು, ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.


ಅಧಿವೇಶನ ಆರಂಭಕ್ಕೂ ಒಂದು ದಿನ ಮೊದಲು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪತ್ರಿಕಾಗೋಷ್ಠಿಯಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆ ಗರಿಷ್ಠ ಸಮಯವನ್ನು ವಿನಿಯೋಗಿಸುವುದಾಗಿ ಹೇಳಿದ್ದರು. ಆಡಳಿತಾರೂಢ ಬಿಜೆಪಿ ಸರ್ಕಾರದ ಕೊನೆಯ ಅಧಿವೇಶನವಾಗಿರುವುದರಿಂದ ಎಲ್ಲಾ ಶಾಸಕರು ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಅವರು ಹೇಳಿದ್ದರು. ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಅಧಿವೇಶನಕ್ಕೆ ಗೈರು ಹಾಜರಾಗಲು ಅನುಮತಿ ನೀಡಲಾಗುವುದು ಎಂದು ತಿಳಿಸಿದ್ದರು.


6 ಮಸೂದೆಗಳ ಅಂಗೀಕಾರ


ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 10,000 ಜನರು ಗ್ಯಾಲರಿಯಿಂದ ಚರ್ಚೆಗೆ ಸಾಕ್ಷಿಯಾದರು. ವಿಧಾನಸಭೆಯಲ್ಲಿ 41 ಗಂಟೆ 20 ನಿಮಿಷಗಳ ಕಾಲ ಕಲಾಪ ನಡೆದರೂ ಎರಡು ಗಂಟೆಯೂ ಕ್ಷೇತ್ರದ ಸಮಸ್ಯೆಗಳಿಗೆ ಮೀಸಲಿಡಲಾಗಲಿಲ್ಲ. ವಿಧಾನಸಭೆಯಲ್ಲಿ ರಾಜ್ಯದ ವಿವಿಧ ಮಸೂದೆಗಳು, ಪ್ರಶ್ನೆಗಳು ಮತ್ತು ಸಮಸ್ಯೆಗಳ ಕುರಿತು 45 ಗಂಟೆಗಳ ಕಾಲ ಚರ್ಚೆಗಳನ್ನು ನಡೆಸಲಾಯಿತು. 6 ಮಸೂದೆಗಳನ್ನು ಅಂಗೀಕರಿಸಲಾಯಿತು.


ಸಾವರ್ಕರ್ ಫೋಟೋ ಅನಾವರಣ ವಿವಾದ


ಬೆಳಗಾವಿ ಅಧಿವೇಶನ ಮೊದಲ ದಿನವೇ ವಿಧಾನಸಭೆಯಲ್ಲಿ ಸಾವರ್ಕರ್ ಫೋಟೋ ಅನಾವರಣ ವಿವಾದ ತಲೆದೋರಿತ್ತು. ಸಾವರ್ಕರ್ ಮೂಲಕ ವಿಪಕ್ಷವನ್ನು ಕಟ್ಟಿಹಾಕಲು ಬಿಜೆಪಿ ಮುಂದಾಗಿತ್ತು. ಆದರೆ ಎಚ್ಚರಿಕೆಯ ಹೆಜ್ಜೆ ಇಟ್ಟ ಕಾಂಗ್ರೆಸ್ ಸುವರ್ಣಸೌಧದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಸಾವರ್ಕರ್ ಜೊತೆಗೆ ಶಿಶುನಾಳ ಶರೀಫ, ಜವಹರಲಾಲ್ ನೆಹರೂ ಮುಂತಾದ ಮಹನೀಯರ ಫೋಟೋ ಹಾಕುವಂತೆ ಆಗ್ರಹಿಸಿತು. ಈ ಮೂಲಕ ಫೋಟೋ ವಿವಾದವನ್ನು ಮುಂದುವರಿಸದೆ ಪ್ರತಿಭಟನೆಯನ್ನಷ್ಟೇ ದಾಖಲಿಸಿತು.


ಇದನ್ನೂ ಓದಿ: Amit Sha: ಹಳೇ ಮೈಸೂರು ಭಾಗದ ಮೇಲೆ ಬಿಜೆಪಿ ಕಣ್ಣು; ಮಂಡ್ಯದಲ್ಲಿ ಮೊಳಗಲಿದೆ ಚುನಾವಣಾ ರಣಕಹಳೆ!


ಬೆಳಗಾವಿಯ ಸುವರ್ಣ ವಿಧಾನಸೌಧದ ವಿಧಾನಮಂಡಲ ಅಧಿವೇಶನದ ಹಿನ್ನಲೆಯಲ್ಲಿ ನಿತ್ಯವೂ ನೂರಾರು ಪ್ರತಿಭಟನೆ ನಡೆದವು. ರೈತರು, ವಿವಿಧ ಸಂಘಟನೆಗಳು ತಮ್ಮ ಬೇಡಿಕೆ ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಿದ್ರು

Published by:ಪಾವನ ಎಚ್ ಎಸ್
First published: