• Home
  • »
  • News
  • »
  • state
  • »
  • Koppal: 8ನೇ ತರಗತಿ ವಿದ್ಯಾರ್ಥಿನಿ 6 ತಿಂಗಳ ಗರ್ಭಿಣಿ; ಮೂವರಿಂದ ಅತ್ಯಾಚಾರ ಶಂಕೆ

Koppal: 8ನೇ ತರಗತಿ ವಿದ್ಯಾರ್ಥಿನಿ 6 ತಿಂಗಳ ಗರ್ಭಿಣಿ; ಮೂವರಿಂದ ಅತ್ಯಾಚಾರ ಶಂಕೆ

ಮಹಿಳಾ ಪೊಲೀಸ್ ಠಾಣೆ

ಮಹಿಳಾ ಪೊಲೀಸ್ ಠಾಣೆ

ಬಾಲಕಿ ಅತ್ಯಾಚಾರದ ಬಳಿಕ ಮಾನಸಿಕ ಖಿನ್ನತೆಗೆ (Mental Illness) ಒಳಗಾಗಿದ್ದಾಳೆ ಎಂದು ತಿಳಿದು ಬಂದಿದೆ. ಆಕೆಯ ದೈಹಿಕ ಬದಲಾವಣೆ ಕಂಡು ಪೋಷಕರು ವಿಚಾರಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

  • News18 Kannada
  • 4-MIN READ
  • Last Updated :
  • Koppal, India
  • Share this:

ಎಂಟನೇ ತರಗತಿ ವಿದ್ಯಾರ್ಥಿನಿ (8th Class Student) ಗರ್ಭಿಣಿಯಾಗಿರುವ (Pregnant) ಆಘಾತಕಾರಿ ಘಟನೆ ಕೊಪ್ಪಳ ತಾಲೂಕಿನಲ್ಲಿ (Koppal Taluk) ಬೆಳಕಿಗೆ ಬಂದಿದೆ. ವಿದ್ಯಾರ್ಥಿನಿ ಮೇಲೆ ಮೂವರಿಂದ ಅತ್ಯಾಚಾರ ನಡೆದಿರುವ ಅನುಮಾನಗಳು ವ್ಯಕ್ತವಾಗಿವೆ. ಕೊಪ್ಪಳ ತಾಲೂಕಿನ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿನಿ ಭಯದಿಂದ ತನ್ನ ಮೇಲಾದ ಅತ್ಯಾಚಾರವನ್ನು ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ಇದೀಗ ಆರು ತಿಂಗಳ ನಂತರ ಆಕೆ ಗರ್ಭಿಣಿಯಾಗಿದ್ದರಿಂದ ಈ ವಿಷಯ ಪೋಷಕರಿಗೆ (Parents) ಗೊತ್ತಾಗಿದೆ. ಈ ಸಂಬಂಧ ವಿದ್ಯಾರ್ಥಿನಿ ಪೋಷಕರು ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೋಕ್ಸೋ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ (Judicial Custody) ನೀಡಿದೆ.


ಬಾಲಕಿ ಅತ್ಯಾಚಾರದ ಬಳಿಕ ಮಾನಸಿಕ ಖಿನ್ನತೆಗೆ (Mental Illness) ಒಳಗಾಗಿದ್ದಾಳೆ ಎಂದು ತಿಳಿದು ಬಂದಿದೆ. ಆಕೆಯ ದೈಹಿಕ ಬದಲಾವಣೆ ಕಂಡು ಪೋಷಕರು ವಿಚಾರಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.


ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಬಂಧಿತ ಆರೋಪಿ ಬಾಲಕಿ ವಾಸವಾಗಿರುವ ಗ್ರಾಮದ ನಿವಾಸಿಯಾಗಿದ್ದಾನೆ.


ಪೋಕ್ಸೋ ಕೇಸ್​, ಪ್ರಿನ್ಸಿಪಾಲ್ ಅರೆಸ್ಟ್


ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ವಿರುದ್ಧ ಲೈಂಗಿಕ ಕಿರುಕುಳ ಕೇಸ್ ದಾಖಲು ಆಗಿದೆ. ಪ್ರಿನ್ಸಿಪಾಲ್ ವಿರುದ್ಧ ಪೊಕ್ಸೊ ಪ್ರಕರಣ ದಾಖಲಾಗಿದ್ದು, ಆತನನ್ನು ಬಂಧಿಸಲಾಗಿದೆ. ಯಾದಗಿರಿ ಮಹಿಳಾ ಪೋಲಿಸ್ ಠಾಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನೀಡಿದ ದೂರಿನನ್ವಯ ಕೇಸ್ ದಾಖಲಾಗಿತ್ತು.


ವಿದ್ಯಾರ್ಥಿನಿಯರ ಜೊತೆ ಅನುಚಿತ ವರ್ತನೆ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ವಿದ್ಯಾರ್ಥಿನಿಯರು ತಮಗಾದ ನೋವನ್ನು ಆಪ್ತ ಸಮಾಲೋಚಕರ ಬಳಿ ತೊಡಿಕೊಂಡಿದ್ದರು.


ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ನೇತೃತ್ವದಲ್ಲಿ ಈ ಪ್ರಕರಣ ಪರಿಶೀಲನೆ ಮಾಡಲಾಗಿತ್ತು, ಕೆಲ ದಿನಗಳ ಹಿಂದೆ ಪ್ರಾಂಶುಪಾಲರ ವಿರುದ್ಧ ದೂರು ಬಂದ ಹಿನ್ನಲೆ ಯಾದಗಿರಿ ಡಿಸಿ ವಸತಿ ಶಾಲೆಯ ಪ್ರಾಂಶುಪಾಲ ಕರ್ತವ್ಯದಿಂದ ಬಿಡುಗಡೆಗೊಳಿಸಿ ಆದೇಶಿಸಿದ್ದರು.


ಮನೆಗಳ್ಳ ಅರೆಸ್ಟ್​, ಚಿನಾಭರಣ ಜಪ್ತಿ


ವಿಜಯನಗರದ ಗುಡೇಕೋಟೆ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ, 5 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ಮಾಭರಣ ವಶಕ್ಕೆ ಪಡೆದಿದ್ದಾರೆ.


ಇದನ್ನೂ ಓದಿ: POCSO Act: ಪೋಕ್ಸೋ ಕಾಯ್ದೆ ಎಷ್ಟು ಕಠಿಣವಾಗಿದೆ? ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಶಿಕ್ಷೆಯೇನು?


ಮನೆ ಕಳ್ಳತನ ಮಾಡಿದ ಆರೋಪಿಯ ಬಂಧನ ಮಾಡಲಾಗಿದೆ. 24 ವರ್ಷದ ಸದ್ದಾಂ ಹುಸೇನ್‌ ಬಂಧಿತ ಆರೋಪಿ. ಆತನಿಂದ 5 ಲಕ್ಷದ 17 ಸಾವಿರದ 500 ರೂಪಾಯಿ ಮೌಲ್ಯದ 115 ಗ್ರಾಂ ಬಂಗಾರ ವಶಕ್ಕೆ ಪಡೆಯಲಾಗಿದೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.


ಅಪ್ರಾಪ್ತೆಗೆ ಲೈಂಗಿಕ ಕಿರುಕುಳ; ಕಂಬಕ್ಕೆ ಕಟ್ಟಿ ಕಾಮುಕನಿಗೆ ಥಳಿಸಿದ ಪೋಷಕರು


ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ವರದಿಯಾಗಿದ್ದು, ಡಿಸೆಂಬರ್ 13 ರಂದು ಕರೆಕಾಡು ಎಂಬಲ್ಲಿ ನಡೆದಿದೆ. ಬೈಕ್ ಮೂಲಕ ಹಿಂಬಾಲಿಸಿ ಯುವಕನೋರ್ವ ಬಾಲಕಿ ಜೊತೆಗೆ ಅಸಭ್ಯವಾಗಿ ವರ್ತಿಸಿ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದನು.


ಇದರಿಂದ ಬೇಸತ್ತ ಬಾಲಕಿ ಕೊನೆಗೆ ಈ ವಿಚಾರವನ್ನು ತನ್ನ ಪೋಷಕರ ಬಳಿ ಹೇಳಿಕೊಂಡಿದ್ದಳು.


ಕಾಮುಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪೋಷಕರು


ಮರುದಿನ ಮತ್ತೆ ಕರೆಕಾಡು ಪ್ರದೇಶದಲ್ಲಿ ಬಾಲಕಿಯನ್ನು ಹಿಂಬಾಲಿಸಿ ಕಿರುಕುಳ ನೀಡುವುದನ್ನು ಆರೋಪಿ ಮುಂದುವರಿಸಿದ್ದಾನೆ.


ಹೀಗಾಗಿ ಬಾಲಕಿಯಿಂದ ಮಾಹಿತಿ ಪಡೆದ ಪೋಷಕರು ಆತನಿಗೆ ತಿಳಿಯದಂತೆ ಬಾಲಕಿಯನ್ನು ಹಿಂಬಾಲಿಸಿದ್ದಾರೆ.


ಈ ವೇಳೆ ಆರೋಪಿ ಮತ್ತೆ ತನ್ನ ಹಳೆ ಚಾಳಿಯನ್ನು ಬಾಲಕಿಯೊಂದಿಗೆ ಮುಂದುವರಿಸಿದ್ದನ್ನು ಕಂಡು ಬಾಲಕಿಯ ಪೋಷಕರು ಮತ್ತು ಅವರ ಜೊತೆಗಿದ್ದವನ್ನು ಆತನನ್ನು ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ್ದಾರೆ.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು