HOME » NEWS » State » 86TH ALL INDIA KANNADA LITERARY CONFERENCE IN HAVERI HK

ಹಾವೇರಿಗೆ ಕೊನೆಗೂ ದಕ್ಕಿದ ಸಮ್ಮೇಳನ ಆತಿಥ್ಯ - ಕಾರ್ಯಕಾರಣಿ ಸಭೆಯಲ್ಲಿ ಸರ್ವಾನುಮತದ ನಿರ್ಣಯ

86ನೇ ಅಖಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆತಿಥ್ಯ ವಹಿಸಿಕೊಳ್ಳಲು ಹಾವೇರಿ, ಚಿಕ್ಕಬಳ್ಳಾಪುರ ಹಾಗೂ ಮಂಗಳೂರಿನ ಮೂಡಬಿದರೆ ನಡುವೆ ತೀವ್ರ ಪೈಪೋಟಿ ನಡೆಯಿತು.

news18-kannada
Updated:February 6, 2020, 10:22 PM IST
ಹಾವೇರಿಗೆ ಕೊನೆಗೂ ದಕ್ಕಿದ ಸಮ್ಮೇಳನ ಆತಿಥ್ಯ - ಕಾರ್ಯಕಾರಣಿ ಸಭೆಯಲ್ಲಿ ಸರ್ವಾನುಮತದ ನಿರ್ಣಯ
ಕನ್ನಡ ಬಾವುಟ
  • Share this:
ಕಲಬುರ್ಗಿ(ಫೆ.06) : ಮುಂದಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳವನ್ನು ಹಾವೇರಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಕಲಬುರ್ಗಿಯ ಜಿಡಿಎ ಕಛೇರಿ ಸಭಾಂಗಣದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿಣಿ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ.

86ನೇ ಅಖಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆತಿಥ್ಯ ವಹಿಸಿಕೊಳ್ಳಲು ಹಾವೇರಿ, ಚಿಕ್ಕಬಳ್ಳಾಪುರ ಹಾಗೂ ಮಂಗಳೂರಿನ ಮೂಡಬಿದರೆ ನಡುವೆ ತೀವ್ರ ಪೈಪೋಟಿ ನಡೆಯಿತು. ಜಿಲ್ಲಾ ಹಾಗೂ ಗಡಿನಾಡ ಸೇರಿ 39 ಅಧ್ಯಕ್ಷರು ಸಭೆಯಲ್ಲಿ ಭಾಗಿಯಾಗಿದ್ದರು. ಹಾವೇರಿ ಪರ 20 ಮತ ಬಿದ್ದರೆ, ಚಿಕ್ಕಬಳ್ಳಾಪುರ ಪರ 18 ಮತಗಳು ಬಿದ್ದವು.

ಅಂತಿಮವಾಗಿ ಹಾವೇರಿ ನಗರದಲ್ಲಿಯೇ ಸಮ್ಮೇಳನ ನಡೆಸಲು ಸರ್ವಾನುಮತದ ನಿರ್ಧಾರ ಕೈಗೊಳ್ಳಲಾಯಿತು.

ಸಭೆಯ ನಂತರ ಮಾಹಿತಿ ನೀಡಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ, ಹಿಂದೆ ಆದಂತೆ ಗೊಂದಲವಾಗಬಾರದೆಂದು ಸುಧೀರ್ಘವಾಗಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ. ಹಿಂದೆ ರಾಣೆಬೆನ್ನೂರಿನಲ್ಲಿ ಸಮ್ಮೇಳನ ನಡೆಸಲು ತೀರ್ಮಾನಿಸಿದಾಗ ಸಾಕಷ್ಟು ಗೊಂದಲಗಳಾಗಿದ್ದವು. ಇದೇ ರೀತಿಯ ಗೊಂದಲ ಮರುಕಳಿಸಬಾರದೆಂದು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಣಯ ಕೈಗೊಳ್ಳಲಾಗಿದೆ ಎಂದರು.

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹರಿದು ಬಂದ ಜನಸಾಗರ; ಈ ಬಾರಿ ಪುಸ್ತಕ ಮಾರಾಟ ಸೂಪರ್…!

ಸಾಹಿತ್ಯ ಪರಿಷತ್ ಒಂದೇ ಅಲ್ಲದೆ ಜನಪ್ರತಿನಿಧಿಗಳೂ ಸಹ ಪತ್ರ ಕೊಟ್ಟಿದ್ದು, ಒಮ್ಮತದ ಅಭಿಪ್ರಾಯ ವ್ಯಕ್ತವಾಗಿದೆ. ಅಲ್ಲದೆ ಜಿಲ್ಲಾ ಕೇಂದ್ರವಾಗಿ ಅಸ್ತಿತ್ವಕ್ಕೆ ಬಂದ ನಂತರ ಒಮ್ಮೆಯೂ ಹಾವೇರಿಯಲ್ಲಿ ಸಮ್ಮೇಳನ ನಡೆದಿಲ್ಲ. ಈ ಎಲ್ಲ ಕಾರಣದಿಂದಾಗಿ ಹಾವೇರಿಗೆ ಸಮ್ಮೇಳನದ ಆತಿಥ್ಯ ನೀಡಲಾಗಿದ್ದು, ಈ ವರ್ಷಾಂತ್ಯ ಅಥವಾ ಮುಂದಿನ ವರ್ಷದಲ್ಲಿ ಸಮ್ಮಳನ ನಡೆಯಲಿದೆ ಎಂದು ಮನು ಬಳಿಗಾರ ತಿಳಿಸಿದ್ದಾರೆ.
Youtube Video
First published: February 6, 2020, 10:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories