ದೇಹದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ 86 ವಯಸ್ಸಿನ ಹಿರಿಯಜ್ಜಿ!

ಮನುಷ್ಯರಾದವರು ಸಾವಿನ ನಂತರವೂ ಇನ್ನೊಬ್ಬರ ಜೀವನದಲ್ಲಿ ಬೆಳಕು ತರಬೇಕೆಂದರೆ ದೇಹ ಮತ್ತು ಅಂಗಾಂಗ ದಾನ ಬಹುಮುಖ್ಯ. ಕಣ್ಣು, ಕಿಡ್ನಿ, ಲಿವರ್‌, ಹೃದಯ, ಚರ್ಮ ಏನು ಬೇಕಾದರೂ ದಾನ ಮಾಡಬಹುದು. ಜನರು ತಪ್ಪು ತಿಳಿವಳಿಕೆ ಬಿಟ್ಟು ದೇಹ ಮತ್ತು ಅಂಗಾಂಗ ದಾನಕ್ಕೆ ಮುಂದಾಗಬೇಕು ಎಂದು ವೈದ್ಯರು ಜಾಗೃತಿ ಮೂಡಿಸಿದರು.

news18-kannada
Updated:January 11, 2020, 7:25 PM IST
ದೇಹದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ 86 ವಯಸ್ಸಿನ ಹಿರಿಯಜ್ಜಿ!
ಮುರಗೆಮ್ಮ ಬಸಪ್ಪ ಹೂಗಾರ.
  • Share this:
ಹುಬ್ಬಳ್ಳಿ: ಹುಬ್ಬಳ್ಳಿಯ ವೃದ್ಧೆಯೊಬ್ಬರು ದೇಹದಾನ ಮಾಡುವ ಮೂಲಕ ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾರೆ. ಮುರಗೆಮ್ಮ ಬಸಪ್ಪ ಹೂಗಾರ ಎಂಬುವವರು ದೇಹದಾನ ಮಾಡಿ ಇಹಲೋಕ ತ್ಯಜಿಸಿದ್ದಾರೆ.

ಕಮಡೊಳ್ಳಿ ಗ್ರಾಮದವರಾದ ಮುರಗೆಮ್ಮನವರು ಹುಬ್ಬಳ್ಳಿಯ ನವನಗರದಲ್ಲಿರುವ ಪುತ್ರ ಲೋಚನೇಶ್‌ ಹೂಗಾರ್‌ ಮನೆಯಲ್ಲಿ ವಾಸಿಸುತ್ತಿದ್ದರು. 86 ವರ್ಷ ವಯಸ್ಸಿನ ಮುರಗೆಮ್ಮ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಮರಣದ ನಂತರ ತನ್ನ ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡಲು ಬಯಸಿದ್ದರು.

ಪುತ್ರರ ಸಮ್ಮತಿಯೊಂದಿಗೆ ದೇಹದಾನ

ದೇಹದಾನ ಮಾಡುವ ವಿಷಯವನ್ನು ಪುತ್ರರಾದ ಲೋಚನೇಶ್‌ ಹೂಗಾರ್ ಮತ್ತು ಗುರುರಾಜ್‌ ಹೂಗಾರ್‌ ಗಮನಕ್ಕೆ ತಂದಿದ್ದರು. ಮುರಗೆಮ್ಮನವರ ಅಂತಿಮ ಆಸೆಗೆ ಒಪ್ಪಿಗೆ ಸೂಚಿಸಿದ್ದ ಪುತ್ರರು ದೇಹದಾನಕ್ಕೆ ಒಪ್ಪಿದ್ದರು. ಬೈಲಹೊಂಗಲದ ಡಾ. ರಾಮಣ್ಣನವರ ಚಾರಿಟಬಲ್ ಟ್ರಸ್ಟ್ ಮುಖಾಂತರ ಕೆಎಲ್‍ಇ ವಿಶ್ವವಿದ್ಯಾಲಯದ ಬಿಎಂಕೆ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯಕ್ಕೆ ದಾನ ಮಾಡಲು ಒಪ್ಪಿಗೆ ಸೂಚಿಸಿದ್ದರು.

ಮೂಢನಂಬಿಕೆ ತೊರೆದು ದೇಹ ಮತ್ತು ಅಂಗಾಂಗ ದಾನ ಮಾಡಿ

ನಿನ್ನೆ ಸಾಯಂಕಾಲ ಹೃದಯಾಘಾತದಿಂದ ಮುರಗೆಮ್ಮ ಹೂಗಾರ್‌ ಇಹಲೋಕ ತ್ಯಜಿಸಿದ್ದಾರೆ. ಅವರ ಅಂತಿಮ ಆಸೆಯಂತೆ ಪುತ್ರರು ದೇಹವನ್ನು ದಾನ ಮಾಡಿದ್ದಾರೆ. ಹುಬ್ಬಳ್ಳಿಯ ನವನಗರಕ್ಕೆ ಬಂದ ಡಾ. ರಾಮಣ್ಣವರ್‌ ಆಸ್ಪತ್ರೆ ವೈದ್ಯರು ಮೃತದೇಹವನ್ನು ತಮ್ಮ ಸುಪರ್ದಿಗೆ ಪಡೆದಿದ್ದಾರೆ. ದೇಹದಾನದ ಮಹತ್ವದ ಕುರಿತು ಸಾರ್ವಜನಿಕರಿಗೆ ತಿಳಿಸಿದ್ದಾರೆ. ಮೂಢನಂಬಿಕೆಯ ಕಾರಣ ಬಹುತೇಕರು ದೇಹದಾನ ಮತ್ತು ಅಂಗಾಂಗ ದಾನ ಮಾಡಲು ಮುಂದೆ ಬರಲ್ಲ. ಆದರೆ ಮನುಷ್ಯರಾದವರು ಸಾವಿನ ನಂತರವೂ ಇನ್ನೊಬ್ಬರ ಜೀವನದಲ್ಲಿ ಬೆಳಕು ತರಬೇಕೆಂದರೆ ದೇಹ ಮತ್ತು ಅಂಗಾಂಗ ದಾನ ಬಹುಮುಖ್ಯ. ಕಣ್ಣು, ಕಿಡ್ನಿ, ಲಿವರ್‌, ಹೃದಯ, ಚರ್ಮ ಏನು ಬೇಕಾದರೂ ದಾನ ಮಾಡಬಹುದು. ಜನರು ತಪ್ಪು ತಿಳಿವಳಿಕೆ ಬಿಟ್ಟು ದೇಹ ಮತ್ತು ಅಂಗಾಂಗ ದಾನಕ್ಕೆ ಮುಂದಾಗಬೇಕು ಎಂದು ವೈದ್ಯರು ಜಾಗೃತಿ ಮೂಡಿಸಿದರು. ಮೃತ ಹಿರಿಯ ಜೀವದ ಆತ್ಮಕ್ಕೆ ಶಾಂತಿ ಕೋರಿ ಸ್ಥಳೀಯ ನಾಗರಿಕರು ಪ್ರಾರ್ಥನೆ ಸಲ್ಲಿಸಿದರು. ನಂತರ ವೈದ್ಯರು ಮೃತ ದೇಹವನ್ನು ವೈದ್ಯಕೀಯ ಆಸ್ಪತ್ರೆಗೆ ಕೊಂಡೊಯ್ದರು.

ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲಬದುಕಿದ್ದಾಗ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದ ಮುರಗೆಮ್ಮನವರು ಸಾವಿನಲ್ಲಿಯೂ ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ತಮ್ಮ ದೇಹವನ್ನೇ ದಾನ ಮಾಡಿ ಇಹಲೋಕ ತ್ಯಜಿಸಿದ್ದಾರೆ.

ಇದನ್ನು ಓದಿ: ವಿಶ್ವಪ್ರಸಿದ್ದ ಹಂಪಿ ಉತ್ಸವದಲ್ಲಿ ಯಶ್ ಹವಾ; ಕೆಜಿಎಫ್ ಡೈಲಾಗ್, ಹಂಪಿ ಬಗ್ಗೆ ಯಶ್‌ ಹೇಳಿದ್ದೇನು?

ಹಿರಿಯ ಆತ್ಮಕ್ಕೆ ಶಾಂತಿ ಕೋರಿದ ಸ್ಥಳೀಯರು, ಗಣ್ಯರು

ನವನಗರದ ನಿವಾಸದಲ್ಲಿ ಮುರಗೆಮ್ಮನವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನೂರಾರು ಜನರು ಅಗಲಿದ ಹಿರಿಯ ಜೀವಕ್ಕೆ ಅಶ್ರುತರ್ಪಣ ಸಲ್ಲಿಸಿದರು. ಪುಷ್ಪಾರ್ಪಣೆ ಮಾಡಿ ನಮಿಸಿದರು. ಶಾಸಕ ಪ್ರಸಾದ್‌ ಅಬ್ಬಯ್ಯ, ಎಂಎಲ್‌ಸಿ ಶ್ರೀನಿವಾಸ್‌ ಮಾನೆ, ಮಾಜಿ ಸಚಿವ ಆರ್‌.ಬಿ. ತಿಮ್ಮಾಪುರ, ವಿನಯ ಕುಲಕರ್ಣಿ ಸೇರಿದಂತೆ ಹಲವು ಗಣ್ಯರು ಮುರಗೆಮ್ಮನವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು ಆತ್ಮಕ್ಕೆ ಶಾಂತಿ ಕೋರಿದರು.
First published:January 11, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ