• Home
  • »
  • News
  • »
  • state
  • »
  • ಯಾವ ಹೈಫೈ ಹೋಟೆಲ್​​ಗೂ ಕಡಿಮೆಯಿಲ್ಲ; ಇಲ್ಲಿ ಕೇವಲ 1 ರೂ.ಗೆ ಸಿಗುತ್ತೇ ಅಜ್ಜಿ ಮನೆ ಇಡ್ಲಿ

ಯಾವ ಹೈಫೈ ಹೋಟೆಲ್​​ಗೂ ಕಡಿಮೆಯಿಲ್ಲ; ಇಲ್ಲಿ ಕೇವಲ 1 ರೂ.ಗೆ ಸಿಗುತ್ತೇ ಅಜ್ಜಿ ಮನೆ ಇಡ್ಲಿ

ಒಂದು ರೂಪಾಯಿಗೆ ಒಂದು ಇಡ್ಲಿ ನೀಡುತ್ತಿರುವ ಅಜ್ಜಿ

ಒಂದು ರೂಪಾಯಿಗೆ ಒಂದು ಇಡ್ಲಿ ನೀಡುತ್ತಿರುವ ಅಜ್ಜಿ

ಹೋಟೆಲ್​​ ಮಾಲೀಕರು ಕಡಿಮೆ ಬೆಲೆಗೆ ಇಡ್ಲಿ ಮಾರಾಟ ಮಾಡುತ್ತಿರುವುದಕ್ಕೆ ಅಜ್ಜಿಗೆ ಆಕ್ಷೇಪ ವ್ಯಕ್ತಪಡಿಸಿದ್ಧಾರೆ. ಆದರೆ, ಅಜ್ಜಿಯ ಆಸೆಯಂತೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ಅವರ ಮಗ ರವಿ ತಿಳಿಸಿದ್ದಾರೆ.

  • Share this:

ಕೋಲಾರ(ಜೂ.02): ಪ್ರಸ್ತುತ ಕಾಲದಲ್ಲಿ ಒಂದು ಇಡ್ಲಿಗೆ ಅಮ್ಮಮ್ಮಾ ಎಂದರೂ ಐದು ರೂ. ಕೊಡಲೇಬೇಕು. ಒಂದೇ ಒಂದು ರೂ. ಕಡಿಮೆಯಾದರೂ ಹೋಟೆಲ್​​ನಲ್ಲಿ ಏನೂ ಸಿಗೋದಿಲ್ಲ. ಆದರೆ, ಇಲ್ಲಿ 85 ವರ್ಷದ ಅಜ್ಜಿಯೊಬ್ಬರು ಕಳೆದ 50 ವರ್ಷಗಳಿಂದ ಇಡ್ಲಿಯನ್ನ ನಾಲ್ಕಾಣೆ, ಐವತ್ತು ಪೈಸೆ, ಈಗ 1 ರೂಪಾಯಿಗೆ ಮಾರಾಟ ಮಾಡುತ್ತಾ ಬಡವರ ಹಸಿವು ನೀಗಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.


ಇವರ ಹೆಸರು ಸೆಲ್ವಮ್ಮ‌. ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಪಂಪೌಹೌಸ್ ಬಳಿ ಈ ಅಜ್ಜಿ ಕುಟುಂಬದೊಂದಿಗೆ ವಾಸವಿದ್ದಾರೆ. ಮೂಲತಃ ತಮಿಳುನಾಡಿನವರಾದ ಇವರು ಕೋಲಾರಕ್ಕೆ ಬಂದು 55 ವರ್ಷಗಳೇ ಆಗಿದೆ. ಅಜ್ಜಿ ತಯಾರು ಮಾಡುವ ಇಡ್ಲಿಗೆ ಎಷ್ಟು ಬೇಡಿಕೆಯಿದೆ ಎಂದರೆ ಬೆಳಗ್ಗೆ ಒಂಬತ್ತು ಗಂಟೆಯೊಳಗೆ ಎಲ್ಲಾ ಇಡ್ಲಿಯು ಖಾಲಿಯಾಗುತ್ತೆ.


ಬೆಳಗ್ಗೆ 8 ಗಂಟೆಯಿಂದಲೇ ಅಜ್ಜಿ ಮನೆ ಮುಂದೆ ತಿಂಡಿ ಖರೀದಿ ಮಾಡಲು ಜನರು ನಿಂತಿರುವ ದೃಶ್ಯಗಳು ಸಾಮಾನ್ಯವಾಗಿ ಕಂಡು ಬರುತ್ತವೆ. ವಯಸ್ಸಾಯಿತು ಎಂಬುದನ್ನು ಯೋಚನೆ ಮಾಡದೆ ಅಜ್ಜಿ ಪ್ರತೀದಿನ ಬೆಳಗ್ಗೆ 6 ರಿಂದ 10 ಗಂಟೆಯವರೆಗೂ ಇಡ್ಲಿ ಮಾರಾಟ ಮಾಡುತ್ತಾರೆ.


ಇಡ್ಲಿಗೆ ಚಟ್ನಿ ಸಾಂಬಾರು ಸಹ ಅಜ್ಜಿಯೇ ತಯಾರು ಮಾಡೊದು ಮತ್ತೊಂದು ವಿಶೇಷ. ಮನೆಯಲ್ಲೆ ಇಡ್ಲಿ ತಯಾರಿಕೆ ಮಾಡೋದರಿಂದ ಬರೀ ಪಾರ್ಸೆಲ್ ವ್ಯವಸ್ತೆ ಮಾತ್ರ ಇದೆ. ಇದಕ್ಕೂ ಯಾವುದೇ ವೆಚ್ಚವನ್ನ ನಿಗದಿ ಮಾಡಿಲ್ಲ. ಈ ಕುರಿತು ಮಾತನಾಡಿರುವ ಅಜ್ಜಿ, ನನಗೆ ಶಕ್ತಿಯಿಲ್ಲದಿದ್ದಾಗ ಬಹಳ ನೊಂದಿದ್ದೆ. ಹೀಗಾಗಿ ಯಾರಿಗು ಆಹಾರದ ಸಮಸ್ಯೆ ಎದುರಾಗಬಾರದು ಎಂದು ಕಡಿಮೆ ಬೆಲೆಗೆ ಇಡ್ಲಿ ಮಾರಾಟ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: ಪ್ರವಾಸಿ ವೀಸಾ ಪಡೆದು ಧರ್ಮ ಪ್ರಚಾರ - ಇಂಡೋನೇಷಿಯಾದ 10 ಮಂದಿ ವಿರುದ್ಧ ಎಫ್​ಐಆರ್​​


ಇನ್ನು ಅಜ್ಜಿಗೆ ವಯೋಸಹಜ ಶ್ರವಣದೋಷವಿದೆ. ಆದರು ಯಾವುದನ್ನು ಲೆಕ್ಕಿಸದೇ ಪ್ರತಿನಿತ್ಯ ಒಲೆ ಹಚ್ಚಿ ಇಡ್ಲಿಯನ್ನ ತಯಾರು ಮಾಡುತ್ತಿದ್ದಾರೆ. ಸದ್ಯ ವಸ್ತುಗಳು ಬೆಲೆ ಏರಿಕೆಯಾದರೂ ಇಡ್ಲಿ ಮಾರಾಟ ನಿಲ್ಲಿಸಿಲ್ಲ. ಅಕ್ಕಿ, ಉದ್ದಿನ ಬೇಳೆ, ಸಾಂಬಾರು ಪದಾರ್ಥ, ಕಡಲೆ ಬೀಜ ಹೀಗೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದರಿಂದ ಮಾರಾಟಕ್ಕೆ ಹೆಚ್ಚು ಖರ್ಚು ತಗುಲುತ್ತಿದೆ. ಇವರ ಈ ಕಾರ್ಯಕ್ಕೆ ಮನೆಯವರೆಲ್ಲಾ ಒಗ್ಗೂಡಿ ಅಗತ್ಯ ಸಹಕಾರ ನೀಡಿದ್ದಾರೆ. ಹೀಗಾಗಿ ಅಜ್ಜಿಗೂ ಧೈರ್ಯ ಹೆಚ್ಚಾಗಿ ಉತ್ಸಾಹದಿಂದ ಕೆಲಸ ಮಾಡ್ತಿದ್ದಾರೆ.


ಹೋಟೆಲ್​​ ಮಾಲೀಕರು ಕಡಿಮೆ ಬೆಲೆಗೆ ಇಡ್ಲಿ ಮಾರಾಟ ಮಾಡುತ್ತಿರುವುದಕ್ಕೆ ಅಜ್ಜಿಗೆ ಆಕ್ಷೇಪ ವ್ಯಕ್ತಪಡಿಸಿದ್ಧಾರೆ. ಆದರೆ, ಅಜ್ಜಿಯ ಆಸೆಯಂತೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ಅವರ ಮಗ ರವಿ ತಿಳಿಸಿದ್ದಾರೆ.


ಅಜ್ಜಿ ಮನೆಯವರು ಮೊದಲಿಂದಲೂ ಮಿಶ್ಚರ್ ವ್ಯಾಪಾರ ಮಾಡುತ್ತಿದ್ದು, ಅದರಿಂದಲೇ ಜೀವನ ನಡೆಸ್ತಿದ್ದಾರೆ. ಈಗ ಸ್ವೀಟ್ ಸ್ಟಾಲ್ ಸಹ ಇದ್ದು, ಮನೆಯಲ್ಲೆ ಸ್ವೀಟ್ ಕೂಡ ತಯಾರು ಮಾಡ್ತಿದ್ದಾರೆ. ಹೀಗಾಗಿ ಅಜ್ಜಿ ಬೆಳಗ್ಗೆ ಮಾತ್ರ ಇಡ್ಲಿ ತಯಾರಿಸಿ ಮಾರಾಟ ಮಾಡಿ 10ರ ನಂತರ ಇತರೆ ಕೆಲಸಗಳಿಗೆ ಸಹಾಯ ಮಾಡ್ತಿದ್ದಾರೆ.


ಅಜ್ಜಿ ಬಳಿ ಕೂಲಿ ಕಾರ್ಮಿಕರು, ಆಟೋ ಚಾಲಕರು, ಮಹಿಳಾ ಕಾರ್ಮಿಕರು ಹೀಗೆ ಅಸಂಘಟಿತ ವಲಯದವರು ಹೆಚ್ಚಾಗಿ ಇಡ್ಲಿಯನ್ನ ತೆಗೆದುಕೊಳ್ಳುತ್ತಾರೆ. ಒಟ್ಟಿನಲ್ಲಿ ಅನ್ನದಾನ ಮಹಾದಾನ ಎನ್ನುವಂತೆ 85 ವರ್ಷದ ಸೆಲ್ವಮ್ಮ ಅವರ ಇಡ್ಲಿ ವ್ಯಾಪಾರ ಬಂಗಾರಪೇಟೆ ಪಟ್ಟಣಕ್ಕೆ ಮಾದರಿಯಾಗಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.


Published by:Ganesh Nachikethu
First published: