ಬ್ಯಾಂಕ್ ಲಾಕರ್ನಲ್ಲಿಟ್ಟಿದ್ದ 85 ಲಕ್ಷ ಮೌಲ್ಯದ ಚಿನ್ನ ಕಳವು; ಉದ್ಯೋಗಿಗಳ ವಿರುದ್ಧ ದಾಖಲಾಯ್ತು ಎಫ್ಐಆರ್
ಇದೀಗ ಚಿನ್ನಾಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಉದ್ಯೋಗಿಗಳ ವಿರುದ್ಧ ಎಫ್ಐಆರ್ ದಾಖಲಿಸಿರುವ ಪೊಲೀಸರು, ಸಿಸಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿ ತನಿಖೆ ಶುರು ಮಾಡಿದ್ದಾರೆ. ಶೀಘ್ರದಲ್ಲಿ ಪ್ರಕರಣವನ್ನು ಭೇದಿಸುವ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಆಗಸ್ಟ್ 02); ಚಿನ್ನಾಭರಣಗಳು ಸುರಕ್ಷಿತವಾಗಿರಲಿ ಎಂದು ಜನ ಬ್ಯಾಂಕ್ ಲಾಕರ್ನಲ್ಲಿಡುವುದು ವಾಡಿಕೆ. ಆದರೆ, ಸುರಕ್ಷಿತ ಎಂದು ಭಾವಿಸಿದ ಬ್ಯಾಂಕ್ ಲಾಕರ್ನಿಂದಲೇ ಚಿನ್ನ ಕಳುವಾದರೆ? ಇಂತಹದ್ದೇ ಒಂದು ಘಟನೆಗೆ ಇದೀಗ ಬೆಂಗಳೂರು ಜಯನಗರದ ಬ್ಯಾಂಕ್ ಆಫ್ ಬರೋಡಾ ಸಾಕ್ಷಿಯಾಗಿದೆ.
ಜಯನಗರದ ಉದ್ಯಮಿ ಶಿವಪ್ರಸಾದ್ ಎಂಬುವವರು ತಮ್ಮ ಬಳಿ ಇದ್ದ 85 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಬ್ಯಾಂಕ್ ಆಫ್ ಬರೋಡಾದ ಸೇಪ್ಟಿ ಲಾಕರ್ ನಂ.24 ರಲ್ಲಿ ಕಳೆದ ಫೆಬ್ರವರಿಯಲ್ಲಿ ಇಟ್ಟಿದ್ದರು. ಇದರ ತೂಕ ಬರೋಬ್ಬರಿ 1.73 ಕೆ.ಜಿ. ಎನ್ನಲಾಗುತ್ತಿದೆ.
ಬಳಿಕ ವಿವಾಹ ವಾರ್ಷಿಕೋತ್ಸವ ಸಲುವಾಗಿ ಆಭರಣ ತರಲು ಜುಲೈ 22 ರಂದು ಉದ್ಯಮಿ ಶಿವಪ್ರಸಾದ್ ಬ್ಯಾಂಕ್ಗೆ ತೆರಳಿ ಲಾಕರ್ ಓಪನ್ ಮಾಡಿದ್ದಾರೆ. ಆದರೆ, ಈ ವೇಳೆ ಲಾಕರ್ನಲ್ಲಿದ್ದ ಅಷ್ಟೂ ಚಿನ್ನ ಮಾಯವಾಗಿದೆ. ಪ್ರಶ್ನೆ ಮಾಡಿದರೆ ಬ್ಯಾಂಕ್ ಉದ್ಯೋಗಿಗಳು ಇದಕ್ಕೆ ಉತ್ತರ ನೀಡಿರಲಿಲ್ಲ. ಹೀಗಾಗಿ ಗಾಬರಿಯಾದ ಉದ್ಯಮಿ ಶಿವಪ್ರಸಾದ್ ಜನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಇದೀಗ ಚಿನ್ನಾಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಉದ್ಯೋಗಿಗಳ ವಿರುದ್ಧ ಎಫ್ಐಆರ್ ದಾಖಲಿಸಿರುವ ಪೊಲೀಸರು, ಸಿಸಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿ ತನಿಖೆ ಶುರು ಮಾಡಿದ್ದಾರೆ. ಶೀಘ್ರದಲ್ಲಿ ಪ್ರಕರಣವನ್ನು ಭೇದಿಸುವ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ